Netra Suraksha: ನೀವು ಡಯಾಬಿಟೀಸ್ ರೋಗಿಯೇ? ನಿಮ್ಮ ದೃಷ್ಟಿಗೆ ಗಮನ ಕೊಡಿ

ಡಯಾಬಿಟಿಕ್ ರೆಟಿನೋಪಥಿಯನ್ನು 100%ರಷ್ಟು ತಡೆಗಟ್ಟಬಹುದು. ಡಯಾಬಿಟಿಕ್ ರೆಟಿನೋಪಥಿಯನ್ನು ತಡೆಯುವ ಅತ್ಯುತ್ತಮ ವಿಧಾನ ಎಂದರೆ ಅದು ಲಕ್ಷಣಗಳನ್ನು ತೋರಿಸುವ ಮೊದಲೇ ಅದನ್ನು ಪತ್ತೆಹಚ್ಚುವುದು. ಇದೆಲ್ಲಕ್ಕೂ ಸಹ ನೀವು ನಿಮ್ಮ ಕಣ್ಣಿನ ವೈದ್ಯರಲ್ಲಿ ಒಂದು ಸುಲಭವಾದ, ನೋವುರಹಿತ ಹಾಗೂ ನಿರಂತರ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರೆ ಸಾಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಡಯಾಬಿಟೀಸ್‌ನ ಅಪಾಯ ಸತತವಾಗಿ ಏರುತ್ತಿದೆ. ಇಂಟರ್‌ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್ ಅಟ್ಲಾಸ್ 2019ರ ಪ್ರಕಾರ, 2000ದ ವರ್ಷದಲ್ಲಿ ಸುಮಾರು 151 ಮಿಲಿಯನ್ ಜನರು ಡಯಾಬಿಟೀಸ್ ಹೊಂದಿದ್ದರು1. 20-79 ವಯಸ್ಸಿನ ಜನರಲ್ಲಿನ ರೋಗನಿರ್ಣಯ ಮಾಡಲಾದ ಹಾಗೂ ಮಾಡದೇ ಇರುವ ಟೈಪ್ 1 ಹಾಗೂ ಟೈಪ್ 2 ಎರಡನ್ನೂ ಇದು ಒಳಗೊಂಡಿದೆ1. ಆಗಿನ ಸಮಯದಲ್ಲಿ ಇದು ಜಾಗತಿಕ ಜನಸಂಖ್ಯೆಯ 4.6%ರಷ್ಟು ಇತ್ತು1. 2019ರಲ್ಲಿ, ಒಟ್ಟಾರೆ ಸಂಖ್ಯೆಯು 463 ಮಿಲಿಯನ್‌ಗೆ ಏರಿಕೆಯಾಗಿದ್ದು, ಇದು ಜನಸಂಖ್ಯೆಯ 9.3% ಆಗಿದೆ1. ಈ ಸಂಖ್ಯೆಯು 2030ರಲ್ಲಿ 578 ಮಿಲಿಯನ್‌ಗೆ (ಜಾಗತಿಕ ಜನಸಂಖ್ಯೆಯ 10.2%) ತಲುಪಬಹುದು ಎಂದು ನಿರೀಕ್ಷಿಸಲಾಗಿದೆ1. ಅಂದರೆ 10 ಜನರಿಲ್ಲಿ ಒಬ್ಬರಿಗೆ ಎಂದಾಯಿತು.

  ಹೆಚ್ಚು ಚಿಂತಿಸಬೇಕಾದ ಸಂಗತಿ ಏನೆಂದರೆ ಡಯಾಬಿಟೀಸ್‌ನಿಂದ ಬಳಲುತ್ತಿರುವ ಸುಮಾರು ಅರ್ಧದಷ್ಟು ಜನರು ರೋಗನಿರ್ಣಯಕ್ಕೆ ಒಳಗಾಗಿಲ್ಲ1. ಏಕೆ ಹೀಗಾಗುತ್ತದೆ? ಬಹುಶಃ ಡಯಾಬಿಟೀಸ್‌ನ ಸಾಮಾನ್ಯ ಲಕ್ಷಣಗಳನ್ನು ಇತರ ಮೂಲಗಳಿಂದ ಬರುವ ರೋಗಲಕ್ಷಣಗಳಿಗೆ ಸುಲಭವಾಗಿ ಹೋಲಿಸಬಹುದು: ಸುಸ್ತು ಎಂಬ ಭಾವನೆ ಮತ್ತು ನಿಶ್ಯಕ್ತಿ, ಅತಿಯಾದ ಬಾಯಾರಿಕೆ, ಪದೇಪದೇ ಮೂತ್ರವಿಸರ್ಜನೆ, ಪದೇಪದೇ ಹಸಿವು – ಇವೆಲ್ಲವನ್ನೂ ಸುಲಭವಾಗಿ ನಿರ್ಲಕ್ಷಿಸಬಹುದು, ಏಕೆಂದರೆ ಇವು ಕ್ರಮೇಣ ಸಂಭವಿಸುವಂತಹವು1. ಕೆಲವರಿಗೆ, ಹಾಸಿಗೆ ಒದ್ದೆಯಾಗುವುದು, ದಿಢೀರ್ ತೂಕ ನಷ್ಟ ಆಗುವುದು ಮತ್ತು ಮಂದ ದೃಷ್ಟಿ1 ಉಂಟಾಗುವುದರ ಮೂಲಕವೂ ಸಹ ಡಯಾಬಿಟೀಸ್ ಬರಬಹುದು, ಇದೆಲ್ಲವೂ ಸಾಮಾನ್ಯವಾಗಿ ವೈದ್ಯರೊಬ್ಬರನ್ನು ಭೇಟಿ ಮಾಡುವಂತೆ (ಅದೃಷ್ಟವಶಾತ್) ಮತ್ತು ರೋಗನಿರ್ಣಯ ಮಾಡುವುದಕ್ಕೆ ಕಾರಣವಾಗುತ್ತದೆ.

  ಒಮ್ಮೆ ರೋಗನಿರ್ಣಯ ಮಾಡಿದರೆ, ಡಯಾಬಿಟೀಸ್ (ನಿರ್ದಿಷ್ಟವಾಗಿ ಟೈಪ್ 2 ಡಯಾಬಿಟೀಸ್) ಅನ್ನು – ನಿರಂತರ ವ್ಯಾಯಾಮ, ಆಹಾರದಲ್ಲಿನ ಮಾರ್ಪಾಡುಗಳು, ಮತ್ತು ಔಷಧಗಳನ್ನು ಬಳಸಿ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬಹುದು, ಡಯಾಬಿಟೀಸ್ ಇರುವ ಬಹುತೇಕ ಜನರು ಅವರ ದೈನಂದಿನ ಜೀವನ ತೀವ್ರವಾಗಿ ಪರಿಣಾಮ ಬೀರಿಲ್ಲ ಎಂದಿದ್ದಾರೆ. ವಾಸ್ತವವಾಗಿ, ಮೊದಲೇ ಪತ್ತೆಹಚ್ಚಿದರೆ, ಟೈಪ್ 2 ಡಯಾಬಿಟೀಸ್ ಅನ್ನು ಗುಣಪಡಿಸಬಹುದು ಎಂದು ಈಗ ಪರಿಗಣಿಸಲಾಗಿದೆ2.

  ಹಾಗಿದ್ದರೂ, ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ದೇಹದೊಳಗೆ ಹಲವು ಅಪಾಯಗಳನ್ನು ಡಯಾಬಿಟೀಸ್ ಉಂಟುಮಾಡಬಹುದು. 2019ರಲ್ಲಿ, 20-79 ವಯಸ್ಸಿನ 4.2 ಮಿಲಿಯನ್ ವಯಸ್ಕರು ಡಯಾಬಿಟೀಸ್ ಮತ್ತು ಅದರ ಸಮಸ್ಯೆಗಳಿಂದ ಮೃತಪಡಬಹುದು ಎಂದು ಅಂದಾಜಿಸಲಾಗಿದೆ1

  • ಡಯಾಬಿಟೀಸ್, ಹೈಪರ್‌ಟೆನ್ಷನ್, ಅಥವಾ ಇವೆರಡರ ಸಂಯೋಜನೆಯು, ಜಾಗತಿಕವಾಗಿ ಅಂತಿಮ-ಹಂತದ ಮೂತ್ರಪಿಂಡದ ರೋಗ ಉಂಟುಮಾಡುತ್ತದೆ1.

  • ಡಯಾಬಿಟೀಸ್ ಮತ್ತು ದೀರ್ಘಕಾಲದ ಮೂತ್ರಪಿಂಡದ ರೋಗವು ಹೃದಯರಕ್ತನಾಳದ ರೋಗಗಳೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ1.

  • ಡಯಾಬಿಟಿಕ್ ಪಾದ ಮತ್ತು ಕೆಳ ಅಂಗದ ಸಮಸ್ಯೆಗಳು, ಜಾಗತಿಕವಾಗಿ 40ರಿಂದ 60 ಮಿಲಿಯನ್ ಜನರನ್ನು ಬಾಧಿಸುತ್ತಿದ್ದು, ಡಯಾಬಿಟೀಸ್ ಇರುವ ಜನರ ರೋಗಗ್ರಸ್ತತೆಗೆ ಅತ್ಯಂತ ಪ್ರಮುಖ ಕಾರಣವಾಗಿದೆ1.  

  • ದೀರ್ಘಕಾಲದ ಅಲ್ಸರ್‌ಗಳು ಮತ್ತು ಅಂಗಚ್ಛೇದನಗಳು ಜೀವನ ಗುಣಮಟ್ಟವನ್ನು ಗಣನೀಯವಾಗಿ ಕುಗ್ಗಿಸುತ್ತವೆ ಹಾಗೂ ಶೀಘ್ರ ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ1.


  ಹೆಚ್ಚುವರಿಯಾಗಿ, ಡಯಾಬಿಟಿಕ್ ಐ ಎಂಬುದು ಹೆಚ್ಚು ಭಯಪಡಿಸುವ ಡಯಾಬಿಟೀಸ್‌ನ ಒಂದು ಸಮಸ್ಯೆಯಾಗಿದೆ, ಮತ್ತು ಅದು ಮುಖ್ಯವಾಗಿ ಡಯಾಬಿಟಿಕ್ ರೆಟಿನೋಪಥಿ, ಡಯಾಬಿಟಿಕ್ ಮ್ಯಾಕ್ಯುಲಾರ್ ಎಡಿಮಾ, ಕ್ಯಾಟರಾಕ್ಟ್ ಮತ್ತು ಗ್ಲಾಕೋಮದ ಜೊತೆಗೆ ಎರಡು ದೃಷ್ಟಿ (ಡಬಲ್ ವಿಷನ್) ಹಾಗೂ ದೃಷ್ಟಿ ಕೇಂದ್ರೀಕರಿಸಲು ಆಗದ ಅಸಮರ್ಥತೆಯಿಂದ ಆಗಿದೆ1. ಬಹುತೇಕ ದೇಶಗಳು, ವಿನಾಶಕಾರಿ ವೈಯಕ್ತಿಕ ಮತ್ತು ಸಮಾಜೋ ಆರ್ಥಿಕ ಪರಿಣಾಮಗಳನ್ನು ಹೊಂದಿರುವ, ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆಯ ಕುರುಡುತನಕ್ಕೆ ಇರುವ ಪ್ರಮುಖ ಕಾರಣ ಡಯಾಬಿಟಿಕ್ ರೆಟಿನೋಪಥಿ ಎಂದು ಒಪ್ಪಿಕೊಂಡಿವೆ1. ತಮಿಳುನಾಡಿನಲ್ಲಿ ನಡೆದ 2013ರ ಅಧ್ಯಯನದ ಪ್ರಕಾರ, 2025ರ ಹೊತ್ತಿಗೆ ಭಾರತದಲ್ಲಿನ ಡಯಾಬಿಟೀಸ್ ಇರುವವರಲ್ಲಿ 57 ಮಿಲಿಯನ್ ಜನರು ರೆಟಿನೋಪಥಿ ಹೊಂದುತ್ತಾರೆ ಎನ್ನಲಾಗಿದೆ3. ಇದೊಂದು ಭಯಹುಟ್ಟಿಸುವ ಸಂಖ್ಯೆಯಾಗಿದೆ.

  ಇದನ್ನು ಇನ್ನಷ್ಟು ಹದಗೆಡಿಸಿರುವ ಅಂಶ ಯಾವುದೆಂದರೆ, ಪ್ರಾಥಮಿಕ ಹಂತಗಳಲ್ಲಿ ಡಯಾಬಿಟಿಕ್ ರೆಟಿನೋಪಥಿಯು ಬಹುತೇಕ ಸಂಪೂರ್ಣವಾಗಿ ಲಕ್ಷಣರಹಿತವಾಗಿರುತ್ತದೆ ಎಂಬುದು. ಅಂದರೆ, ನೀವು ಲಕ್ಷಣಗಳನ್ನು ಗಮನಿಸುವ ಸಮಯಕ್ಕೆ ಆಗಲೇ ಒಂದಷ್ಟು ಕಣ್ಣಿನ ಹಾನಿ ಆಗಿರುತ್ತದೆ. ಹಾಗಿದ್ದರೂ, ಆರಂಭದಲ್ಲೇ ಡಯಾಬಿಟಿಕ್ ರೆಟಿನೋಪಥಿಯನ್ನು ರೋಗನಿರ್ಣಯ ಮಾಡಿದರೆ, ಅದನ್ನು ನಿರ್ವಹಿಸಬಹುದು ಹಾಗೂ ಇನ್ನಷ್ಟು ಹಾನಿಯಾಗುವುದನ್ನು ತಡೆಯಬಹುದು.

  ಏನೇ ಇರಲಿ, ಡಯಾಬಿಟಿಕ್ ರೆಟಿನೋಪಥಿಯು ದೃಷ್ಟಿಯನ್ನು ಹಾನಿಗೊಳಿಸುವುದೇ? ಹೆಚ್ಚಿನ ಬ್ಲಡ್ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸದೇ ಹಾಗೇ ಬಿಟ್ಟರೆ, ನಿಮ್ಮ ರೆಟಿನಾವನ್ನು ಆರೋಗ್ಯವಾಗಿ ಇರಿಸಿರುವ ಸಣ್ಣ ರಕ್ತನಾಳಗಳಲ್ಲಿ ಬ್ಲಾಕ್‌ಗಳು ರಚನೆಯಾಗುತ್ತವೆ. ರೆಟಿನಾ ಎಂಬುದು ನಿಮ್ಮ ಕಣ್ಣಿನ ಹಿಂಬದಿಯಲ್ಲಿರುವ ಒಂದು ಒಳಪದರವಾಗಿದ್ದು, ಅದು ಬೆಳಕನ್ನು ಚಿತ್ರಗಳನ್ನಾಗಿ ಪ್ರಕ್ರಿಯೆಗೊಳಿಸುತ್ತದೆ. ರಕ್ತನಾಳಗಳಲ್ಲಿ ಊತ ಕಂಡುಬರಬಹುದು, ದ್ರವ ಸೋರಬಹುದು ಅಥವಾ ರಕ್ತಸ್ರಾವ ಆಗಬಹುದು, ಇವೆಲ್ಲವೂ ದೃಷ್ಟಿ ಬದಲಾವಣೆಗಳು ಅಥವಾ ಕುರುಡುತನವನ್ನು ಮಾಡುತ್ತವೆ2

  ರೆಟಿನಾ ಸೊಸೈಟಿ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಡಾ. ಮನೀಶ್ ಅಗರ್‌ವಾಲ್ ಅವರ ಪ್ರಕಾರ, ಪ್ರಾಥಮಿಕ ಹಂತಹ ಲಕ್ಷಣಗಳಲ್ಲಿ ಒಂದಾಗಿರುವುದು ಯಾವುದು ಎಂದರೆ ಓದುವುದಕ್ಕೆ ಸತತವಾಗಿ ತೊಂದರೆ ಆಗುವುದು, ಕನ್ನಡಕವನ್ನು ಬದಲಾಯಿಸಿದರೂ ಸಹ ಆ ತೊಂದರೆ ಹೋಗದೇ ಇರುವುದು. ಇದೊಂದು ಪ್ರಾಥಮಿಕ ಲಕ್ಷಣವಾಗಿದ್ದು, ಅದನ್ನು ಹಗುರವಾಗಿ ಪರಿಗಣಿಸಬಾರದು. ಒಂದು ವೇಳೆ ನಿರ್ಲಕ್ಷಿಸಿದರೆ, ಈ ಲಕ್ಷಣಗಳು ನೀವು ಎಲ್ಲಿ ದೃಷ್ಟಿ ಹರಿಸುವಿರೋ ಅಲ್ಲೆಲ್ಲಾ ಕಪ್ಪು ಅಥವಾ ಕೆಂಪು ಕಲೆಗಳಿರುವ ಮೋಡಗಳನ್ನು ಹೆಚ್ಚಿಸಬಹುದು ಅಥವಾ ಕಣ್ಣಿನ ರಕ್ತಸ್ರಾವದಿಂದಾಗಿ ದಿಢೀರ್ ಕಪ್ಪುಚುಕ್ಕೆಗಳು ಉಂಟಾಗಬಹುದು.

  ಸಂತಸದ ಸಂಗತಿ ಎಂದರೆ ಡಯಾಬಿಟಿಕ್ ರೆಟಿನೋಪಥಿಯನ್ನು 100%ರಷ್ಟು ತಡೆಗಟ್ಟಬಹುದು4. ಡಯಾಬಿಟಿಕ್ ರೆಟಿನೋಪಥಿಯನ್ನು ತಡೆಯುವ ಅತ್ಯುತ್ತಮ ವಿಧಾನ ಎಂದರೆ ಅದು ಲಕ್ಷಣಗಳನ್ನು ತೋರಿಸುವ ಮೊದಲೇ ಅದನ್ನು ಪತ್ತೆಹಚ್ಚುವುದು. ಇದೆಲ್ಲಕ್ಕೂ ಸಹ ನೀವು ನಿಮ್ಮ ಕಣ್ಣಿನ ವೈದ್ಯರಲ್ಲಿ ಒಂದು ಸುಲಭವಾದ, ನೋವುರಹಿತ ಹಾಗೂ ನಿರಂತರ ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರೆ ಸಾಕು (ಕನ್ನಡಕದ ಅಂಗಡಿಯಲ್ಲಿ ಅಲ್ಲ!) 4. ಹಲವಾರು ಜನರಿಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ.

  ಈ ಅರಿವಿನ ಕೊರತೆಯನ್ನು ನೀಗಿಸಲು Network18, Novartis ಸಹಯೋಗದೊಂದಿಗೆ 'Netra Suraksha' - India Against Diabetes ಉಪಕ್ರಮವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಅವಧಿಯಲ್ಲಿ, ಡಯಾಬಿಟಿಕ್ ರೆಟಿನೋಪಥಿಯ ಪತ್ತೆಹಚ್ಚುವಿಕೆ, ತಡೆಯುವಿಕೆ ಹಾಗೂ ಚಿಕಿತ್ಸೆಯನ್ನು ಕೇಂದ್ರೀಕರಿಸಿದ ದುಂಡುಮೇಜಿನ ಚರ್ಚೆಗಳ ಸರಣಿಯನ್ನು Network18 ಪ್ರಸಾರ ಮಾಡಲಿದೆ. ಈ ಸಂವಾದಗಳು, ವಿವರಣಾತ್ಮಕ ವೀಡಿಯೊಗಳು ಹಾಗೂ ಲೇಖನಗಳ ಮೂಲಕ, ಡಯಾಬಿಟಿಕ್ ರೆಟಿನೋಪಥಿಗೆ ಒಳಗಾಗಬಹುದಾದ ಜನರು ತಾವಾಗಿಯೇ ತಮಗೆ ಬೇಕಾದ ಪರೀಕ್ಷೆಗಳು ಹಾಗೂ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಉತ್ತೇಜಿಸುವ ಭರವಸೆಯನ್ನು Network18 ಹೊಂದಿದೆ. 

  ನೀವು ಹೇಗೆ ಪ್ರಾರಂಭಿಸಬಹುದು ಎಂಬುದು ಇಲ್ಲಿದೆ. ಸ್ವತಃ ಆನ್‌ಲೈನ್ Diabetic Retinopathy ಸ್ವಯಂ ತಪಾಸಣೆ ಮಾಡಿಕೊಳ್ಳುವ ಮೂಲಕ ಆರಂಭಿಸಿ. ನಂತರ, ಸ್ನೇಹಿತರು ಹಾಗೂ ಕುಟುಂಬಕ್ಕೂ ಸಹ ಇದನ್ನು ಮಾಡಿಕೊಳ್ಳಲು ಒತ್ತಾಯಿಸಿ. ಸ್ವತಃ ನೀವು ಹಾಗೂ ನಿಮ್ಮ ಪ್ರೀತಿಪಾತ್ರರು ಡಯಾಬಿಟೀಸ್ ಪರೀಕ್ಷೆಗೆ ಒಳಗಾಗಿ ಹಾಗೂ ನಿಮ್ಮ ಕೌಟುಂಬಿಕ ಕ್ಯಾಲೆಂಡರ್‌ನಲ್ಲಿ ವಾರ್ಷಿಕ ಕಣ್ಣಿನ ಪರೀಕ್ಷೆಯನ್ನು ಗುರುತು ಮಾಡಿಟ್ಟುಕೊಳ್ಳಿ. ವರ್ಷದ ದಿನಾಂಕ ಮತ್ತು ಸಮಯದೊಂದಿಗೆ ಇದನ್ನು ಹೊಂದಿಸಿಕೊಳ್ಳಿ, ಇದರಿಂದ ಅದು ಒಂದು ಅಭ್ಯಾಸವಾಗುತ್ತದೆ ಹಾಗೂ ನೀವು ಎಂದಿಗೂ ಅದನ್ನು ಮರೆಯಲಾರಿರಿ.

  ನಿಮ್ಮ ದೃಷ್ಟಿಯು ಅತ್ಯಂತ ಮೌಲ್ಯಯುತವಾದ ಆಸ್ತಿಯಾಗಿದೆ. ನಿಮ್ಮ ಕುಟುಂಬದಲ್ಲಿ ಅದಕ್ಕೆ ಅಗತ್ಯವಿರುವ ಗಮನ ಕಾಳಜಿ ವಹಿಸಿದವರಲ್ಲಿ ನೀವೇ ಮೊದಲಿಗರಾಗಿ. ಎಲ್ಲವನ್ನೂ ಮೀರಿ, ಅತ್ಯುತ್ತಮ ಭವಿಷ್ಯದಲ್ಲಿ ಹೂಡಿಕೆ ಮಾಡುವುದು ಮತ್ತು ನಿಮ್ಮ ಕುಟುಂಬದ ಕಾಳಜಿ ವಹಿಸುವುದಕ್ಕೆ ಪ್ರತಿ ಹಂತದಲ್ಲೂ ನೀವು ಜೊತೆಗೆ ಇರುವುದು ಅತ್ಯಂತ ಮುಖ್ಯವಾಗಿದೆ. ಹಾಗಾಗಿ, ಮುನ್ನಡೆಯಿರಿ. ಸಕ್ರಿಯವಾಗಿ. ನಿಮ್ಮ ಬಗ್ಗೆ ಕಾಳಜಿ ವಹಿಸಿ ಹಾಗೂ ಇತರರು ನಿಮ್ಮನ್ನು ಅನುಸರಿಸುವಂತಹ ಉದಾಹರಣೆಯನ್ನು ರೂಪಿಸಿ. ಆನಂತರ, ಇದನ್ನು ಎಲ್ಲರಿಗೂ ಹಂಚಿರಿ.  

  Netra Suraksha ಉಪಕ್ರಮದ ಕುರಿತು ಇನ್ನಷ್ಟು ಅಪ್‌ಡೇಟ್‌ಗಳಿಗಾಗಿ News18.com ಅನ್ನು ಅನುಸರಿಸಿ, ಮತ್ತು ಡಯಾಬಿಟಿಕ್ ರೆಟಿನೋಪಥಿಯ ವಿರುದ್ಧದ ಭಾರತದ ಹೋರಾಟದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

  1. IDF Atlas, International Diabetes Federation, 9th edition, 2019 10 Dec, 2021

  2. https://www.nei.nih.gov/learn-about-eye-health/eye-conditions-and-diseases/diabetic-retinopathy 10 Dec, 2021

  3. Balasubramaniyan N, Ganesh KS, Ramesh BK, Subitha L. Awareness and practices on eye effects among people with diabetes in rural Tamil Nadu, India. Afri Health Sci. 2016;16(1): 210-217.

  4. https://youtu.be/nmMBudzi4zc 29 Dec, 2021

  Published by:Soumya KN
  First published: