• Home
  • »
  • News
  • »
  • lifestyle
  • »
  • Pasta Centers: ಸೂಪರ್ ಟೇಸ್ಟಿ ಪಾಸ್ತಾ ಸಿಗುವ ಬೆಂಗಳೂರಿನ ಟಾಪ್ 5 ಸ್ಥಳಗಳಿವು

Pasta Centers: ಸೂಪರ್ ಟೇಸ್ಟಿ ಪಾಸ್ತಾ ಸಿಗುವ ಬೆಂಗಳೂರಿನ ಟಾಪ್ 5 ಸ್ಥಳಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Near Me: ಈ ಸ್ಥಳದ ಬಗ್ಗೆ ಹಲವಾರು ಜನರು ಕೇಳಿರುತ್ತಾರೆ. ಕೆಲವರ ಹಾಟ್​ ಫೇವರೇಟ್​ ಸ್ಥಳ ಎನ್ನಬಹುದು. ಫೆಟ್ಯೂಸಿನ್, ಫರ್ಫಾಲೆಯಿಂದ ಹಿಡಿದು ಗ್ನೋಚಿ ಮತ್ತು ರವಿಯೊಲಿಯವರೆಗೆ ಇಲ್ಲಿನ ರುಚಿಕರ ಪಾಸ್ತಾವನ್ನು ನೀವು ಟ್ರೈ ಮಾಡಲೇಬೇಕು.

  • Share this:

ಇಟಲಿಯ (Italy) ಆಹಾರಗಳಲ್ಲಿ ನಮ್ಮ ಫೇವರೇಟ್​ ಆಹಾರ ಯಾವುದು ಎಂದರೆ ಪಾಸ್ತಾ (Pasta) ಮತ್ತು ಪಿಜ್ಜಾ (Pizza) ಅಗ್ರಸ್ಥಾನದಲ್ಲಿರುತ್ತದೆ. ಪಿಜ್ಜಾಗೆ ಹೆಚ್ಚಿನ ಅಭಿಮಾನಿಗಳಿದ್ದರೂ ಸಹ ಪಾಸ್ತಾ ಕೂಡ ಯಾವುದಕ್ಕೂ ಕಮ್ಮಿ ಇಲ್ಲ. ಪಾಸ್ತಾದಲ್ಲಿ ಸಹ ಹಲವಾರು ವಿಧಗಳಿದೆ. ಬಹಳಷ್ಟು ಸ್ಥಳಗಳು ಪಾಸ್ತಾಗೆ ಹೆಸರುವಾಗಿಯಾಗಿದೆ. ನೀವು ಸಹ ಬೆಂಗಳೂರಿನಲ್ಲಿ (Bengaluru) ಬೆಸ್ಟ್​ ಪಾಸ್ತಾ ಸಿಗುವ ಸ್ಥಳಗಳನ್ನು ಹುಡುಕುತ್ತಿದ್ದಾರೆ ಅವುಗಳ ಲಿಸ್ಟ್​ ಇಲ್ಲಿದೆ.  


ಲಿಟಲ್ ಇಟಲಿ, ಇಂದಿರಾ ನಗರ್


ವಿಶೇಷವಾಗಿ ಸಸ್ಯಾಹಾರಿಗಳಿಗೆ ಈ ರೆಸ್ಟೋರೆಂಟ್‌ ಫೇವರೇಟ್​ ಎನ್ನಬಹುದು. ವಿಭಿನ್ನ ಪಾಸ್ತಾ ಮೆನು, ರುಚಿಕರವಾದ ಸುವಾಸನೆಗಳಿಂದ ಕೂಡಿರುವ ಪಾಸ್ತಾಗಳನ್ನು ನೀವಿಲ್ಲಿ ಸವಿಯಬಹುದು. ಪಾಸ್ತಾ ಅಲ್ ಫೋರ್ನೋ ಇದನ್ನು  ನೀವು ಟ್ರೈ ಮಾಡಲೇಬೇಕು. ಪಾಸ್ತಾ ಅಲ್ ಸೋಲ್ ಡಿ ಸಿಸಿಲಿಯಾ, ತಾಜಾ ಮೊಝ್ಝಾರೆಲ್ಲಾ, ಕೇಪರ್‌ಗಳು, ಆಲಿವ್‌ಗಳು ಮತ್ತು ಪರ್ಮೆಸನ್‌ಗಳು ಇಲ್ಲಿ ಹೆಚ್ಚು ಮಾರಾಟವಾಗುತ್ತದೆ. ನೀವೂ ಇದನ್ನು ಮಿಸ್​ ಮಾಡಬೇಡಿ.


ವಿಳಾಸ: 2017, 100 ಫೀಟ್ ರೋಡ್, ಹೆಚ್​ಎಎಲ್ ​ 2ನೇ ಸ್ಟೇಜ್, ಇಂದಿರಾನಗರ, ಬೆಂಗಳೂರು


ಇದರ ಇನ್ನೂ ಹಲವಾರು ಶಾಖೆಗಳಿದ್ದು ನೀವು ಭೇಟಿ ನೀಡಬಹುದು.


ಸ್ಮೋಕ್ ಹೌಸ್ ಡೆಲಿ, ಇಂದಿರಾ ನಗರ


ಸಾಮಾನ್ಯವಾಗಿ ಪಾಸ್ತಾ ಎಂದರೆ ಆರೋಗ್ಯಕರವಾಗಿರುವುದಿಲ್ಲ ಎನ್ನುತ್ತಾರೆ. ಆದರೆ ಸ್ಮೋಕ್ ಹೌಸ್ ಡೆಲಿಗೆ ಹೋಗಿ, ಅಲ್ಲಿನ ಜೋವಾರ್ ಗ್ನೋಚಿ ಮತ್ತು ಮಶ್ರೂಮ್ ಫ್ರಿಕಾಸ್ಸಿ ಮತ್ತು ತೆಂಗಿನಕಾಯಿ ಮತ್ತು ಸೋಯಾ ಹಾಲಿನಲ್ಲಿ ಬೇಯಿಸಿದ ಗ್ರಿಲ್ಡ್ ವೆಜಿಟೇಬಲ್ ಪಾಸ್ತಾ ಟ್ರೈ ಮಾಡಲೇಬೇಕು. ಅಲ್ಲದೇ, ಅವರ ಮೈ ಬಾಸ್ ಸ್ಟೈಲ್ ಸ್ಪಾಗೆಟ್ಟಿ (ಕೆಂಪು ಈರುಳ್ಳಿ ಮತ್ತು ಫೀಲ್ಡ್ ಮಶ್ರೂಮ್‌) ಮತ್ತು ರೋಸ್ಟ್ ಬೆಳ್ಳುಳ್ಳಿ ಮತ್ತು ಪ್ಲಮ್ ಟೊಮ್ಯಾಟೋ ಫೆಟ್ಟೂಸಿನ್ ಮೋಡಿ ಮಾಡುತ್ತದೆ.


ಇದನ್ನೂ ಓದಿ: ಪಾಸ್ತಾ ಬೇಯಿಸಿದ ನೀರು ಬಿಸಾಡಬೇಡಿ, ಹೀಗೆ ಯೂಸ್​ ಮಾಡ್ಬೋದು ನೋಡಿ


ವಿಳಾಸ: 1209, ಅಪೊಲೊ ಕ್ಲಿನಿಕ್ ಎದುರು., 100 ಅಡಿ ರಸ್ತೆ, ಇಂದಿರಾನಗರ, ಬೆಂಗಳೂರು


ಪಾಸ್ತಾ ಸ್ಟ್ರೀಟ್, ಇಂದಿರಾ ನಗರ


ಪಾಸ್ತಾ ಸ್ಟ್ರೀಟ್, ಇದರ ಹೆಸರೇ ಎಲ್ಲವನ್ನೂ ಹೇಳುತ್ತದೆ. ಇಲ್ಲಿನ ಪಾಸ್ತಾಗಳನ್ನು ನೀವು ಒಮ್ಮೆ ತಿಂದರೆ ಸಾಕು ಪದೇ ಪದೇ ಇಲ್ಲಿಗೆ ಹೋಗುವುದು ಪಕ್ಕಾ. ಇಲ್ಲಿನ Pollo Venezia ನೀವೂ ಟ್ರೈ ಮಾಡಲೇಬೇಕು.  ಅವರ ರವಿಯೊಲಿ ತಾಜಾ ಮತ್ತು ರುಚಿಕರವಾಗಿರುತ್ತದೆ. ಇಲ್ಲಿ ಆಯ್ಕೆ ಮಾಡಲು ಅನೇಕ ಸಸ್ಯಾಹಾರಿ ಮತ್ತು ಮಾಂಸಾಹಾರಿ ಸಾಸ್ ಆಯ್ಕೆಗಳು ಸಹ ಲಭ್ಯವಿದೆ.


ವಿಳಾಸ: 2022, 100 ಫೀಟ್ ರೋಡ್​, ಹೆಚ್​ಎಎಲ್​ ಸ್ಟೇಜ್, ಇಂದಿರಾನಗರ, ಬೆಂಗಳೂರು


ಬೊಲೊಗ್ನಾ, ಇಂದಿರಾ ನಗರ


ಈ ಸ್ಥಳದ ಬಗ್ಗೆ ಹಲವಾರು ಜನರು ಕೇಳಿರುತ್ತಾರೆ. ಕೆಲವರ ಹಾಟ್​ ಫೇವರೇಟ್​ ಸ್ಥಳ ಎನ್ನಬಹುದು. ಫೆಟ್ಯೂಸಿನ್, ಫರ್ಫಾಲೆಯಿಂದ ಹಿಡಿದು ಗ್ನೋಚಿ ಮತ್ತು ರವಿಯೊಲಿಯವರೆಗೆ ಇಲ್ಲಿನ ರುಚಿಕರ ಪಾಸ್ತಾವನ್ನು ನೀವು ಟ್ರೈ ಮಾಡಲೇಬೇಕು. ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ ಬೇರೆ ಬೇರೆ ವಿವಿಧ ಪಾಸ್ತಾಗಳು ಇಲ್ಲಿ ಲಭ್ಯವಿದೆ. ಟೊಮ್ಯಾಟೋ ಸಾಸ್‌ ತುಂಬಿರುವ ಬೇಕನ್, ಪಾರ್ಮೆಸನ್ ಮತ್ತು ತುಳಸಿ ಮತ್ತು ಅಣಬೆಗಳೊಂದಿಗೆ ಕ್ಲಾಸಿಕ್ ಸ್ಪಾಗೆಟ್ಟಿ ಅಲಿಯೊ ಒಲಿಯೊದೊಂದಿಗೆ ಫೆಟ್ಟೂಸಿನ್ ಅಲ್ ಅಮಾರ್ಟ್ರಿಸಿಯಾನಾವನ್ನು ನೀವೂ ಟ್ರೈ ಮಾಡಲೇಬೇಕು.


ವಿಳಾಸ: 759, 1 ನೇ ಮಹಡಿ, 100 ಅಡಿ ರಸ್ತೆ, ಇಂದಿರಾನಗರ, ಬೆಂಗಳೂರು


ಚಿಯಾಂತಿ. ಕೋರಮಂಗಲ


ಬೆಂಗಳೂರಿನ ಅಚ್ಚುಮೆಚ್ಚಿನ ಮತ್ತು ಬೆಸ್ಟ್​ ಇಟಾಲಿಯನ್ ರೆಸ್ಟೊರೆಂಟ್‌ಗಳಲ್ಲಿ ಒಂದಾದ ಚಿಯಾಂಟಿಯು ಹಲವಾರು ವಿಭಿನ್ನ ಪಾಸ್ತಾಗಳನ್ನು ಹೊಂದಿದೆ. ಕ್ಲಾಸಿಕ್ ಟೊಮೆಟೊ ಸಾಸ್ ಮತ್ತು ತುಳಸಿಯನ್ನು ಸ್ಪಾಗೆಟ್ಟಿಯೊಂದಿಗೆ ತುಂಬಿದ ಸ್ಪಾಗೆಟ್ಟಿ ಅಲ್ಲಾ ನೆಪೋಲೆಟಾನಾವನ್ನು ನೀವು ಟ್ರೈ ಮಾಡಲೇಬೇಕು.


ಇದನ್ನೂ ಓದಿ: ಆರೋಗ್ಯಕರ ಕ್ಯಾರೆಟ್​ ದೋಸೆ ಮಾಡುವ ರೆಸಿಪಿ ಇಲ್ಲಿದೆ


ಅಲ್ಲದೇ, ಬೇಕನ್ ಮತ್ತು ಟೊಮೆಟೊ ಸಾಸ್‌ ಹಾಕಿ ತಯಾರಿಸಿದ ಅವರ ಲಿಂಗ್ವಿನ್ ಅಲ್ ಅಮಟ್ರಿಸಿಯಾನಾವನ್ನು ಮಿಸ್​ ಮಾಡದೇ ಟ್ರೈ ಮಾಡಿ, ಇದರ ರುಚಿಯನ್ನು ಎಂದಿಗೂ ಮರೆಯುವುದಿಲ್ಲ. ಚಿಯಾಂಟಿಯಲ್ಲಿ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ ಹಲವಾರು ಆಯ್ಕೆಯಿದೆ.


ವಿಳಾಸ: 12, 60 ಅಡಿ ರಸ್ತೆ, 5 ನೇ ಬ್ಲಾಕ್, ಕೋರಮಂಗಲ, ಬೆಂಗಳೂರುಇವರ ಹಲವಾರು ಶಾಖೆಗಳಿದ್ದು, ನಿಮಗೆ ಹತ್ತಿರವಿದ್ದ ಕಡೆ ಭೇಟಿ ನೀಡಬಹುದು.

Published by:Sandhya M
First published: