Mental Health: ಈ ವರ್ಷ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿದೆ ಕೆಲ ಸಲಹೆಗಳು

Mental Health And New Year Resolution: ಆದರೆ ಈ ವರ್ಷ ಮಾನಸಿಕ ಆರೋಗ್ಯವು ಆದ್ಯತೆಯಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ನೀವು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕುತ್ತದೆ. ಸಮಾಧಾನವಾಗಿ, ಸಮಚಿತ್ತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
2021  ಮುಗಿಯುತ್ತಿದೆ ನಮ್ಮೆಲ್ಲರಿಗೂ ಇದು ಮಾನಸಿಕವಾಗಿ (Mental Health)  ಮತ್ತು ದೈಹಿಕವಾಗಿ ಸವಾಲಿನದ್ದಾಗಿದೆ. ಹೊಸ ವರ್ಷ ಹತ್ತಿರದಲ್ಲಿದೆ ನಮ್ಮ ಗುರಿಗಳನ್ನು ಸಾಧಿಸಲು ಅಥವಾ ಮರುಮೌಲ್ಯಮಾಪನ ಮಾಡಲು ಮತ್ತು ಅನೇಕ ಜನರಿಗೆ ಹೊಸ ವರ್ಷದ ನಿರ್ಣಯಗಳನ್ನು (New Year Resolution) ಮಾಡಲು ಇದು ಸರಿಯಾದ ಸಮಯವಾಗಿದೆ. ನಿಮ್ಮ ಹೊಸ ವರ್ಷದ ಗುರಿಯನ್ನು ಸಾಧಿಸಲು, ಅವುಗಳನ್ನು ಸರಳ ಮತ್ತು ವಾಸ್ತವಿಕವಾಗಿರಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಹೆಚ್ಚು ಜನರು ಸಾಮಾನ್ಯವಾಗಿ ದೈಹಿಕ ಆರೋಗ್ಯದ (Physical Health) ಬಗ್ಗೆ ಗುರಿಯನ್ನು ಹೊಂದಿದ್ದಾರೆ. ಆದರೆ ಈ ವರ್ಷ ಮಾನಸಿಕ ಆರೋಗ್ಯವು ಆದ್ಯತೆಯಾಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ನೀವು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕುತ್ತದೆ. ಸಮಾಧಾನವಾಗಿ, ಸಮಚಿತ್ತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.  

2022 ಅನ್ನು ಸರಿಯಾಗಿ ಪ್ರಾರಂಭಿಸಲು ನಿಮಗೆ ಸಹಾಯ ಮಾಡಲು ನಿಮ್ಮ ಮಾನಸಿಕ ಆರೋಗ್ಯದ ಗುರಿಗಳ ಲಿಸ್ಟ್ ಇಲ್ಲಿದೆ.

ತುಂಬಾ ಕಷ್ಟಪಡಬೇಡಿ

ಕೆಲವು  ಗುರಿಗಳು ಮೊದಲಿಗೆ ಪ್ರೇರೇಪಿಸುವಂತೆ ತೋರುತ್ತಿದ್ದರೂ, ನಂತರ ಅವರು ಒಬ್ಬ ವ್ಯಕ್ತಿಯನ್ನು ಹೆಚ್ಚಿನ ಒತ್ತಡಕ್ಕೆ ಒಳಪಡಿಸಬಹುದು ಮತ್ತು ಆತಂಕದ ಭಾವನೆಗಳನ್ನು ಉಂಟುಮಾಡಿ, ಸ್ವಾಭಿಮಾನವನ್ನು ಕಡಿಮೆಗೊಳಿಸಬಹುದು. ನಮ್ಮಲ್ಲಿ ಅನೇಕರು ದೀರ್ಘಕಾಲದವರೆಗೆ ಪ್ರೇರೇಪಿತವಾಗಿರಲು ಕಷ್ಟವಾಗಬಹುದು. ಹಾಗಾಗಿ ಸರಳವಾದ, ಹೆಚ್ಚು ವಾಸ್ತವಿಕ ಗುರಿಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಡಾ. ಬಕ್ಷಿ ಹೆಲ್ತ್‌ಕೇರ್‌ನ ಕೆಲಿಡೋಸ್ಕೋಪ್‌ನ ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞ ಮೈತ್ರಿ ಧಿಂಗ್ರಾ ಹೇಳುತ್ತಾರೆ.

ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ

ಇದನ್ನೂ ಓದಿ: ಹೊಸವರ್ಷಕ್ಕೆ ಟ್ರಿಪ್ ಹೋಗೋಕೆ ಇಲ್ಲಿದೆ ನೋಡಿ ಭಾರತದ ಸುಂದರ ಸ್ಥಳಗಳ ಲಿಸ್ಟ್

ಹೊಸ ವರ್ಷಕ್ಕೆ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಇನ್ನೊಂದು ಮಾರ್ಗವೆಂದರೆ ನಿಮ್ಮ ಜೀವನದಲ್ಲಿ ಜನರೊಂದಿಗೆ ಹೆಚ್ಚು ಬೆರೆಯುವುದು ಬಹಳ ಮುಖ್ಯ. ನಿಮ್ಮ ಭಾವನೆಗಳು, ಚಿಂತೆಗಳು ಅಥವಾ ಭರವಸೆಗಳ ಬಗ್ಗೆ ಜನರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೊಂದರೆಯ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮನಸ್ಸಿನಲ್ಲಿರುವುದನ್ನು ನೀವು ಯಾರೊಂದಿಗಾದರೂ ಹಂಚಿಕೊಂಡಾಗ ಮನಸಿನ ಭಾರ ಕಡಿಮೆಯಾಗುತ್ತದೆ.

ನಿಮ್ಮನ್ನು ಕ್ಷಮಿಸಿ

"ಮೈಂಡ್‌ಫುಲ್‌ನೆಸ್ ಎನ್ನುವುದು ಈ ವರ್ಷ ನಾವು ಗಮನಹರಿಸಬೇಕಾದ ವಿಷಯವಾಗಿದೆ. ಕೊರೊನಾ ಕಾರಣದಿಂದ ಬಹಳಷ್ಟು ವಿಷಯಗಳು ನಮ್ಮ ಕೈಯಲ್ಲಿಲ್ಲ ಮತ್ತು ಎಲ್ಲದಕ್ಕೂ ನಾವು ಜವಾಬ್ದಾರರಾಗಿರುವುದಿಲ್ಲವಾದ್ದರಿಂದ ನಾವು ನಮ್ಮನ್ನ ಕ್ಷಮಿಸುವುದು ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಆಗಿ ಹೋದ ಘಟನೆಗಳನ್ನು ಮರೆಯುವುದು ಮತ್ತು ನಿಮ್ಮನ್ನು ಕ್ಷಮಿಸುವುದು ಈ ವರ್ಷದ ಧ್ಯೇಯವಾಕ್ಯವಾಗಿರಬೇಕು ಎನ್ನುತ್ತಾರೆ ತಜ್ಞರು.

 ಸ್ವಯಂ ಕಾಳಜಿಯ ಮೇಲೆ ಕೇಂದ್ರೀಕರಿಸಿ

ನಮ್ಮ ಬಗ್ಗೆ ನಾವು ಹೆಚ್ಚು ಕಾಳಜಿವಹಿಸುವುದು ಮುಖ್ಯವಾಗುತ್ತದೆ. ಈ ಕಾಳಜಿಯು ಹಲವಾರು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಒಬ್ಬ ಉತ್ತಮ ವ್ಯಕ್ತಿಯಾಗಲು ಸ್ವಯಂ-ಅರಿವು ಬೆಳೆಸಿಕೊಳ್ಳುವಲ್ಲಿ ಸಹ ಕೆಲಸ ಮಾಡಬೇಕು ಏಕೆಂದರೆ ನೀವು ಉತ್ತಮ ವ್ಯಕ್ತಿಯಾಗಿದ್ದಾಗ, ನಿಮ್ಮ ಸುತ್ತಲಿನ ವಿಷಯಗಳು ಉತ್ತಮವಾಗುತ್ತದೆ.  ಹಾಗಅಗಿ ನಿಮ್ಮ ವ್ಯಕ್ತಿತ್ವ ಬೆಳವಣಿಗೆಯ ಕುರಿತು ಹೆಚ್ಚು ಗಮನ ನೀಡುವುದು ಉತ್ತಮ.

 ಸಕ್ರಿಯ ಜೀವನಶೈಲಿಯನ್ನು ಕಾಪಾಡಿಕೊಳ್ಳಿ

ಮುಂಬರುವ ವರ್ಷಕ್ಕೆ ಕುಳಿತುಕೊಳ್ಳುವ ಬದಲು ಹೆಚ್ಚು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಮಕ್ಕಳು ವಿಶೇಷವಾಗಿ ತಮ್ಮ ಆರೋಗ್ಯದ ಮೇಲೆ ಗಮನಹರಿಸಬೇಕು ಮತ್ತು ಒಳಾಂಗಣ ಆಟಗಳು, ವ್ಯಾಯಾಮ ಇತ್ಯಾದಿಗಳ ಮೇಲೆ ಕೇಂದ್ರೀಕರಿಸಬೇಕು" ಎಂದು ಮನೋವೈದ್ಯರು ಹೇಳುತ್ತಾರೆ.

ಸಾಮಾಜಿಕ ಮಾಧ್ಯಮದಿಂದ ದೂರವಿರಿ

ಸಾಮಾಜಿಕ ಮಾಧ್ಯಮವು ಪ್ರಪಂಚದ ಬಹುಭಾಗವನ್ನು ಪರಸ್ಪರ ಸಂಪರ್ಕಿಸಿದೆ ಮತ್ತು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಉತ್ತಮ ಮಾರ್ಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಹೆಚ್ಚುತ್ತಿರುವ ಬಳಕೆಯ ಕಾರಣ ಸಾಮಾಜಿಕ ಮಾಧ್ಯಮವು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೀಗೆ ಹೊಸ ವರ್ಷ ಎಂಜಾಯ್ ಮಾಡಿ

ಸಾಮಾಜಿಕ ಮಾಧ್ಯಮಗಳು ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು ಹಾಗೂ ಮನಸಿನ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಬಹುದು.ಹಾಗಾಗಿ ಸಾಧ್ಯವಾದಷ್ಟು ದೂರವಿರಿ.
Published by:Sandhya M
First published: