ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕಾ? ಹಾಗಿದ್ರೆ ಟೀ ಕುಡಿಯಿರಿ..!

ಚಹಾವು ದೇಹವನ್ನು ಉರಿಯೂತ, ಜ್ವರ, ಶ್ವಾಸಕೋಶ ಮತ್ತು ಉಸಿರಾಟದ ವ್ಯವಸ್ಥೆಯಿಂದ ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.

news18-kannada
Updated:June 16, 2020, 6:14 PM IST
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕಾ? ಹಾಗಿದ್ರೆ ಟೀ ಕುಡಿಯಿರಿ..!
tea
  • Share this:
ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ಪಾರಾಗಲು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿಯೇ ಇಂದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕುರಿತು ಹಲವು ರೀತಿಯ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಇದರಲ್ಲಿ ಟೀ ಆಫ್ ಅಸ್ಸಾಂ ನಿಂದ ಕೂಡ ಕೊರೋನಾ ವೈರಸ್ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯವಾದ ರೋಗನಿರೋಧಕ ಶಕ್ತಿಯನ್ನು ಪಡೆಯಬಹುದು ಎಂಬುದು ತಿಳಿದುಬಂದಿದೆ.

ಇನ್ನೂ ಕೂಡ ಕೊರೋನಾ ಮಹಾಮಾರಿಯನ್ನು ತಡ್ಡೆಗಟ್ಟುವಂತಹ ಯಾವುದೇ ಔಷಧಿಗಳನ್ನು ಕಂಡು ಹಿಡಿಯಲಾಗಲಿಲ್ಲ. ಹೀಗಾಗಿ ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಿಸಿಕೊಳ್ಳುವ ಮೂಲಕ ವೈರಾಣುವಿನಿಂದ ಪರಾಗುವುದೊಂದೇ ಪರಿಹಾರ.

ಬ್ಲಾಕ್ ಟೀ ಅವಶ್ಯಕತೆ:

ನವಭಾರತ್ ಟೈಮ್ಸ್​ನಲ್ಲಿ ಪ್ರಕಟವಾದ ವರದಿ ಪ್ರಕಾರ, ಚೀನಾ ಕೂಡ ಕೊರೋನಾವನ್ನು ತೊಡೆದುಹಾಕಲು ಭಾರತೀಯ ಚಹಾ ಮಾರುಕಟ್ಟೆಯನ್ನು ಅವಲಂಬಿಸಬಹುದು. ಯಾಕೆಂದರೆ, ಜಗತ್ತಿಗೆ ಗ್ರೀನ್-ಟೀ ಪೂರೈಸುವ ಚೀನಾಗೆ ಅಸ್ಸಾಂನ ಚಹಾ ತೋಟಗಳಲ್ಲಿ ಬೆಳೆಯುವ ಚಹಾ ಎಲೆಗಳ ಅವಶ್ಯಕತೆ ಇದೆ. ಚೀನಿಯರು ಗ್ರೀನ್​ ಟೀಯನ್ನು ಹೆಚ್ಚು ಉತ್ಪಾದಿಸಿದ್ರೆ, ಇತ್ತ ಭಾರತೀಯ ಸಾಮಾನ್ಯ ಚಹಾ ಎಲೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಇದೀಗ ಬ್ಲಾಕ್ ಟೀ ಕುಡಿಯುವವರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಕಪ್ಪು ಎಲೆಗಳ ಕೆಂಪು ಚಹಾ:
ಗ್ರೀನ್ ಟೀನಲ್ಲಿ ಹಾಲನ್ನು ಬಳಸಲಾಗುವುದಿಲ್ಲ. ಆದರೆ ಬ್ಲಾಕ್ ಟೀಗೆ ಹಾಲನ್ನು ಸೇರಿಸಿದಾಗ ಅದು ತಿಳಿ ಕೆಂಪು ಬಣ್ಣವಾಗುತ್ತದೆ. ಆದ್ದರಿಂದ ಇದನ್ನು ಕೆಂಪು ಚಹಾ ಎಂದೂ ಕರೆಯುತ್ತಾರೆ. ಕೆಂಪು ಚಹಾವು ದೇಹವನ್ನು ಉರಿಯೂತ, ಜ್ವರ, ಶ್ವಾಸಕೋಶ ಮತ್ತು ಉಸಿರಾಟದ ವ್ಯವಸ್ಥೆಯಿಂದ ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ವಾಸ್ತವವಾಗಿ, ಇತ್ತೀಚೆಗೆ ಚೀನಾದಲ್ಲಿ ನಡೆಸಿದ ಅಧ್ಯಯನವೊಂದರಲ್ಲಿ, ಅಸ್ಸಾಂನ ಚಹಾ ತೋಟಗಳಲ್ಲಿ ಉತ್ಪತ್ತಿಯಾಗುವ ಕಪ್ಪು ಚಹಾ ರೋಗನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಾಬೀತಾಗಿದೆ.

ಏಕೆಂದರೆ ಈ ಚಹಾದಲ್ಲಿ ಥೈಫ್ಲಾವಿನ್ಸ್ ಎಂಬ ಅಂಶವಿದೆ. ಇದು ದೇಹಕ್ಕೆ ಇನ್ಫ್ಲುಯೆನ್ಸ್ ಮತ್ತು ಉಸಿರಾಟದ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇತ್ತೀಚೆಗೆ, ಅಸ್ಸಾಂ ಮೂಲದ ಚಹಾ ಸಂಶೋಧನೆಯು ಕಪ್ಪು ಎಲೆಗಳಿಂದ ತಯಾರಿಸಿದ ಬ್ಲಾಕ್ ಟೀ ದೇಹದ ಪ್ರತಿರಕ್ಷೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ. ಹೀಗಾಗಿ ನಿಯಮಿತವಾಗಿ ಬ್ಲಾಕ್ ಟೀ ಅಥವಾ ಕೆಂಪು ಚಹಾವನ್ನು ಕುಡಿಯುವುದು ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಎನ್ನಲಾಗಿದೆ.
First published:June 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading