Morning Breakfast: ನಿಮ್ಮ ಮನೆಯಲ್ಲಿಂದು ಘಂ ಎನ್ನುವ ಘೀ ರೈಸ್ ಮಾಡಿ, ರೆಸಿಪಿ ಇಲ್ಲಿದೆ ಓದಿ

ಬಿಸಿ ತುಪ್ಪದ ಅನ್ನವನ್ನು ಗರಿಗರಿಯಾದ ಪಾಪಡ್ ಅಥವಾ ಮಾವಿನ ಉಪ್ಪಿನಕಾಯಿ ಜೊತೆ ಸೇವನೆ ಮಾಡಬಹುದು. ಇದು ಹಪ್ಪಳ ಮತ್ತು ಉಪ್ಪಿನಕಾಯಿ ಜೊತೆ ಸಾಕಷ್ಟು ರುಚಿ ನೀಡುತ್ತದೆ. ಇನ್ನು ತುಪ್ಪದ ಅನ್ನವನ್ನು ಸುಲಭವಾಗಿ ತಯಾರಿಸಬಹುದು. ಈ ರೆಸಿಪಿ ಇಲ್ಲಿದೆ ಓದಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವು ಬೆಳಗಿನ ಜಾವದ (Morning) ತಿಂಡಿಗೆ (Tiffin) ಸಾಕಷ್ಟು ಪದಾರ್ಥಗಳನ್ನು (Ingredients) ತಯಾರು ಮಾಡಿ ಸೇವನೆ (Eat) ಮಾಡಿರುತ್ತೇವೆ. ಲೆಮನ್ ರೈಸ್ (Lemon Rice), ಟೊಮೆಟೋ ಬಾತ್, ಪಾಲಕ್ ರೈಸ್, ಬಿಸಿ ಬೇಳೆ ಬಾತ್ ಹೀಗೆ ಸಾಕಷ್ಟು ಪದಾರ್ಥಗಳನ್ನು ಬೆಳಗಿನ ತಿಂಡಿಗೆ ಆಯ್ಕೆ ಮಾಡಿ, ಮಾಡಿರುತ್ತೇವೆ. ಈ ಪದಾರ್ಥಗಳು ತುಂಬಾ ಸಮಯದವರೆಗೆ ಹೊಟ್ಟೆ ತುಂಬಿದಂತೆ ನೋಡಿಕೊಳ್ಳುತ್ತವೆ. ಆದ್ರೆ ಕೆಲವರು ಬೆಳಂಬೆಳಗ್ಗೆ ಟಿಫನ್ ಗೆ ರೈಸ್ ಸೇವನೆ ಮಾಡಲು ಇಷ್ಟ ಪಡುವುದಿಲ್ಲ. ಆದ್ರೆ ನೀವು ಎಂದಾದರೂ ಘೀ ರೈಸ್ ತಿಂದಿದ್ದೀರಾ? ಇಲ್ಲ ಅಂದ್ರೆ ಈ ಬಾರಿ ನೀವು ಘೀ ರೈಸ್ ರೆಸಿಪಿ ಟ್ರೈ ಮಾಡಿ ಸೇವನೆ ಮಾಡಿ.  

    ಘೀ ರೈಸ್ ರೆಸಿಪಿ

    ಬೇಕಾಗುವ ಸಾಮಗ್ರಿಗಳು

    1 ಕಪ್ ಬೇಯಿಸಿದ ಅಕ್ಕಿ

    2 ಚಮಚ ತುಪ್ಪ

    1/2 ಟೀಸ್ಪೂನ್ ಸಾಸಿವೆ

    1/2 ಟೀಸ್ಪೂನ್ ಉದ್ದಿನ ಬೇಳೆ

    1/2 ಟೀಸ್ಪೂನ್ ಕಡಲೆಬೇಳೆ

    3 - ಕೆಂಪು ಮೆಣಸಿನಕಾಯಿ

    12 - ಕರಿಬೇವಿನ ಎಲೆ

    1 ಕಪ್ ತೆಂಗಿನಕಾಯಿ

    8 - ಗೋಡಂಬಿ

    ಅಗತ್ಯಕ್ಕೆ ತಕ್ಕಷ್ಟು ಉಪ್ಪು

    1 ಪಿಂಚ್ ಇಂಗು

    ಘೀ ರೈಸ್ ಜೊತೆ ಸವಿಯಲು ಪಾಪಡ್

    ಇದನ್ನೂ ಓದಿ: ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಉಂಟಾಗುತ್ತದೆ?

    ಘೀ ರೈಸ್ ರೆಸಿಪಿ ಮಾಡುವ ವಿಧಾನ

    ಪ್ಯಾನ್ ತೆಗೆದುಕೊಳ್ಳಿ. ಮತ್ತು ಅದಕ್ಕೆ ತುಪ್ಪ ಹಾಕಿ, ಅದನ್ನು ಗ್ಯಾಸ್ ಮೇಲಿಡಿ. ಮಧ್ಯಮ ಉರಿಯಲ್ಲಿ ಬಿಸಿ ಮಾಡಲು ಬಿಡಿ, ತುಪ್ಪ ಬಿಸಿಯಾದಾಗ, ಸಾಸಿವೆ, ಉದ್ದಿನ ಬೇಳೆ, ಹಸಿಮೆಣಸು, ಗೋಡಂಬಿ ಎಲ್ಲವನ್ನೂ ಹಾಕಿ ಹದ ಮಾಡಿಕೊಳ್ಳಿ. ಮತ್ತು ಅದನ್ನು 2 ನಿಮಿಷ ಚೆನ್ನಾಗಿ ಫ್ರೈ ಮಾಡಿ.

    ಇದು ಗೋಲ್ಡನ್ ಬ್ರೌನ್ ಆದಾಗ, ನಂತರ ಗ್ಯಾಸ್ ಆಫ್ ಮಾಡಿ. ಈಗ ಇನ್ನೊಂದು ಬಾಣಲೆಯಲ್ಲಿ ಕರಿಬೇವು, ಒಣ ಮೆಣಸಿನಕಾಯಿ, ಚಿಟಿಕೆ ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಜೊತೆಗೆ ಒರಟಾಗಿ ರುಬ್ಬಿದ ತೆಂಗಿನಕಾಯಿ ಸೇರಿಸಿ ಮತ್ತು 3 ರಿಂದ 5 ನಿಮಿಷ ಚೆನ್ನಾಗಿ ಬೇಯಿಸಿ.

    ಈಗ ತಯಾರಿಸಿದ ಎಲ್ಲಾ ಪದಾರ್ಥಗಳನ್ನು ಬೇಯಿಸಿ. ನಂತರ ಅನ್ನದಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತು 3 ರಿಂದ 4 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೆರೆಸಿ. ನೀವು ತಕ್ಷಣ ಬೇಯಿಸಿದ ಅನ್ನ ಬಳಸುತ್ತಿದ್ದರೆ ಹಾಗೆ ಮಾಡಬೇಡಿ. ಮೊದಲು ಅದನ್ನು ತಣ್ಣಗಾಗಲು ಮರೆಯಬೇಡಿ. ನೀವು ಬಿಸಿ ಅನ್ನದೊಂದಿಗೆ ಈ ಪಾಕವಿ ಧಾನ ಮಾಡಿದರೆ ಅನ್ನವು ಒಟ್ಟಿಗೆ ಅಂಟಿಕೊಳ್ಳುತ್ತದೆ.

    ಆಗ ನಿಮ್ಮ ಪಾಕ ವಿಧಾನವು ಹೆಚ್ಚು ರುಚಿಯಾಗುವುದಿಲ್ಲ. ಆಗ ನಿಮ್ಮ ಪ್ರಯತ್ನ ವ್ಯರ್ಥವಾಗುತ್ತದೆ. ಸಿದ್ಧಪಡಿಸಿದ ಮಸಾಲೆಗಳನ್ನು ಅನ್ನದಲ್ಲಿ ಚೆನ್ನಾಗಿ ಬೆರೆಸಿ, ನಂತರ ಅದರ ಮೇಲೆ ಒಂದು ಚಮಚ ತುಪ್ಪ ಸೇರಿಸಿ, ಈಗ ಇದು ಉತ್ತಮ ಪರಿಮಳ ಹಾಗೂ ತಿನ್ನಲು ಸಾಕಷ್ಟು ರುಚಿ ನೀಡುತ್ತದೆ.

    ಬಿಸಿ ತುಪ್ಪದ ಅನ್ನ ರೆಸಿಪಿ ಈಗ ಸಿದ್ಧವಾಗಿದೆ. ಈಗ ನೀವು ಇದನ್ನು ಗರಿಗರಿಯಾದ ಪಾಪಡ್ ಅಥವಾ ಮಾವಿನ ಉಪ್ಪಿನಕಾಯಿ ಜೊತೆ ಸೇವನೆ ಮಾಡಸಬಹುದು. ಇದು ಹಪ್ಪಳ ಮತ್ತು ಉಪ್ಪಿನಕಾಯಿ ಜೊತೆ ಸಾಕಷ್ಟು ರುಚಿ ನೀಡುತ್ತದೆ. ಹಾಗಾಗಿ ತುಪ್ಪದ ಅನ್ನ ರೆಸಿಪಿ ಸುಲಭವಾಗಿ ತಯಾರಿಸಬಹುದು.

    ಇದನ್ನೂ ಓದಿ: ಕೂದಲ ಆರೈಕೆಗೆ ಕಡಲೆ ಹಿಟ್ಟಿನ ಹೇರ್ ಮಾಸ್ಕ್; ತಯಾರಿಸೋದು ಹೇಗೆ?

    ಇದು ತುಂಬಾ ಟೇಸ್ಟಿ ಮತ್ತು ಆರೋಗ್ಯಕರ ಪಾಕ ವಿಧಾನವಾಗಿದೆ. ಉಪ್ಪಿನಕಾಯಿ ಮತ್ತು ಪಾಪಡ್ ಜೊತೆ ತಿಂದರೆ ಅದರ ರುಚಿ ಹೆಚ್ಚುತ್ತದೆ. ನೀವು ಈ ಪಾಕ ವಿಧಾನ ಇಷ್ಟ ಪಟ್ಟರೆ, ಖಂಡಿತವಾಗಿ ಸೇವಿಸಿ. ಮನೆಯಲ್ಲಿ ಅನ್ನ ಎಸೆಯುವ ಬದಲು ಅದ್ಭುತ ಪಾಕ ವಿಧಾನ ಪ್ರಯತ್ನಿಸಿ.
    Published by:renukadariyannavar
    First published: