C Vitamin :ಅತಿಯಾದರೆ ಅಮೃತವೂ ವಿಷ : ಸಿ ವಿಟಮಿನ್ ಅಧಿಕವಾದ್ರೆ ಕಾಡಲಿವೆ ಅನೇಕ ರೋಗಗಳು

c vitamin side effects :ದೃಷ್ಟಿದೋಷ ಸಮಸ್ಯೆ ಎದುರಿಸುತ್ತಿರುವವರು ನಿಯಮಿತವಾಗಿ ಸಿ ವಿಟಮಿನ್ ದೊರಕುವ ಹಣ್ಣು ತರಕಾರಿ ಹಾಗೂ ಮಾತ್ರೆಗಳನ್ನು ಸೇವಿಸುತ್ತಿರುತ್ತಾರೆ..ಆದ್ರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಸಿ ವಿಟಮಿನ್ ನಮ್ಮ ದೇಹದಲ್ಲಿ ಅಧಿಕವಾದರೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ

ಸಿ ವಿಟಮಿನ್

ಸಿ ವಿಟಮಿನ್

  • Share this:
    ನಮ್ಮ ದೇಹಕ್ಕೆ(Body) ಪ್ರತಿಯೊಂದು ವಿಟಮಿನ್‍ಗಳು(Vitamin) ಕೂಡ ಮುಖ್ಯ. ಒಂದರ ಕೊರತೆ ಕಾಣಿಸಿದರೂ ಅದು ದೇಹದ ಆರೋಗ್ಯದ(Health) ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವು ವಿಟಮಿನ್ ಗಳು ನಮಗೆ ಆಹಾರಗಳಿಂದ(Food) ಲಭ್ಯವಾಗುವುದು. ದ್ರವಾಹಾರವಾಗಿರುವಂತಹ ವಿಟಮಿನ್ ಸಿಯು(Vitamin C) ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾ ಪ್ರಮುಖ ಪಾತ್ರ ವಹಿಸುವುದು. ವಿಟಮಿನ್ ದೇಹದ ಸಂಯೋಜಕ ಅಂಗಾಂಶಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಕೂಡ ಇದೆ. ಅಲ್ಲದೆ ದೃಷ್ಟಿದೋಷ ಸಮಸ್ಯೆ ಎದುರಿಸುತ್ತಿರುವವರು ನಿಯಮಿತವಾಗಿ ಸಿ ವಿಟಮಿನ್ ದೊರಕುವ ಹಣ್ಣು ತರಕಾರಿ ಹಾಗೂ ಮಾತ್ರೆಗಳನ್ನು ಸೇವಿಸುತ್ತಿರುತ್ತಾರೆ..ಆದ್ರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಸಿ ವಿಟಮಿನ್ ನಮ್ಮ ದೇಹದಲ್ಲಿ ಅಧಿಕವಾದರೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ..ಅಲ್ಲದೆ ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಸಹ ಉಂಟುಮಾಡಬಹುದು..

    ಸಿ ವಿಟಮಿನ್ ಹೆಚ್ಚಳವಾದರೆ ಕಾಡಲಿವೆ ಅನೇಕ ರೋಗಗಳು

    ವಿವಿಧ ಬಗೆಯ ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರ ಅಥವಾ ಇನ್ನಿತರ ರೋಗಕಾರಕ ಸೂಕ್ಷ್ಮಕ್ರಿಮಿಗಳಿಂದ ದೇಹವನ್ನು ರಕ್ಷಿಸಲು ನಮ್ಮ ದೇಹದ ರೋಗ ನಿರೋಧಕ ಶಕ್ತಿ ಸತತ ಶ್ರಮಿಸುತ್ತಿರುತ್ತದೆ.. ರೋಗ ನಿರೋಧಕ ಶಕ್ತಿ ಬಲವಾಗಿರಬೇಕಾದರೆ ವಿಟಮಿನ್ ಸಿ ಅಗತ್ಯವಾದ ಪೋಷಕಾಂಶವಾಗಿದೆ ಹಾಗೂ ವಿಟಮಿನ್ ಸಿ ಹೀಗಾಗಿ ವಿಟಮಿನ್-ಸಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡುವುದರಿಂದ ಜನರು ಸಿ ವಿಟಮಿನ್ ಸಿ ಹೇರಳವಾಗಿರುವ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ..ಹಾಗೆ ನಮ್ಮ ದೇಹ ಸುಮಾರು 2000ಮಿಲಿಗ್ರಾಂನಷ್ಜು ಸಿ ವಿಟಮಿನ್ ಪ್ರಮಾಣವನ್ನು ಸಹಿಸಿಕೊಳ್ಳುತ್ತದೆ.. ಆದರೆ 2000 ಮಿಲಿ ಗ್ರಾಂ ಗಿಂತ ಹೆಚ್ಚು ಸಿ ವಿಟಮಿನ್ ನಮ್ಮ ದೇಹ ಸೇರಿದರೆ ಅನೇಕ ರೋಗಗಳು ನಮ್ಮನ್ನ ಬಾಧಿಸಲಿದೆ..

    ಇದನ್ನೂ ಓದಿ :Vitamin C ಕೊರತೆಯಾದರೆ ಯಾವೆಲ್ಲ ರೋಗಗಳು ನಿಮ್ಮನ್ನು ಕಾಡುತ್ತವೆ ಗೊತ್ತಾ..?

    1) ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ

    ಸಿ ವಿಟಮಿನ್ ನಮ್ಮ ದೇಹದಲ್ಲಿ ತಾನೇತಾನಾಗಿ ಉತ್ಪಾದನೆಯಾಗುವುದಿಲ್ಲ.. ನಾವು ಸೇವಿಸುವ ಹಣ್ಣು ಹಾಗೂ ತರಕಾರಿಗಳಿಂದ ಸಿ ವಿಟಮಿನ್ ನಮ್ಮ ದೇಹಕ್ಕೆ ಸೇರುತ್ತದೆ.. ಆದ್ರೆ ವಿಟಮಿನ್ ನಮ್ಮ ದೇಹದಲ್ಲಿ ಅಧಿಕವಾದರೆ ನಮ್ಮ ಆಹಾರ ಜೀರ್ಣವಾಗಲು ಸಮಸ್ಯೆಯಾಗುತ್ತದೆ..

    2) ಕಬ್ಬಿಣಾಂಶ ಹೆಚ್ಚಳಕ್ಕೆ ವಿಟಮಿನ್-ಸಿ ಕಾರಣವಾಗಬಹುದು

    ನಾವು ನಮ್ಮ ಊಟದ ಜೊತೆ 100 ಮಿಗ್ರಾಂ ವಿಟಮಿನ್-ಸಿ ಸೇವನೆ ಮಾಡಿದ್ರೆ, ನಮ್ಮ ದೇಹದಲ್ಲಿ 67% ರಷ್ಟು ಕಬ್ಬಿಣಾಂಶವನ್ನು ಹೆಚ್ಚಾಗುತ್ತದೆ... ಹೀಗಾಗಿ ದೇಹದಲ್ಲಿ ವಿಟಮಿನ್ ಪ್ರಮಾಣದಲ್ಲಿರುವುದರಿಂದ ಕಬ್ಬಿಣಾಂಶವು ತಾನಾಗೆ ಅಧಿಕವಾಗುತ್ತದೆ.. ಇದರಿಂದ ಹೃದಯ, ಯಕೃತ್ತು, ಮೇದೋಜೀರಕ ಗ್ರಂಥಿ, ಥೈರಾಯ್ಡ್ ಮತ್ತು ಕೇಂದ್ರ ನರಮಂಡಲಕ್ಕೆ ಗಂಭೀರ ಹಾನಿ ಉಂಟಾಗಬಹುದು.

    3) ಕಿಡ್ನಿ ಸ್ಟೋನ್ ಸಮಸ್ಯೆ

    ಹೆಚ್ಚು ವಿಟಮಿನ್ ಸಿ ಸೇವನೆಯು ನಿಮ್ಮ ಮೂತ್ರದಲ್ಲಿ ಆಕ್ಸಲೇಟ್ ಪ್ರಮಾಣವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ, ಹೀಗಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ಸೇರಿಕೊಳ್ಳಬಹುದು..ಅಲ್ಲದೆ 2000 ಮಿಲಿ ಗ್ರಾಂಗಿಂತ ಹೆಚ್ಚು ಸಿ ವಿಟಮಿನ್ ನಮ್ಮ ದೇಹಕ್ಕೆ ಸೇರಿದ್ರೆ ಮೂತ್ರಪಿಂಡದ ವೈಫಲ್ಯ ಕೂಡ ಉಂಟಾಗಲಿದೆ.

    4) ಹೊಟ್ಟೆ ನೋವು

    ನಾವು ಬೆಳಗ್ಗೆಯಿಂದ ಸಂಜೆಯವರೆಗೂ ಆರಾಮಾಗಿ ಇದ್ದು, ಇದ್ದಕ್ಕಿದ್ದಂತೆ ನಮಗೆ ಹೊಟ್ಟೆ ನೋವು ಕಾಣಿಸಲು ಶುರುವಾಯಿತು ಅಂದ್ರೆ, ನಮ್ಮ ದೇಹದಲ್ಲಿ ವಿಟಮಿನ್ ಹೆಚ್ಚಳವಾಗಿದೆ ಎಂದು ಅರ್ಥ..

    ಇದನ್ನೂ ಓದಿ :ಕರುಳಿನ ಆರೋಗ್ಯಕ್ಕೆ Vitamin C ಯುಕ್ತ ದ್ರಾಕ್ಷಿ ಬೆಸ್ಟ್

    5) ತಲೆನೋವು

    ಕಾರಣವೇ ಇಲ್ಲದೇ ಆಯಾಸವಿಲ್ಲದೆ, ನಮ್ಮನ್ನು ಅತಿಯಾದ ತಲೆನೋವು ಬಾಧಿಸುತ್ತಿದ್ದರೆ, ಸಿ ವಿಟಮಿನ್ ಹೆಚ್ಚಳದಿಂದ ಎಂದು ಅರ್ಥ.

    6)ನಿದ್ರೆಯ ಸಮಸ್ಯೆಗಳು

    ಸಾಮಾನ್ಯವಾಗಿ ಹಲವು ಆರೋಗ್ಯ ಸಮಸ್ಯೆಗಳು ಇರುವವರಿಗೆ ನಿದ್ರೆಯ ಕೊರತೆ ಕಾಡುತ್ತದೆ.. ಖಿನ್ನತೆಯಿಂದ ಬಳಲುವವರು ನಿದ್ರೆ ಮಾಡಲು ನಾನ ಪ್ರಯತ್ನಗಳನ್ನು ಮಾಡುತ್ತಾರೆ.. ಆದರೆ ದೇಹ ಮತ್ತು ಮನಸ್ಸು ಎರಡೂ ಆರೋಗ್ಯವಾಗಿದ್ದರೂ ಸಹ ನಿದ್ರೆ ಸಮಸ್ಯೆ ಬರುತ್ತಿದೆ ಎಂದರೆ ಅದು ಸಿ ವಿಟಮಿನ್ ಕೊರತೆಯಿಂದ..
    Published by:ranjumbkgowda1 ranjumbkgowda1
    First published: