ಮದ್ಯಪಾನಿಗಳಿಗಿಂತ ಚಹಾ ಕುಡಿಯುವರಲ್ಲಿ ಈ ಸಮಸ್ಯೆ ಹೆಚ್ಚು!

news18
Updated:August 6, 2018, 5:19 PM IST
ಮದ್ಯಪಾನಿಗಳಿಗಿಂತ ಚಹಾ ಕುಡಿಯುವರಲ್ಲಿ ಈ ಸಮಸ್ಯೆ ಹೆಚ್ಚು!
news18
Updated: August 6, 2018, 5:19 PM IST
-ನ್ಯೂಸ್ 18 ಕನ್ನಡ

ಚಹಾ ಕುಡಿಯುವುದು ಅಭ್ಯಾಸವಾದರೆ, ಮದ್ಯಪಾನ ಎಂಬುದು ಚಟವಾಗಿರುತ್ತದೆ. ಆದರೆ ಮದ್ಯಪಾನ ಮಾಡದೇ, ಟೀ ಕುಡಿಯುವವರಿಗೆ ಅಪಾಯ ಕಾದಿದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಆಲ್ಕೊಹಾಲ್​ನಿಂದ ದೂರವಿದ್ದು ಬರೀ ಟೀ ಮಾತ್ರ ಕುಡಿಯುತ್ತಿದ್ದರೆ ಬುದ್ದಿಮಾಂದ್ಯತೆಯ(ಡಿಮೆಂಶಿಯಾ) ಸಮಸ್ಯೆ ಕಾಣಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಕಂಡು ಹಿಡಿದಿದ್ದಾರೆ. ಬಿಎಮ್​ ಮೆಡಿಕಲ್ ಜರ್ನಲ್ ಪ್ರಕಾರ ಯಾರು ಅತಿ ಹೆಚ್ಚು ಟೀ ಸೇವಿಸುತ್ತಾರೊ, ಅಂತವರಲ್ಲಿ ಅಲ್ಝೈಮರ್ ಮತ್ತು ನ್ಯೂರೊಡಿಜೆನರೆಟಿವ್ ಕಾಯಿಲೆಗಳು ಕಾಣಿಸುತ್ತದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಸಮಸ್ಯೆಯಿಂದ ವಿಶ್ವದಾದ್ಯಂತ ಶೇ.65ರಷ್ಟು ಜನರು ಬಳಲುತ್ತಿದ್ದು, ಇದರಲ್ಲಿ ಶೇ.40ರಷ್ಟು ಮಂದಿ 85 ವರ್ಷ ವಯಸ್ಸಿನ ಆಸುಪಾಸಿನವರಾಗಿದ್ದಾರೆ. 2050 ಆಗುವಷ್ಟರಲ್ಲಿ ಈ ಸಂಖ್ಯೆಯು ಮೂರು ಪಟ್ಟು ಹೆಚ್ಚಾಗಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಹಾಗೆಯೇ ಫ್ರೆಂಚ್ ರಾಷ್ಟ್ರೀಯ ಆರೋಗ್ಯ ಸಂಸ್ಥೆ ನಡೆಸಿದ ಮತ್ತೊಂದು ಅಧ್ಯಯನದಲ್ಲಿ ಮದ್ಯಪಾನ ಮತ್ತು ವೈನ್ ಸೇವಿಸುವರರಲ್ಲಿ ಡಿಮೆಂಶಿಯಾ ಕಾಯಿಲೆ ಸಮಸ್ಯೆ ಕಡಿಮೆ ಇರುವುದು ಕಂಡು ಬಂದಿದೆ. ಅಲ್ಲದೆ ವೊಡ್ಕಾ ಮತ್ತು ಬಿಯರ್ ಕುಡಿಯುವವರಲ್ಲಿ ಈ ಕಾಯಿಲೆಯು ಅಪಾಯ ಮಟ್ಟದಲ್ಲಿ ಕಂಡು ಬರುತ್ತಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮದ್ಯಪಾನದಿಂದ ಸ್ಟ್ರೋಕ್, ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತಿದೆ ಎಂದು ಅಧ್ಯಯನ ತಂಡ ತಿಳಿಸಿದೆ.

ದಿನನಿತ್ಯ ಆಲ್ಕೊಹಾಲ್ ಸೇವಿಸುವುದರಿಂದ ಬುದ್ದಿಮಾಂದ್ಯತೆಯ ಸಮಸ್ಯೆಯನ್ನು ಶೇ.17ರಷ್ಟು ಹೆಚ್ಚಿಸುತ್ತದೆ ಎಂದು ಇದೇ ವೇಳೆ ಸಂಶೋಧಕರು ತಿಳಿಸಿದ್ದಾರೆ. ಒಟ್ಟಾರೆ ಪ್ರತಿನಿತ್ಯ ಟೀ ಕುಡಿದರೂ, ಮದ್ಯಪಾನ ಮಾಡಿದರೂ ಡಿಮೆಂಶಿಯಾ ಸಮಸ್ಯೆ ಮಾತ್ರ ಕಾಣಿಸುತ್ತದೆ ಎಂಬುದನ್ನು ಒಪ್ಪಲೇಬೇಕಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...