ಸಾಂಕ್ರಾಮಿಕ ಅವಧಿಯಲ್ಲಿ ಕೇವಲ ಮನೆಯೂಟ ತಿಂದು 7 ತಿಂಗಳಲ್ಲಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡ ಉದ್ಯೋಗಿ..!

Weight Loss Inspirational Story: "ಆರಂಭಿಕ ದಿನಗಳಲ್ಲಿ ನಾನು ತುಂಬಾ ಬೆವರುತ್ತಿದ್ದೆ. ಆದರೆ ಇದು ಕ್ರಮೇಣ ಕಡಿಮೆಯಾಯಿತು. ಈಗ, ನಾನು ಸ್ವಲ್ಪ ದೂರ ನಡೆದರೆ ಬೆವರುವುದೇ ಇಲ್ಲ. ನಾನು ಹೆಚ್ಚು ಶಕ್ತಿಯುತ ಮತ್ತು ಹಗುರವಾಗಿರಲು ಪ್ರಾರಂಭಿಸಿದ್ದೇನೆ ಎಂದೂ ಆಶುತೋಷ್‌ ಹೇಳಿದ್ದಾರೆ.

ಮೂವತ್ತು ಕೆಜಿ ತೂಕ ಇಳಿಸಿಕೊಂಡ ಟೆಕ್ಕಿ

ಮೂವತ್ತು ಕೆಜಿ ತೂಕ ಇಳಿಸಿಕೊಂಡ ಟೆಕ್ಕಿ

 • Share this:
  ನಮ್ಮ ದೇಹಕ್ಕೆ ವ್ಯಾಯಾಮ (Yoga), ಫಿಟ್ನೆಸ್‌ (Fitness Exercise) ಅಥವಾ ಕ್ರೀಡೆ ಯಾಕೆ ಅಗತ್ಯ ಎನ್ನುವುದಕ್ಕೆ ಈ ಸ್ಟೋರಿ ಒಂದು ಉತ್ತಮ ಉದಾಹರಣೆ. ಹೊರಗಡೆ ಊಟ, ಅನಾರೋಗ್ಯಕರ ಊಟ ತಿಂದು ಹೊಟ್ಟೆ ಕೆಡಿಸಿಕೊಳ್ಳುವುದಲ್ಲದೆ ಹಲವರು ತಮ್ಮ ತೂಕವನ್ನೂ ಹೆಚ್ಚಿಸಿಕೊಳ್ಳುತ್ತಾರೆ. ನಂತರ ತೂಕ ಇಳಿಸಲು ಹಲವರು ಜಿಮ್‌ (Gym Instructor) ಹಾಗೂ ನ್ಯೂಟ್ರಿಷನಿಸ್ಟ್‌ (Nutritionist) ಅಥವಾ ವೈದ್ಯರ ಮೊರೆ ಹೋಗುತ್ತೇವೆ. ಕೆಲವರು ಆಪರೇಷನ್‌ ಮಾಡಿಸಿಕೊಳ್ಳಲೂ ಮುಂದಾಗುತ್ತಾರೆ. ಆದರೆ, ಇಲ್ಲೊಬ್ಬರು ವ್ಯಕ್ತಿ ಕೊರೊನಾ ಮೊದಲ ಅಲೆಯಲ್ಲಿ (COVID-19 First Wave) ಹೆಚ್ಚಿಸಿಕೊಂಡಿದ್ದ ತೂಕವನ್ನು ಕೊರೊನಾ ಎರಡನೆಯ ಅಲೆಯ ವೇಳೆಗೆ ಇಳಿಸಿಕೊಂಡಿದ್ದಾರೆ. ಕೇವಲ ವಾಕಿಂಗ್ ಹಾಗೂ ಮನೆಯೂಟ ಮಾಡಿ 7 ತಿಂಗಳಲ್ಲಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ತೂಕ ಕಳೆದುಕೊಳ್ಳೋಕೆ ಸಾಕಷ್ಟು ಹಣ ಸುರಿಯುವ ಬದಲು ನೀವು ಈ ಲೇಖನ ಓದಿ, ತೂಕ ಇಳಿಸಿಕೊಳ್ಳಲು ಸ್ಫೂರ್ತಿ ಬರೆಯಬಹುದು ನೋಡಿ.

  ದೆಹಲಿ ಮೂಲದ ಆಶುತೋಷ್ ಮಿತ್ತಲ್ 'ದಿ ಬೆಟರ್ ಇಂಡಿಯಾ' ಮಾಧ್ಯಮಕ್ಕೆ ತಮ್ಮ ತೂಕ ಇಳಿಸಿಕೊಂಡ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿರುವುದು ಹೀಗೆ..

  ದೈಹಿಕ ವ್ಯಾಯಾಮ ಅಥವಾ ಕ್ರೀಡೆಗಳನ್ನು ಆಡುವ ವಿಚಾರದಲ್ಲಿ ನಾನು ಸಿಕ್ಕಾಪಟ್ಟೆ ಸೋಮಾರಿಯಾಗಿದ್ದೇನೆ. ಈ ಅಭ್ಯಾಸವು ನನ್ನ ಬಾಲ್ಯದಿಂದಲೂ ಮುಂದುವರಿಯಿತು. ವರ್ಷಗಳ ನಂತರ ಫಿಟ್ನೆಸ್‌ ನಾನು ನೀಡುತ್ತಿದ್ದ ಅಸಡ್ಡೆಯಿಂದ ತನ್ನ ತೂಕದಲ್ಲಿ ಪ್ರತಿಫಲಿಸಲು ಪ್ರಾರಂಭಿಸಿತು ಅಂದರೆ ತೂಕ ಹೆಚ್ಚಾಯಿತು ಎಂದು ಅವರು ಹೇಳುತ್ತಾರೆ. ಅಲ್ಲದೆ, ಕೋವಿಡ್ - 19 ಲಾಕ್‌ಡೌನ್‌ ಸಮಯದಲ್ಲಿ ವಿಷಯಗಳು ಇನ್ನಷ್ಟು ಹದಗೆಟ್ಟು, 2020ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ ತೂಕ ಹೆಚ್ಚಾಗಿ 115 ಕೆಜಿ ಆಗಿತ್ತು ಎಂದು ಆಶುತೋಷ್ ಮಿತ್ತಲ್ ಹೇಳಿದ್ದಾರೆ.

  "ಲಾಕ್‌ಡೌನ್ ಸಮಯದಲ್ಲಿ (lockdown period), ನಾನು ಇಡೀ ದಿನ ಮನೆಯಲ್ಲಿ ಸುಮ್ಮನೆ ಕುಳಿತು ತಿಂಡಿಗಳನ್ನು ತಿನ್ನುತ್ತಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಆದರೆ, ಬೇಸರ ಮತ್ತು ಭಾರವಾದ ಭಾವನೆ ಅಂತಿಮವಾಗಿ ತನ್ನನ್ನು ಕೆಲವು ಮಟ್ಟದ ಫಿಟ್ನೆಸ್ ಪಡೆಯಲು ವಾಕಿಂಗ್ ಆರಂಭಿಸಲು ಪ್ರೇರೇಪಿಸಿತು. "ನಾನು ಒಂದೇ ಬಾರಿಗೆ ಹೆಚ್ಚಿನ ತೂಕ ಕಳೆದುಕೊಳ್ಳುವ ಉದ್ದೇಶ ಹೊಂದಿರಲಿಲ್ಲ. ಅಥವಾ ಅದನ್ನು ಸಾಧಿಸಲು ಯಾವುದೇ ಗುರಿಗಳನ್ನು ಹೊಂದಿರಲಿಲ್ಲ. ಆದ್ದರಿಂದ, ನಾನು ಪೌಷ್ಟಿಕತಜ್ಞರನ್ನು ಆಯ್ಕೆ ಮಾಡಲಿಲ್ಲ ಮತ್ತು ಜಿಮ್ನಾಶಿಯಂಗೆ ಸೇರಲಿಲ್ಲ" ಎಂದು ಅವರು ಹೇಳುತ್ತಾರೆ.

  ತೂಕ ಇಳಿಸುವ ಕ್ರಮವಾಗಿ ವಾಕಿಂಗ್ ಆಯ್ಕೆ ಮಾಡಿಕೊಂಡ ಅಮಿತ್ ದಿನಕ್ಕೆ 10,000 ಹೆಜ್ಜೆಗಳೊಂದಿಗೆ ಆರಂಭಿಸಿದರು. "ಮುಂದಿನ ಕೆಲವು ವಾರಗಳಲ್ಲಿ, ನಾನು ಸುಮಾರು 40 ಕಿಮೀ ವಾಕ್‌ ಮಾಡುತ್ತಿದ್ದೆ. ದಿನಕ್ಕೆ 2 ಬಾರಿ ತಲಾ 20 ಕಿ.ಮೀ.ನಂತೆ ವಾಕಿಂಗ್ ಮಾಡಿದ್ದೇನೆ. ಆದರೆ, ನನ್ನ ದೇಹ ನೋವಿನಿಂದ ಪ್ರತಿಕ್ರಿಯಿಸಲು ಪ್ರಾರಂಭಿಸಿತು. ಹಾಗಾಗಿ ನಾನು ದಿನಕ್ಕೆ 30 ಕಿ.ಮೀ. ನಡಿಗೆಗೆ ಸೀಮಿತಗೊಳಿಸಿದೆ. ಶಿಸ್ತು ಮತ್ತು ಸ್ಥಿರತೆಯು ಏಳು ತಿಂಗಳಲ್ಲಿ ಸುಮಾರು 30 ಕಿಲೋಗಳನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಎಂದು ಹೇಳಿದ್ದಾರೆ.

  "ಆರಂಭಿಕ ದಿನಗಳಲ್ಲಿ ನಾನು ತುಂಬಾ ಬೆವರುತ್ತಿದ್ದೆ. ಆದರೆ ಇದು ಕ್ರಮೇಣ ಕಡಿಮೆಯಾಯಿತು. ಈಗ, ನಾನು ಸ್ವಲ್ಪ ದೂರ ನಡೆದರೆ ಬೆವರುವುದೇ ಇಲ್ಲ. ನಾನು ಹೆಚ್ಚು ಶಕ್ತಿಯುತ ಮತ್ತು ಹಗುರವಾಗಿರಲು ಪ್ರಾರಂಭಿಸಿದ್ದೇನೆ ಎಂದೂ ಆಶುತೋಷ್‌ ಹೇಳಿದ್ದಾರೆ.

  ಆಹಾರದ ಬಗ್ಗೆ ಕಾಳಜಿ..!:

  ವಾಕಿಂಗ್ ಜೊತೆಗೆ, ಅವರು ತಮ್ಮ ಆಹಾರದ ಬಗ್ಗೆಯೂ ಗಮನ ಹರಿಸಿದ ಬಗ್ಗೆಯೂ ಆಶುತೋಷ್‌ ಹೇಳಿದ್ದಾರೆ. "ಮೊದಲು, ನಾನು ವಾರಕ್ಕೆ ಎರಡು ಬಾರಿಯಾದರೂ ಹೊರಗಿನ ಆಹಾರ ಆರ್ಡರ್ ಮಾಡುತ್ತಿದ್ದೆ. ನಾನು ಅದನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಮತ್ತು ಎಂದಿಗೂ ಚೀಟ್‌ ದಿನಗಳನ್ನು ಹೊಂದಿಲ್ಲ. ಸರಳವಾದ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಅಂಟಿಕೊಂಡೆ ಮತ್ತು ನನ್ನ ಆಹಾರದ ಭಾಗಗಳನ್ನು ಸೀಮಿತಗೊಳಿಸಿದೆ" ಎಂದು ಹೇಳುತ್ತಾರೆ.

  "ನಾನು ಊಟಕ್ಕೆ ಹೊರಗೆ ಹೋದ ಸಂದರ್ಭಗಳೂ ಇವೆ. ಆದರೆ, ನಾನು ಮೆನುವಿನಲ್ಲಿ ಲಭ್ಯವಿರುವ ಹಗುರವಾದ ಆಹಾರವನ್ನು ಆರ್ಡರ್ ಮಾಡುತ್ತಿದ್ದೆ. ಸಾಮಾನ್ಯವಾಗಿ, ಬೆಣ್ಣೆ ಅಥವಾ ತುಪ್ಪ ಇಲ್ಲದ ಒಂದು ಚಪಾತಿಯೊಂದಿಗೆ ಇಡ್ಲಿ ಅಥವಾ ಹಳದಿ ದಾಲ್ ಒಳಗೊಂಡಿರುತ್ತದೆ'' ಎಂದಿದ್ದಾರೆ.

  ತನ್ನ ಫಿಟ್ನೆಸ್ ಪ್ರಯಾಣದ ಆರಂಭದ ದಿನಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳುವುದು ಕಷ್ಟವಾಗಿತ್ತು, ಆದರೆ ಅಂತಿಮವಾಗಿ, ಪ್ರಲೋಭನೆಯನ್ನು ವಿರೋಧಿಸಲು ತನ್ನ ಮನಸ್ಸಿಗೆ ತರಬೇತಿ ನೀಡಲು ಕಲಿತೆ ಎಂದೂ ಹೇಳಿಕೊಂಡಿದ್ದಾರೆ.

  ಪ್ರತಿದಿನ ಒಂದು ಚಪಾತಿ, ಹೆಚ್ಚು ದಾಲ್ ಮತ್ತು ತರಕಾರಿಗಳನ್ನು ತಿನ್ನುತ್ತಿದ್ದೆ. ತನ್ನ ಆಹಾರದಲ್ಲಿ ಖಿಚಡಿಯನ್ನೂ ಸೇರಿಸಿದ್ದೆ. "ಖಿಚಡಿ ನಾನು ಬಾಲ್ಯದಿಂದಲೂ ತಿನ್ನುತ್ತಿದ್ದ ಖಾದ್ಯ ಆದರೆ ಇಷ್ಟವಾಗಿರಲಿಲ್ಲ. ಆದರೂ, ವಾಕಿಂಗ್ ಕಾಲದಲ್ಲಿ ಅದು ನನ್ನ ಹೊಟ್ಟೆಯನ್ನು ಚೆನ್ನಾಗಿ ತುಂಬಿಸಿತು ಮತ್ತು ನನಗೆ ಅಗತ್ಯವಾದ ಕ್ಯಾಲೋರಿಗಳನ್ನು ಒದಗಿಸಿತು. ಜತೆಗೆ ಖಿಚಡಿಗೆ ತರಕಾರಿಗಳನ್ನು ಮತ್ತು ಕಾರ್ನ್ ಫ್ಲೇಕ್‌ಗಳನ್ನು ಸೇರಿಸಲು ಆರಂಭಿಸಿದೆ ಮತ್ತು ರುಚಿಯಲ್ಲಿ ವ್ಯತ್ಯಾಸ ತರಲು ಪಾಪಡ್, ಉಪ್ಪಿನಕಾಯಿಯೊಂದಿಗೆ ಸೇರಿಸಿದೆ. ಇದರ ರೆಸಿಪಿ ಸರಳವಾದ ಮನೆಯಲ್ಲಿ ತಯಾರಿಸಿದ ವಸ್ತುವಾಗಿದ್ದು, ಸಾಮಾನ್ಯ ಪ್ರಮಾಣದ ತುಪ್ಪ, ಕೆಂಪು ಮೆಣಸಿನಕಾಯಿ ಮತ್ತು ಜೀರಾ ಒಳಗೊಂಡಿತ್ತು ಎಂದೂ ಆಶುತೋಷ್ ಹೇಳಿದ್ದಾರೆ.

  2021ರ ಜನವರಿಯಲ್ಲಿ ತಾನು 110 ಕಿಲೋ ತೂಕ ಹೊಂದಿದ್ದೆ ಮತ್ತು ಫೆಬ್ರವರಿ ವೇಳೆಗೆ 102 ಕಿಲೋಗೆ ಇಳಿದಿದ್ದೆ. ನಂತರ ಜುಲೈ ತಿಂಗಳಲ್ಲಿ 84 ಕಿಲೋ ತಲುಪಲು ನಾನು ತಿಂಗಳಿಗೆ ಸುಮಾರು ಆರು ಕಿಲೋ ಕಳೆದುಕೊಂಡೆ ಮತ್ತು ಅದನ್ನು ಸ್ಥಿರವಾಗಿಡಲು ನಿರ್ಧರಿಸಿದೆ. ನಾನು ನನ್ನ ವಾಕಿಂಗ್ ಪ್ರಮಾಣವನ್ನು ದಿನಕ್ಕೆ 12-15 ಕಿಮೀಗೆ ಕಡಿಮೆ ಮಾಡಿದ್ದೇನೆ ಎಂದೂ ಹೇಳಿದ್ದಾರೆ.

  'ಯಾರು ಬೇಕಾದರೂ ಮಾಡಬಹುದು':

  ತಮ್ಮ ತೂಕ ಇಳಿಕೆಯ ನಂತರ, ಅವರು ಶಕ್ತಿಯುತ, ಹಗುರವಾದ ಮತ್ತು ಮುಖ್ಯವಾಗಿ, ತೂಕ ಹೆಚ್ಚಾಗುವುದರ ಬಗ್ಗೆ ಚಿಂತಿಸದೆ ತಮ್ಮ ಆಯ್ಕೆಯ ಆಹಾರ ತಿನ್ನುವ ಸ್ವಾತಂತ್ರ್ಯ ಗಳಿಸಿದ್ದೇನೆ ಎಂದೂ ಆಶುತೋಷ್‌ ಹೇಳಿದ್ದಾರೆ.

  "ನಾನು ವಾಕಿಂಗ್‌ನೊಂದಿಗೆ ಎಲ್ಲಾ ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೇನೆ ಮತ್ತು ಅವು ದೇಹದಲ್ಲಿ ಸಂಗ್ರಹವಾಗುವುದಿಲ್ಲ ಎಂದು ನನಗೆ ತಿಳಿದಿದೆ. ನನ್ನ ತೂಕ ಇಳಿಸುವ ಪ್ರಯಾಣದ ಬಗ್ಗೆ ಅನೇಕ ಸ್ನೇಹಿತರು ಮತ್ತು ಸಂಬಂಧಿಕರು ನನ್ನನ್ನು ಸಂಪರ್ಕಿಸುತ್ತಾರೆ, ಮತ್ತು ಅದರ ಬಗ್ಗೆ ಮಾತನಾಡಲು ನನಗೆ ಉತ್ಸಾಹ ಮತ್ತು ಹೆಮ್ಮೆ ಅನಿಸುತ್ತದೆ'' ಎಮದೂ ಹೇಳಿಕೊಂಡಿದ್ದಾರೆ.

  ಇದನ್ನೂ ಓದಿ: Crime News: ಅಂಗಡಿ ಮಾಲೀಕನ ಹೆಂಡತಿ ಜೊತೆ ಮಲಗಲು 10 ಸಾವಿರ ಆಫರ್​ ಕೊಟ್ಟ 80 ವರ್ಷದ ಮುದುಕ: ಆಮೇಲೇನಾಯ್ತು?

  "ನಾನು ವಾಹನವನ್ನು ಬಳಸುವುದನ್ನು ತಪ್ಪಿಸುತ್ತೇನೆ ಮತ್ತು ನಡೆಯಲು ಕಾರಣಗಳನ್ನು ಕಂಡುಕೊಳ್ಳುತ್ತೇನೆ. ಕೆಲವೊಮ್ಮೆ ಇದು ಕಿರಾಣಿ ಅಂಗಡಿ ಅಥವಾ ಮಾರುಕಟ್ಟೆಗೆ ಪ್ರವಾಸವಾಗಿದೆ. ಕೆಲವೊಮ್ಮೆ ನಾನು ನನ್ನ ಮಗಳ ಸೈಕಲ್ ಅನ್ನು ಬದಲಾವಣೆಗಾಗಿ ಬಳಸುತ್ತೇನೆ'' ಎಂದೂ ಹೇಳುತ್ತಾರೆ.

  ಇದನ್ನೂ ಓದಿ: ಲೈಂಗಿಕ ಕ್ರಿಯೆಯಲ್ಲಿ ಹುಡುಗಿಯ ಕಿವಿಗಾಯ್ತು ಪೆಟ್ಟು, ಮಾಡಿದ ವಿಚಿತ್ರ ಕೆಲಸ ಕೇಳಿದ್ರೆ ಏನಿದು ಕರ್ಮ ಅಂತೀರ

  ತನ್ನ ತೂಕ ಇಳಿಸುವ ಪ್ರಯಾಣದಿಂದ ಸಲಹೆಗಳನ್ನು ನೀಡಿದ ಆಶುತೋಷ್‌, “ಒಮ್ಮೆ ನೀವು ಮನಸ್ಸನ್ನು ನಿಯಂತ್ರಿಸಿದರೆ, ಎಲ್ಲವೂ ಸಾಲಿನಲ್ಲಿ ಬೀಳಬಹುದು. ಯಾವಾಗಲೂ ನಿಮ್ಮ ದೇಹವನ್ನು ಆಲಿಸಿ ಮತ್ತು ಅದನ್ನು ಗೌರವಿಸಿ. ಆರಂಭದಲ್ಲಿ, ಅನೇಕ ಗೊಂದಲಗಳು ಉಂಟಾಗಬಹುದು, ಮತ್ತು ಅವುಗಳನ್ನು ನಿರ್ಲಕ್ಷಿಸುವುದು ವ್ಯವಹರಿಸಲು ಉತ್ತಮ ಮಾರ್ಗವಾಗಿದೆ'' ಎಂದೂ ಹೇಳುತ್ತಾರೆ.

  ''ತೂಕ ಇಳಿಸಿಕೊಳ್ಳಲು ಅಥವಾ ಅಲಂಕಾರಿಕ ಶೂಗಳು ಅಥವಾ ಬಟ್ಟೆಗಳನ್ನು ಖರೀದಿಸಲು ಹಣ ಹೂಡಿಕೆ ಮಾಡುವ ಅಗತ್ಯವಿಲ್ಲ. ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ, ಚಟುವಟಿಕೆಯ ಸಮಯದಲ್ಲಿ ಸಂಗೀತ ಆಲಿಸಿ ಮತ್ತು ಸ್ಥಳಗಳನ್ನು ಬದಲಾಯಿಸುತ್ತಿರಿ. ಕಡಿಮೆ ಎನಿಸಿದರೂ ವಾಸ್ತವಿಕ ಗುರಿಗಳನ್ನು ಹೊಂದಿರಿ. ಮತ್ತು ನನ್ನಂತಹ ವ್ಯಕ್ತಿಯು ಅದನ್ನು ಮಾಡಲು ಸಾಧ್ಯವಾದರೆ, ಯಾರಾದರೂ ಮತ್ತು ಎಲ್ಲರೂ ಮಾಡಬಹುದು. ಸ್ವಲ್ಪ ಸಮಯ ಕೊಡಿ'' ಎಂದು ಆಶುತೋಷ್‌ ತೂಕ ಇಳಿಸಿಕೊಳ್ಳುವ ಬಗ್ಗೆ ಸಲಹೆ ನೀಡಿದ್ದಾರೆ.
  Published by:Sharath Sharma Kalagaru
  First published: