• Home
 • »
 • News
 • »
 • lifestyle
 • »
 • Health Care: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?

Health Care: ಟೇಸ್ಟಿ ಎಂದು ಅತಿಯಾಗಿ ತಿನ್ನುವ ಚೀಸ್ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೀಸ್ ಓವರ್‌ ಲೋಡ್ ಸ್ಥೂಲಕಾಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಅದಾಗ್ಯೂ ಚೀಸ್ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಜೊತೆಗೆ ಇದು ಉತ್ತಮ ಪ್ರಮಾಣದ ರಂಜಕ ಮತ್ತು ಕ್ಯಾಲ್ಸಿಯಂ ಹೊಂದಿದೆ. ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ ಇದರಲ್ಲಿ ನಾರಿನಂಶ ಬಹಳ ಕಡಿಮೆ.

ಮುಂದೆ ಓದಿ ...
 • Share this:

  ಇತ್ತೀಚಿನ ದಿನಗಳಲ್ಲಿ ಚೀಸ್ (Cheese) ಸೇವನೆ ಹೆಚ್ಚುತ್ತಿದೆ. ಅದರ ರುಚಿಯಿಂದಾಗಿ (Taste) ಚೀಸ್ ಮತ್ತಷ್ಟು ಜನಪ್ರಿಯತೆ (Famous) ಮತ್ತು ಬೇಡಿಕೆ ಹೆಚ್ಚಿದೆ. ಈಗ ಪಿಜ್ಜಾ (Pizza) ಮತ್ತು ಬರ್ಗರ್, ಸ್ಯಾಂಡ್ ವಿಚ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಚೀಸ್, ದೋಸೆ ಮತ್ತು ಇತರೆ ರೆಸಿಪಿಗಳಿಗೂ (Recipe) ಲಗ್ಗೆ ಇಟ್ಟಿದೆ. ಚೀಸ್ ಇಲ್ಲದ ಪದಾರ್ಥಗಳ ಸೇವನೆಯನ್ನು ಜನ ಅಷ್ಟಾಗಿ ಇಷ್ಟ ಪಡುತ್ತಿಲ್ಲ. ಫಾಸ್ಟ್ ಫುಡ್ ತಿನ್ನುವವರು ಹೆಚ್ಚಾಗಿ ಚೀಸ್ ಇರುವ ಪದಾರ್ಥಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಚೀಸ್ ಟ್ರೆಂಡ್ ಆಗಿ ಬಿಟ್ಟಿದೆ. ಜೊತೆಗೆ ಚೀಸ್ ಸೇವನೆ ಆರೋಗ್ಯ ಅಪಾಯ ಸಹ ಹೆಚ್ಚಿಸುತ್ತಿದೆ.


  ಅತಿಯಾದ ಚೀಸ್ ಸೇವನೆಯ ಅಡ್ಡ ಪರಿಣಾಮಗಳು


  ಚೀಸ್ ಓವರ್‌ ಲೋಡ್ ಸ್ಥೂಲಕಾಯ, ಅಧಿಕ ಕೊಲೆಸ್ಟ್ರಾಲ್, ನಿರ್ಜಲೀಕರಣ ಮತ್ತು ಹೃದಯ ಕಾಯಿಲೆಗೆ ಕಾರಣವಾಗುತ್ತಿದೆ ಅಂತಾ ಕೆಲವು ಅಧ್ಯಯನಗಳು ಹೇಳಿವೆ. ಚೀಸ್ ಒಂದು ವಿಶೇಷ ಆಹಾರವಾಗಿದೆ. ಇದನ್ನು ಪೌಷ್ಟಿಕಾಂಶದ ಮೌಲ್ಯದಿಂದಾಗಿ ಸೂಪರ್ ಫುಡ್ ಎಂದು ಕರೆಯುತ್ತಾರೆ.


  ಇದು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಜೊತೆಗೆ ಇದು ಉತ್ತಮ ಪ್ರಮಾಣದ ರಂಜಕ ಮತ್ತು ಕ್ಯಾಲ್ಸಿಯಂ ಹೊಂದಿದೆ. ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ ಇದರಲ್ಲಿ ನಾರಿನಂಶ ಬಹಳ ಕಡಿಮೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಚೀಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ.


  ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


  ಅವುಗಳ ರುಚಿ ಹೆಚ್ಚಿಸಲು ಸಂರಕ್ಷಕಗಳ ಜೊತೆಗೆ ಅದಕ್ಕೆ ಸೋಡಿಯಂ ಹಾಕಲಾಗುತ್ತದೆ. ಹೀಗಾಗಿ ಚೀಸ್ ಪ್ರಮಾಣವು ಆರೋಗ್ಯಕ್ಕೆ ಅಪಾಯ ಹೆಚ್ಚಿಸುತ್ತದೆ.


  ದಿನಕ್ಕೆ ಎಷ್ಟು ಚೀಸ್ ತಿನ್ನಬೇಕು?


  ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಮಾಡಿರುವ ಶಿಫಾರಸ್ಸಿನ ಮೇರೆಗೆ ವಯಸ್ಕ ವ್ಯಕ್ತಿಯು ದಿನಕ್ಕೆ 40 ಗ್ರಾಂ ಚೀಸ್ ಸೇವಿಸುವುದು ಆರೋಗ್ಯಕರ ಎನ್ನಲಾಗಿದೆ. ಆದರೆ ಈ ಪ್ರಮಾಣ ದಿನವಿಡೀ ಆಹಾರದ್ದಾಗಿದೆ. ಪ್ರಸಿದ್ಧ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಕೂಡ ಚೀಸ್ ಅನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸುವಂತೆ ಹೇಳಿದ್ದಾರೆ. ಇದು ಪ್ರೋಟೀನ್‌ನ ಉತ್ತಮ ಮೂಲ.


  ಆದರೆ ಅದು ತಾಜಾ ಮತ್ತು ಶುದ್ಧವಾಗಿದ್ದಾಗ ಮಾತ್ರ. ಚೀಸ್ ತಿಂದರೆ ದೈಹಿಕ ಚಟುವಟಿಕೆಗಳನ್ನು ದಿನವೂ ಮಾಡಬೇಕು. ಆಗ ಅದರಿಂದ ಪಡೆದ ಕ್ಯಾಲೊರಿ ಬರ್ನ್ ಮಾಡಲು ಸಾಧ್ಯ. ಚಿಕ್ಕ ಮಕ್ಕಳು ವಯಸ್ಕರಿಗಿಂತ ಹೆಚ್ಚು ಚೀಸ್ ಸೇವಿಸುತ್ತಾರೆ.


  ಚೀಸ್ ಬೆಳೆಯುತ್ತಿರುವ ವಯಸ್ಸಿನಲ್ಲಿ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಚೀಸ್ ತಿಂದ ಮಕ್ಕಳು ದೈಹಿಕ ಚಟುವಟಿಕೆ ಮಾಡದಿದ್ದರೆ ಬೊಜ್ಜು ಉಂಟಾಗುತ್ತದೆ.


  ಅತಿಯಾದ ಚೀಸ್ ತಿನ್ನುವುದರ ಆರೋಗ್ಯದ ಅಪಾಯ


  ಹೊಟ್ಟೆ ಮತ್ತು ಸೊಂಟದ ಕೊಬ್ಬು ಹೆಚ್ಚುತ್ತದೆ


  ವಯಸ್ಸಾದಂತೆ ಕೊಬ್ಬಿನ ಪದರವು ಮಹಿಳೆಯರು ಮತ್ತು ಪುರುಷರ ಹೊಟ್ಟೆಯ ಮೇಲೆ ಸಂಗ್ರಹವಾಗುತ್ತದೆ. ಚೀಸ್ ನಂತ ಆಹಾರ ಹೊಟ್ಟೆ ಮತ್ತು ಸೊಂಟದ ಮೇಲೆ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. 2016 ರ ಎನ್‌ಸಿಬಿಐ ಸಂಶೋಧನೆ ಪ್ರಕಾರ, ಡೈರಿ ಉತ್ಪನ್ನಗಳ ಅತಿಯಾದ ಸೇವನೆ ತೂಕ ಹೆಚ್ಚಿಸುತ್ತದೆ ಎಂದಿದೆ.


  ಜೀರ್ಣಕಾರಿ ಸಮಸ್ಯೆ


  ದೈಹಿಕ ಚಟುವಟಿಕೆ ಮಾಡದ ದಿನಕ್ಕೆ 40 ಗ್ರಾಂ ಚೀಸ್ ಅನ್ನು ಸೇವಿಸುವ ಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆ ಉಂಟು ಮಾಡುತ್ತದೆ. ಗ್ಯಾಸ್, ಆಮ್ಲೀಯತೆ ಮತ್ತು ಎದೆಯುರಿ ಉಂಟಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆಯಿದ್ದವರು ಚೀಸ್ ಸೇವಿಸಿದರೆ ಅದು ದೊಡ್ಡ ಕರುಳಿನಲ್ಲಿ ಉರಿಯೂತ ಉಂಟು ಮಾಡುತ್ತದೆ.


  ಹೃದ್ರೋಗದ ಅಪಾಯ


  ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ಶಾಸ್ತ್ರದ ನಿರ್ದೇಶಕ ಡಾ ತಪನ್ ಘೋಷ್ ಪ್ರಕಾರ, ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತವೆ. ಇದು ಹೃದಯ ಸಂಬಂಧಿ ಸಮಸ್ಯೆ ಅಪಾಯ ಹೆಚಿಸುತ್ತದೆ. ಜಡ ಜೀವನಶೈಲಿಯವರು ಚೀಸ್ ಅಥವಾ ಬೆಣ್ಣೆ ಸೇವನೆ ಬಿಟ್ಟು ಬಿಡಿ. ಕೆನೆ ಹಾಲು ಕುಡಿಯಬಾರದು.


  ಚೀಸ್‌ನಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿದೆ. ಇದು ಹೃದಯದ ಆರೋಗ್ಯಕ್ಕೆ ಹಾನಿಕರಕ. ತುಪ್ಪ, ಬೆಣ್ಣೆ ಮತ್ತು ಚೀಸ್ ಓವರ್‌ ಲೋಡ್ ಸೇವನೆ ಡೆಸ್ಕ್ ಕೆಲಸ ಮಾಡುವರಿಗೂ ಒಳ್ಳೆಯದಲ್ಲ.


  ಇದನ್ನೂ ಓದಿ: ಚಳಿಗಾಲದಲ್ಲಿ ಶೀತ, ಜ್ವರವನ್ನು ನಿರ್ಲಕ್ಷ್ಯ ಮಾಡ್ತೀರಾ? ಹುಷಾರ್, ಇವು ನಿಮ್ಮ ಜೀವಕ್ಕೆ ಕುತ್ತು ತಂದೀತು!


  ತೀವ್ರ ರಕ್ತದೊತ್ತಡ


  ರಕ್ತದೊತ್ತಡ ಕಡಿಮೆ ಮಾಡಲು ಒಂದು ದಿನದಲ್ಲಿ 2400 ಮಿಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸಬಾರದು. ಹೆಚ್ಚಿನ ಚೀಸ್‌ಗಳು ಸೋಡಿಯಂ ಹೊಂದದ್ದು ಅಧಿಕ ರಕ್ತದೊತ್ತಡ ಅಪಾಯ ಹೆಚ್ಚಿಸುತ್ತದೆ.

  Published by:renukadariyannavar
  First published: