Kitchen Hacks: ಮಣ್ಣಿನ ಪಾತ್ರೆಯನ್ನು ಹೀಗೆ ಇಟ್ರೆ ಬೇಗ ಒಡೆಯಲ್ಲ

Clay Pot: ಪಾತ್ರೆಗಳು ಒಡೆಯದಂತೆ ತಡೆಯಲು ಬಹುತೇಕ ಮನೆಗಳಲ್ಲಿ ಡಿನ್ನರ್ ಸೆಟ್ಗಳಲ್ಲಿ ನ್ಯೂಸ್ ಪೇಪರ್ ಬಳಕೆ ಮಾಡಲಾಗುತ್ತದೆ. ಆದರೆ ಪತ್ರಿಕೆಯ ಶಾಹಿ ಪಾತ್ರೆಗಳ ಮೇಲೆ ಬೀಳುವುದರಿಂದ ಪಾತ್ರೆ ಹಾಳಾಗಲಿದೆ

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
    ಮಹಿಳೆಯರಿಗೆ(Women)ಅಡುಗೆ(Food) ಮನೆಗಳೆಂದರೆ ಅಚ್ಚುಮೆಚ್ಚು.. ಹೀಗಾಗಿಯೇ ಕೆಲವೊಂದಷ್ಟು ವಸ್ತುಗಳಿಂದ ಅಡುಗೆಮನೆಯನ್ನು(Kitchen)ಅಲಂಕಾರ ಮಾಡುತ್ತಾರೆ.. ಸಿಕ್ಕಸಿಕ್ಕ ಚೆನ್ನಾಗಿ ಕಂಡ ಪಾತ್ರೆಗಳನ್ನು ತಂದು ಅಡುಗೆಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗಾಗಿಯೇ ಮಾಲ್‌ (Mal), ಮಳಿಗೆ ಹೀಗೆ ಎಲ್ಲೇ ಹೋದರೂ ಬಗೆಬಗೆಯ ಪಾತ್ರೆಗಳನ್ನು ತಂದು ಮನೆಯಲ್ಲಿ ಕೂಡಿ ಹಾಕುವ ಅಭ್ಯಾಸ (Habit). ಅದರಲ್ಲೂ ಒಂದೇ ರೀತಿ ಚಮಚಗಳು, ಫೋರ್ಕ್‌ಗಳು, ಹಾಲು ಕಾಯಿಸುವ ಪಾತ್ರೆ, ಒಂದೇ ಗಾತ್ರದ ಕುಕರ್‌ಗಳುನ್ನು(Cooker) ರಾಶಿರಾಶಿಯಾಗಿ ತಂದು ತುಂಬಿ ಕೊಂಡಿರುತ್ತಾರೆ.. ಅದರಲ್ಲೂ ಸೆರಾಮಿಕ್, ಪ್ಲಾಸ್ಟಿಕ್ (Plastic), ಕಾಫರ್, ಸಿಲ್ವರ್ ಪಾತ್ರೆಗಳು ಅಡುಗೆಮನೆಯಲ್ಲಿ ಇರದೇ ಹೋದರೆ ಮಹಿಳೆಯರಿಗೆ ಏನೋ ಕಳೆದುಕೊಂಡಂತೆ..

    ಹೀಗಾಗಿಯೇ ಎಲ್ಲಾ ರೀತಿಯ ಪಾತ್ರಗಳನ್ನು ಅಡುಗೆಮನೆಯಲ್ಲಿ ತುಂಬಿಸಿಕೊಳ್ಳುವ ಮಹಿಳೆಯರು, ಹೆಚ್ಚು ಆಸಕ್ತಿ ತೋರಿಸುವುದು ಮಣ್ಣಿನ ಪಾತ್ರೆಗಳ ಕಡೆಗೆ.. ಹೀಗಾಗಿಯೇ ಹಳೆಯ ಪದ್ಧತಿಯಾದ ಮಣ್ಣಿನ ಪಾತ್ರೆಗಳನ್ನು ಬಹುತೇಕರು ಇಂದಿಗೂ ಸಹ ತಮ್ಮ ಮನೆಯಲ್ಲಿ ಉಪಯೋಗಿಸುತ್ತಲೇ ಇರುತ್ತಾರೆ.. ಆದ್ರೆ ಈ ರೀತಿ ಉಪಯೋಗ ಮಾಡುವಾಗ ಅಚಾನಕ್ಕಾಗಿ, ಮಣ್ಣಿನ ಪಾತ್ರೆಗಳನ್ನು ಬೀಳಿಸಿ ಹೊಡೆದುಹಾಕುವ ಸಾಧ್ಯತೆ ಇರುತ್ತದೆ.. ಹೀಗಾಗಿಯೇ ಮನೆಯಲ್ಲಿ ಮಣ್ಣಿನ ಪಾತ್ರೆಗಳನ್ನು ಬಳಸುವಾಗ ಕೆಲವೊಂದು ಟ್ರಿಕ್ಸ್ ಅನುಸರಿಸಿದರೆ, ಸುಲಭವಾಗಿ ನೀವು ನಿಮ್ಮ ಮನೆಯಲ್ಲಿ ಹೆಚ್ಚು ದಿನಗಳ ಕಾಲ ಮಣ್ಣಿನ ಪಾತ್ರೆ ಬಳಕೆ ಮಾಡಬಹುದು.

    1) ಮಾತ್ರೆಗಳನ್ನು ಇಡುವಾಗ ಒಂದಕ್ಕೊಂದು ಜಾಗ ಇರಲಿ: ಮಣ್ಣಿನ ಪಾತ್ರೆಗಳು ಅಲ್ಯೂಮಿನಿಯಂ ಹಾಗೂ ಸ್ಟೀಲ್ ಪಾತ್ರೆಯಂತೆ ಅಲ್ಲ.. ತುಂಬಾ ಸೂಕ್ಷ್ಮವಾಗಿ ಇರುವ ಪಾತ್ರೆಗಳಾಗಿರುವುದರಿಂದ, ಪಾತ್ರೆಗಳನ್ನು ಇಡುವಾಗ ಒಂದಕ್ಕೊಂದು ಅಂಟಿಕೊಳ್ಳಲು ಅಷ್ಟು ದೂರ ಇಡುವುದು ಸೂಕ್ತ. ಮಣ್ಣಿನ ಪಾತ್ರೆಗಳನ್ನು ಹತ್ತಿರವಿಟ್ಟಾಗ,ಪರಸ್ಪರ ಬಣ್ಣ ಅಂಟಿಕೊಳ್ಳುತ್ತದೆ. ಪಾತ್ರೆಗಳು ಒಡೆಯಲು ಕಾರಣವಾಗಬಹುದು. ಪಾತ್ರೆಗಳನ್ನು ಒಟ್ಟಿಗೆ ಇಡುವ ಅನಿವಾರ್ಯತೆ ಎದುರಾದಲ್ಲಿ ಖಂಡಿತವಾಗಿಯೂ ಎರಡು ಪಾತ್ರೆಗಳ ನಡುವೆ ಮೃದುವಾದ ಕಾಗದದ ತುಂಡನ್ನು ಇರಿಸಿ.

    ಇದನ್ನೂ ಓದಿ: ಚಳಿಗಾಲದಲ್ಲಿ ಈ ಚಹಾಗಳನ್ನು ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ

    2) ನಿಮ್ಮ ಪಾತ್ರೆಗಳ ತೂಕದ ಬಗ್ಗೆ ಗಮನ ನೀಡಿ: ಪಾತ್ರೆಗಳನ್ನು ಖರೀದಿ ಮಾಡುವಾಗಲೇ ಇರಲಿ ಅವುಗಳನ್ನು ಮನೆಯಲ್ಲಿ ಇರಿಸುವಾಗಲೂ ಅವುಗಳ ತೂಕದ ಬಗ್ಗೆ ಗಮನ ನೀಡಬೇಕು. ನೀಲಿ ಮಣ್ಣಿನ ಪಾತ್ರೆಗಳನ್ನು ಇರಿಸುವಾಗ ಕೆಳಭಾಗದಲ್ಲಿ ಭಾರವಾದ ಪಾತ್ರೆಗಳನ್ನು ಮೊದಲಿಗೆ ಇರಿಸಬೇಕು. ಬಳಿಕ ಅದರ ಮೇಲೆ ಹಗುರವಾದ ಪಾತ್ರಗಳನ್ನು ಸೂಕ್ತವಾದ ಜಾಗದಲ್ಲಿ ಇಡಬೇಕು.

    3) ಪಾತ್ರೆ ತೊಳೆಯುವ ನೀರಿನ ತಾಪಮಾನದ ಬಗ್ಗೆಯೂ ಎಚ್ಚರ: ಸಾಮಾನ್ಯವಾಗಿ ಕೆಲವೊಮ್ಮೆ ಪಾತ್ರಗಳು ಹಾಳಾಗಲು ನಾವು ಬಳಸುವ ನೀರು ಹಾಗೂ ಡಿಟರ್ಜೆಂಟ್ ಪಾತ್ರೆಯ ಮೇಲೆ ಪರಿಣಾಮ ಬೀರಲಿದೆ.ನಾವು ಬಳಸುವ ನೀರಿನ ತಾಪಮಾನದಿಂದಾಗಿ ಪಾತ್ರೆ ಬಿರುಕು ಬಿಡುವ ಸಾಧ್ಯತೆ ಇರುತ್ತದೆ.ಹಾಗಾಗಿ ಪಾತ್ರೆ ತೊಳೆಯುವ ಮೊದಲು ನೀರಿನ ತಾಪಮಾನವನ್ನು ಪರೀಕ್ಷೆ ಮಾಡಿಕೊಳ್ಳಬೇಕು.. ಪಾತ್ರೆ ಜಿಡ್ಡಾಗಿದೆ ಎಂಬ ಕಾರಣಕ್ಕೆ ಬಿಸಿ ನೀರನ್ನು ಪಾತ್ರೆಗೆ ಹಾಕ್ತೆವೆ. ನೀರು ತುಂಬಾ ಬಿಸಿಯಾಗಿದ್ದರೆ ಅಥವಾ ತಣ್ಣಗಿದ್ದರೆ ಪಾತ್ರೆಗಳು ಬಿರುಕು ಬಿಡಬಹುದು. ಯಾವಾಗಲೂ ಹಗುರವಾದ ಸಾಮಾನ್ಯ ನೀರು ಅಥವಾ ಉಗುರುಬೆಚ್ಚನೆಯ ನೀರನ್ನು ಮಾತ್ರ ಪಾತ್ರೆ ತೊಳೆಯಲು ಬಳಸಬೇಕು.

    4) ನ್ಯೂಸ್ ಪೇಪರ್ ಬಳಕೆ ಬೇಡ: ಪಾತ್ರೆಗಳು ಒಡೆಯದಂತೆ ತಡೆಯಲು ಬಹುತೇಕ ಮನೆಗಳಲ್ಲಿ ಡಿನ್ನರ್ ಸೆಟ್ಗಳಲ್ಲಿ ನ್ಯೂಸ್ ಪೇಪರ್ ಬಳಕೆ ಮಾಡಲಾಗುತ್ತದೆ. ಆದರೆ ಪತ್ರಿಕೆಯ ಶಾಹಿ ಪಾತ್ರೆಗಳ ಮೇಲೆ ಬೀಳುವುದರಿಂದ ಪಾತ್ರೆ ಹಾಳಾಗಲಿದೆ.

    5) ಮೃದುವಾದ ಬಟ್ಟೆ ಬಳಸಿ: ಮಣ್ಣಿನ ಪಾತ್ರೆಗಳನ್ನು ಆತನ ತೊಳೆದ ಬಳಿಕ ಅವುಗಳನ್ನು ಸ್ವಚ್ಛಗೊಳಿಸಲು ಮೃದುವಾದ ಬಟ್ಟೆಗಳನ್ನು ಬಳೆಸಬೇಕು.

    ಇದನ್ನೂ ಓದಿ: ತಾರಸಿ ಮೇಲೆ ಥರಾವರಿ ತರಕಾರಿ-ಹಣ್ಣು ಬೆಳೆಯೋಕೆ ಸರಳ ಐಡಿಯಾಗಳು ಇಲ್ಲಿವೆ ನೋಡಿ

    6)ರಬ್ಬರ್ ಸಿಂಕ್: ಪಾತ್ರೆಗಳನ್ನು ತೊಳೆಯುವಾಗ ಅನೇಕ ಬಾರಿ ಒಡೆದು ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರಬ್ಬರ್ ಸಿಂಕ್ ಬಳಕೆ ಮಾಡಿದರೆ ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಹಾಗೂ ಇಡುವಾಗ,ಬಳಸುವಾಗ ಪಾತ್ರೆಗಳು ಒಡೆಯುವುದಿಲ್ಲ.
    Published by:ranjumbkgowda1 ranjumbkgowda1
    First published: