• Home
  • »
  • News
  • »
  • lifestyle
  • »
  • Height And Disease: ಅತೀ ಎತ್ತರ ಯಾವೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ? ಅಧ್ಯಯನ ಮತ್ತು ಸಂಶೋಧನೆ ಏನು ಹೇಳುತ್ತದೆ?

Height And Disease: ಅತೀ ಎತ್ತರ ಯಾವೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ? ಅಧ್ಯಯನ ಮತ್ತು ಸಂಶೋಧನೆ ಏನು ಹೇಳುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅತೀಯಾದ ಎತ್ತರ ಇರುವವರಲ್ಲಿ ಹೃದಯ ಬಡಿತ ನಿಧಾನವಾಗುವುದು ಸೇರಿದಂತೆ ಹಲವು ಕಾಯಿಲೆಗಳು ಇರುವುದು ಕಂಡು ಬಂದಿದೆ. 5 ಅಡಿ 9 ಇಂಚು ಅಥವಾ ಅದಕ್ಕಿಂತ ಹೆಚ್ಚಿನ ಎತ್ತರ ಹೊಂದಿರುವ ಪುರುಷರು ಮತ್ತು ಮಹಿಳೆಯರಲ್ಲಿ ಅಪಾಯ ಕಂಡು ಬಂದಿದೆ.

  • Share this:

    ಪುರುಷ (Men) ಅಥವಾ ಮಹಿಳೆ (Woman) ಯಾರೇ ಆಗಿರಲಿ ಪ್ರತಿಯೊಬ್ಬರೂ (Everyone) ತಾವು ಒಳ್ಳೆಯ ಎತ್ತರ (Height) ಹೊಂದಿರಬೇಕು ಎಂದು ಬಯಸುತ್ತಾರೆ. ಆದರೆ ಅತಿಯಾದ ಎತ್ತರ ಬೇಡ. ಉತ್ತಮ ಅಥವಾ ಸರಾಸರಿ ಎತ್ತರ ಮಾತ್ರ ಹೊಂದಿರಬೇಕೆಂದು ಇಷ್ಟ ಪಡುವ ಬಹುತೇಕರು ಇದ್ದಾರೆ. ಎತ್ತರವು ಜೆನೆಟಿಕ್ಸ್, ಹಾರ್ಮೋನು, ಜೀವನಶೈಲಿ ಮೇಲೆ ಡಿಪೆಂಡ್ ಆಗಿರುತ್ತದೆ. ಇತ್ತೀಚಿನ ಅಧ್ಯಯನವೊಂದು ಎತ್ತರದ ಬಗ್ಗೆ ಹೇಳಿದೆ. ಅತೀ ಎತ್ತರ ಹೊಂದಿರುವ ಜನರು 100ಕ್ಕೂ ಹೆಚ್ಚು ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ ಎಂದು ಹೇಳಿದೆ. ಅತೀಯಾದ ಎತ್ತರ ಇರುವವರಲ್ಲಿ ಹೃದಯ ಬಡಿತ ನಿಧಾನವಾಗುವುದು ಸೇರಿದಂತೆ ಹಲವು ಕಾಯಿಲೆಗಳು ಇರುವುದು ಕಂಡು ಬಂದಿದೆ.


    ಅತೀ ಎತ್ತರ ಹೊಂದಿರುವವರಲ್ಲಿ ಉಬ್ಬಿರುವ ರಕ್ತನಾಳಗಳ ಕಾಯಿಲೆಗಳು, ನರ ಹಾನಿ ಮತ್ತು ಹೊಟ್ಟೆಯ ಹುಣ್ಣುಗಳ ಬಗ್ಗೆ ಹೆಚ್ಚಿನ ಅಪಾಯ ಉಂಟಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.


    2.5 ಲಕ್ಷ ಜನರ ಮೇಲೆ ಅಧ್ಯಯನ ನಡೆಸಲಾಗಿದೆ


    ಈ ಸಂಶೋಧನೆಯಲ್ಲಿ 2.5 ಲಕ್ಷ ಪುರುಷರು ಮತ್ತು ಮಹಿಳೆಯರ ಮೇಲೆ ಅಧ್ಯಯನ ನಡೆಸಲಾಗಿದೆ. ಸಂಶೋಧಕರ ಪ್ರಕಾರ, ಈ ಅಪಾಯವು 5 ಅಡಿ 9 ಇಂಚು ಅಥವಾ ಅದಕ್ಕಿಂತ ಹೆಚ್ಚಿನ ಎತ್ತರ ಹೊಂದಿರುವ ಪುರುಷರು ಮತ್ತು ಮಹಿಳೆಯರಲ್ಲಿ ಕಂಡು ಬಂದಿದೆ.


    ಇದನ್ನೂ ಓದಿ: ನೀವು ಪ್ರತಿದಿನ ಅನುಭವಿಸುವ ನೋವು, ಸಂತೋಷಕ್ಕೆ ದೇಹದಲ್ಲುಂಟಾಗುವ ಇದೇ ಕಾರಣ!


    ಈ ಜನರಲ್ಲಿ ಚರ್ಮ-ಮೂಳೆ ಸೋಂಕು, ರಕ್ತ ಹೆಪ್ಪುಗಟ್ಟುವಿಕೆ, ಫಂಗಲ್ ಸೋಂಕಿನ ಅಪಾಯವೂ ಹೆಚ್ಚಿತ್ತು. ಹೆಚ್ಚಿನ ತೂಕ ಎತ್ತುವುದು ಮೂಳೆಗಳು, ಸ್ನಾಯುಗಳು ಮತ್ತು ಪಾದಗಳ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.


    ಇದು ಎತ್ತರದ ಜನರಲ್ಲಿ ಪರಿಧಮನಿಯ ಹೃದಯ ಕಾಯಿಲೆಗೆ ಕಾರಣ ಆಗಬಹುದು. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಸೇರಿದಂತೆ ಅನೇಕ ರೋಗಗಳ ಅಪಾಯವೂ ಸಹ ಹೆಚ್ಚುತ್ತದೆ.


    ಈ ಅಪಾಯವು 5 ಅಡಿ 9 ಇಂಚುಗಳು ಅಥವಾ ಎತ್ತರದ ಪುರುಷರು ಮತ್ತು 5 ಅಡಿ 3 ಇಂಚುಗಳು ಅಥವಾ ಅದಕ್ಕಿಂತ ಹೆಚ್ಚು ಎತ್ತರವಿರುವ ಮಹಿಳೆಯರಲ್ಲೂ ಕಂಡು ಬರುತ್ತದೆ.


    ಮೂಳೆ-ಹೊಟ್ಟೆಯ ಸೋಂಕು ಸಹ ಸಂಭವಿಸುವ ಅಪಾಯ


    ರಾಕಿ ಮೌಂಟೇನ್ ರೀಜನಲ್ ವಿಎ ಮೆಡಿಕಲ್ ಸೆಂಟರ್‌ನ ವಿಜ್ಞಾನಿಗಳು, ಅತೀ ಎತ್ತರ ಹೊಂದಿರುವ ಜನರು ಏಕೆ ಹೆಚ್ಚು ರೋಗಕ್ಕೆ ತುತ್ತಾಗುತ್ತಾರೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಆದರೆ ಕೆಲವು ತಜ್ಞರು ಹೇಳುವ ಪ್ರಕಾರ, ದೇಹವನ್ನು ಆರೋಗ್ಯವಾಗಿಡಲು ರಕ್ತವನ್ನು ಚೆನ್ನಾಗಿ ಪಂಪ್ ಮಾಡುವುದು ಬಹಳ ಮುಖ್ಯ.


    ಈಗ ಅಂತಹ ಸ್ಥಿತಿಯಲ್ಲಿ, ಎತ್ತರದಲ್ಲಿ ಉದ್ದವಾಗಿರುವ ಜನರ ದೇಹದಿಂದ ರಕ್ತವನ್ನು ಬಹಳ ದೂರದವರೆಗೆ ಪಂಪ್ ಮಾಡಲಾಗುತ್ತದೆ. ಇದು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಅವರಿಗೆ ದೈಹಿಕ ತೊಂದರೆಗಳು ಉಂಟಾಗಲು ಕಾರಣವಾಗುತ್ತದೆ.


    PLOS ಜೆನೆಟಿಕ್ಸ್‌ನಲ್ಲಿ ಸಂಶೋಧನೆ ಪ್ರಕಟ


    ಸಂಶೋಧಕರು, ತಮ್ಮ ಸಂಶೋಧನೆಗಳನ್ನು PLOS ಜೆನೆಟಿಕ್ಸ್‌ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ಎತ್ತರವು ಹೃತ್ಕರ್ಣದ ಕಂಪನ ಅಂದರೆ ಅನಿಯಮಿತ ಹೃದಯ ಬಡಿತ ಮತ್ತು ಉಬ್ಬಿರುವ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಹೆಚ್ಚಿನ ಅಪಾಯದ ಕುರಿತು ವರದಿ ಮಾಡಿದೆ. ಈ ರೋಗಗಳು ಬಾಹ್ಯ ನರ ರೋಗವನ್ನು ಸಹ ಒಳಗೊಂಡಿವೆ.


    ಇದು ಕೈ ಕಾಲು, ದೇಹದ ಭಾಗಗಳ ನರಗಳು ಹಾನಿಗೊಳಗಾಗುವ ಸ್ಥಿತಿ ಆಗಿದೆ. ಈ ಕಾಯಿಲೆ ಇರುವವರಿಗೆ ದೇಹದ ಯಾವುದೇ ಭಾಗದಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದು ಮತ್ತು ನೋವು ಕಾಣಿಸಿಕೊಳ್ಳುತ್ತದೆ.


    ಸಾಮಾನ್ಯವಾಗಿ ಎತ್ತರದ ಜನರು ಹೆಚ್ಚು ರೋಗಕ್ಕೆ ಗುರಿಯಾಗುತ್ತಾರೆ. ಎತ್ತರವು ಮೂಳೆ-ಹೊಟ್ಟೆಯ ಸೋಂಕು ಮತ್ತು ಹೊಟ್ಟೆಯ ಹುಣ್ಣುಗಳ ಅಪಾಯ ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.


    ಒಬ್ಬರ ಆಹಾರ ಮತ್ತು ಜೀವನಶೈಲಿ ಉತ್ತಮವಾಗಿದ್ದರೆ ಕಾಯಿಲೆಗಳ ಅಪಾಯವು ಕಡಿಮೆ ಇರುತ್ತದೆ. ರಕ್ತ ಹೆಪ್ಪುಗಟ್ಟುವಿಕೆ, ಆಳವಾದ ರಕ್ತನಾಳದ ಥ್ರಂಬೋಸಿಸ್ (ಡಿವಿಟಿ), ಮೂಳೆ ಸೋಂಕು, ಅನಿಯಮಿತ ಹೃದಯದ ಲಯ, ಕ್ಯಾಲಸ್ ನರ ಹಾನಿ, ತಲೆತಿರುಗುವಿಕೆ,


    ಇದನ್ನೂ ಓದಿ: ನಿಮ್ಮ ಜ್ಞಾಪಕಶಕ್ತಿ ಹೆಚ್ಚಿಸಲು ಮತ್ತು ಹೃದಯದ ಆರೋಗ್ಯ ಸುಧಾರಿಸಲು ಈ ಹಣ್ಣು ಸೇವಿಸಿ!


    ಮಿದುಳಿನ ನರ ಹಾನಿ, ಊತ ಮತ್ತು ಸುಡುವಿಕೆ, ಪಾದದ ಹುಣ್ಣುಗಳು, ಚರ್ಮದ ಹುಣ್ಣುಗಳು, ಕಾಲ್ಬೆರಳ ಗಾತ್ರದ ಕ್ಷೀಣತೆ, ಕಾಲುಗಳಲ್ಲಿ ಉಬ್ಬಿರುವ-ವೆನೆ ಸಮಸ್ಯೆ ಉಗುರು ನೋವು ಶಿಲೀಂಧ್ರಗಳ ಸೋಂಕು ಉಂಟಾಗುತ್ತದೆ.

    Published by:renukadariyannavar
    First published: