• Home
  • »
  • News
  • »
  • lifestyle
  • »
  • Yogurt: ಸಿಹಿಯಾದ ಯೋಗರ್ಟ್ ತಯಾರಾಗೋದು ಹೇಗೆ? ವಿಜ್ಞಾನಿಗಳು ಏನು ಹೇಳಿದ್ದಾರೆ ಕೇಳಿ

Yogurt: ಸಿಹಿಯಾದ ಯೋಗರ್ಟ್ ತಯಾರಾಗೋದು ಹೇಗೆ? ವಿಜ್ಞಾನಿಗಳು ಏನು ಹೇಳಿದ್ದಾರೆ ಕೇಳಿ

ಯೋಗರ್ಟ್

ಯೋಗರ್ಟ್

ಡಯೆಟ್‌ ಮಾಡುವವರಿಗಂತೂ ಮೊಸರು ಬೆಸ್ಟ್ ಆಹಾರ.  ಸಿಹಿ ಸಿಹಿಯಾದ ಮೊಸರು ಯಾರಿಗಿಷ್ಟ ಇಲ್ಲ‌ ಹೇಳಿ. ಆದ್ರೆ ಹಾಗೆ ಮೊಸರು ಸಿಹಿಯಾಗಿರೋಕೆ ಒಂದು ಬ್ಯಾಕ್ಟೀರಿಯಾ ಕಾರಣ ಅನ್ನೋದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

  • Share this:

ಮೊಸರು (Curd) ಅನ್ನೋದು ಒಂದು ಸಂಪೂರ್ಣ ಆಹಾರ (Food). ಅಲ್ಲದೇ ಇದು ಹೆಚ್ಚಿನ ಪ್ರೋಟೀನ್‌ ಅಂಶ ಒಳಗೊಂಡ ಡೈರಿ ಉತ್ಪನ್ನ. ಬಹಳಷ್ಟು ಜನರು ದಿನದಲ್ಲಿ ಒಮ್ಮೆಯಾದರೂ ಮೊಸರನ್ನು ಸೇವಿಸಿಯೇ ಇರುತ್ತಾರೆ. ಇನ್ನು ಡಯೆಟ್‌ ಮಾಡುವವರಿಗಂತೂ ಮೊಸರು ಬೆಸ್ಟ್ ಆಹಾರ.  ಸಿಹಿ ಸಿಹಿಯಾದ (Sweet) ಮೊಸರು ಯಾರಿಗಿಷ್ಟ ಇಲ್ಲ‌ ಹೇಳಿ. ಆದ್ರೆ ಹಾಗೆ ಮೊಸರು ಸಿಹಿಯಾಗಿರೋಕೆ ಒಂದು ಬ್ಯಾಕ್ಟೀರಿಯಾ (Bacteria) ಕಾರಣ ಅನ್ನೋದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧಕರು ಹೊಸ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾಗಳು (Lactic Acid Bacteria) ಮೊಸರು ನೈಸರ್ಗಿಕ ಸಿಹಿಯನ್ನು ಸೃಷ್ಟಿಸುತ್ತವೆ ಎಂದಿದ್ದಾರೆ.


ಹೌದು.. ಡೆನ್ಮಾರ್ಕ್‌ ನ ಟೆಕ್ನಿಕಲ್‌ ಯುನಿವರ್ಸಿಟಿಯ ಸಂಶೋಧಕರು ಯೋಗರ್ಟ್‌ ಬ್ಯಾಕ್ಟೀರಿಯ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚು ಪರಿಣಾಮಕಾರಿ ಲ್ಯಾಕ್ಟೋಸ್‌ ಅನ್ನು ವಿಭಜನೆ ಮಾಡುತ್ತೆ. ಕಡಿಮೆ ಸಕ್ಕರೆಯೊಂದಿಗೆ ಮೊಸರು ನೈಸರ್ಗಿಕವಾಗಿಯೇ ಹೆಚ್ಚು ಸಿಹಿಯಾಗಿರೋಕೆ ಇದರಿಂದ ಸಾಧ್ಯವಾಗುತ್ತೆ ಎನ್ನುತ್ತಾರೆ ಸಂಶೋಧಕರು.


ಲ್ಯಾಕ್ಟಿಕ್‌ ಆಸಿಡ್‌ ನಿಂದ ಸಿಹಿಯಾಗುತ್ತೆ ಮೊಸರು!
ಹಾಗೆ ನೋಡಿದರೆ ಸಕ್ಕರೆ ಸೇರಿಸದ ಮೊಸರು ಸ್ವಲ್ಪ ಹುಳಿಯೇ ಆಗಿರುತ್ತದೆ. ಸಾಮಾನ್ಯವಾಗಿ ರುಚಿಯನ್ನು ಸುಧಾರಿಸಲು ಸಕ್ಕರೆ , ಹಣ್ಣುಗಳನ್ನು ಅಥವಾ ಸಿಹಿಕಾರಕಗಳನ್ನು ಸೇರಿಸಲಾಗುತ್ತದೆ. ಆದ್ರೆ ನೈಸರ್ಗಿಕವಾಗಿಯೇ ಸಿಹಿಯಾದ ಮೊಸರಿನ ಬೇಡಿಕೆ ಪೂರೈಸಲು DTU ನ್ಯಾಷನಲ್ ಫುಡ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಹಾಲಿನ ಸಕ್ಕರೆಯನ್ನು ಸೀಳಲು ಹೊಸದಾದ ನೈಸರ್ಗಿಕ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಸುರಕ್ಷಿತ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವನ್ನು ಅವಲಂಭಿಸಿದೆ. ಅಭಿವೃದ್ಧಿ ಪಡಿಸಿದ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾಗಳು ಮೊಸರಿನಲ್ಲಿ ನೈಸರ್ಗಿಕ ಮಾಧುರ್ಯವನ್ನು ಉಂಟುಮಾಡುತ್ತವೆ. ಹೀಗಾಗಿ ಸಿಹಿ ಮೊಸರಿನಲ್ಲಿ ಸೇರಿಸಲಾಗುವ ಸಕ್ಕರೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: Diabetes Food: ಡಯಾಬಿಟೀಸ್​ ಸಮಸ್ಯೆ ಇದ್ರೆ ಸಕ್ಕರೆ ಹಾಕದ ಈ ಆಹಾರಗಳನ್ನು ತಿನ್ನಿ


ಇನ್ನು ಲ್ಯಾಕ್ಟೇಸ್ ಹೊಂದಿರುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಹಾಲಿನ ಸಕ್ಕರೆಯನ್ನು ಒಡೆಯುತ್ತದೆ. ಮೊಸರು ಮಾಡಲು ಬಳಸಲಾಗುವ ಹಾಲು ನೈಸರ್ಗಿಕವಾಗಿ ಪ್ರತಿ ಲೀಟರ್‌ಗೆ ಸುಮಾರು 50 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ. ಆದರೆ ಲ್ಯಾಕ್ಟೋಸ್ ಅನ್ನು ಕಿಣ್ವಗಳೊಂದಿಗೆ ವಿಭಜಿಸುವ ಮೂಲಕ, ಹೆಚ್ಚು ಸಿಹಿ ಸಕ್ಕರೆ ಬಿಡುಗಡೆ ಆಗುತ್ತದೆ. ಹಾಲಿನಲ್ಲಿರುವ ಶೇ.70 ರಷ್ಟು ಲ್ಯಾಕ್ಟೋಸ್ ಅನ್ನು ವಿಭಜಿಸುವ ಮೂಲಕ ಅದರ ಸಿಹಿಯನ್ನು ಹೆಚ್ಚಿಸಬಹುದು.


ಸದ್ಯ ಹಾಲಿನ ಉತ್ಪನ್ನಗಳಲ್ಲಿ ಲ್ಯಾಕ್ಟೋಸ್ ಅನ್ನು ವಿಭಜಿಸಲು ಹಳೆಯ ವಿಧಾನವನ್ನೇ ಬಳಸಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೂಕ್ಷ್ಮ ಜೀವಿಗಳನ್ನು ಬಳಸಿ ಲ್ಯಾಕ್ಟೇಸ್ ಕಿಣ್ವಗಳನ್ನು ತಯಾರಿಸಲಾಗುತ್ತದೆ. ಇದು ಅತ್ಯಂತ ದುಬಾರಿ ಶುದ್ಧೀಕರಣ ಪ್ರಕ್ರಿಯೆಯಾಗಿದೆ. ಅಲ್ಲದೇ ತಯಾರಕರಿಂದ ಡೈರಿಗೆ ಸಾಗಿಸುವ ಸಾಗಣೆ ವೆಚ್ಚವೂ ಹೆಚ್ಚು.


ಇದಕ್ಕೆ ಪರಿಹಾರ ಕಂಡುಹಿಡಿದ DTU ಸಂಶೋಧಕರು 
ಇದಕ್ಕೆಂದೇ DTU ಸಂಶೋಧಕರು ಅಧ್ಯಯನ ಮಾಡಿ ಬೆಸ್ಟ್‌ ಪರಿಹಾರ ಕಂಡುಹಿಡಿದಿದ್ದಾರೆ. ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ-ಆಧಾರಿತ ಲ್ಯಾಕ್ಟೇಸ್ ಅನ್ನು ನೇರವಾಗಿ ಡೈರಿಯಲ್ಲಿ ಮತ್ತು ಮೊಸರು ಮಾಡುವಾಗ ಬಳಸಬಹುದು. ಈ ರೀತಿಯಾಗಿ ಲ್ಯಾಕ್ಟೇಸ್ ಮತ್ತು ಸಾಗಣೆ ವೆಚ್ಚ ಹಾಗೂ ಖರೀದಿಯ ವೆಚ್ಚವನ್ನು ಕಡಿಮೆಗೊಳಿಸಬಹುದು. ಅಂದಹಾಗೆ ಅತ್ಯಂತ ದೊಡ್ಡದಾದ ಡ್ಯಾನಿಶ್ ಡೈರಿಯಲ್ಲಿ ಈ ಪ್ರಯೋಗ ಮಾಡಲಾಗಿದೆ.


ದೊಡ್ಡ ಪ್ರಮಾಣದಲ್ಲಿ ಮೊಸರಿನಂಥ ಡೈರಿ ಉತ್ಪನ್ನಗಳನ್ನು ತಯಾರಿಸುವವರು ಪಾಲಿಗೆ ಇದೊಂದು ಅತ್ಯುತ್ತಮ ಸಂಶೋಧನೆ. ಇತ್ತೀಚಿಗಂತೂ ಸಕ್ಕರೆಯ ಅಡ್ಡ ಪರಿಣಾಮಗಳಿಂದ ಎಚ್ಚೆತ್ತಿರುವ ಜನತೆ ಸಕ್ಕರೆಯಿಂದ ದೂರ ಸರಿಯುತ್ತಿದ್ದಾರೆ.


ಇದನ್ನೂ ಓದಿ:  Household Air Pollution: ಮನೆಯ ವಾಯು ಮಾಲಿನ್ಯ ಮಕ್ಕಳ ಐಕ್ಯೂ ಮೇಲೆ ಪರಿಣಾಮ ಬೀರುತ್ತಂತೆ! ಇದನ್ನೂ ತಪ್ಪಿಸೋದು ಹೇಗೆ ನೋಡಿ


ನೈಸರ್ಗಿಕ ಸಿಹಿಗೆ ಬೇಡಿಕೆ ಇಡುತ್ತಿದ್ದಾರೆ. ಸಿಹಿ ತಿಂಡಿಗಳನ್ನಂತೂ ಬೇಡವೇ ಬೇಡ ಎನ್ನುತ್ತಿದ್ದಾರೆ. ಆದ್ರೆ ಕೆಲವೊಂದು ಪದಾರ್ಥಗಳಲ್ಲಿ ಸಕ್ಕರೆ ಬಳಕೆ ಅನಿವಾರ್ಯ. ಇದರಿಂದ ಸಕ್ಕರೆ ಸೇವನೆಯೂ ಅನಿವಾರ್ಯವಾಗಿ ಹೋಗುತ್ತದೆ. ಅಂಥದ್ದರಲ್ಲಿ ಕಡಿಮೆ ಸಕ್ಕರೆ ಹಾಕಿಯೂ ಸಿಹಿಯಾದ ಪದಾರ್ಥಗಳು ಸಿಕ್ಕರೆ ಬೇಡವೆನ್ನುತ್ತಾರಾ? ಹೀಗೆ ಹೊಸ ಸಂಶೋಧನೆಯಿಂದ ಕಂಡುಹಿಡಿಯಲಾದ ಕಡಿಮೆ ಸಕ್ಕರೆಯೊಂದಿಗೆ ಸಿಹಿಯಾದ ಮೊಸರು ಗ್ರಾಹಕರನ್ನು ಸೆಳೆಯೋದ್ರಲ್ಲಿ ಡೌಟೇ ಇಲ್ಲ.

Published by:Ashwini Prabhu
First published: