Healthy Tips: ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ವಾಕಿಂಗ್ ಹೋಗಿ, ಆರೋಗ್ಯದ ಲಾಭ ಪಡೆಯಿರಿ

ಧಾವಂತದ ಬದುಕಿನಲ್ಲಿ ಬದುಕುವುದನ್ನೇ ಮರೆತು ಓಡಬೇಡಿ. ಖಾಸಗಿ ಉದ್ಯೋಗ, ಪೈಪೋಟಿ ಮತ್ತು ಉದ್ಯೋಗಗಳನ್ನು ಕಳೆದುಕೊಳ್ಳುವ ಅಪಾಯ ಹೀಗೆ ಹಲವು ಕಾರಣಗಳು ಜನರ ರಜೆಯನ್ನು ತಿಂದು ಹಾಕಿ ಬಿಡುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಾವೆಷ್ಟೋ ಓಡಾಡಿಕೊಂಡು (Walking) ನಗುತ್ತಾ (Happy) ಇರುತ್ತೇವೆಯೋ ಅಷ್ಟು ಆರೋಗ್ಯದಿಂದ (Health) ಇರುತ್ತೇವೆ. ಆದರೆ ಇತ್ತೀಚಿನ ಬದುಕಿನ ಧಾವಂತ, ಕೆಲಸಕ್ಕೆ (Work) ಹೋಗುವ ಅವಸರ, ಕೋವಿಡ್ ಸಾಂಕ್ರಾಮಿಕ, ಮೊಬೈಲ್ (Mobile), ಟಿವಿ ಅತಿಯಾದ ಬಳಕೆ ನಮ್ಮನ್ನು ಚಟುವಟಿಕೆಗಳಿಂದ (Activities) ದೂರವಿರಿಸಿದೆ. ಆದರೆ ಕೆಲವರು ಪ್ರಯಾಣ ಹೋಗಲು, ಟೂರ್, ಟ್ರಿಪ್ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಧಾವಂತದ ಬದುಕಿನಲ್ಲಿ ಬದುಕುವುದನ್ನೇ ಮರೆತು ಓಡಬೇಡಿ. ಖಾಸಗಿ ಉದ್ಯೋಗ,  ಪೈಪೋಟಿ ಮತ್ತು ಉದ್ಯೋಗಗಳನ್ನು ಕಳೆದುಕೊಳ್ಳುವ ಅಪಾಯ ಹೀಗೆ ಹಲವು ಕಾರಣಗಳು ಜನರ ರಜೆಯನ್ನು ತಿಂದು ಹಾಕಿ ಬಿಡುತ್ತವೆ. ಹೀಗಾದಾಗ ಇಡೀ ವರ್ಷ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ.

    ನಿರಂತರ ಕೆಲಸ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ

    ಇದರಿಂದ ನಾವು ನಮಗಾಗಿ ಮತ್ತು ಕುಟುಂಬಕ್ಕಾಗಿ ಅಥವಾ ನಮ್ಮ ಮಕ್ಕಳಿಗಾಗಿ ಸಮಯ ಕೊಡಲು ಸಾಧ್ಯವಾಗದ ಸ್ಥಿತಿ ತಂದೊಡ್ಡುತ್ತದೆ. ಆದರೆ ನಿರಂತರವಾಗಿ ಕೆಲಸ ಮಾಡುವುದು ಮತ್ತು ನಿಮಗಾಗಿ ಸಮಯ ನೀಡದಿರುವುದು ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಸಮಯ ಸಿಕ್ಕಾಗೆಲ್ಲಾ, ಓಡಿಕೊಂಡು ಇರುವುದು ತುಂಬಾ ಮುಖ್ಯ.

    ವಾಕಿಂಗ್ ಹೋಗುವುದು ಬೆಸ್ಟ್

    ನೀವು ಕೆಲಸ ಮತ್ತು ಮನೆ ಹೀಗೆ ಇವೆರಡರ ಮಧ್ಯೆ ಕಳೆದು ಹೋದರೆ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾನಿಯಾಗುತ್ತದೆ. ಇದು ನಿಮ್ಮ ಕೆಲಸ ಮಾಡುವ ಸಾಮರ್ಥ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

    ಮತ್ತೊಂದೆಡೆ ನೀವು ಕೆಲಸದಿಂದ ಕೆಲವು ದಿನಗಳ ರಜೆ ಹಾಕಿ ವಾಕಿಂಗ್ ಹೋಗುವುದು, ದಿನದ ಮಟ್ಟಿಗೆ ಸ್ಥಳೀಯ ಅಥವಾ ಒಂದು ದಿನದ ಪ್ರಯಾಣ ಮಾಡಬಹುದು. ಆಗ ನಿಮ್ಮ ಮನಸ್ಸು, ದೇಹ, ಹೃದಯ ಮತ್ತು ಮನಸ್ಸು ಸಂತೋಷವಾಗಿ ಇರುತ್ತದೆ.

    ಇದನ್ನೂ ಓದಿ: ಕೂದಲು ಉದುರಿ ನೆತ್ತಿ ಕಾಣುತ್ತಿದೆಯೇ ಹಾಗಿದ್ದರೆ ಇಂದಿನಿಂದಲೇ ಈ ಸಲಹೆ ಪಾಲಿಸಿ

    ನೀವು ಓಡಾಡಿಕೊಂಡು ಇದ್ದರೆ ತಾಜಾತನ ಅನುಭವಿಸುತ್ತೀರಿ. ಮತ್ತು ನಿಮ್ಮ ಮನಸ್ಸು ಉಲ್ಲಾಸಮಯವಾಗಿ ಇರುತ್ತದೆ. ಇದರಿಂದ ನೀವು ಚೆನ್ನಾಗಿ ಕೆಲಸ ಮಾಡಲು ಸಾಧ್ಯ ಆಗುತ್ತದೆ. ಇಂದು ನಾವು ಪ್ರಯಾಣ ಮಾಡುವುದರಿಂದ ಆರೋಗ್ಯಕ್ಕೆ ಯಾವ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿಯೋಣ. ವಾಕಿಂಗ್ ಹೋಗುವ ಲಾಭಗಳ ಬಗ್ಗೆ ತಿಳಿಯಿರಿ.

    ಪ್ರಯಾಣ ಅಥವಾ ವಾಕಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳು ಏನು?

    ಹೃದಯದ ಆರೋಗ್ಯ

    ನೀವು ಎಲ್ಲೋ ರಜೆಗೆ ಮನೆಯಿಂದ ಪ್ರಕೃತಿಯಲ್ಲಿ ಕಾಲಿಟ್ಟು ಕಾಲ ಕಳೆಯುವುದು ನಿಮ್ಮನ್ನು ಸಂತೋಷಗೊಳಿಸುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ಬಹಳಷ್ಟು ಸಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ವಿಶ್ರಾಂತಿ ಪಡೆಯುತ್ತೀರಿ ಮತ್ತು ಹೃದಯವು ಆರೋಗ್ಯವಾಗಿರುತ್ತದೆ.

    ಪ್ರಯಾಣವು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಕೆಲವು ದಿನಗಳ ಕಾಲ ಕೆಲಸದಿಂದ ವಿರಾಮ ತೆಗೆದುಕೊಳ್ಳಿ. ಇದು ಪರಿಧಮನಿಯ ಹೃದಯ ಕಾಯಿಲೆಯಿಂದ ಸಾಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ.

    ಉದ್ವೇಗ ಕಾಡುವುದಿಲ್ಲ

    ಆಗಾಗ್ಗೆ ಕೆಲವು ಕೆಲಸಗಳು ಅಥವಾ ವಿಷಯಗಳು ಕಚೇರಿಯಲ್ಲಿ ನಡೆದಾಗ ಉದ್ವೇಗ ಹೆಚ್ಚಾಗುತ್ತದೆ. ವಿರಾಮವಿಲ್ಲದೆ ನಿರಂತರವಾಗಿ ಕೆಲಸ ಮಾಡುವುದು ಒತ್ತಡ ಹೆಚ್ಚಿಸುತ್ತದೆ. ನಿಮ್ಮ ಒತ್ತಡವು ಅನೇಕ ರೀತಿಯ ಕಾಯಿಲೆಗೆ ಕಾರಣವಾಗುತ್ತದೆ. ಹಾಗಾಗಿ ಕಾಲಕಾಲಕ್ಕೆ ಬಿಡುವು ಮಾಡಿಕೊಂಡು ಸುತ್ತಾಡಲು ಹೋಗಿ.

    ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ

    ನೀವು ವಿರಾಮವಿಲ್ಲದೆ ನಿರಂತರವಾಗಿ ಕೆಲಸ ಮಾಡಿದರೆ, ನಿಮ್ಮ ಮೆದುಳು ಕೂಡ ಹಾನಿಗೊಳಗಾಗಲು ಪ್ರಾರಂಭಿಸುತ್ತದೆ. 9 ಗಂಟೆಗಳ ನಿರಂತರ ಕೆಲಸದಲ್ಲಿಯೂ ಸಹ, ನೀವು 1-2 ವಿರಾಮಗಳನ್ನು ತೆಗೆದುಕೊಳ್ಳುವ ಮೂಲಕ ನಿಮ್ಮನ್ನು ರಿಫ್ರೆಶ್ ಮಾಡಬೇಕು.

    ಇದಲ್ಲದೆ, ವರ್ಷಕ್ಕೆ 1-2 ಬಾರಿ ಎಲ್ಲೋ ಹೊರಗೆ ಹೋಗಲು ಯೋಜಿಸಿ. ನಿಮ್ಮ ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಇದು ಅವಶ್ಯಕವಾಗಿದೆ.

    ನಿದ್ರೆಯ ಸಮಸ್ಯೆ ದೂರವಾಗುತ್ತದೆ

    ದಿನವಿಡೀ ಕೆಲಸದಲ್ಲಿ ತೊಡಗಿಸಿಕೊಂಡರೆ ರಾತ್ರಿ ಚೆನ್ನಾಗಿ ನಿದ್ದೆ ಬರುವುದಿಲ್ಲ. ಇದಕ್ಕೆ ಕಾರಣ ಹೆಚ್ಚು ಆಯಾಸ ಮತ್ತು ಒತ್ತಡ. ದಿನವಿಡೀ ಕೆಲಸ ಮಾಡುವುದು ರಾತ್ರಿಯ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಸಾಂದರ್ಭಿಕವಾಗಿ ಓಡಾಡುವ ಜನರು ಒತ್ತಡ ಕಡಿಮೆ ಮಾಡುತ್ತಾರೆ. ಇದು ನಿದ್ರೆಯನ್ನು ಸುಧಾರಿಸುತ್ತದೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ಕಾಳಜಿಗಾಗಿ ಅಡುಗೆ ಮನೆಯಲ್ಲೇ ಇವೆ ಅಗತ್ಯ ವಸ್ತುಗಳು

    ಉತ್ತಮ ಮನಸ್ಥಿತಿ ಕಾಪಾಡಲು ಸಾಧ್ಯ

    ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಮೊದಲು ನಿಮ್ಮ ಮನಸ್ಥಿತಿ ಬದಲಾಗುತ್ತದೆ. ಇದು ನಿಮ್ಮೊಳಗೆ ಸಂತೋಷದ ಹಾರ್ಮೋನ್‌ಗಳನ್ನು ಸೃಷ್ಟಿ ಮಾಡುತ್ತದೆ. ನೀವು ತೆರೆದ ಗಾಳಿ, ತಾಜಾತನ ಮತ್ತು ಪ್ರಕೃತಿಯ ಮಧ್ಯೆ ಇದ್ದಾಗ ನೀವು ಶಾಂತ ಮತ್ತು ಸಂತೋಷದ ಭಾವವನ್ನು ಅನುಭವಿಸುತ್ತೀರಿ.
    Published by:renukadariyannavar
    First published: