ಪ್ರವಾಸಿ ಪ್ರಿಯರಿಗೆ ಮಲೆನಾಡು (Malenadu) ಸೌಂದರ್ಯವನ್ನು (Beauty) ಸವಿಯುವುದು ಎಂದರೆ ಅದೇನೋ ಇಷ್ಟ. ಅದರಲ್ಲೂ ರೈಲಿನಲ್ಲಿ ಪ್ರಯಾಣ (Train Travel) ಮಾಡುವಾಗ ಸುತ್ತಲಿನ ಹಸಿರ ಸಿರಿ ಹೆಚ್ಚು ಆನಂದವನ್ನು ನೀಡುತ್ತದೆ. ಈ ಆನಂದವನ್ನು ಹೆಚ್ಚು ಮಾಡಲು ನೈಋತ್ಯ ರೈಲ್ವೆ ಮೊದಲ ಬಾರಿಗೆ ಬೆಂಗಳೂರು-ಶಿವಮೊಗ್ಗ (Banglore - Shivmogga) ನಡುವಿನ ರೈಲಿಗೆ ಪ್ರಾಯೋಗಿಕವಾಗಿ ವಿಸ್ಟಾಡಾಮ್ ಕೋಚ್ (Vistadome Coach) ಅಳವಡಿಕೆ ಮಾಡಲಿದೆ. ಗಾಜಿನ ಛಾವಣಿಯನ್ನು ಹೊಂದಿರುವ ವಿಸ್ಟಾಡಾಮ್ ಕೋಚ್ ಮೂಲಕ ಪ್ರಯಾಣಿಕರು ನಿಸರ್ಗದ ಸೌಂದರ್ಯ ಅನುಭವಿಸಬಹುದಾಗಿದೆ.
ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 16579/ 16580 ಯಶವಂತಪುರ- ಶಿವಮೊಗ್ಗ ಟೌನ್ - ಯಶವಂತಪುರ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿಗೆ ವಿಸ್ಟಾಡಾಮ್ ಕೋಚ್ ಆಳವಡಿಸಲಾಗುತ್ತದೆ. ಪ್ರತಿದಿನ ಸಂಚಾರ ನಡೆಸುವ ಈ ರೈಲಿಗೆ ಒಂದು ಹವಾನಿಯಂತ್ರಿತ ವಿಸ್ಟಾಡಾಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತಿದೆ.
ಇದು ಪ್ರಕೃತಿ ಪ್ರಿಯರಿಗೆ ಹೆಚ್ಚು ಸಂತೋಷವನ್ನು ನೀಡುತ್ತದೆ. ಈ ರೈಲು ಮಾರ್ಗ ಹೆಚ್ಚು ದೂರವಿರುವುದರಿಂದ ಪ್ರಯಾಣಿಕರು ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಪ್ರಯಾಣ ಮಾಡಲಿ ಎನ್ನುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ. 25/12/2021 ರಿಂದ 31/3/2022 ರವರೆಗೆ ರೈಲು ಸಂಖ್ಯೆ 16580 ಶಿವಮೊಗ್ಗ ಟೌನ್ - ಯಶವಂತಪುರ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಒಂದು ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ನಾವಿಲ್ಲಿ ಚಳಿಯಿಂದ ನಡುಗುತ್ತಿದ್ರೆ ಈ ಪ್ರದೇಶಗಳಲ್ಲಿ ಚಳಿಯೇ ಇಲ್ವಂತೆ
ಇನ್ನು ಶಿವಮೊಗ್ಗ-ಯಶವಂತಪುರ ರೈಲಿಗೆ ಒಂದು ವಿಸ್ಟಾಡಾಮ್ ಬೋಗಿ ಅಳವಿಡಿಕೆ ಮಾಡಲಾಗುತ್ತಿರುವುದರಿಂದ ಇದು ಹವಾನಿಯಂತ್ರಿತ ಬೋಗಿಯಾಗಿರುತ್ತದೆ, ಬೋಗಿಯಲ್ಲಿ 44 ಆಸನ ಸಾಮರ್ಥ್ಯವಿರುತ್ತದೆ. ಈ ಬೋಗಿಯಲ್ಲಿ ಗಾಜಿನ ಮೇಲ್ಛಾವಣಿ ಇದ್ದು, ದೊಡ್ಡ ದೊಡ್ಡ ಗಾಜಿನ ಕಿಟಕಿ ಇರುತ್ತದೆ. ಸೀಟುಗಳು 180 ಡಿಗ್ರಿ ತಿರುಗಲಿವೆ. ಸಾಮಾನ್ಯ ಬೋಗಿಗಿಂತ ವಿಸ್ಟಾಡಾಮ್ ಕೋಚ್ನ ಸೀಟಿನ ಬೆಲೆ ಹೆಚ್ಚಾಗಿರುತ್ತದೆ.
ಈ ಮೊದಲು ಅಂದರೆ ಜುಲೈ 11 ರಿಂದ ಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ಪ್ರಯಾಣವನ್ನು ಆರಂಭಿಸಲಾಗಿತ್ತು, ಯಶವಂತಪುರ-ಮಂಗಳೂರು ವಿಶೇಷ ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗಿದೆ. ಬೆಂಗಳೂರು ನಗರ ಮತ್ತು ಕರಾವಳಿಯನ್ನು ಸಂಪರ್ಕಿಸುವ ಈ ರೈಲು ಪಶ್ಚಿಮ ಘಟ್ಟದ ಮೂಲಕ ಸಾಗುತ್ತದೆ. ಕರಾವಳಿ ಭಾಗದಲ್ಲಿ ಸಂಚಾರ ನಡೆಸುವ 3 ರೈಲುಗಳಿಗೆ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿ ತೆಗೆದು ತಲಾ 2 ವಿಸ್ಟಾಡಾಮ್ ಕೋಚ್ ಬೋಗಿ ಅಳವಡಿಸಲಾಗಿದೆ.
ಬೆಂಗಳೂರು-ಮಂಗಳೂರು ರೈಲು ಸಾಗುವ ಮಾರ್ಗದಲ್ಲಿ ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವೆ ಸಾಗುವುದರಿಂದ ಅಲ್ಲಿನ ಅದ್ಭುತ ಸೌಂದರ್ಯವನ್ನು ಸವಿಯುವ ಅವಕಾಶ ಸಿಗುತ್ತದೆ.
ವಿಸ್ಟಾಡಾಮ್ ಕೋಚ್ ದರ ಪಟ್ಟಿ
ಯಶವಂತಪುರ-ಮಂಗಳೂರು ಜಂಕ್ಷನ್ - 1395 ರೂ.
ಹಾಸನ-ಮಂಗಳೂರು ಜಂಕ್ಷನ್ - 960 ರೂ.
ಹಾಸನ-ಸುಬ್ರಮಣ್ಯ ರಸ್ತೆ - 725 ರೂ.
ಸಕಲೇಶಪುರ - ಸುಬ್ರಮಣ್ಯ ರಸ್ತೆ - 625 ರೂ.
ಇದನ್ನೂ ಓದಿ: ಹೊಸ ವರ್ಷದ ಪಾರ್ಟಿಗೆ ಬೆಂಗಳೂರು ಸುತ್ತಮುತ್ತ ಈ ರೆಸಾರ್ಟ್ ಹೋಗ್ಬಹುದು ನೋಡಿ
ಯಶವಂತಪುರ - ಸುಬ್ರಮಣ್ಯ ರಸ್ತೆ - 1175 ರೂ.
ಯಶವಂತಪುರ- ಶಿವಮೊಗ್ಗ – ದರ ನಿಗದಿಯಾಗಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ