Health Tips: ಮಳೆಗಾಲದಲ್ಲೂ ಫಿಟ್ ಆಗಿರೋದು ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀರಾ? ನಿಮ್ಮ ಆಹಾರ ಪದ್ಧತಿ ಹೀಗಿರಲಿ

ಮಾನ್ಸೂನ್ ಶಾಖದಿಂದ ವಿರಾಮವನ್ನು ನೀಡುತ್ತದೆ, ಆದರೆ ಅದು ಆರೋಗ್ಯದ ವಿಷಯಕ್ಕೆ ಬಂದರೆ ಅಷ್ಟೇ ಅಪಾಯಗಳನ್ನು ತರಬಲ್ಲದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಜೀರ್ಣಿಸಿಕೊಳ್ಳಲು ಕಷ್ಟಕರವಾದ ಆಹಾರಗಳನ್ನು ಸೇವಿಸುತ್ತಿದ್ದರೆ, ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ನೀವು ಫಿಟ್ ಮತ್ತು ಆರೋಗ್ಯಕರವಾಗಿ ಉಳಿಯಲು ಈ ಆಹಾರಗಳನ್ನು ಸೇವಿಸಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇನ್ನೇನು ಮೇ ತಿಂಗಳು ಮುಗಿತಾ ಬಂತು, ಎಂದರೆ ಕಳೆದ ಕೆಲವು ತಿಂಗಳುಗಳಿಂದ ಇದ್ದ ಬಿಸಿಲು (Summer) ಕಡಿಮೆ ಆಗುವ ಸಮಯ ಬಂತು ಅಂತ ಅರ್ಥ. ಸುಡುವ ಬೇಸಿಗೆಯ ಶಾಖದ ನಂತರ ಮಾನ್ಸೂನ್ (Monsoon) ಋತುವು ಸ್ವಾಗತಾರ್ಹ ಬದಲಾವಣೆಯಾಗಿದೆ. ಆದಾಗ್ಯೂ, ಮಾನ್ಸೂನ್ ಶಾಖದಿಂದ ವಿರಾಮವನ್ನು ನೀಡುತ್ತದೆ, ಆದರೆ ಅದು ಆರೋಗ್ಯದ (Health) ವಿಷಯಕ್ಕೆ ಬಂದರೆ ಅಷ್ಟೇ ಅಪಾಯಗಳನ್ನು ತರಬಲ್ಲದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಏಕೆಂದರೆ ಮಳೆಗಾಲದಲ್ಲಿ ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಸೋಂಕುಗಳು, ಜೀರ್ಣಕಾರಿ ಸಮಸ್ಯೆಗಳು (Digestive problem) ಮತ್ತು ಅಲರ್ಜಿಗಳು ಸಾಮಾನ್ಯವಾಗಿ ಕಂಡು ಬರುತ್ತವೆ.

ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಹೆಚ್ಚಿನ ತೇವಾಂಶದ ಮಟ್ಟಗಳು. ಇದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ನೀವು ಜೀರ್ಣಿಸಿಕೊಳ್ಳಲು ಕಷ್ಟಕರವಾದ ಆಹಾರಗಳನ್ನು ಸೇವಿಸುತ್ತಿದ್ದರೆ, ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ನೀವು ಫಿಟ್ ಮತ್ತು ಆರೋಗ್ಯಕರವಾಗಿ ಉಳಿಯಲು ಈ ಆಹಾರಗಳನ್ನು ಸೇವಿಸಿರಿ.

1. ಸೂಪ್ ಕುಡಿಯಿರಿ
ಅನಾರೋಗ್ಯಕರ ಚಾಟ್ ಗಳನ್ನು ತಿನ್ನುವ ಬದಲು, ನಿಮಗೆ ಹಸಿವಾಗಿದ್ದರೆ ಬಿಸಿ ಬಿಸಿಯಾದ ಸೂಪ್ ಅನ್ನು ಕುಡಿಯಿರಿ. ಅನೇಕ ಪೋಷಕಾಂಶಗಳಿಂದ ತುಂಬಿರುವ ಈ ಸೂಪ್ ಗಳು ಜೀರ್ಣಿಸಿಕೊಳ್ಳಲು ಸುಲಭ ಮತ್ತು ನಿಮ್ಮ ಹೊಟ್ಟೆಯನ್ನು ಸಂತೋಷವಾಗಿರಿಸುತ್ತದೆ. ಒಂದು ಬಟ್ಟಲು ಚಿಕನ್ ಸೂಪ್ ಅಥವಾ ವೆಜಿಟೇಬಲ್ ಕಾರ್ನ್ ಸೂಪ್ ಅನ್ನು ಕರಿಮೆಣಸು, ಬೆಳ್ಳುಳ್ಳಿ ಮತ್ತು ಶುಂಠಿಯಿಂದ ಅಲಂಕರಿಸಿಕೊಂಡು ಕುಡಿಯಿರಿ. ಇದು ನಿಮ್ಮನ್ನು ದಿನವಿಡೀ ಹೈಡ್ರೇಟ್ ಆಗಿರಿಸುತ್ತದೆ.

2. ಜಾಮೂನ್ ಮತ್ತು ಪ್ಲಮ್ ಹಣ್ಣುಗಳನ್ನು ಸೇವಿಸಿರಿ
ಜಾಮೂನ್ ಮತ್ತು ಪ್ಲಮ್ಸ್ ನಂತಹ ಹಣ್ಣುಗಳು ಖಂಡಿತವಾಗಿಯೂ ನಿಮ್ಮ ದೈನಂದಿನ ಆಹಾರದ ಒಂದು ಭಾಗವಾಗಿರಬೇಕು. ಜಾಮೂನ್ ಜೊತೆಗಿರುವ ರಸವು ಬಯೋಆಕ್ಟಿವ್ ಫೈಟೊಕೆಮಿಕಲ್ಸ್ ಅನ್ನು ಸಹ ಹೊಂದಿರುತ್ತದೆ, ಇದು ಯಕೃತ್ತಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮತ್ತೊಂದೆಡೆ, ಕಹಿ ಮತ್ತು ಸಿಹಿ ಪ್ಲಮ್ ಗಳು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ.

3. ಮೊಳಕೆ ಕಾಳುಗಳನ್ನು ಸೇವಿಸಿರಿ
ಮೊಳಕೆ ಕಾಳುಗಳು ಎಲ್ಲಾ ಋತುಗಳಲ್ಲಿ, ವಿಶೇಷವಾಗಿ ಮಾನ್ಸೂನ್ ನಲ್ಲಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಪ್ರೋಟೀನ್ ಭರಿತ ಮೊಳಕೆ ಕಾಳುಗಳು ಆರೋಗ್ಯಕರ ಉಪಾಹಾರವಾಗಿದ್ದು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಇದರಿಂದಾಗಿ ನಿಮ್ಮ ದೇಹವು ರೋಗಾಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

4. ಜೇನುತುಪ್ಪದೊಂದಿಗೆ ಹರ್ಬಲ್ ಟೀ ಕುಡಿಯಿರಿ
ತುಳಸಿ ಚಹಾ ಮತ್ತು ಶುಂಠಿ ಚಹಾದಂತಹ ಗಿಡಮೂಲಿಕೆ ಚಹಾವು ಮಾನ್ಸೂನ್ ಋತುವಿನಲ್ಲಿ ತುಂಬಾನೇ ಒಳ್ಳೆಯದು. ಗಿಡಮೂಲಿಕೆ ಚಹಾವನ್ನು ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಾಗ ಶೀತ ಮತ್ತು ಜ್ವರದಿಂದ ನಿಮ್ಮನ್ನು ಬೆಚ್ಚಗೆ ಮತ್ತು ಸುರಕ್ಷಿತವಾಗಿರಿಸುತ್ತದೆ. ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಹೆಸರುವಾಸಿಯಾದ ಕೆಲವು ಹನಿ ಜೇನುತುಪ್ಪವನ್ನು ಸಕ್ಕರೆಯ ಬದಲಿಗೆ ಅದಕ್ಕೆ ಸೇರಿಸಿಕೊಳ್ಳಿರಿ.

ಇದನ್ನೂ ಓದಿ: Weight Loss Tips: ಈ ತಪ್ಪು ಮಾಡಿದ್ರೆ ನೀವು ಸಣ್ಣ ಆಗೋ ಬದ್ಲು, ದಪ್ಪ ಆಗ್ತೀರಿ ಹುಷಾರ್

5. ಅರಿಶಿನ ಹಾಲು ಕುಡಿಯಿರಿ
ಅರಿಶಿನವನ್ನು ಅಡಿಗೆಗೆ ಹಾಕಲು ಬಳಸಲಾಗುತ್ತದೆ ಮತ್ತು ಇದು ಒಂದು ಪವಾಡ ಮೂಲಿಕೆಯಾಗಿದ್ದು, ಇದನ್ನು ಪ್ರತಿ ಋತುವಿನಲ್ಲಿ ಯಾವುದೇ ರೂಪದಲ್ಲಿ ಸೇವಿಸಬೇಕು. ಉರಿಯೂತ ಶಮನಕಾರಿ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಅರಿಶಿನವು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಸೋಂಕುಗಳನ್ನು ದೂರವಿಡುತ್ತದೆ. ಮಳೆಗಾಲದಲ್ಲಿ ಸದೃಢವಾಗಿರಲು ಪ್ರತಿದಿನ ರಾತ್ರಿ ಒಂದು ಲೋಟ ಬೆಚ್ಚಗಿನ ಅರಿಶಿನ ಹಾಲನ್ನು ಕುಡಿಯಿರಿ.

6. ಪ್ರೋಬಯಾಟಿಕ್ಸ್ ಆಹಾರ ಸೇವಿಸಿ
ಮಾನ್ಸೂನ್ ಸಮಯದಲ್ಲಿ ನೀವು ನಿಮ್ಮ ಆಹಾರದಲ್ಲಿ ಹೆಚ್ಚು ಪ್ರೋಬಯಾಟಿಕ್ಸ್ ಮತ್ತು ಹುದುಗಿಸಿದ ಆಹಾರವನ್ನು ಸೇರಿಸಬೇಕು. ಮೊಸರು, ಮಜ್ಜಿಗೆ ಮತ್ತು ಉಪ್ಪಿನಕಾಯಿ ತರಕಾರಿಗಳು ನಿಮ್ಮ ಕರುಳು ಆರೋಗ್ಯಕರ ಮತ್ತು ಸಂತೋಷವಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು. ಪ್ರೋಬಯಾಟಿಕ್ ಗಳು ಉತ್ತಮ ಬ್ಯಾಕ್ಟೀರಿಯಾಗಳಾಗಿವೆ ಮತ್ತು ಅವು ನಮ್ಮ ಕರುಳು ಅಥವಾ ಕರುಳಿನ ನಾಳದಲ್ಲಿ ವಾಸಿಸುತ್ತವೆ. ಅವು ರೋಗವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಮತ್ತು ನಮ್ಮ ದೇಹದಲ್ಲಿ ಪ್ರವರ್ಧಮಾನಕ್ಕೆ ಬರುವ ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

7. ನಿಂಬೆಹಣ್ಣು ಬಳಸಿ
ನಿಂಬೆ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮಾನ್ಸೂನ್ ಎಂದರೆ ನಾವು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ವಿಟಮಿನ್ ಸಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ ಮತ್ತು ಮೂಳೆಯ ಆರೋಗ್ಯವನ್ನು ನೋಡಿಕೊಳ್ಳುತ್ತದೆ.

ಬಯೋ ಆಕ್ಟಿವ್ ಸಂಯುಕ್ತಗಳು ಮತ್ತು ಫ್ಲೇವನಾಯ್ಡ್ ಗಳಿಂದ ತುಂಬಿರುವ ನಿಂಬೆ ತಿರುಳು ನಿಮ್ಮ ಮಾನ್ಸೂನ್ ಆಹಾರಕ್ಕೆ ಉತ್ತಮ ಸೇರ್ಪಡೆಯಾಗಿದೆ. ನಿಂಬೆ ರಸವನ್ನು ಸೇವಿಸುವುದು ಅಥವಾ ನಿಮ್ಮ ಆಹಾರ ಅಥವಾ ಸಲಾಡ್ ಗಳ ಮೇಲೆ ಸ್ವಲ್ಪ ಅದರ ರಸವನ್ನು ಹಿಂಡುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ.

8. ಒಣ ಹಣ್ಣುಗಳು ಮತ್ತು ಬೀಜಗಳನ್ನು ತಿನ್ನಿರಿ
ಪ್ರತಿ ಋತುವಿನಲ್ಲಿ ಖರ್ಜೂರ, ಬಾದಾಮಿ, ವಾಲ್ನಟ್ಸ್ ಮತ್ತು ಗೋಡಂಬಿಗಳನ್ನು ತಿನ್ನುವುದು ಒಳ್ಳೆಯದು. ಈ ಬೀಜಗಳು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ ಮತ್ತು ನಿಮ್ಮ ಮಾನ್ಸೂನ್ ಆಹಾರಕ್ಕೆ ಉತ್ತಮ ಸೇರ್ಪಡೆಗಳಾಗಿವೆ. ರಿಬೋಫ್ಲೇವಿನ್ ಮತ್ತು ನಿಯಾಸಿನ್ ನಿಂದ ಸಮೃದ್ಧವಾಗಿರುವ ಈ ಆಹಾರ ಪದಾರ್ಥಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಅವು ಶಕ್ತಿಯುತ ಉತ್ಕರ್ಷಣ ನಿರೋಧಕಗಳಾಗಿವೆ ಮತ್ತು ನಿಮ್ಮ ಜೀವಕೋಶಗಳನ್ನು ಆರೋಗ್ಯಕರವಾಗಿರಿಸುತ್ತವೆ.

ಮಾನ್ಸೂನ್ ಗಾಗಿ ಆರೋಗ್ಯಕರ ಜೀವನಶೈಲಿ ಸಲಹೆಗಳು:
ಆರೋಗ್ಯಕರ ಆಹಾರದ ಜೊತೆಗೆ, ಈ ಕೆಳಗಿನ ಕೆಲವು ಆರೋಗ್ಯಕರ ಜೀವನಶೈಲಿಯ ಸಲಹೆಗಳನ್ನು ನೀವು ಪಾಲಿಸುವುದು ಸೂಕ್ತ.

  • ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಿ.

  • ಊಟ ಮಾಡುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಹ್ಯಾಂಡ್ ವಾಶ್ ನಿಂದ ತೊಳೆಯಿರಿ.

  • ನೀವು ಹೊರಗೆ ಕಾಲಿಡುವಾಗ ಯಾವಾಗಲೂ ಹ್ಯಾಂಡ್ ಸ್ಯಾನಿಟೈಸರ್ ಅನ್ನು ತೆಗೆದುಕೊಂಡು ಹೋಗಿ.

  • ತರಕಾರಿಗಳು ಮತ್ತು ಹಣ್ಣುಗಳನ್ನು ಬೇಯಿಸುವ ಮೊದಲು ಅಥವಾ ಹಸಿಯಾಗಿ ಸೇವಿಸುವ ಮೊದಲು ಯಾವಾಗಲೂ ಶುದ್ಧವಾದ, ಶುದ್ಧೀಕರಿಸಿದ ನೀರಿನಿಂದ ತೊಳೆಯಿರಿ.


ಇದನ್ನೂ ಓದಿ:  Spirulina Benefits: ಕ್ಯಾನ್ಸರ್ ತಡೆಗಟ್ಟೋ ಸ್ಪಿರುಲಿನಾ ಬಗ್ಗೆ ಗೊತ್ತೇ? ಇದರಲ್ಲಿದೆ ಸೂಪರ್ ಪವರ್

ಈ ಆರೋಗ್ಯಕರ ಜೀವನಶೈಲಿಯ ಸಲಹೆಗಳನ್ನು ಅನುಸರಿಸುವುದರಿಂದ ನೀವು ಮಳೆಗಾಲದಲ್ಲಿ ಆರೋಗ್ಯಕರ ಮತ್ತು ಸುರಕ್ಷಿತವಾಗಿರಬಹುದು. ಫಾಸ್ಟ್ ಫುಡ್ ಮತ್ತು ಎಣ್ಣೆಯುಕ್ತ, ಜಿಡ್ಡಿನಂಶವಿರುವ ಆಹಾರಗಳನ್ನು ಸೇವಿಸುವ ಬದಲು, ಈ ಪೌಷ್ಠಿಕಾಂಶ, ಶಕ್ತಿ ನೀಡುವ ಆಹಾರಗಳನ್ನು ಸೇವಿಸಿರಿ.
Published by:Ashwini Prabhu
First published: