• Home
  • »
  • News
  • »
  • lifestyle
  • »
  • Children Health: ನಿಮ್ಮ ಮಗು ಈ ರೀತಿ ಲಕ್ಷಣ ತೋರಿಸ್ತಾ ಇದೆಯಾ? ಹಾಗಿದ್ರೆ ಕಂದನ ಹೊಟ್ಟೆಯಲ್ಲಿ ಹುಳು ಇರಬಹುದು ಹುಷಾರ್!

Children Health: ನಿಮ್ಮ ಮಗು ಈ ರೀತಿ ಲಕ್ಷಣ ತೋರಿಸ್ತಾ ಇದೆಯಾ? ಹಾಗಿದ್ರೆ ಕಂದನ ಹೊಟ್ಟೆಯಲ್ಲಿ ಹುಳು ಇರಬಹುದು ಹುಷಾರ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿಕ್ಕ ಮಕ್ಕಳು ಅಥವಾ ಶಿಶುಗಳಲ್ಲಿ ಜಂತು ಹುಳುಗಳ ಸಮಸ್ಯೆ ಕಂಡು ಹಿಡಿಯುವುದು ಕಷ್ಟಕರ. ಹೊಟ್ಟೆಯಲ್ಲಿ ಜಂತು ಹುಳು ಇರುವಾಗ ಮಗು ಅಸಮಾಧಾನಗೊಳ್ಳುವುದು, ಕಿರಿಕಿರಿ ಅನುಭವಿಸುವುದು ಇತ್ಯಾದಿ ಲಕ್ಷಣ ತೋರಿಸುತ್ತದೆ.

  • Share this:

    ಚಿಕ್ಕ ಮಕ್ಕಳು (Small Children’s) ಹೊಟ್ಟೆ ಅಸ್ವಸ್ಥತೆಗೆ (Stomach Unhealthy) ಬೇಗ ಗುರಿಯಾಗುತ್ತಾರೆ. ಜಂತು ಹುಳುಗಳ ಸೋಂಕಿಗೆ (Virus) ಮಕ್ಕಳು ಬೇಗ ತುತ್ತಾಗುತ್ತಾರೆ. ಇದನ್ನು ಪಿನ್ವರ್ಮ್ಸ್ ಅಥವಾ ಥ್ರೆಡ್ವರ್ಮ್ ಎಂದು ಕರೆಯುತ್ತಾರೆ. ಹೊಟ್ಟೆಯಲ್ಲಿ ಥ್ರೆಡ್ ತರಹದ ಕೀಟಗಳು ಬಾಧಿಸುತ್ತವೆ. ಸೋಂಕು ತಗುಲಿದಾಗ ಬೆಳೆಯುತ್ತಲೇ ಇರುತ್ತವೆ. ಹೀಗಾಗಿ ಇವುಗಳನ್ನು ಥ್ರೆಡ್ವರ್ಮ್ ಎನ್ನುತ್ತಾರೆ. ಇದರ ಸೋಂಕನ್ನು ಹಿರಿಯ ಮಕ್ಕಳಲ್ಲಿ ಆರಂಭಿಕ ಹಂತದಲ್ಲಿ ಪತ್ತೆ ಮಾಡಲಾಗುತ್ತದೆ. ಆದರೆ ಚಿಕ್ಕ ಮಕ್ಕಳು ಅಥವಾ ಶಿಶುಗಳಲ್ಲಿ ಜಂತು ಹುಳುಗಳ ಸಮಸ್ಯೆ ಕಂಡು ಹಿಡಿಯುವುದು ಕಷ್ಟಕರ. ಹೊಟ್ಟೆಯಲ್ಲಿ ಜಂತು ಹುಳು ಇರುವಾಗ ಮಗು ಅಸಮಾಧಾನಗೊಳ್ಳುವುದು, ಕಿರಿಕಿರಿ ಅನುಭವಿಸುವುದು ಜೊತೆಗೆ ಅದರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.


    ಮಕ್ಕಳಲ್ಲಿ ಹುಳುಗಳ ಸಮಸ್ಯೆ ಹೇಗೆ ಸಂಭವಿಸುತ್ತದೆ?


    ಕರುಳಿನ ಹುಳುಗಳ ಸಮಸ್ಯೆ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ನಾವು ಇಲ್ಲಿ ತಿಳಿಯೋಣ.ಅಂದ ಹಾಗೇ ಚಿಕ್ಕ ಮಕ್ಕಳು ತಮ್ಮ ಕೈಗಳನ್ನು ಆಗಾಗ್ಗೆ ಬಾಯಿಗೆ ಹಾಕುವ ಅಭ್ಯಾಸ ಹೊಂದಿರುತ್ತಾರೆ. ಅದರ ಮೂಲಕ ಹುಳುಗಳು ಉಗುರುಗಳು ಅಥವಾ ಕೈಗಳ ಮೂಲಕ ಹೊಟ್ಟೆ ಸೇರುತ್ತವೆ.


    ಜೊತೆಗೆ ಮಕ್ಕಳು ತಮ್ಮ ಬಾಯಿಯಲ್ಲಿ ಕೊಳಕು ಆಟಿಕೆ ಹಾಕಿಕೊಳ್ತಾರೆ. ಮತ್ತು ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಹೊಟ್ಟೆಯಲ್ಲಿ ಜಂತು ಹುಳುಗಳ ಸಮಸ್ಯೆ ಉಂಟಾಗುತ್ತದೆ. ಮಣ್ಣು ತಿನ್ನುವ ಅಭ್ಯಾಸ ಹೊಂದಿರುವ ಚಿಕ್ಕ ಮಕ್ಕಳೂ ಹೊಟ್ಟೆ ಹುಳುಗಳ ಸಮಸ್ಯೆ ಎದುರಿಸುತ್ತಾರೆ.




    ತಜ್ಞರ ಪ್ರಕಾರ, ವಯಸ್ಕರು ಮತ್ತು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಇತರರಿಂದ ಸೋಂಕು ಹರಡುವುದು ಇದಕ್ಕೆ ಮುಖ್ಯ ಕಾರಣ ಅಂತಾರೆ. ಕೆಲವೊಮ್ಮೆ ಕಲುಷಿತ ನೀರು ಅಥವಾ ಆಹಾರ ಹೊಟ್ಟೆಯ ಜಂತು ಹುಳು ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಮಗುವಿನ ಆಹಾರ ಮತ್ತು ನೈರ್ಮಲ್ಯ ಎರಡರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯ ಎನ್ನುತ್ತಾರೆ.


    ಮಗುವಿನ ಹೊಟ್ಟೆಯಲ್ಲಿ ಹುಳುಗಳು ಇವೆ ಎಂದು ಪತ್ತೆ ಹಚ್ಚುವುದು ಹೇಗೆ?


    ಹೊಟ್ಟೆಯ ಜಂತು ಹುಳುಗಳಿಂದಾಗಿ ಮಕ್ಕಳಲ್ಲಿ ಕೆಲವು ರೋಗ ಲಕ್ಷಣಗಳು ಕಂಡು ಬರುತ್ತವೆ.


    ಹೊಟ್ಟೆ ನೋವು


    ದೊಡ್ಡ ಮಕ್ಕಳಿಗಿಂತ ಚಿಕ್ಕ ಮಕ್ಕಳು ಹೊಟ್ಟೆಯ ಜಂತು ಹುಳುಗಳಿಗೆ ಬೇಗ ತುತ್ತಾಗ್ತಾರೆ. ಮಕ್ಕಳು ಹೊಟ್ಟೆಯಲ್ಲಿ ನಿರಂತರ ನೋವು ಹೊಂದಿರುವ ಲಕ್ಷಣ ಹುಳು ಸಮಸ್ಯೆಗೆ ಕಾರಣವಾಗಿರಬಹುದು.


    ತೂಕ ಇಳಿಕೆ


    ಹೊಟ್ಟೆಯಲ್ಲಿ ಜಂತು ಹುಳುಗಳಿದ್ದಾಗ ಮಗುವಿನ ತೂಕ ವೇಗವಾಗಿ ಇಳಿಯುತ್ತದೆ. ಮಗುವಿಗೆ ಆರೋಗ್ಯಕರ ಬೆಳವಣಿಗೆ ಕಷ್ಟವಾಗುತ್ತದೆ.


    ಕೆಮ್ಮು ಅಥವಾ ಹಸಿವಿನ ನಷ್ಟ, ವಾಂತಿ


    ಹೊಟ್ಟೆಯಲ್ಲಿ ಜಂತು ಹುಳುಗಳಿದ್ದರೆ ಕೆಮ್ಮು ಬರುತ್ತದೆ. ಮಗುವಿಗೆ ಹಸಿವಿನಲ್ಲಿ ಹಸಿವು ಇರುವುದಿಲ್ಲ. ಸಮಸ್ಯೆ ಹೆಚ್ಚಾದರೆ ಮಕ್ಕಳಿಗೂ ವಾಂತಿ ಸಮಸ್ಯೆ ಉಂಟಾಗುತ್ತದೆ.


    ಕಿಬ್ಬೊಟ್ಟೆಯ ಬಿಗಿತ


    ಹೊಟ್ಟೆಯಲ್ಲಿ ಜಂತು ಹುಳುಗಳಿದ್ದರೆ ಮಕ್ಕಳ ಹೊಟ್ಟೆಯಲ್ಲಿ ತೀವ್ರವಾದ ನೋವಿನ ಜೊತೆಗೆ ಹೊಟ್ಟೆ ಕೂಡ ಗಟ್ಟಿಯಾಗುತ್ತದೆ. ಮಗುವಿಗೆ ಉಬ್ಬುವಿಕೆ ಸಮಸ್ಯೆ ಬರುತ್ತದೆ.


    ಹೊಟ್ಟೆಯಲ್ಲಿ ಜಂತು ಹುಳುವಿನಿಂದ ಮಗು ಖಿನ್ನತೆಗೆ ಒಳಗಾದಾಗ, ದೌರ್ಬಲ್ಯ, ದಣಿವು ಆದಾಗ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ. ಇದು ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.


    ಇದನ್ನೂ ಓದಿ: ಬೆಳಗಿನ ತಿಂಡಿಗೆ ಮೊಳಕೆ ಕಾಳು ಸಲಾಡ್ ರೆಸಿಪಿ ತಯಾರಿಸಿ


    ವಿಶ್ವ ಆರೋಗ್ಯ ಸಂಸ್ಥೆ ಕಾಲಕಾಲಕ್ಕೆ ಜಂತುಹುಳು ನಿವಾರಣಾ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಹುಳುಮುಕ್ತವಾಗಲು ಔಷಧಿ ನೀಡಲಾಗುತ್ತದೆ. ಈ ಸಮಸ್ಯೆಯು ತುಂಬಾ ಸಾಮಾನ್ಯ. ಇಂತಹ ಸಮಸ್ಯೆಗಳಿಂದ ಮಕ್ಕಳನ್ನು ಕಾಪಾಡಲು ಪ್ರತಿ ವರ್ಷ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಆಚರಿಸಲಾಗುತ್ತದೆ.

    Published by:renukadariyannavar
    First published: