Kanji: ಇದೇ ನೋಡಿ ತಮಿಳುನಾಡಿನವರ ನೆಚ್ಚಿನ ಪಾನೀಯ: ರುಚಿಯ ಜೊತೆ, ಆರೋಗ್ಯಕ್ಕೂ ಉತ್ತಮ

ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಈ ಕಾಫಿಯನ್ನು ಅಷ್ಟಾಗಿ ಯಾರು ಸೇವನೆ ಮಾಡುತ್ತಿರಲಿಲ್ಲ. ಅವರು ನೀರಾಗರಂ ಎಂದು ಕರೆಯುವ - ಹುದುಗಿಸಿದ ಅಕ್ಕಿ ನೀರಿಗೆ ರುಚಿಕರ ಒಗ್ಗರಣೆ ಹಾಕಿಕೊಂಡು ಸೇವಿಸುತ್ತಿದ್ದರು. ಹಾಗಿದ್ರೆ ಹಿಂದಿನ ಕಾಲದ ಜನ ಕಾಫಿ ಸೇವನೆ ಬದಲು ಈ ಹುದುಗಿಸಿದ ಅಕ್ಕಿ ನೀರನ್ನು ಸೇವನೆ ಮಾಡ್ತಿದ್ರಾ? ಈ ಹುದುಗಿಸಿದ ಅಕ್ಕಿ ನೀರು ಆರೋಗ್ಯಕ್ಕೆ ಎಷ್ಟೊಂದು ಪರಿಣಾಮಕಾರಿ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಈ ಲೇಖನದಲ್ಲಿಂದು ತಿಳಿಯೋಣ.

ಹುದುಗಿಸಿದ ಅಕ್ಕಿ ನೀರು

ಹುದುಗಿಸಿದ ಅಕ್ಕಿ ನೀರು

 • Share this:
ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರ ಕಾಲದಿಂದಲೂ ಕಾಫಿಯನ್ನು (Coffee) ಅತ್ಯಂತ ಪ್ರಾಚೀನ ಪಾನೀಯ ಎಂದು ಬ್ರಿಟಿಷರು ಮತ್ತು ಶ್ರೀಮಂತರು ಕರೆಯುತ್ತಿದ್ದರು. 19 ನೇ ಶತಮಾನದವರೆಗೆ, ದಕ್ಷಿಣ ಭಾರತದ ಹೆಚ್ಚಿನ ಭಾಗಗಳಲ್ಲಿ ಈ ಕಾಫಿಯನ್ನು ಅಷ್ಟಾಗಿ ಯಾರು ಸೇವನೆ ಮಾಡುತ್ತಿರಲಿಲ್ಲ. ಅವರು ನೀರಾಗರಂ (Niragaram) ಎಂದು ಕರೆಯುವ - ಹುದುಗಿಸಿದ ಅಕ್ಕಿ ನೀರಿಗೆ (Fermented Rice Water) ರುಚಿಕರ ಒಗ್ಗರಣೆ ಹಾಕಿಕೊಂಡು ಸೇವಿಸುತ್ತಿದ್ದರು. ಹಾಗಿದ್ರೆ ಹಿಂದಿನ ಕಾಲದ ಜನ ಕಾಫಿ ಸೇವನೆ ಬದಲು ಈ ಹುದುಗಿಸಿದ ಅಕ್ಕಿ ನೀರನ್ನು ಸೇವನೆ ಮಾಡ್ತಿದ್ರಾ? ಈ ಹುದುಗಿಸಿದ ಅಕ್ಕಿ ನೀರು ಆರೋಗ್ಯಕ್ಕೆ (Health) ಎಷ್ಟೊಂದು ಪರಿಣಾಮಕಾರಿ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಈ ಲೇಖನದಲ್ಲಿಂದು ತಿಳಿಯೋಣ.

ಹುದುಗಿಸಿದ ಅಕ್ಕಿ ನೀರು ಎಂದ್ರೇನು?
ತಮಿಳುನಾಡಿನಲ್ಲಿ ಈಗಲೂ ಕೆಲವು ಕಡೆ ಈ ರೆಸಿಪಿಯನ್ನು ದಿನಾಲು ಮಾಡಿ ಕಾಫಿ ಮತ್ತು ಟೀ ಬದಲು ಇದರ ಸೇವನೆ ಮಾಡುವವರು ಇನ್ನು ಇದ್ದಾರೆ. ಹುದುಗಿಸಿದ ಅಕ್ಕಿ ನೀರು ಎಂದ್ರೆ ಈಗಾಗಲೇ ತಯಾರಿಸಿದ ಬೆಂದ ಅನ್ನವನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು, ಮರುದಿನ ಅದಕ್ಕೆ ಮಜ್ಜಿಗೆ, ಸ್ವಲ್ಪ ಉಪ್ಪು ಹಾಗೂ ಮಾವಿನ ಕಾಯಿ ಉಪ್ಪಿನಕಾಯಿ ಸೇರಿಸಿದ ಪಾನೀಯವೇ ಈ ಹುದುಗಿಸಿದ ಅಕ್ಕಿ ನೀರು ಎಂದು ಕರೆಯುತ್ತಾರೆ. ಈ ರೆಸಿಪಿಯು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಪಾನೀಯ ಎಂದೇ ಖ್ಯಾತಿ ಪಡೆದಿದೆ.

ಇದರ ಬಗ್ಗೆ ಇತಿಹಾಸಕಾರರು ಏನ್‌ ಹೇಳ್ತಾರೆ?
ಈ ಹುದುಗಿಸಿದ ಅಕ್ಕಿ ನೀರಿನ ಪಾನೀಯ ಬಗ್ಗೆ ಇತಿಹಾಸಕಾರ ಎ.ಆರ್.ವೆಂಕಟಾಚಲಪತಿ ಅವರು ತಮ್ಮ ದಿನಗಳಲ್ಲಿ ಈ ಕಾಫಿ ಮತ್ತು ಟೀ ಎಂಬ ಪಾನೀಯಗಳು ಇರಲಿಲ್ಲ ಎಂದು ಅದರ ಬಗ್ಗೆ ‘ಇನ್‌ ದೋಸ್‌ ಡೇಸ್‌, ದೇರ್‌ ವಾಸ್‌ ನೋ ಕಾಫಿʼ ಅಂದರೆ ‘ಆ ದಿನಗಳಲ್ಲಿ ಕಾಫಿ ಇರಲಿಲ್ಲ’ ಎಂಬ ಪುಸ್ತಕದಲ್ಲಿ ಪುರಾತನ ತಮಿಳುನಾಡಿನ ಆ ದಿನಗಳನ್ನು ಸಮಗ್ರವಾದ ಮಾಹಿತಿಯನ್ನು ಈ ಪುಸ್ತಕದಲ್ಲಿ ಅದ್ಭುತವಾಗಿ ತಿಳಿಸಿದ್ದಾರೆ.

ಹಾಗೆಯೇ ಈ ಪುಸ್ತಕದಲ್ಲಿ ದಕ್ಷಿಣ ಭಾರತದ ಹೆಚ್ಚಿನ ಕುಟುಂಬಗಳಿಗೆ ವ್ಯವಸಾಯವು ಪ್ರಮುಖ ಉದ್ಯೋಗವಾಗಿರುವುದರಿಂದ, ಕೆಲಸ ಪ್ರಾರಂಭವಾಗುವ ಮೊದಲು ಈ ಪಾನೀಯವನ್ನು ಸೇವಿಸುವುದು ದೇಹಕ್ಕೆ ಉತ್ತಮ ಶಕ್ತಿಯನ್ನು ಪಡೆಯಲು ಅಗತ್ಯ ಅದಕ್ಕಾಗಿ ಹಿಂದಿನ ಕಾಲದವರು ಈ ಪಾನೀಯವನ್ನು ಬಹಳ ಇಷ್ಟಪಟ್ಟು ಸೇವಿಸುತ್ತಿದ್ದರು ಎಂದು ಹೇಳಲಾಗುತ್ತದೆ.

ಭಾರತದ ಯಾವೆಲ್ಲ ಭಾಗಗಳಲ್ಲಿ ಈ ಪಾನೀಯವನ್ನು ಸೇವಿಸುತ್ತಾರೆ?
ಇಂದಿಗೂ, ಈ ಹುದುಗಿಸಿದ ಅಕ್ಕಿಯ ವಿಧ ವಿಧ ಪಾನೀಯವನ್ನು ದೇಶದಾದ್ಯಂತ ಸೇವನೆ ಮಾಡುವ ಜನರು ಎಲ್ಲ ಕಡೆ ಇದ್ದಾರೆ. ಇದನ್ನು ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಾರೆ - ಅವುಗಳಲ್ಲಿ ಪ್ರಮುಖವಾಗಿ ಬಂಗಾಳದಲ್ಲಿ ಪಂತಾ ಭಟ್, ಅಸ್ಸಾಂನಲ್ಲಿ ಪೊಯಿಟಾ ಭಟ್, ಒರಿಸ್ಸಾದಲ್ಲಿ ಪಖಾಲಾ ಮತ್ತು ಕೇರಳದಲ್ಲಿ ಪಝನ್ ಕಂಜಿ ಹೀಗೆ ಪಾನೀಯ ಒಂದೇ ಆದರೂ ಸಹ ಇದನ್ನು ಬೇರೆ ಬೇರೆ ಕಡೆ ವಿವಿಧ ಹೆಸರಿನಿಂದ ಕರೆಯಲಾಗುತ್ತದೆ. ಪ್ರತಿಯೊಂದು ಪ್ರದೇಶವು ವಿಭಿನ್ನ ರುಚಿಗಳನ್ನು ಹೊಂದಿದೆ ಎಂದು ಹೇಳಬಹುದು. ಕೆಲವರು ಇದನ್ನು ಉಪ್ಪಿನೊಂದಿಗೆ, ಕೆಲವರು ಈರುಳ್ಳಿ, ಚಟ್ನಿ, ಉಪ್ಪಿನಕಾಯಿ, ಮೀನು, ತರಕಾರಿಗಳು ಇತ್ಯಾದಿಗಳೊಂದಿಗೆ ಸೇವಿಸುತ್ತಾರೆ.

ಇದನ್ನೂ ಓದಿ: Breakfast Recipe: ಬ್ರೊಕೊಲಿ - ಪಾಲಕ್​ ಪರೋಟ ಟೇಸ್ಟಿ ಮಾತ್ರ ಅಲ್ಲ, ಆರೋಗ್ಯಕರ ಕೂಡ

ಪ್ರತಿ ವರ್ಷ, ಒಡಿಶಾವು ಈ ಪಾನೀಯವನ್ನು ಮಾರ್ಚ್ 20 ರಂದು ʼಪಖಲಾ ದಿಬಾಸ್ʼ ಎಂಬ ಹಬ್ಬದ ಪ್ರಯುಕ್ತ ಇದನ್ನು ವಿಶೇಷ ಪಾನೀಯ ಎಂದು ತಯಾರಿಸಿ ಸೇವನೆ ಮಾಡಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಪಾನೀಯವನ್ನು ಆಸ್ಟ್ರೇಲಿಯಾದಲ್ಲಿ ಮಾಸ್ಟರ್‌ಚೆಫ್ ಕಿಶ್ವರ್ ಚೌಧರಿ ಅವರು ಒಂದು ಅಡುಗೆ ಕಾರ್ಯಕ್ರಮದ ಗ್ರಾಂಡ್ ಫಿನಾಲೆಯಲ್ಲಿ 'ಹೊಗೆಯಾಡಿಸಿದ ಅಕ್ಕಿ ನೀರು' ಎಂದು ತಯಾರಿಸಿ ತೀರ್ಪುಗಾರರಿಗೆ ಬಡಿಸಿದರು. ಅದಕ್ಕೆ ಅವರು ಅದ್ಬುತವಾಗಿದೆ ಎಂದು ಹಾಡಿ ಹೊಗಳಿದರು. ಇದಕ್ಕೆ ಚೇಫ್‌ ಅವರು ಸುಟ್ಟ ಮೆಣಸಿನಕಾಯಿಗಳು, ಹಿಸುಕಿದ ಆಲೂಗಡ್ಡೆ, ಹುರಿದ ಬಟಾಣಿಕಾಳುಗಳು ಮತ್ತು ಈರುಳ್ಳಿ ಸಾಲ್ಸಾಗಳೊಂದಿಗೆ ವಿಶೇಷವಾಗಿ ತಯಾರಿಸಿದ್ದರು.

ಇದು ಏನೆಲ್ಲ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ?
ಈ ಹುದುಗಿಸಿದ ಅಕ್ಕಿ ನೀರು ನಮ್ಮ ದೇಹದ ಜೀರ್ಣಕ್ರಿಯೆಯನ್ನು ಬಲಪಡಿಸಿ ನಾವು ಉತ್ತಮ ಆರೋಗ್ಯ ಪಡೆಯಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಇದು ತೂಕ ಇಳಿಕೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಹಾಗಿದ್ರೆ ಈ ರೆಸಿಪಿ ಮಾಡುವುದು ಹೇಗೆ?
ಈ ಪಾನೀಯವನ್ನು ನೀವೇ ಹೇಗೆ ತಯಾರಿಸುವುದು ಎಂಬುದನ್ನು ನಾವಿಲ್ಲಿ ತಿಳಿಸಿ ಕೊಡುತ್ತೇವೆ.

ಇದಕ್ಕೆ ಬೇಕಾಗುವ ಪದಾರ್ಥಗಳು:

 • 1 ಕಪ್ ಬೇಯಿಸಿದ ಅಕ್ಕಿ

 • 3 ಕಪ್ ನೀರು

 • 1 ಕಪ್ ಮಜ್ಜಿಗೆ

 • ½ ಟೀಚಮಚ ಉಪ್ಪು

 • ⅛ ಟೀಚಮಚ ಮೆಂತ್ಯ ಬೀಜಗಳು

 • 1 ಹಸಿರು ಮೆಣಸಿನಕಾಯಿ

 • ಸ್ವಲ್ಪ ಕೊತ್ತಂಬರಿ ಮತ್ತು 5 ಕರಿಬೇವಿನ ಎಲೆಗಳು


ಇದನ್ನೂ ಓದಿ:  Cooking Tips: ಬೇಳೆ ಕಾಳುಗಳ ರೆಸಿಪಿ ಮಾಡುವಾಗ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಮಾಡುವ ವಿಧಾನ:


 • ಬೇಯಿಸಿದ ಅನ್ನಕ್ಕೆ 3 ಕಪ್ ನೀರು, ಮೆಂತ್ಯ ಕಾಳು ಮತ್ತು ಉಪ್ಪನ್ನು ಸೇರಿಸಿ ಮತ್ತು ರಾತ್ರಿಯಿಡೀ ನೆನೆಯಲು ಬಿಡಿ.

 • ಬೆಳಿಗ್ಗೆ, ನೆನಸಿಟ್ಟ ಅನ್ನವನ್ನು ಚೆನ್ನಾಗಿ ಮ್ಯಾಶ್ ಮಾಡಿ ಮತ್ತು ಅದಕ್ಕೆ ಮಜ್ಜಿಗೆ, ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿಗಳು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ.

 • ಅಗತ್ಯವಿದ್ದರೆ, ಹೆಚ್ಚು ಉಪ್ಪು ಸೇರಿಸಿ ಮತ್ತು ತಣ್ಣಗಾದ ನಂತರ ರುಚಿಯಾದ ಈ ರೆಸಿಪಿಯನ್ನು ಮನಸಾರೆ ಸೇವಿಸಿ.

Published by:Ashwini Prabhu
First published: