ಸೊಳ್ಳೆಯಿಂದ ಹರಡುವ ಭಯಾನಕ ಡೆಂಘೀ ಜ್ವರದ ಲಕ್ಷಣಗಳೇನು?

ಹವಾಮಾನ ಬದಲಾವಣೆ ಹಾಗೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳಿಂದ ಡೆಂಗ್ಯೂ ಜ್ವರ ಬರುತ್ತದೆ. ಹೀಗಾಗಿ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ.

Latha CG | news18
Updated:August 15, 2019, 1:54 PM IST
ಸೊಳ್ಳೆಯಿಂದ ಹರಡುವ ಭಯಾನಕ ಡೆಂಘೀ ಜ್ವರದ ಲಕ್ಷಣಗಳೇನು?
ಹವಾಮಾನ ಬದಲಾವಣೆ ಹಾಗೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳಿಂದ ಡೆಂಗ್ಯೂ ಜ್ವರ ಬರುತ್ತದೆ. ಹೀಗಾಗಿ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ.
Latha CG | news18
Updated: August 15, 2019, 1:54 PM IST
ಸೊಳ್ಳೆಯಿಂದ ಹರಡುವ ಡೆಂಘೀ ಜ್ವರ ಭಯಾನಕ ರೋಗವಾಗಿದೆ. ಹವಾಮಾನ ಬದಲಾವಣೆ ಹಾಗೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳಿಂದ ಡೆಂಗ್ಯೂ ಜ್ವರ ಬರುತ್ತದೆ. ಹೀಗಾಗಿ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಡೆಂಘೀ ಜ್ವರ ಬರದ ರೀತಿ ಮುಂಜಾಗ್ರತೆ ವಹಿಸುವುದು ಅಷ್ಟೆ ಮುಖ್ಯವಾಗುತ್ತದೆ. ಡೆಂಘೀ ಜ್ವರ ಬಂದರೆ ದೇಹದಲ್ಲಿ ಏನಾಗುತ್ತದೆ? ಅದರ ಪ್ರಮುಖ ಲಕ್ಷಣಗಳೇನು ಎಂಬುದು ತಿಳಿಯಲೇಬೇಕಾದ ಪ್ರಮುಖ ವಿಷಯವಾಗಿದೆ.

ಡೆಂಘೀ ಜ್ವರದ ಲಕ್ಷಣಗಳು


  • ಡೆಂಘೀ ಜ್ವರದ ಪ್ರಮುಖ ಲಕ್ಷಣ ಬಿಳಿ ರಕ್ತ ಕಣಗಳು ಕಡಿಮೆಯಾಗುವಿಕೆ. ಇದು ಡೆಂಘೀನ ಮೊದಲ ಲಕ್ಷಣವಾಗಿದೆ. ಸಾಮಾನ್ಯವಾಗಿ ಬಿಳಿರಕ್ತಕಣಗಳು  1,50,000ರಿಂದ 4,50,000 ಇರಬೇಕು.  ಇದರಲ್ಲಿ ಕುಸಿತವಾದರೆ ಡೆಂಘೀ ಹೆಚ್ಚಾಗುತ್ತದೆ. ದೇಹ ನಿಶ್ಯಕ್ತವಾಗುತ್ತದೆ.

  • ವೈರಸ್​ ದೇಹ ಪ್ರವೇಶಿಸುತ್ತಿದ್ದಂತೆ ಬಿಳಿರಕ್ತಕಣಗಳು ಕಡಿಮೆಯಾಗುವುದರ ಜೊತೆಗೆ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಪರೀತ ತಲೆನೋವು ಶುರುವಾಗುತ್ತದೆ.

  • ದೇಹದಲ್ಲಿ ವಿಪರೀತ ಭಾದೆ ಕಾಣಿಸಿಕೊಳ್ಳುತ್ತದೆ. ದೇಹದ ಎಲ್ಲಾ ಕೀಲುಗಳು ಹಾಗೂ ಸ್ನಾಯುಗಳಲ್ಲಿ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ.

  • ಡೆಂಘೀ ಕಾಣಿಸಿಕೊಂಡರೆ ದೇಹದ ತಾಪಮಾನ ಹೆಚ್ಚಾಗುತ್ತದೆ. ಜೊತೆಗೆ ಮೈ-ಕೈ ನೋವು ಭಾದಿಸುತ್ತದೆ.

  • Loading...

  • ಸುಸ್ತು, ಊಟ ಸೇರದಿರುವುದು, ತಲೆಭಾದೆ, ನಿಶ್ಯಕ್ತಿ, ನಡೆಯಲು ಸಾಧ್ಯವಾಗದಿರುವ ಸ್ಥಿತಿ ಉಂಟಾಗುತ್ತದೆ

  • ವಾಂತಿ, ಭೇದಿ ಕೂಡ ಆಗುತ್ತದೆ. ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ

  • ಡೆಂಘೀ ಬಂದರೆ ಬಾಯಿ ಒಣಗುತ್ತದೆ, ಮೂಗಿನಲ್ಲಿ ರಕ್ತಸ್ರಾವವಾಗುತ್ತದೆ. ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಅಗತ್ಯವಾಗುತ್ತದೆ.


ಡೆಂಘಿಗೆ ಕಾರಣವಾಗಬಹುದಾದ ಸೊಳ್ಳೆಯನ್ನು ತಡೆಗಟ್ಟಲು ಇಲ್ಲಿದೆ ಸುಲಭ ಉಪಾಯ
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...