• Home
  • »
  • News
  • »
  • lifestyle
  • »
  • Swarna Bhasma: ಸ್ವರ್ಣ ಭಸ್ಮದಲ್ಲಿರುವ ಪೋಷಕಾಂಶಗಳು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತವೆ?

Swarna Bhasma: ಸ್ವರ್ಣ ಭಸ್ಮದಲ್ಲಿರುವ ಪೋಷಕಾಂಶಗಳು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿನ್ನ ಧರಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ಹೇಳಲಾಗಿದೆ. ಹಾಗಾಗಿ ಚಿನ್ನವು ಅತ್ಯಮೂಲ್ಯ ಲೋಹಗಳಲ್ಲಿ ಒಂದಾಗಿದೆ. ಅದರ ಹೊಳಪು ಮತ್ತು ಆಕರ್ಷಕ ಬಣ್ಣದಿಂದ ಇದನ್ನು ಆಭರಣವಾಗಿ ಬಳಕೆ ಮಾಡುತ್ತಾ ಬರಲಾಗಿದೆ. ಆಯುರ್ವೇದದಲ್ಲಿ ಚಿನ್ನವನ್ನು ಬಹುಪಯೋಗಿ ಔಷಧಿ ಎಂದು ಕರೆಯುತ್ತಾರೆ.

ಮುಂದೆ ಓದಿ ...
  • Share this:

    ಪ್ರಾಚೀನ ಕಾಲದಲ್ಲಿ (Ancient Times) ಮತ್ತು ರಾಜ-ಮಹಾರಾಜರ (King) ಕಾಲದಲ್ಲಿ ಚಿನ್ನವನ್ನು (Gold) ಬೀದಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂಬ ಕಥೆಗಳನ್ನು (Story) ನೀವು ಕೇಳಿರಬಹುದು. ಹೀಗಾಗಿ ಅಂದಿನ ಕಾಲಕ್ಕೆ ಹೆಚ್ಚಿನ ಜನರು (People) ಬಹಳಷ್ಟು ಚಿನ್ನದ ಆಭರಣ ಧರಿಸುತ್ತಿದ್ದರು. ಚಿನ್ನವನ್ನು ಶಕ್ತಿಯ ಕಟ್ಟು ಎಂಬ ನಂಬಿಕೆ ಇತ್ತು. ಎದುರಿಗಿರುವ ವ್ಯಕ್ತಿಯ ಶಕ್ತಿಯನ್ನು ಸಹ ಪಡೆಯುವ ಸಾಮರ್ಥ್ಯ ಚಿನ್ನಕ್ಕೆ ಇದೆ ಎಂಬ ಮಾತಿದೆ. ಅಂದ್ರೆ ಚಿನ್ನ ಆಕರ್ಷಿಸುತ್ತದೆ. ವಾಸ್ತವದಲ್ಲಿ ಚಿನ್ನ ಧರಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡಕ್ಕೂ ಉತ್ತಮ ಎಂದು ಹೇಳಲಾಗಿದೆ. ಹಾಗಾಗಿ ಚಿನ್ನವು ಅತ್ಯಮೂಲ್ಯ ಲೋಹಗಳಲ್ಲಿ ಒಂದಾಗಿದೆ.


    ಸ್ವರ್ಣ ಭಸ್ಮದ ಪ್ರಯೋಜನಗಳು


    ಅದರ ಹೊಳಪು ಮತ್ತು ಆಕರ್ಷಕ ಬಣ್ಣದಿಂದ ಇದನ್ನು ಆಭರಣವಾಗಿ ಬಳಕೆ ಮಾಡುತ್ತಾ ಬರಲಾಗಿದೆ. ಆಯುರ್ವೇದದಲ್ಲಿಚಿನ್ನವನ್ನು ಬಹುಪಯೋಗಿ ಔಷಧಿ ಎಂದು ಕರೆಯುತ್ತಾರೆ. ಇದನ್ನು ಸ್ವರ್ಣ ಭಸ್ಮದ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಸ್ವರ್ಣ ಭಸ್ಮದ ಪ್ರಯೋಜನಗಳು ಯಾವವು? ಮತ್ತು ಅದನ್ನು ಹೇಗೆ ಬಳಕೆ ಮಾಡುತ್ತಾರೆ ಎಂಬ ಪ್ರಶ್ನೆಗಳಿಗೆ ಆಯುರ್ವೇದ ತಜ್ಞ ಮತ್ತು ವೇದಾಜ್‌ಕ್ಯೂರ್ ಸಂಸ್ಥಾಪಕ ಮತ್ತು ನಿರ್ದೇಶಕ ಡಾ.ವಿಕಾಸ್ ಚಾವ್ಲಾ ಏನ್ ಹೇಳಿದ್ದಾರೆ ಅಂತಾ ಕೇಳೋಣ.


    ಸ್ವರ್ಣ ಭಸ್ಮದಲ್ಲಿ ಯಾವೆಲ್ಲಾ ಪೋಷಕಾಂಶಗಳಿವೆ?


    ಶುದ್ಧ ಚಿನ್ನದಿಂದ ತಯಾರಾದ ಸ್ವರ್ಣ ಭಸ್ಮದಲ್ಲಿ ಸಲ್ಫರ್, ಕ್ಯಾಲ್ಸಿಯಂ, ತಾಮ್ರ, ಸೋಡಿಯಂ, ಪೊಟ್ಯಾಸಿಯಮ್, ಕಬ್ಬಿಣ, ಫೆರಿಕ್ ಆಕ್ಸೈಡ್, ಫೆರಸ್ ಆಕ್ಸೈಡ್, ಫಾಸ್ಫೇಟ್, ಕರಗದ ಆಮ್ಲ ಮತ್ತು ಸಿಲಿಕಾ ಪೋಷಕಾಂಶಗಳು ಇವೆ.


    ಸ್ವರ್ಣ ಭಸ್ಮ ಬಳಕೆಯ ಲಾಭಗಳು ಯಾವವು?


    ಡಾ.ವಿಕಾಸ್ ಚಾವ್ಲಾ ಪ್ರಕಾರ, ಸ್ವರ್ಣಭಸ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಸ್ವರ್ಣ ಭಸ್ಮ ಗುಣಪಡಿಸಲಾಗದ ಕಾಯಿಲೆಗಳಿಂದ ದೂರವಿಡುತ್ತದೆ.


    ಸ್ವರ್ಣ ಭಸ್ಮವು ಒಂದು ಪ್ರಮುಖ ಔಷಧ. ಇದು ದೇಹವನ್ನು ಗುಣಪಡಿಸಲಾಗದ ರೋಗಗಳಿಂದ ದೂರವಿರಿಸುತ್ತದೆ. ಸ್ವರ್ಣ ಭಸ್ಮ ಕಾಯಿಲೆಯಿಂದ ದೂರವಿರಿಸುವ ರಸಾಯನಿಕ ಆಗಿದೆ. ದೇಹದ ಎಲ್ಲಾ ಅಂಗಗಳನ್ನು ಪರಿಣಾಮಕಾರಿಯಾಗಿ ಆರೋಗ್ಯವಾಗಿಡುತ್ತದೆ. ಇದರ ನಿಯಮಿತ ಮತ್ತು ಕ್ರಮಬದ್ಧ ಸೇವನೆ ಕೆಲವು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿ ಆಗಿದೆ.


    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ


    ಸ್ವರ್ಣ ಭಸ್ಮದ ಅಂಶಗಳು ದೇಹವನ್ನು ಒಳಗಿನಿಂದ ಬಲಪಡಿಸುತ್ತವೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದು ಖಿನ್ನತೆ, ಸ್ಮರಣಶಕ್ತಿ, ಏಕಾಗ್ರತೆ, ಮಾನಸಿಕ ಆರೋಗ್ಯ, ಮೆದುಳಿನ ಉರಿಯೂತ ಮತ್ತು ಮಧುಮೇಹ ನಿಯಂತ್ರಿಸಲು ಸಹಕಾರಿ ಆಗಿದೆ.


    ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು


    ಒಂದು ಸಂಶೋಧನೆ ಪ್ರಕಾರ, ಸ್ವರ್ಣ ಭಸ್ಮ ಕ್ಯಾನ್ಸರ್ ಗುಣಪಡಿಸುತ್ತದೆ. ಇದು ಕ್ಯಾನ್ಸರ್ ವಿರೋಧಿ ಔಷಧವಾಗಿ ಕೆಲಸ ಮಾಡುತ್ತದೆ. ಇಂತಹ ಕೆಲವು ವಿಶೇಷ ಗುಣಗಳು ಇದರ ಸಂಯುಕ್ತದಲ್ಲಿವೆ. ಇದನ್ನು ಕ್ಯಾನ್ಸರ್ ಗೆ ಆಯುರ್ವೇದ ಔಷಧ ತಯಾರಿಸಲು ಬಳಸುತ್ತಾರೆ.


    ಶ್ವಾಸಕೋಶ ಮತ್ತು ಹೃದಯಕ್ಕೆ ಪ್ರಯೋಜನಗಳು


    ಸ್ವರ್ಣ ಭಸ್ಮವು ಜೀರ್ಣಕಾರಿ ಕಾಯಿಲೆ ನಿವಾರಿಸುತ್ತದೆ. ಇದು ಶ್ವಾಸಕೋಶ ಮತ್ತು ಹೃದಯದ ಆರೋಗ್ಯ ಕಾಪಾಡುತ್ತದೆ. ಇದರ ಸಂಯುಕ್ತಗಳು ಹೃದಯವನ್ನು ಬಲಪಡಿಸುತ್ತದೆ.


    ಕಣ್ಣುಗಳ ಆರೋಗ್ಯಕ್ಕೆ ಸಹಕಾರಿ


    ಒಂದು ಅಧ್ಯಯನದ ಪ್ರಕಾರ, ಸ್ವರ್ಣ ಭಸ್ಮವು ಕಣ್ಣುಗಳಿಗೆ ಪ್ರಯೋಜನ ನೀಡುತ್ತದೆ. ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಪುನರ್ನವದ ಜೊತೆ ಸ್ವರ್ಣ ಭಸ್ಮ ಸೇವನೆ ಮಾಡಿದರೆ, ಅನೇಕ ಕಣ್ಣಿನ ಸಮಸ್ಯೆ ನಿವಾರಣೆಗೆ ಸಹಕಾರಿ ಆಗಿದೆ.


    ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ


    ಇದು ಚರ್ಮದ ಒಳಗೆ ಆಳವಾಗಿ ಕೆಲಸ ಮಾಡುತ್ತದೆ. ಮತ್ತು ಸತ್ತ ಚರ್ಮ ರಿಮೂವ್ ಮಾಡುತ್ತದೆ. ಸ್ವರ್ಣ ಭಸ್ಮ ಮತ್ತು ಕುಂಕುಮ ಎರಡನ್ನೂ ತ್ವಚೆಯ ಮೇಲೆ ಹಚ್ಚಿದರೆ ತ್ವಚೆ ಹೊಳೆಯುತ್ತದೆ.


    ಸ್ವರ್ಣ ಭಸ್ಮ ಬಳಸುವಾಗ ಮುಂಜಾಗ್ರತೆ ವಹಿಸಿ


    ಸ್ವರ್ಣ ಭಸ್ಮವನ್ನು ಮಿತವಾಗಿ ಬಳಸಿ. ಇಲ್ಲದಿದ್ದರೆ ಅದು ಸಮಸ್ಯೆ ಉಂಟುಮಾಡಬಹುದು. ಸ್ವರ್ಣ ಭಸ್ಮವನ್ನು ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಂಡರೆ ಚಡಪಡಿಕೆ ಉಂಟಾಗುತ್ತದೆ. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಂಗಗಳಿಕೆ ಹಾನಿ ಮಾಡುತ್ತದೆ. ಆಯುರ್ವೇದ ವೈದ್ಯರ ಸಲಹೆಯಿಲ್ಲದೆ ಎಂದಿಗೂ ಬಳಸಬೇಡಿ.


    ಇದನ್ನೂ ಓದಿ: ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆಯುರ್ವೇದದ ಮನೆಮದ್ದು ಇಲ್ಲಿದೆ


    ಸ್ವರ್ಣ ಭಸ್ಮವನ್ನು ಹಾಲು, ಹಸುವಿನ ತುಪ್ಪ ಅಥವಾ ಜೇನುತುಪ್ಪದ ಜೊತೆ ಸೇವಿಸುತ್ತಾರೆ. ಬೆಳಗಿನ ಉಪಾಹಾರದದಲ್ಲಿ ಮತ್ತು ರಾತ್ರಿ ಮಲಗುವ ಮೊದಲು ಸೇವಿಸುವುದು ಉತ್ತಮ.

    Published by:renukadariyannavar
    First published: