Weight Loss Diet: ಹುಣಸೆಹಣ್ಣು ಸೇವನೆಯಿಂದ ಇಳಿಯುತ್ತೆ ದೇಹದ ತೂಕ.. ಇಲ್ಲಿದೆ ಸರಿಯಾದ ವಿಧಾನ

Tamarind for lose weight : ಹುಣಸೆಹಣ್ಣಿನಲ್ಲಿ ಫ್ಲಾವನಾಯಿಡ್ಸ್ ಮತ್ತು ಪಾಲಿಫಿನಾಲ್ಸ್ ಇರುವುದರಿಂದ ಅದನ್ನು ನಿತ್ಯವೂ ಸೇವನೆ ಮಾಡುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

    ಹುಣಸೇ ಹಣ್ಣು, ನಿತ್ಯದ ಆಹಾರದಲ್ಲಿ ಬಳಸಲ್ಪಡುವ ಪದಾರ್ಥಗಳಲ್ಲಿ ಒಂದು. ಸಾಸ್, ಚಟ್ನಿ, ಪಲ್ಯ, ಸಾಂಬಾರ್ ಮತ್ತಿತರ ಖಾದ್ಯಗಳಲ್ಲಿ ಮಾತ್ರವಲ್ಲದೆ , ಸಿಹಿ ತಿನಿಸುಗಳಲ್ಲಿ ಇದನ್ನು ಬಳಸುತ್ತಾರೆ. ಹುಣಸೇ ಹಣ್ಣಿನಲ್ಲಿರುವ ಆರೋಗ್ಯಕರ ಅಂಶಗಳು ಅಪಾರ. ಅದರಲ್ಲೂ ಈ ಹುಳಿ  ನಮ್ಮ ಯಕೃತ್ತು ಮತ್ತು ಹೃದಯವನ್ನು ಕಾಯಿಲೆಗಳಿಂದ ದೂರ ಇಡಲು ಪ್ರಯೋಜನಕಾರಿ. ಹುಣಸೇ ಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಕೆಲವು ಉಪಯೋಗಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.


    1. ತೂಕ ಇಳಿಸಲು ಸಹಕಾರಿ
    ಹುಣಸೇಹಣ್ಣಿನಲ್ಲಿ ಫೈಬರ್ ಪ್ರಮಾಣ ಹೇರಳವಾಗಿದೆ ಮತ್ತು ಕೊಬ್ಬು ಇಲ್ಲವೇ ಇಲ್ಲ. ಹುಣಸೆಹಣ್ಣಿನಲ್ಲಿ ಫ್ಲಾವನಾಯಿಡ್ಸ್ ಮತ್ತು ಪಾಲಿಫಿನಾಲ್ಸ್ ಇರುವುದರಿಂದ ಅದನ್ನು ನಿತ್ಯವೂ ಸೇವನೆ ಮಾಡುವುದರಿಂದ ತೂಕ ಇಳಿಸಲು ಸಹಾಯವಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಅಲ್ಲದೆ, ಹುಣಸೇಹಣ್ಣಿನಲ್ಲಿ ಹೈಡ್ರೋಕ್ಸಿಸಿಟ್ರಿಕ್ ಆಮ್ಲ ಇದ್ದು, ಅದು ಕಾರ್ಬೋಹೈಡ್ರೇಟನ್ನು ಕೊಬ್ಬಾಗಿ ಪರಿವರ್ತಿಸಲು ಕಾರಣವಾಗಿರುವ ಕಿಣ್ವವಾದ ಅಮೈಲೇಸನ್ನು ತಡೆಯುವ ಮೂಲಕ ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ.


    2. ಪೆಪ್ಟಿಕ್ ಅಲ್ಸರನ್ನು ತಡೆಯುತ್ತದೆ
    ಪೆಪ್ಟಿಕ್ ಅಲ್ಸರ್ ತುಂಬಾ ನೋವಿನಿಂದ ಕೂಡಿರುತ್ತದೆ. ಅವು ಹೊಟ್ಟೆ ಮತ್ತು ಸಣ್ಣ ಕರುಳಿನ ಒಳಪದರದಲ್ಲಿ ಕಾಣಿಸಿಕೊಳ್ಳುವ ಹುಣ್ಣುಗಳು. ಪಾಲಿಫಾನಿಕ್ ಸಂಯುಕ್ತಗಳು ಈ ಹುಣ್ಣುಗಳನ್ನು ತಡೆಯಬಲ್ಲದು.


    3. ಮಧುಮೇಹದ ನಿಯಂತ್ರಣಕ್ಕೆ ಪರಿಣಾಮಕಾರಿ
    ಹುಣಸೇಹಣ್ಣಿನ ಬೀಜದ ಸಾರದಲ್ಲಿ ಉರಿಯೂತ ನಿವಾರಕ ಅಂಶಗಳಿರುತ್ತವೆ ಮತ್ತು ಅವು ರಕ್ತ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರಲ್ಲಿ ಮೇದೋಜೀರಕ ಗೃಂಥಿಯ ಹಾನಿಯನ್ನು ಹಿಮ್ಮೆಟ್ಟಿಸುತ್ತದೆ. ರಕ್ತ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಕಿಣ್ಣವೆಂದು ಸಾಬೀತಾಗಿರುವ ಅಲ್ಫಾ –ಅಮೈಲೇಸ್ ಕೂಡ ಹುಣಸೇ ಹಣ್ಣಿನಲ್ಲಿದೆ.


    4. ಜೀರ್ಣ ಕ್ರಿಯೆಗೆ ಸಹಾಯಕ
    ಹುಣಸೇಹಣ್ಣನ್ನು ಪ್ರಾಚೀನ ಕಾಲದಿಂದಲೂ ವಿರೇಚಕವಾಗಿ ಬಳಸಲಾಗುತ್ತಿದೆ. ಏಕೆಂದರೆ ಅದರಲ್ಲಿ ಟರ್ಟಾರಿಕ್ ಆಮ್ಲ, ಮ್ಯಾಲಿಕ್ ಆಮ್ಲ ಮತ್ತು ಪೊಟಾಶಿಯಂ ಇದೆ. ಅದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಅದನ್ನು ಅತಿಸಾರಕ್ಕೆ ಮದ್ದಾಗಿಯೂ ಉಪಯೋಗಿಸುತ್ತಾರೆ.ಹುಣಸೇ ಹಣ್ಣನ್ನು ಮಲಬದ್ಧತೆಗೆ ಔಷಧಿಯಾಗಿ, ಎಲೆಗಳನ್ನು ಅತಿಸಾರಕ್ಕೆ ಔಷಧಿಯಾಗಿ ಮತ್ತು ಬೇರು ಹಾಗೂ ತೊಗಟೆಯನ್ನು ಕಿಬ್ಬೊಟ್ಟೆ ನೋವಿಗೆ ಔಷಧಿಯಾಗಿ ಬಳಸಲಾಗುತ್ತದೆ.


    ಇದನ್ನೂ ಓದಿ: Tips for Dandruff: ಮಳೆಗಾಲದಲ್ಲಿ ಹೆಚ್ಚಾಗುವ ತಲೆಹೊಟ್ಟು ಸಮಸ್ಯೆ ನಿವಾರಣೆಗೆ 2 ವಸ್ತುಗಳು ಸಾಕು

    5. ಹೃದಯದ ಆರೋಗ್ಯಕ್ಕೆ ಪೂರಕ
    ಹುಣಸೇ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಫ್ಲೆವನಾಯಿಡ್‍ಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ, ಆದರಿಂದ ರಕ್ತದಲ್ಲಿ ಸಂಗ್ರಹವಾಗುವ ಟ್ರೈಗ್ಲಿಸರೈಡ್‍ಗಳನ್ನು (ಒಂದು ವಿಧದ ಕೊಬ್ಬು) ತಡೆಯಬಹುದು.ಅದರಲ್ಲಿ ಅಧಿಕ ಪೊಟಾಶಿಯಂ ಕೂಡ ಇದ್ದು, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.


    6. ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ
    ಹುಣಸೇ ಹಣ್ಣು ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ. ಕೊಬ್ಬಿನ ಆಹಾರದಿಂದ ಉಂಟಾದ ಫ್ಯಾಟಿ ಲೀವರ್ ಸಮಸ್ಯೆಯನ್ನು ಕಡಿಮೆ ಮಾಡಲು ನಿತ್ಯವೂ ಹುಣಸೇ ಹಣ್ಣಿನ ಸಾರವನ್ನು ಸೇವಿಸಬೇಕೆಂದು ಅಧ್ಯಯನಗಳಿಂದ ತಿಳಿದು ಬಂದಿದೆ.


    7. ಅಲರ್ಜಿಗಳಿಂದ ರಕ್ಷಿಸುತ್ತದೆ
    ಹುಣಸೇಹಣ್ಣಿನಲ್ಲಿ ಅ್ಯಂಟಿಹಿಸ್ಟಾಮಿನಿಕ್ ಅಂಶಗಳಿರುವುದರಿಂದ ಅಸ್ತಮಾ ಮತ್ತು ಕಫದಂತಹ ಅಲರ್ಜಿಗಳನ್ನು ದೂರವಿಡುವಲ್ಲಿ ಪರಿಣಾಮಕಾರಿಯಾಗಿದೆ. ಅದರಲ್ಲಿ ಇರುವ ಹೇರಳ ವಿಟಮಿನ್ ಸಿ , ಶೀತ ಮತ್ತು ಕಫದಿಂದ ಕಾಪಾಡಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    First published: