Face Pack: ಮುಖದ ಮೇಲಿನ ಟ್ಯಾನ್, ಮೊಡವೆ, ಕಲೆ ನಿವಾರಣೆಗೆ ಆಲೂಗಡ್ಡೆ ಫೇಸ್ ಪ್ಯಾಕ್!

ಅಡುಗೆ ಮನೆಯಲ್ಲಿ ಸಿಗುವ ಈ ವಸ್ತು ನಿಮ್ಮ ಮುಖದ ಮೇಲಿನ ಮೊಡವೆ, ಟ್ಯಾನಿಂಗ್, ಕಪ್ಪು ಕಲೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಅದು ಹಸಿ ಆಲೂಗಡ್ಡೆ ಆಗಿದೆ. ಇದು ಮುಖದ ಮೇಲಿನ ಕಲೆಗಳನ್ನು ತೆಗೆದು ಹಾಕುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೇಸಿಗೆಯಲ್ಲಿ (Summer) ಮುಖದ (Face) ಅಂದವನ್ನು (Beauty) ಕಾಪಾಡುವುದು ಸವಾಲಿದ್ದಂತೆ. ಯಾಕೆಂದರೆ ಬಿಸಿಲಿಗೆ ಮುಖದ ರಂಗು ಬಾಡಿ ಹೋಗುತ್ತದೆ. ಟ್ಯಾನಿಂಗ್ (Tanning), ಕಪ್ಪು ಕಲೆ, ಬೆವರಿನ ದುರ್ನಾತ ಜನರನ್ನು ಹೈರಾಣಾಗಿಸುತ್ತದೆ. ಅದರಲ್ಲೂ ಮಹಿಳೆಯರು (Women’s) ಏನು ಮಾಡಬೇಕು ಎಂದು ತಿಳಿಯದೆ ಮಾರುಕಟ್ಟೆಯಲ್ಲಿ (Market) ಸಿಗುವ ಸಾಕಷ್ಟು ರಸಾಯನಿಕ ವಸ್ತುಗಳನ್ನು ಉಪಯೋಗಿಸಿ, ಕೊನೆಗೆ ರಿಸಲ್ಟ್ ಸಿಗದೇ ಬೈದುಕೊಳ್ಳುತ್ತಾರೆ. ಆದರೆ ಇದೆಲ್ಲವನ್ನೂ ಬಿಟ್ಟು ಅಡುಗೆ ಮನೆಯಲ್ಲಿ ಸಿಗುವ ಈ ವಸ್ತು ನಿಮ್ಮ ಮುಖದ ಮೇಲಿನ ಮೊಡವೆ, ಟ್ಯಾನಿಂಗ್, ಕಪ್ಪು ಕಲೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಅದು ಹಸಿ ಆಲೂಗಡ್ಡೆ ಆಗಿದೆ. ಇದು ಮುಖದ ಮೇಲಿನ ಕಲೆಗಳನ್ನು ತೆಗೆದು ಹಾಕುತ್ತದೆ.

    ರಾಸಾಯನಿಕ ಉತ್ಪನ್ನಗಳು ಮತ್ತು ಕ್ರೀಮ್ ಗಳು ಕೆಲವೊಮ್ಮೆ ಮುಖಕ್ಕೆ ಪ್ರಯೋಜನ ನೀಡುವ ಬದಲು ಹಾನಿ ಮಾಡುತ್ತವೆ. ಅಂತಹ ವೇಳೆಯಲ್ಲಿ ಈ ಮನೆ ಮದ್ದುಗಳು ನಿಮಗೆ ತುಂಬಾ ಪರಿಣಾಮಕಾರಿ ಎಂದು ಸಾಬೀತು ಪಡಿಸುತ್ತವೆ. ಹಾಗಾದರೆ ಹಸಿ ಆಲೂಗಡ್ಡೆಯಿಂದ ಹೊಳೆಯುವ ತ್ವಚೆಯನ್ನು ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿ ನಾವು ತಿಳಿಯೋಣ.

    ಆಲೂಗಡ್ಡೆ ಮತ್ತು ಅರಿಶಿನ ಫೇಸ್ ಪ್ಯಾಕ್ ಮಾಡಿಕೊಳ್ಳಿ

    ಆಲೂಗಡ್ಡೆ ಚರ್ಮದ ಬಣ್ಣವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅರಿಶಿನದ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ದದ್ದು ಮತ್ತು ಮೊಡವೆಗಳ ಸಮಸ್ಯೆ ಹೋಗಲಾಡಿಸಲು ಸಹಕಾರಿ ಆಗಿದೆ. ಈ ಎರಡು ಫೇಸ್ ಪ್ಯಾಕ್‌ಗಳನ್ನು ಸಂಯೋಜಿಸುವುದು ಮುಖಕ್ಕೆ ಪ್ರಯೋಜನಕಾರಿ ಆಗಿದೆ.

    ಇದನ್ನೂ ಓದಿ: ಪದೇ ಪದೇ ಕಾಣಿಸಿಕೊಳ್ಳೋ ಮೊಡವೆ ನಿವಾರಣೆಗೆ ತ್ವಚೆಯ ಹೊರಗಲ್ಲ ಒಳಗಿಂದಲೇ ಮದ್ದು ಮಾಡಿ

    ಫೇಸ್ ಪ್ಯಾಕ್ ಮಾಡಲು ಆಲೂಗಡ್ಡೆ ತುರಿ ಮಾಡಿಕೊಳ್ಳಿ. ತುರಿದ ಹಸಿ ಆಲೂಗಡ್ಡೆಗೆ ಚಿಟಿಕೆ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ. ಅದರ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಬಳಕೆ ಮಾಡಿದರೆ ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸ  ನೋಡಬಹುದು.

    ಆಲೂಗಡ್ಡೆ ಮತ್ತು ಮೊಟ್ಟೆಯ ಫೇಸ್ ಪ್ಯಾಕ್ ಮಾಡಿ

    ಆಲೂಗಡ್ಡೆ ಮತ್ತು ಮೊಟ್ಟೆಯ ಫೇಸ್ ಪ್ಯಾಕ್ ತಯಾರಿಸಲು ಅರ್ಧ ಆಲೂಗಡ್ಡೆ ತುರಿದು ಅದರ ರಸ ತೆಗೆದುಕೊಳ್ಳಿ. ಈಗ ಅದಕ್ಕೆ ಒಂದು ಮೊಟ್ಟೆಯ ಬಿಳಿ ಭಾಗ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿರಿ. ಸಿದ್ಧಪಡಿಸಿದ ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಅನ್ವಯಿಸಿ.

    ನಂತರ 20 ನಿಮಿಷಗಳ ಕಾಲ ಬಿಡಿ. ನೀರಿನಿಂದ ಮುಖ ತೊಳೆಯಿರಿ. ನೀವು ಅದರ ಪರಿಣಾಮ ತಕ್ಷಣವೇ ಕಾಣುತ್ತದೆ. ಆಲೂಗಡ್ಡೆ ಮತ್ತು ಮೊಟ್ಟೆಯ ಫೇಸ್ ಪ್ಯಾಕ್ ಅನ್ವಯಿಸುವುದರಿಂದ ನಿಮ್ಮ ರಂಧ್ರಗಳು ಬಿಗಿಯಾಗುವುದರ ಜೊತೆಗೆ ಮುಖದ ಮೇಲೆ ಹೊಳಪು ಪಡೆಯಲು ಸಹಕಾರಿ ಆಗಿದೆ.

    ನಿಮ್ಮ ಮುಖ ಏಜಿಂಗ್ ಸಮಸ್ಯೆ ನಿವಾರಣೆಗೆ ಹೀಗೆ ಮಾಡಿ

    ಮುಖದ ಏಜಿಂಗ್ ಮತ್ತು ಟ್ಯಾನಿಂಗ್ ಸಮಸ್ಯೆಯಿದ್ದರೆ, ಬೇಯಿಸಿದ ಆಲೂಗಡ್ಡೆಯ ಫೇಸ್ ಪ್ಯಾಕ್ ಅನ್ವಯಿಸುವ ಮೂಲಕ ಪರಿಣಾಮಕಾರಿ ರಿಸಲ್ಟ್ ಪಡೆಯಬಹದು. ನೀವು ಬೇಯಿಸಿದ ಆಲೂಗಡ್ಡೆ ಸಿಪ್ಪೆ ಸುಲಿದು, ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಕೆನೆ ಸೇರಿಸಿ ಮಿಶ್ರಣ ಮಾಡಿ. ನಂತರ ಈ ಫೇಸ್ ಪ್ಯಾಕ್ ಕ್ಲೀನ್ ಮುಖದ ಮೇಲೆ ಅನ್ವಯಿಸಬೇಕು. ಸುಮಾರು 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

    ಆಲೂಗಡ್ಡೆ ಮತ್ತು ಬೇಳೆ ಹಿಟ್ಟಿನ ಪ್ಯಾಕ್

    ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಬೇಯಿಸಿದ ಆಲೂಗಡ್ಡೆ ತೆಗೆದುಕೊಂಡು ಒಂದು ಚಮಚ ಉದ್ದಿನ ಹಿಟ್ಟು, ಜೇನುತುಪ್ಪ ಮತ್ತು ಕೆನೆ ಬೆರೆಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ.

    ಇದನ್ನೂ ಓದಿ: ಸುಡು ಬಿಸಿಲು, ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಮಿಸ್ ಮಾಡಲೇಬೇಡಿ

    ಮೊಡವೆ ಇದ್ದರೆ ಹೀಗೆ ಬಳಕೆ ಮಾಡಿ

    ನಿಮ್ಮ ಮುಖದಲ್ಲಿ ಮೊಡವೆ ಸಮಸ್ಯೆ ಇದ್ದರೆ ಬೇಯಿಸಿದ ಆಲೂಗಡ್ಡೆ ಚೆನ್ನಾಗಿ ಹಿಸುಕಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ನೀವು ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಅನ್ನು ಅನ್ವಯಿಸಿ ರಿಸಲ್ಟ್ ಪಡೆಯಿರಿ.
    Published by:renukadariyannavar
    First published: