Steam Bath And Health: ವ್ಯಾಯಾಮದ ನಂತರ ಸ್ಟೀಮ್ ಬಾತ್ ತೆಗೆದುಕೊಳ್ಳುವುದು ಹೇಗೆ? ಹೃದಯ ಆರೋಗ್ಯಕ್ಕೆ ಇಲ್ಲಿದೆ ಟಿಪ್ಸ್​

ಇತ್ತೀಚೆಗೆ ಅಮೇರಿಕನ್ ಜರ್ನಲ್ ಆಫ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ವ್ಯಾಯಾಮ ರೋಗಗಳನ್ನು ತಡೆಗಟ್ಟುತ್ತದೆ ಎಂದು ಹೇಳಿದೆ. ಪ್ರಸ್ತುತ ಆರೋಗ್ಯ ಮತ್ತು ವ್ಯಾಯಾಮ ಮಾರ್ಗಸೂಚಿಗಳು ಹೇಳುವ ಪ್ರಕಾರ 150 ರಿಂದ 300 ನಿಮಿಷ ಮಧ್ಯಮ ತೀವ್ರತೆಯ ದೈಹಿಕ ವ್ಯಾಯಾಮ ಮಾಡುವುದು ಆರೋಗ್ಯ ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸ್ಟೀಮ್ ಬಾತ್ (Steam Bath) ವಿದೇಶಗಳಲ್ಲಿ ಜನಪ್ರಿಯತೆ (Famous) ಗಳಿಸಿದಷ್ಟು ಭಾರತದಲ್ಲಿ (India) ಅನೇಕ ಕಾರಣಗಳಿಂದ (Causes) ಹೆಚ್ಚು ಜನಪ್ರಿಯತೆ ಪಡೆದಿಲ್ಲ. ಭಾರತದಲ್ಲಿ ಹೆಚ್ಚಿನ ಪ್ರದೇಶಗಳು ಬಿಸಿಯಾದ ಮತ್ತು ಆರ್ದ್ರತೆ ವಾತಾವರಣದಿಂದ ಕೂಡಿವೆ. ಹಾಗಾಗಿ ಇದು ಬಿಸಿ ಮತ್ತು ಹಬೆ ಸ್ನಾನದ ಅಗತ್ಯವನ್ನು ಸೂಚಿಸುತ್ತದೆ. ಆದರೆ ವ್ಯಾಯಾಮದ (Exercise) ನಂತರ ಸ್ಟೀಮ್ ಸ್ನಾನ ಮಾಡುವುದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ ಎಂಬುದು ನಿಮಗೆ ಗೊತ್ತಾ? ಈ ಬಗ್ಗೆ ಸಂಶೋಧನೆಯೊಂದು ಮಾಹಿತಿ ಬಹಿರಂಗ ಪಡಿಸಿದೆ. ಇದು ವೈಜ್ಞಾನಿಕ ಸಂಶೋಧನೆಯಲ್ಲಿ ದೃಢಪಟ್ಟಿದೆ ಎಂದು ತಿಳಿಸಿದೆ. ಹಾಗಾದ್ರೆ ಸ್ಟೀಮ್ ಬಾತ್ ಹೇಗೆ ಹೃದಯ ಸಂಬಂಧಿ ಅಪಾಯ ಕಡಿಮೆ ಮಾಡುತ್ತದೆ ಎಂಬುದನ್ನು ನಾವು ಇಲ್ಲಿ ನೋಡೋಣ.

  ವ್ಯಾಯಾಮ ರೋಗಗಳನ್ನು ತಡೆಗಟ್ಟುತ್ತದೆ

  ಇತ್ತೀಚೆಗೆ ಅಮೇರಿಕನ್ ಜರ್ನಲ್ ಆಫ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವ್ಯಾಯಾಮ ರೋಗಗಳನ್ನು ತಡೆಗಟ್ಟುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಪ್ರಸ್ತುತ ಆರೋಗ್ಯ ಮತ್ತು ವ್ಯಾಯಾಮ ಮಾರ್ಗಸೂಚಿಗಳು ಹೇಳುವ ಪ್ರಕಾರ, 150 ರಿಂದ 300 ನಿಮಿಷ ಮಧ್ಯಮ-ತೀವ್ರತೆಯ ದೈಹಿಕ ವ್ಯಾಯಾಮ ಮಾಡುವುದು ಅದೂ ಸಹ ವಾರಕ್ಕೆ ಮೂರರಿಂದ ಐದು ಅವಧಿಗಳಲ್ಲಿ ವ್ಯಾಯಾಮ ಮಾಡುವುದನ್ನು ಶಿಫಾರಸು ಮಾಡುತ್ತವೆ.

  ವ್ಯಾಯಾಮದ ನಂತರ ಸ್ಟೀಮ್ ಬಾತ್ ತೆಗೆದುಕೊಳ್ಳುವುದು

  ಇದು ನಿಮ್ಮ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಅದೇ ವೇಳೆ ಅಧ್ಯಯನ ಹೇಳುವ ಪ್ರಕಾರ, ವ್ಯಾಯಾಮದ ನಂತರ ಸ್ಟೀಮ್ ಬಾತ್ ತೆಗೆದುಕೊಳ್ಳುವುದು ಹೃದಯದ ಆರೋಗ್ಯಕ್ಕೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅಧ್ಯಯನ ಹೇಳಿದೆ.

  ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

  ಸ್ಟೀಮ್ ಸ್ನಾನ ಎಂದರೇನು?

  ಸ್ಟೀಮ್ ಸ್ನಾನ ಫಿನ್ಲ್ಯಾಂಡ್ ನಲ್ಲಿ ಹುಟ್ಟಿಕೊಂಡಿತು. ಅಲ್ಲಿ ಇದು 2000 ವರ್ಷಗಳಿಗೂ ಹೆಚ್ಚು ಕಾಲ ಜನರ ಜೀವನದ ಭಾಗವಾಗಿ ಉಳಿದಿದೆ. ಸೌನಾ ಎಂಬುದು ಫಿನ್ನಿಷ್ ಪದ. ಇದರರ್ಥ ಸ್ನಾನ ಅಥವಾ ಬಾತ್ರೂಮ್ ಎಂಬುದಾಗಿದೆ. ಇದಕ್ಕಾಗಿ ಸಣ್ಣ ಮರದ ಕೋಣೆ ಬಳಸುತ್ತಾರೆ.

  ಅಲ್ಲಿ ನೀವು ಶುಷ್ಕ ಮತ್ತು ಆರ್ದ್ರ ಶಾಖದ ಅವಧಿ ಅನುಭವಿಸುತ್ತೀರಿ. ಹಬೆ ಮತ್ತು ಬಿಸಿ ನೀರಿನೊಂದಿಗೆ ಸ್ನಾನ ಮಾಡುವುದು ಬೆವರುವಿಕೆಗೆ ಕಾರಣ ಆಗುತ್ತದೆ. ನೀವು ಸ್ಟೀಮ್ ಸ್ನಾನದ ಕೋಣೆಯಲ್ಲಿ ವಿವಸ್ತ್ರಗೊಳ್ಳದೆ ಕುಳಿತು ಶಾಖ ತೆಗೆದುಕೊಳ್ಳುವುದು ಆಗಿದೆ.

  ಸ್ಟೀಮ್ ಬಾತ್‌ ಆರೋಗ್ಯ ಪ್ರಯೋಜನಗಳು

  ಸ್ಟೀಮ್ ಸ್ನಾನ ನಿರ್ವಿಶೀಕರಣ, ಚಯಾಪಚಯ ಹೆಚ್ಚಿಸಲು, ತೂಕ ನಷ್ಟ, ರಕ್ತ ಪರಿಚಲನೆ ಸುಧಾರಿಸಲು, ನೋವು ಕಡಿಮೆ ಮಾಡಲು, ವಯಸ್ಸಾದ ವಿರೋಧಿ ಚಟುವಟಿಕೆ, ಚರ್ಮದ ಪುನರುಜ್ಜೀವನಗೊಳಿಸಲು, ಹೃದಯ ರಕ್ತನಾಳ ಕಾರ್ಯ ಸುಧಾರಿಸಲು, ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ಜೊತೆಗೆ ಒತ್ತಡ ನಿರ್ವಹಣೆ, ಆರೋಗ್ಯಕರ ನಿದ್ರೆ ಮತ್ತು ದೇಹದಾರ್ಢ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

  ಅಮೇರಿಕನ್ ಜರ್ನಲ್ ಆಫ್ ಫಿಸಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಶೋಧಕರು 30 ರಿಂದ 60 ವರ್ಷ ವಯಸ್ಸಿನ 50 ಪುರುಷ ಮತ್ತು ಸ್ತ್ರೀಯರು ಇದರಲ್ಲಿ ಭಾಗಿಯಾಗಿದ್ದರು. ಮತ್ತು ಅವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಮಾರ್ಗದರ್ಶಿ ನಿಯಂತ್ರಿತ ವ್ಯಾಯಾಮ ಮಾಡಿದವರು ಮತ್ತು 15 ನಿಮಿಷ ಸ್ಟೀಮ್ ಸ್ನಾನ ಮತ್ತು ವ್ಯಾಯಾಮ ಸಂಯೋಜಿಸಿದವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು.

  ಸ್ಟೀಮ್ ಗುಂಪಿನಲ್ಲಿ ಸಂಕೋಚನದ ರಕ್ತದೊತ್ತಡ ಇಳಿಕೆ

  ಸಂಯೋಜಿತ ವ್ಯಾಯಾಮ ಮತ್ತು ಸ್ಟೀಮ್ ಗುಂಪಿನಲ್ಲಿ, CRF ಅಂದ್ರೆ ಕಾರ್ಡಿಯೋಸ್ಪಿರೇಟರಿ ಫಿಟ್ನೆಸ್ ನಲ್ಲಿ ಹೆಚ್ಚು ಗಮನಾರ್ಹ ಹೆಚ್ಚಳ ಕಂಡು ಬಂದಿದೆ ಎಂದು ಸಂಶೋಧನೆಯು ಕಂಡು ಹಿಡಿದಿದೆ. ವ್ಯಾಯಾಮದ ಗುಂಪಿಗೆ ಹೋಲಿಸಿದರೆ ಸ್ಟೀಮ್ ಗುಂಪಿನಲ್ಲಿ ಸಂಕೋಚನದ ರಕ್ತದೊತ್ತಡ (SBP) ಮತ್ತು ಕೊಲೆಸ್ಟ್ರಾಲ್‌ನಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.

  2007 ರಲ್ಲಿ ಪಬ್‌ಮೆಡ್ ಸೆಂಟ್ರಲ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಸಾಮಾನ್ಯ ಸ್ಟೀಮ್ ಥೆರಪಿ 15 ನಿಮಿಷ 60 ಡಿಗ್ರಿ ಸೆಲ್ಸಿಯಸ್ ಸುಧಾರಿತ ಹೋಮಿಯೋಡೈನಮಿಕ್ ನಿಯತಾಂಕಗಳು, ಕ್ಲಿನಿಕಲ್ ಲಕ್ಷಣಗಳು, ಹೃದಯದ ಕಾರ್ಯ ಮತ್ತು ಹೃದಯ ಸ್ತಂಭನ (CHF) ರೋಗಿಗಳಲ್ಲಿ ನಾಳೀಯ ಎಂಡೋಥೀಲಿಯಲ್ ಕಾರ್ಯದ ಸುಧಾರಣೆಯನ್ನು ತೋರಿಸಿದೆ.

  ಇದನ್ನೂ ಓದಿ: ಪಾದ, ಕೈಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಕಂಡು ಬರುವುದು ಹೇಗೆ? ಇದರ ಮುನ್ನೆಚ್ಚರಿಕಾ ಕ್ರಮಗಳೇನು?

  ಎಂಡೋಥೀಲಿಯಂ-ಅವಲಂಬಿತ ವಿಸ್ತರಣೆ ಲಿಪಿಡ್ ಪ್ರೊಫೈಲ್‌ ಮತ್ತು ರಕ್ತದೊತ್ತಡ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ಸ್ವನಿಯಂತ್ರಿತ ನರಮಂಡಲ ಮಾರ್ಪಡಿಸುವ ಮೂಲಕ ಪರಿಚಲನೆ ನಿಯಂತ್ರಿಸುತ್ತದೆ. ಇದು ಹೃದಯರಕ್ತನಾಳದ ಆರೋಗ್ಯ ಸುಧಾರಿಸುತ್ತದೆ. ಹಾಗಾಗಿ ವ್ಯಾಯಾಮದ ನಂತರ ಸೌನಾ ಸ್ನಾನ ಮಾಡಲು ಯತ್ನಿಸಿ.
  Published by:renukadariyannavar
  First published: