Breakfast Recipe: ಸೂಪರ್ ಸಂಡೇಗೆ ಟ್ರೈ ಮಾಡಿ ಆರೋಗ್ಯಕರ ರಾಗಿ ಇಡ್ಲಿ- ಇಲ್ಲಿದೆ ರೆಸಿಪಿ

Ragi Idli Recipe: ರಾಗಿಯಲ್ಲಿ ಅಮಿನೋ ಆಮ್ಲ ಟ್ರಿಪ್ಟೊಫಾನ್, ಉನ್ನತ ಮಟ್ಟದ ಪ್ರೋಟೀನ್, ಆರೋಗ್ಯಕಾರಿ ಕಾರ್ಬ್ಸ್, ಅಧಿಕ ಮಟ್ಟದ ನಾರಿನಾಂಶ, ಅಪರ್ಯಾಪ್ತ ಕೊಬ್ಬು, ಆಂಟಿ ಆಕ್ಸಿಡೆಂಟುಗಳು, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ದಕ್ಷಿಣ ಭಾರತದ(South Indian) ಭಕ್ಷ್ಯಗಳು (Foods)ವಿಭಿನ್ನ ಪಾಕ ಪದ್ಧತಿಯನ್ನು(Food ) ಹೊಂದಿದ್ದು, ಬೇರೆ ಬೇರೆ ಮಸಾಲೆ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ. ಆದ್ದರಿಂದ ಭಕ್ಷ್ಯಗಳ ರುಚಿಯೇ (Very Tasty) ಬೇರೆ. ಇಲ್ಲಿ ಅನೇಕ ಭಕ್ಷ್ಯಗಳನ್ನು ತುಂಬಾನೇ ತ್ವರಿತವಾಗಿ ಮತ್ತು ಸುಲಭವಾಗಿ (Quick and Easy) ತಯಾರಿಸಿಕೊಳ್ಳಬಹುದಾಗಿದೆ. ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪಾಕ ಪದ್ಧತಿಯು ಪರಿಮಳಯುಕ್ತ ಮತ್ತು ರುಚಿಕರಎಲ್ಲರ ಮನೆಗಳಲ್ಲಿ ಇಡ್ಲಿ (Idli) ಮಾಡಿಲಾಗುತ್ತದೆ. ಆದರೆ ಅದೇ ಇಡ್ಲಿಯಲ್ಲೂ ಹಲವಾರು ವಿಧಗಳಿದೆ. ಮಲ್ಲಿಗೆ ಇಡ್ಲಿ, ಅಕ್ಕಿ ಇಡ್ಲಿ, ರವೆ ಇಡ್ಲಿ. ಹಾಗೆಯೇ ಹಲವಾರು ಜನರಿಗೆ ತಿಳಿದಿರದ ಇಡ್ಲಿಯ ವಿಧ ರಾಗಿ (Ragi Idli) ಹಿಟ್ಟಿನ ಇಡ್ಲಿ. 

ರಾಗಿಯಲ್ಲಿ ಅಮಿನೋ ಆಮ್ಲ ಟ್ರಿಪ್ಟೊಫಾನ್, ಉನ್ನತ ಮಟ್ಟದ ಪ್ರೋಟೀನ್, ಆರೋಗ್ಯಕಾರಿ ಕಾರ್ಬ್ಸ್, ಅಧಿಕ ಮಟ್ಟದ ನಾರಿನಾಂಶ, ಅಪರ್ಯಾಪ್ತ ಕೊಬ್ಬು, ಆಂಟಿ ಆಕ್ಸಿಡೆಂಟುಗಳು, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ನಿಯಮಿತ ರಾಗಿಯ ಸೇವನೆ ಮೂಳೆಗಳ ಬಲಿಷ್ಠತೆ, ಮಧುಮೇಹ ನಿಯಂತ್ರಣ, ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು, ಹಸಿವನ್ನು ಮುಂದೂಡುವುದು ಮತ್ತು ಜೀರ್ಣಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನವನ್ನು ಹೊಂದಿರುವ ರಾಗಿ ಬಳಸಿ ನಾವು ಹಲವಾರು ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಅದಕ್ಕೆ ಉತ್ತಮ ಉದಾಹರಣೆ ಈ ರಾಗಿ ಇಡ್ಲಿ. ಹಾಗಾದ್ರೆ ರಾಗಿ ಇಡ್ಲಿ ಮಾಡೋದು ಹೇಗೆ ಇಲ್ಲಿದೆ ರೆಸಿಪಿ

ಇದನ್ನೂ ಓದಿ: ಕೇವಲ 10 ನಿಮಿಷದಲ್ಲಿ ಮಾಡಿ ಈ ಮೈದಾ ದೋಸೆ- ಇಲ್ಲಿದೆ ರೆಸಿಪಿ

ರಾಗಿ ಇಡ್ಲಿ ತಯಾರಿಸಲು  ಬೇಕಾಗುವ ಸಾಮಗ್ರಿಗಳು

ಬಾಂಬೆ ರವಾ / ಸೂಜಿ ರವೆ - 2 ಕಪ್‌

ರಾಗಿ ಹಿಟ್ಟು - 2 ಕಪ್‌

ಉಪ್ಪು - ರುಚಿಗೆ ತಕ್ಕಷ್ಟು

ಮೊಸರು -2 ಕಪ್‌

ನೀ‘ರು - ಅಗತ್ಯವಿರುವಂತೆ ಸೇರಿಸಿ

ಅಡುಗೆ ಸೋಡಾ - ಕಾಲು ಚಮಚ

ರಾಗಿ ಇಡ್ಲಿ ಮಾಡುವ ವಿಧಾನ

ಮೊದಲನೆಯದಾಗಿ, ರವೆಯನ್ನು ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷಗಳ ಕಾಲ ಹುರಿಯಿರಿ. ಇಡ್ಲಿ ಹಿಟ್ಟಿಗೆ ಅದನ್ನು ಸೇರಿಸುವ ಮೊದಲು ಅದನ್ನು ಸಂಪೂರ್ಣವಾಗಿ ತಣ್ಣಗಾಗಿಸಿ. ಈಗ ಒಣಗಿದ ಹುರಿದ ರವೆವನ್ನು ದೊಡ್ಡ ಪಾತ್ರೆಗೆ ಹಾಕಿ,  ಅದಕ್ಕೆ ರಾಗಿ ಹಿಟ್ಟು, ಉಪ್ಪು ಮತ್ತು ಮೊಸರು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ.

ಮೊಸರು ಗಟ್ಟಿ ಆಗುತ್ತಿರುವುದನ್ನ ಗಮನಿಸಿ  ಅಗತ್ಯವಿರುವಂತೆ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು 30 ನಿಮಿಷಗಳ ಕಾಲ ನೆನೆಸಿ ಬಿಡಿ. 30 ನಿಮಿಷಗಳ ನಂತರ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅಗತ್ಯವಿದ್ದರೆ ನೀರನ್ನು ಸೇರಿಸಿ.

ಇಡ್ಲಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಈಗ ಕಾಲು ಚಮಚ ಅಡಿಗೆ ಸೋಡಾ ಸೇರಿಸಿ ಮತ್ತು ಅದು ನೊರೆಯಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇಡ್ಲಿ ತಟ್ಟೆ‌ಗಳಿಗೆ ಎಣ್ಣೆ ಹಚ್ಚಿ ಹಿಟ್ಟನ್ನು ಹಾಕಿಬೇರೆ ಇಡ್ಲಿಗಳಂತೆಯೇ ಅದನ್ನು ಮಧ್ಯಮ ಉರಿಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ.

ಇದನ್ನೂ ಓದಿ: ಅಕ್ಕಿ ರೊಟ್ಟಿಗಿಂತ ಸ್ವಾದಿಷ್ಠ ಈ ಬೀಟ್​ರೂಟ್​ ಕಡಲೆ ಹಿಟ್ಟಿನ ರೊಟ್ಟಿ -ಇಲ್ಲಿದೆ ನೋಡಿ ರೆಸಿಪಿ

ಸ್ಟೌವ್‌ ಆಫ್‌ ಮಾಡಿದ ನಂತರ 5 ನಿಮಿಷಗಳ ಕಾಲ ಇಡ್ಲಿ ಮುಚ್ಚಳ ತೆಗೆಯಬೇಡಿ, 5 ನಿಮಿಷಗಳ ನಂತರ ತೆಗೆದರೆ ರುಚಿ ರುಚಿಯಾದ ರಾಗಿ ಇಡ್ಲಿ ರೆಡಿ.
Published by:Sandhya M
First published: