HOME » NEWS » Lifestyle » TEEN GIRL SEXUALLY ABUSED BY HER OWN FATHER HER IS AN SOLUTION RHHSN

Sexual Wellness: ರಾತ್ರಿ ಮಲಗಿದ್ದಾಗ ಮಗಳ ರೂಂಗೆ ಬರುತ್ತಿದ್ದ ತಂದೆ!; ಚಾದರದಡಿಯಲ್ಲಿ ನಡೆಯುತ್ತಿತ್ತು ಯಾರೂ ಕಲ್ಪಿಸಿಕೊಳ್ಳಲಾಗದ ಘಟನೆ!

ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ಆದರೆ, ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೆಲ್ಲಿ ಎನ್ನುವುದು ದೊಡ್ಡ ಪ್ರಶ್ನೆ. ಈ ಪ್ರಶ್ನೆಗಳಿಗೆ ತಜ್ಞೆ ಪಲ್ಲವಿ ಬರ್ನಾವಾಲ್ ಉತ್ತರ ನೀಡುತ್ತಿದ್ದಾರೆ ಕೇಳಿ,

news18-kannada
Updated:December 17, 2020, 12:13 AM IST
Sexual Wellness: ರಾತ್ರಿ ಮಲಗಿದ್ದಾಗ ಮಗಳ ರೂಂಗೆ ಬರುತ್ತಿದ್ದ ತಂದೆ!; ಚಾದರದಡಿಯಲ್ಲಿ ನಡೆಯುತ್ತಿತ್ತು ಯಾರೂ ಕಲ್ಪಿಸಿಕೊಳ್ಳಲಾಗದ ಘಟನೆ!
ಸಾಂದರ್ಭಿಕ ಚಿತ್ರ
  • Share this:
ಪ್ರಶ್ನೆ: ನನಗೆ ವಯಸ್ಸು 17. ನನ್ನ ಅಕ್ಕನ ವಯಸ್ಸು 27. ನನ್ನ ತಂದೆ ಉದ್ಯಮಿ. ಅಮ್ಮ ಮನೆಯಲ್ಲೇ ಇರುತ್ತಾಳೆ. ನನ್ನ ಅಜ್ಜ-ಅಜ್ಜಿಯ ಆರೈಕೆಗೆ ನನ್ನ ಅಮ್ಮ ಆಗಾಗ ಊರಿಗೆ ತೆರಳುತ್ತಾಳೆ. ಈ ವೇಳೆ ಮನೆಯಲ್ಲಿ ಕೆಲವು ವಿಚಿತ್ರ ಘಟನೆಗಳು ನಡೆಯುವುದು ನನ್ನ ಗಮನಕ್ಕೆ ಬಂದಿದೆ. ಅಮ್ಮ ಊರಿಗೆ ತೆರಳಿದಾಗ ಅಪ್ಪ ಬಂದು ನನ್ನ ಅಕ್ಕನ ಹಾಸಿಗೆಯಲ್ಲಿ ಮಲಗುತ್ತಾನೆ. ಲೈಟ್​ ಆರಿಸಿದ ನಂತರದಲ್ಲಿ ಕೆಲವು ಅಸಹಜ ಕ್ರಿಯೆ ನಡೆಯುವುದು ನನ್ನ ಗಮನಕ್ಕೆ ಬಂದಿದೆ. ಒಮ್ಮೆ ಹೀಗೆ ನನ್ನ ತಂದೆ ಮಲಗಿದ್ದರು. ಈ ವೇಳೆ ಅಲ್ಲಿದ್ದ ಮಬ್ಬು ಬೆಳಕಿನಲ್ಲಿ, ನನ್ನ ತಂದೆ ಅಕ್ಕನ ಹಿಂಭಾಗ ಹಾಗೂ ಎದೆ ಭಾಗವನ್ನು ಸವರುತ್ತಿರುವುದು ಅಸ್ಪಷ್ಟವಾಗಿ ಕಂಡು ಬಂದಿತ್ತು. ಕೋಣೆಯಲ್ಲಿ ಕಪ್ಪಿದ್ದರಿಂದ ಏನೂ ಸರಿಯಾಗಿ ಕಾಣಿಸಿಲ್ಲ. ಹೀಗಾಗಿ, ಅವರು ಸೆಕ್ಸ್​ ಮಾಡುತ್ತಿದ್ದರು ಎನ್ನುವುದನ್ನು ನಾನು ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ನಾನು ಅಮ್ಮನಿಗೆ ಹೇಳಿದರೆ ನಮ್ಮ ಕುಟುಂಬ ಒಡೆದು ಹೋಗುತ್ತದೆ ಎನ್ನುವ ಭಯ ಕಾಡುತ್ತಿದೆ. ದಯವಿಟ್ಟು ಇದಕ್ಕೆ ಉತ್ತರಿಸಿ.

ಈ ಘಟನೆ ಬಗ್ಗೆ ನಾನು ವಿಷಾದಿಸುತ್ತೇನೆ. ನಿಮ್ಮ ತಂದೆ ಮಾಡಿರುವುದು ನಿಜಕ್ಕೂ ಅಪರಾಧ. ಇದು ಲೈಂಗಿಕ ದೌರ್ಜನ್ಯ. ನೀವು ಮಹಿಳೆ ಆಗಿರಿ ಅಥವಾ ಬಾಲಕಿ ಆಗಿರಿ. ಕಾನೂನಿನಿಂದ ನಿಮಗೆ ರಕ್ಷಣೆ ಇದೆ.

ಈ ವಿಚಾರದ ಬಗ್ಗೆ ನೀವು ನಿಮ್ಮ ಅಕ್ಕನ ಜೊತೆ ಖಾಸಗಿಯಾಗಿ ಮಾತನಾಡಿ ಮತ್ತು ಇದನ್ನು ಒತ್ತಾಯ ಪೂರ್ವಕವಾಗಿ ಮಾಡಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಅಕ್ಕನ ಪರಿಸ್ಥಿತಿ ಏನು ಎಂದು ತಿಳಿದ ನಂತರ ನೀವು ನಿರ್ಧಾರ ಕೈಗೊಳ್ಳಬಹುದು. ಒಂದೊಮ್ಮೆ ಇದು ಒತ್ತಾಯ ಪೂರ್ವಕ ಕ್ರಿಯೆ ಎಂದರೆ, ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆ 1098ಗೆ ಕರೆ ಮಾಡಿ ಸಹಾಯ ಕೇಳಿ.

ನಿಮ್ಮ ಅಮ್ಮನಿಗೆ ಈ ವಿಚಾರ ಗೊತ್ತಾಗಬಾರದು ಎನ್ನುವುದು ನಿಮ್ಮ ಆಶಯ. ಆದರೆ, ನಿಮ್ಮ ತಾಯಿಗೆ ಇದನ್ನು ತಿಳಿದುಕೊಳ್ಳುವ ಎಲ್ಲಾ ಹಕ್ಕು ಇದೆ. ಅವಳು ಮನೆಯಲ್ಲಿ ಇಲ್ಲದಾಗ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆತನ ಮೇಲೆ ಬಿಟ್ಟು ಹೋಗಿರುತ್ತಾಳೆ. ಆದರೆ, ಇಲ್ಲಿ ಬೇಲಿಯೇ ಎದ್ದು ಹೊಲ ಮೆಂದಂತಾಗುತ್ತಿದೆ. ಈ ವಿಚಾರದಲ್ಲಿ ಹೆದರುವ ಅವಶ್ಯಕತೆ ಇಲ್ಲವೇ ಇಲ್ಲ.

(Pallavi Barnwal)
First published: December 17, 2020, 12:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories