Mother’s Care: ರಜೆಯೇ ಇಲ್ಲದೇ ದುಡಿಯುವ ನಿಮ್ಮ ಅಮ್ಮನ ಆರೋಗ್ಯದ ಕಾಳಜಿ ಮಾಡೋದು ಹೇಗೆ? ಒಳ್ಳೆ ಮಕ್ಕಳಿಗೆ ಇಲ್ಲಿದೆ ಟಿಪ್ಸ್

ಒಂಬತ್ತು ತಿಂಗಳು (Nine Months) ಹೊತ್ತು, ಹೆತ್ತು ಸಾಕುವ ತಾಯಿ, ಮಗುವಿಗಾಗಿ ತನ್ನ ಜೀವನವನ್ನೇ (Life) ಮುಡಿಪಾಗಿಡುತ್ತಾಳೆ. ಮಗುವಿನ ಜನನದ ಮೊದಲಿನಿಂದಲೇ ಕೇರ್ ತೆಗೆದುಕೊಳ್ಳುವ ತಾಯಿ, ಮಗುವಿನ ಆರೋಗ್ಯಕ್ಕೆ ಯಾವುದು ಉಚಿತ ಎಂಬುದನ್ನು ಅರಿತೇ ಎಲ್ಲಾ ಕೆಲಸ ಮಾಡುತ್ತಾಳೆ. ಆದರೆ ಅವಳ ಆರೋಗ್ಯದ ಬಗ್ಗೆ ಕಾಳಜಿವಹಿಸುವವರು ಯಾರು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರತಿಯೊಬ್ಬ ತಾಯಿ (Mother) ಗರ್ಭಧಾರಣೆಯಿಂದಲೇ (Pregnancy) ಮಗುವಿನ ಆಗಮನ ಮತ್ತು ಮಗುವಿನ ಕೇರಿಂಗ್ (Caring) ಶುರು ಮಾಡುತ್ತಾಳೆ. ಮಗು ತಾಯಿಯ ಜೀವವೇ ಆಗಿ ಹೋಗುತ್ತದೆ. ಒಂಬತ್ತು ತಿಂಗಳು (Nine Months) ಹೊತ್ತು, ಹೆತ್ತು ಸಾಕುವ ತಾಯಿ, ಮಗುವಿಗಾಗಿ ತನ್ನ ಜೀವನವನ್ನೇ (Life) ಮುಡಿಪಾಗಿಡುತ್ತಾಳೆ. ಮಗುವಿನ ಜನನದ ಮೊದಲಿನಿಂದಲೇ ಕೇರ್ ತೆಗೆದುಕೊಳ್ಳುವ ತಾಯಿ. ಮಗುವಿನ ಆರೋಗ್ಯಕ್ಕೆ ಯಾವುದು ಉಚಿತ ಎಂಬುದನ್ನು ಅರಿತೇ ಎಲ್ಲಾ ಕೆಲಸ ಮಾಡುತ್ತಾಳೆ. ತನ್ನ ಮಗುವನ್ನು ನೋಡಿಕೊಳ್ಳಲು ಶುರು ಮಾಡುತ್ತಾಳೆ. ಮಗು ಹೊಟ್ಟೆಯಲ್ಲಿದ್ದಾಗ, ಪ್ರತಿ ತಾಯಿಯು ಕೆಲ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸುತ್ತಾರೆ. ಇದು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

  ತಾಯಂದಿರ ಆರೋಗ್ಯ ಕಾಳಜಿ

  ಹಾಗಾಗಿ ತಾಯಿ ತನ್ನ ಇಚ್ಛೆಯ ಪದಾರ್ಥಗಳ ಹೊರತು ಮಗುವಿನ ಆರೋಗ್ಯದ ವಿಚಾರ ಗಮನದಲ್ಲಿಟ್ಟುಕೊಂಡು ಆಹಾರ ಸೇವನೆ ಮಾಡುತ್ತಾಳೆ. ಮಗುವಿನ ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರವನ್ನೇ ತಿನ್ನಬೇಕು. ಇದರಿಂದ ಮಗುವಿನ ಆರೋಗ್ಯವು ಚೆನ್ನಾಗಿ ಆಗುತ್ತದೆ.

  ಮಗು ಬೆಳೆಯುವವರೆಗೆ ಪ್ರತಿ ತಾಯಿಯು ತನ್ನ ಮಕ್ಕಳ ಆಹಾರ ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾಳೆ. ಇದರಿಂದಾಗಿ ತಾಯಿ ತನ್ನ ಆರೋಗ್ಯದ ಬಗ್ಗೆ ಸೂಕ್ತ ಗಮನ ಹರಿಸಲು ಸಾಧ್ಯ ಆಗುವುದಿಲ್ಲ. ಆರೋಗ್ಯದ ಬಗ್ಗೆ ಸರಿಯಾದ ಗಮನ ನೀಡದೇ ಇರುವುದು ಕೆಲವು ರೋಗಗಳ ಅಪಾಯವನ್ನು ಹೆಚ್ಚು ಮಾಡುತ್ತದೆ.

  ಇದನ್ನೂ ಓದಿ: ಗರ್ಭಾಶಯ ಡಿಡೆಲ್ಫಿಸ್ ಎಂದರೇನು? ಈ ಕಾಯಿಲೆ ಇದ್ದರೆ ಗರ್ಭಧಾರಣೆ ಕಷ್ಟಕರ ಏಕೆ?

  ಆದ್ದರಿಂದ ತಾಯಂದಿರು ತಮ್ಮ ಆರೋಗ್ಯದ ಬಗ್ಗೆ ಸೂಕ್ತ ಗಮನ ಹರಿಸುವುದು ಮುಖ್ಯ. ತಮ್ಮ ತಾಯಿಯ ಆರೋಗ್ಯ ಸರಿಯಾಗಿ ನೋಡಿಕೊಳ್ಳುವುದು ಆರೈಕೆ ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ ಆಗಿದೆ. ಇಲ್ಲಿ ನಾವು ತಾಯಂದಿರ ಆರೋಗ್ಯಕ್ಕೆ ಅನುಕೂಲಕರವಾದ ಬಗ್ಗೆ ನಾವು ನಿಮಗೆ ಕೆಲವು ಸುಲಭವಾದ ಮಾರ್ಗಗಳನ್ನು ಹೇಳುತ್ತಿದ್ದೇವೆ.

  ವೈದ್ಯಕೀಯ ಪರೀಕ್ಷೆ ಮಾಡಿಸುತ್ತಾ ಇರಿ

  ಮನೆಕೆಲಸ, ಜವಾಬ್ದಾರಿ, ಒತ್ತಡಗಳ ಮಧ್ಯೆ ಕಳೆದು ಹೋಗುವ ತಾಯಂದಿರ ಆರೋಗ್ಯ ಬೇಗ ಹದಗೆಡುತ್ತದೆ. ಇದು ತಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಾಲಾನಂತರದಲ್ಲಿ ಅನೇಕ ಕಾಯಿಲೆಗಳು ಕಾಡುತ್ತವೆ. ಹಾಗಾಗಿ

  ಕಾಲ ಕಾಲಕ್ಕೆ ನಿಮ್ಮ ತಾಯಿಯ ಕೆಲವು ವೈದ್ಯಕೀಯ ಪರೀಕ್ಷೆ ಮಾಡಿಸಿ. ಮತ್ತು ವೈದ್ಯರನ್ನು ಭೇಟಿ ಮಾಡಿ ಆಹಾರ ಮತ್ತು ಪಾನೀಯಗಳ ಬಗ್ಗೆ ಸೂಕ್ತ ಕಾಳಜಿ ವಹಿಸಿ. ಮಮೊಗ್ರಾಮ್, ಥೈರಾಯ್ಡ್, ಪ್ಯಾಪ್ ಸ್ಮೀಯರ್, ಮಧುಮೇಹ, ರಕ್ತದೊತ್ತಡ ಮುಂತಾದ ವೈದ್ಯಕೀಯ ಪರೀಕ್ಷೆ ಮಾಡಿಸಿ.

  ತಾಯಿಯ ಆಹಾರದ ಬಗ್ಗೆ ಕಾಳಜಿ ವಹಿಸಿ

  ಮುಂಜಾನೆಯಿಂದ ರಾತ್ರಿ ಮಲಗುವವರೆಗೂ ಅಮ್ಮ ದಿನವಿಡೀ ಮನೆಕೆಲಸ ಮಾಡುತ್ತಾ ತನ್ನ ಜವಾಬ್ದಾರಿ ಪೂರೈಸುತ್ತ ನಿರತಳಾಗುತ್ತಾಳೆ. ಆಗ ಅವರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲೇ ಅರ್ಧ ದಿನ ಕಳೆದು ಬಿಡುತ್ತಾರೆ. ಹಾಗಾಗಿ ಇದು ಮಾಡುವುದು ತೀರಾ ತಪ್ಪು.

  ಆದ್ದರಿಂದ ನಿಮ್ಮ ತಾಯಿ ಪ್ರತಿದಿನ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಿ. ಅವರ ಆಹಾರದಲ್ಲಿ ಫೈಬರ್, ಪ್ರೋಟೀನ್ ಆಹಾರ, ಹಣ್ಣು, ಹಸಿರು ತರಕಾರಿ ಸೇರಿಸಲು ಹೇಳಿ.

  ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಿ

  ಮನೆಯ ಜವಾಬ್ದಾರಿಗಳಿಂದಾಗಿ, ಪ್ರತಿ ತಾಯಿಯು ಸಾಕಷ್ಟು ಒತ್ತಡ ಎದುರಿಸಬೇಕಾಗುತ್ತದೆ. ಹಾಗಾಗಿ ಅವರ ಮಾನಸಿಕ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಿ. ಅವರ ಉದ್ವೇಗ ಕಡಿಮೆ ಮಾಡಲು ಪ್ರಯತ್ನಿಸಿ, ಅವರಿಗೆ ನೋವುಂಟು ಮಾಡುವ ಯಾವುದೇ ಕೆಲಸ ಮಾಡಬೇಡಿ. ಒತ್ತಡ ಕಡಿಮೆ ಮಾಡಲು ಯೋಗ ಮತ್ತು ಪ್ರಾಣಾಯಾಮ ಮಾಡಲು ಹೇಳಿ.

  ತಾಯಿಯ ದೈಹಿಕ ಚಟುವಟಿಕೆ ಬಗ್ಗೆ ಗಮನ ಹರಿಸಿ

  ದಿನವಿಡೀ ಮನೆಯ ಕೆಲಸ ಮಾಡುವುದರಿಂದ ತಾಯಿಯ ದೈಹಿಕ ಚಟುವಟಿಕೆ ದೈಹಿಕ ಒತ್ತಡ ನೀಡುತ್ತದೆ. ಅವರು ಈ ಕೆಲಸಗಳಿಂದ ಸುಸ್ತಾಗಬಹುದು. ಆದ್ದರಿಂದ, ತಾಯಿಯ ದಿನಚರಿಯಲ್ಲಿ ಕೆಲವು ಮನರಂಜನೆ ನೀಡುವ, ದೈಹಿಕ ಆರಾಮ ನೀಡುವ ಚಟುವಟಿಕೆಗಳನ್ನು ಸೇರಿಸಲು ಪ್ರಯತ್ನಿಸಿ. ಇದರಿಂದ ಅವರ ಮೂಡ್ ಸರಿಯಾಗುತ್ತದೆ. ತೋಟಗಾರಿಕೆ, ಉದ್ಯಾನದಲ್ಲಿ ಸುತ್ತಾಡಲು ಹೋಗಬಹುದು.

  ಇದನ್ನೂ ಓದಿ: ಬಾಲಿವುಡ್ ನಟಿ ಮಹಿಮಾ ಮಕ್ವಾನಾ ಗ್ಲಾಮರಸ್ ಲುಕ್ ಮತ್ತು ಅಂದದ ತ್ವಚೆಯ ರಹಸ್ಯ ಇಲ್ಲಿದೆ

  ತಾಯಿಗೂ ವಿಶ್ರಾಂತಿ ಬೇಕು ಎಂಬುದನ್ನು ತಿಳಿಯಿರಿ

  ದೇಹಕ್ಕೆ ವಯಸ್ಸಾದಂತೆ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಬೇಕು. ಬೆಳಗ್ಗೆ ಬೇಗ ಏಳುವುದು, ರಾತ್ರಿ ತಡವಾಗಿ ಮಲಗುವುದರಿಂದ ತಾಯಿಯ ನಿದ್ದೆ ಸರಿಯಾಗಿ ಆಗುವುದಿಲ್ಲ. ಕನಿಷ್ಠ 8-9 ಗಂಟೆಗಳ ನಿದ್ದೆ ತೆಗೆದುಕೊಳ್ಳುವಂತೆ ನೋಡಿಕೊಳ್ಳಿ.
  Published by:renukadariyannavar
  First published: