ಸ್ವಾಮಿ ವಿವೇಕಾನಂದನವರು ಚಿಕಾಗೋ ತೆರಳಲು ಈ ರಾಜ ಪ್ರಮುಖ ಪಾತ್ರವಹಿಸಿದ್ದರು

news18
Updated:September 11, 2018, 6:14 PM IST
ಸ್ವಾಮಿ ವಿವೇಕಾನಂದನವರು ಚಿಕಾಗೋ ತೆರಳಲು ಈ ರಾಜ ಪ್ರಮುಖ ಪಾತ್ರವಹಿಸಿದ್ದರು
news18
Updated: September 11, 2018, 6:14 PM IST
-ನ್ಯೂಸ್ 18 ಕನ್ನಡ

ಸ್ವಾಮಿ ವಿವೇಕಾನಂದನವರು ಅಮೆರಿಕದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ ಇಂದು 125 ವರ್ಷ ತುಂಬಿದೆ. 1893 ರ ಸೆಪ್ಟಂಬರ್ 11 ರಂದು ಚಿಕಾಗೋದಲ್ಲಿ ನನ್ನ ಸಹೋದರ ಸಹೋದರಿಯರೇ ಎಂದು ಭಾಷಣ ಪ್ರಾರಂಭಿಸುತ್ತಿದ್ದಂತೆ ಎಲ್ಲರು ಮೂಕವಿಸ್ಮಿತರಾಗಿದ್ದರು. ಸರ್ವ ಧರ್ಮಗಳ ನೆಲೆಬೀಡು ಭಾರತವನ್ನು ಪ್ರತಿನಿಧಿಸಿದ್ದ ಸ್ವಾಮಿ ವಿವೇಕಾನಂದರ ಪ್ರತಿಯೊಂದು ನುಡಿಯು ಸಮ್ಮೇಳನದಲ್ಲಿ ಭಾಗವಹಿಸಿದ್ದವರಿಗೆ ಹೊಸ ಜಗತ್ತೊಂದನ್ನು ತೆರೆದಿಟ್ಟಿತ್ತು. ಭಾರತೀಯ ಸಂಸ್ಕೃತಿ, ಜನರು, ನಾಗರೀಕತೆಯ ಬಗ್ಗೆ ವಿಶ್ವದ ಮುಂದೆ ಎದೆಯುಬ್ಬಿಸಿ ಭಾಷಣ ಮಾಡಿದ ಸ್ವಾಮಿ ವಿವೇಕಾನಂದರನ್ನು ಅಮೆರಿಕದ ಮಾಧ್ಯಮಗಳು ಸೈಕ್ಲೋನಿಕ್ ಹಿಂದು ಎಂದು ವರ್ಣಿಸಿತ್ತು.

ಖ್ಯಾತ ಫ್ರೆಂಚ್ ಲೇಖಕ ರೊಮೈನ್ ರೊಲ್ಯಾಂಡ್ ಬರೆದಿರುವ 'ಲೈಫ್ ಆಫ್ ವಿವೇಕಾನಂದ ಅಂಡ್ ಯುನಿವರ್ಸಲ್ ಗಾಸ್ಪೆಲ್' ಪುಸ್ತಕದಲ್ಲಿ ಸ್ವಾಮೀಜಿ ಜೀವನದ ಕೆಲವು ಆಸಕ್ತಿಕರ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಸ್ವಾಮಿ ವಿವೇಕಾನಂದರು ಚಿಕಾಗೋ ತೆರಳಲು ಸಹಾಯ ಮಾಡಿದ ರಾಜರ ಹೆಸರನ್ನು ಬರೆದಿದ್ದಾರೆ. ಸರ್ವಧರ್ಮ ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿತರಾಗಿದ್ದ ಸ್ವಾಮಿ ವಿವೇಕಾನಂದರಿಗೆ ಅಮೆರಿಕಕ್ಕೆ ತಲುಪಬೇಕಾದಷ್ಟು ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದನ್ನರಿತ ರಾಜಸ್ಥಾನದ ಖೆತಡಿಯ ರಾಜ ಅಜಿತ್ ಸಿಂಗ್ ಸ್ವಾಮೀಜಿಯನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡಿದ್ದರು. ಅಲ್ಲದೆ ಭಾರತದಿಂದ ಚಿಕಾಗೋ ತಲುಪಲು ತಗಲುವ ವೆಚ್ಚವನ್ನು ಭರಿಸಿ, ಹೊಸ ರೇಷ್ಮೆಯ ಉಡುಪುಗಳನ್ನು ನೀಡಿ ಕಳುಹಿಸಿ ಕೊಟ್ಟಿದ್ದರು. ಅಂದು ರಾಜ ಮಾಡಿದ ಧನ ಸಹಾಯ ಇಂದು ಸ್ವಾಮಿ ವಿವೇಕಾನಂದರ ಹೆಸರಿನೊಂದಿಗೆ ರಾಜ ಅಜಿತ್ ಸಿಂಗ್ ಅವರ ಹೆಸರು ಇತಿಹಾಸ ಪುಟಗಳಲ್ಲಿ ಉಳಿಯುವಂತೆ ಮಾಡಿದೆ.

ರಾಷ್ಟ್ರಕವಿ ರವೀಂದ್ರನಾಥ್‌ ಠಾಗೋರ್‌

ಹಿಂದೊಮ್ಮೆ ನೊಬೆಲ್ ಪುರಸ್ಕೃತ ರಾಷ್ಟ್ರಕವಿ ರವೀಂದ್ರನಾಥ್‌ ಠಾಗೋರ್‌ ಅವರು ನೀವು ಭಾರತದ ಬಗ್ಗೆ ತಿಳಿಯ ಬೇಕಿದ್ದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿಕೊಳ್ಳಿ ಅಂದಿದ್ದರು. ಏಕೆಂದರೆ ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಸಕರಾತ್ಮಕ ವಿಷಯಗಳಿರುತ್ತಿತೇ ಹೊರತು ನಕರಾತ್ಮಕ ಅಂಶಗಳಿರುವುದಿಲ್ಲ ಎಂದು ರಾಷ್ಟ್ರಕವಿ ತಿಳಿಸಿದ್ದರು. ಇದು ಸ್ವಾಮೀಜಿಯವರು ಸಣ್ಣ ಪ್ರಾಯದಲ್ಲಿ ಬೀರಿದ ಪ್ರಭಾವವನ್ನು ಸೂಚಿಸುತ್ತದೆ.

ಸ್ವಾಮೀಜಿಗೆ ಸನ್ಯಾಸಿ ಪಾಠ ಕಲಿಸಿದ ವೇಶ್ಯೆ
Loading...

ಜೈಪುರದ ರಾಜವಂಶಸ್ಥರು ಮುಖ್ಯ ಅತಿಥಿಯಾಗಿ ಸ್ವಾಮಿ ವಿವೇಕಾನಂದರನ್ನು ಆಹ್ವಾನಿಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ವಾಮಿಜಿಯನ್ನು ಸ್ವಾಗತಿಸಲು ಬನಾರಸ್​ನ ಪ್ರಸಿದ್ಧ ಗಾಯಕಿಯನ್ನು ಕರೆಸಲಾಗಿತ್ತು. ಆದರೆ ಆ ಗಾಯಕಿ ವೇಶ್ಯೆ ಎಂದು ತಿಳಿದು ಬಂದಾಗ ಕಾರ್ಯಕ್ರಮದಲ್ಲಿ ಹಾಡು ಕೇಳಲು ಸ್ವಾಮೀಜಿ ನಿರಾಕರಿಸಿದರು.

ಸ್ವಾಮೀಜಿ ತನ್ನ ಹಾಡನ್ನು ಕೇಳಲು ಬರುವುದಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗಾಯಕಿ ದುಃಖಪ್ತಳಾದ ವೇಶ್ಯಯು ಸೂರ್ದಾಸ್​ನ ಭಜನೆಗಳನ್ನು ಹಾಡ ತೊಡಗಿದಳು. ಹಾಡಿನಲ್ಲಿ ಬರುವ ಸಾಲುಗಳು ಸ್ವಾಮಿ ವಿವೇಕಾನಂದರನ್ನು ಆಕರ್ಷಿಸಿತು. ಪ್ರತಿ ಪದಗಳೂ ಸ್ವಾಮೀಜಿಗೆ ಹೊಸ ಚಿಂತನೆಗಳನ್ನು ಒದಗಿಸಿತ್ತು. ಇದರಿಂದ ಗಾಯಕಿಗೆ ಉಂಟಾದ ನೋವು ಸ್ವಾಮೀಜಿಯ ಅರಿವಿಗೆ ಬಂತು.

ಹಾಡು ಹೇಳುತ್ತಾ ಅಳುತ್ತಿದ್ದ ಗಾಯಕಿಯ ಹತ್ತಿರ ಬಂದ ಸ್ವಾಮೀಜಿ, ನಾನು ಇದೇ ಮೊದಲ ಬಾರಿ ವೇಶ್ಯೆಯನ್ನು ನೋಡುತ್ತಿರುವೆ. ನನ್ನ ಮನದಲ್ಲಿ ಈಗ ವೇಶ್ಯೆಯರ ಮೇಲೆ ಯಾವುದೇ ದ್ವೇಷವಿಲ್ಲ. ಹಾಗೆಯೇ ಯಾವುದೇ ಪ್ರೀತಿಯಿಲ್ಲ. ಏಕೆಂದರೆ ನಾನೀಗ ಸಂಪೂರ್ಣ ಸಂನ್ಯಾಸಿಯಾಗಿರುವೆ ಎಂದು ಸಮಾಧಾನಿಸಿದರು. ಇದುವೇ ಸ್ವಾಮಿ ವಿವೇಕಾನಂದರು ಎಲ್ಲರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುದಕ್ಕೆ  ನಿದರ್ಶನ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...