ಬೇಸಿಗೆ ಕಾಲ (Summer) ಶುರುವಾಗಿದೆ. ಮಕ್ಕಳಿಗೆ ಶಾಲೆಗಳು ಬೇಸಿಗೆ ರಜೆ (Summer Holiday) ನೀಡಿದೆ. ಈ ಸಮಯದಲ್ಲಿ ಕೆಲವೊಮ್ಮೆ ನೀವು ಮಕ್ಕಳ (Childrens) ಇಷ್ಟವಾಗುವಂತಹ ತಿಂಡಿಗಳನ್ನು ಮಾಡಬೇಕು. ಹಾಗಂತ ಬೇಕರಿಯಲ್ಲಿ ಸಿಗುವ ಚಿಪ್ಸ್ (Chips) , ಕುರುಕಲು ತಿಂಡಿ ಇತರ ಉತ್ಪನ್ನಗಳನ್ನು ಖರೀದಿಸಿ ಆಗಾಗ ತಿನ್ನುವುದು ಆರೋಗ್ಯಕ್ಕೆ (Health) ಹಾನಿಕಾರಕವಾಗಿದೆ. ಹಾಗಾಗಿ ಮನೆಯಲ್ಲಿಯೇ ಎಷ್ಟೋ ರುಚಿಕರ, ಪೌಷ್ಟಿಕ ಮತ್ತು ಆರೋಗ್ಯಕರ ತಿಂಡಿಗಳನ್ನು ತಯಾರಿಸಬಹುದು. ಅವುಗಳಲ್ಲಿ ಪನೀರ್ ಫ್ರೈ ಕೂಡ ಒಂದು. ಪನೀರ್ ಇಷ್ಟಪಡದವರು ಬಹಳ ಕಡಿಮೆ. ಮಸಾಲೆಯುಕ್ತ ಫ್ರೈ, ಗ್ರೇವಿ, ಸಿಹಿ ಮುಂತಾದ ಎಲ್ಲಾ ರೀತಿಯ ಭಕ್ಷ್ಯಗಳಲ್ಲಿ ಪ್ರೋಟೀನ್ ಭರಿತ ಆಹಾರವನ್ನು ತಯಾರಿಸಬಹುದು.
ಇದಕ್ಕಿಂತ ಹೆಚ್ಚಾಗಿ, ರುಚಿಕರವಾದ, ಗರಿಗರಿಯಾದ ಗೋಲ್ಡನ್ ಫ್ರೈ ಫುಡ್ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅದರಲ್ಲಿಯೂ ಗೋಲ್ಡನ್ ಪನೀರ್ ಫ್ರೈ (Golden Paneer Fry) ಪನೀರ್ನಲ್ಲಿ (Paneer) ಮಾಡಬಹುದಾದ ಅದ್ಭುತವಾದ ಡಿಶ್. ಹೊರಭಾಗದಲ್ಲಿ ಗರಿಗರಿಯಾಗಿ ಗೋಲ್ಡನ್ ಕಲರ್ನಲ್ಲಿ ಮತ್ತು ಒಳಭಾಗದಲ್ಲಿ ಮೃದು ಹಾಗೂ ನಯವಾದ, ಎರಡು ವಿಭಿನ್ನ ಟೇಸ್ಟ್ ನೀಡುವ ಗೋಲ್ಡನ್ ಪನೀರ್ ಫ್ರೈ ತಿನ್ನುತ್ತಿದ್ದರೆ, ತಿನ್ನುತ್ತಲೇ ಇರಬೇಕು ಅನಿಸುತ್ತದೆ. ಅಲ್ಲದೇ ಇದನ್ನು ಮನೆಯಲ್ಲಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಅದು ಹೇಗಪ್ಪಾ ಅಂತೀರಾ ಹಾಗಾದ್ರೆ ಈ ರೆಸಿಪಿ ನಿಮಗಾಗಿ.
ಗೋಲ್ಡನ್ ಪನೀರ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು:
ಇದನ್ನೂ ಓದಿ: Palak Paneer: ನೀವು ಅಷ್ಟೊಂದು ಇಷ್ಟಪಟ್ಟು ತಿನ್ನೋ ಪಾಲಕ್ ಪನೀರ್ ಡೇಂಜರ್ ಅಂತಿದ್ದಾರೆ ಡಾಕ್ಟರ್ಸ್!
ಬೇಸಿಗೆಯಲ್ಲಿ ಮನೆಯಲ್ಲಿ ಈ ಗೋಲ್ಡನ್ ಪನೀರ್ ಫ್ರೈ ರೆಸಿಪಿಯನ್ನು ಮಿಸ್ ಮಾಡದೇ ಮನೆಯಲ್ಲಿ ಟ್ರೈ ಮಾಡಿ. ಖಂಡಿತವಾಗಿಯೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ