Sustainable Eateries: ಬೆಂಗಳೂರಿನ ಈ ಸ್ಥಳಗಳಲ್ಲಿ ವೇಸ್ಟ್​ ಆಗೋದೇ ಇಲ್ವಂತೆ - ನೀವ್ಯಾಕೆ ಒಮ್ಮೆ ಟ್ರೈ ಮಾಡ್ಬಾರ್ದು ?

Near Me Food Centers: ಉದ್ಯಾನ ನಗರಿ'ಯಾದ್ಯಂತ ಇರುವ ಸಾವಿರಾರು ತಿನಿಸುಗಳ ನಡುವೆ, ಕೆಲವು ರುಚಿಕರವಾದ ಆಹಾರದೊಂದಿಗೆ ಮಾತ್ರವಲ್ಲ, ಸಸ್ಟೈನೆಬಿಲಿಟಿ ಉತ್ತೇಜಿಸುವ ಅರ್ಥಪೂರ್ಣ ಸ್ಥಳಗಳ ಪಟ್ಟಿ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನಲ್ಲಿ (Bengaluru) ಏನು ಸಿಗಲ್ಲ ಹೇಳಿ. ಇಲ್ಲಿ ಎಲ್ಲವೂ ಇದೆ. ಕೆಲಸವಿಲ್ಲದವರಿಗೆ ಕೆಲಸ, ತಲೆ ಮೇಲೊಂದು ಸೂರು ಹೀಗೆ. ಹಾಗೆಯೇ ಟ್ರಾಪಿಕ್ (Traffic)  ಸಮಸ್ಯೆ, ಕಸದ ಸಮಸ್ಯೆ ಎಲ್ಲಾವೂ ಇಲ್ಲಿದೆ.  ಇಲ್ಲಿ ನಿಮಗೆ ವಿಭಿನ್ನಆಹಾರಗಳು ಸಹ ಸಿಗುತ್ತದೆ. ಹಾಗೆಯೇ ವಿಭಿನ್ನ ರೀತಿಯಲ್ಲಿ ಆ ಆಹಾರಗಳನ್ನು ನೀಡುವ ಶಾಪ್​ಗಳಿವೆ. ಉದ್ಯಾನ ನಗರಿ'ಯಾದ್ಯಂತ ಇರುವ ಸಾವಿರಾರು ತಿನಿಸುಗಳ ನಡುವೆ, ಕೆಲವು ರುಚಿಕರವಾದ ಆಹಾರದೊಂದಿಗೆ ಮಾತ್ರವಲ್ಲ, ಸಸ್ಟೈನೆಬಿಲಿಟಿ (Sustainable Eateries ) ಉತ್ತೇಜಿಸುವ ಅರ್ಥಪೂರ್ಣ ಸ್ಥಳಗಳ ಪಟ್ಟಿ ಇಲ್ಲಿದೆ.  

ಈಟ್​ ರಾಜಾ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಈ ವಿಶಿಷ್ಟ ಜ್ಯೂಸ್ ಬಾರ್ ಝೀರೋ-ತ್ಯಾಜ್ಯ ಕಲ್ಪನೆಗಳನ್ನು ಜಾರಿಗೆ ತರಲು ಪ್ರಸಿದ್ಧವಾಗಿದೆ ಮಾಜಿ ರೇಡಿಯೋ ಜಾಕಿ ಉದ್ಯಮಿ ಆರ್‌ಜೆ ರಾಜ್‌ ನಡೆಸುತ್ತಿರುವ ಈ ಅಂಗಡಿಯು ಹಣ್ಣಿನ ಸಿಪ್ಪೆಗಳಲ್ಲಿಯೇ ತಾಜಾ ಮತ್ತು ಸಿಹಿ ಹಾಕದ ಜ್ಯೂಸ್​ ಒದಗಿಸುತ್ತದೆ. ಅಲ್ಲದೇ, ಅವರು ಪ್ಲಾಸ್ಟಿಕ್ ಸ್ಟ್ರಾಗಳನ್ನು ಪೇಪರ್ ಸ್ಟ್ರಾಗಳು, ಮರುಬಳಕೆ ಮಾಡಬಹುದಾದ ಸ್ಟೀಲ್ ಸ್ಟ್ರಾಗಳು,  ಬಾಳೆ ಎಲೆಗಳು ಮತ್ತು ಬಿದಿರಿನಿಂದ ಮಾಡಿದ ಸ್ಟ್ರಾಗಳು ಮತ್ತು ಗೋಧಿ ಪೇಸ್ಟ್ ಸ್ಟ್ರಾಗಳಂತಹ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುತ್ತದೆ.

ಈಟ್ ರಾಜಾ ಗ್ರಾಹಕರನ್ನು ಟೇಕ್‌ಅವೇಗಾಗಿ ತಮ್ಮದೇ ಆದ ಕಂಟೈನರ್‌ಗಳನ್ನು ತರಲು ಸಹ ಸಲಹೆ ನೀಡುತ್ತದೆ ಮತ್ತು ಗಾಜಿನ ಕಂಟೇನರ್‌ಗಳ ಸಹಾಯದಿಂದ ಏಕ-ಬಳಕೆಯ ಪ್ಲಾಸ್ಟಿಕ್‌ನ ಬಳಕೆಯನ್ನು ಸಹ ಕಡಿಮೆ ಮಾಡುತ್ತದೆ. ಈಟ್ ರಾಜದಲ್ಲಿ ನೈಸರ್ಗಿಕ ಜೈವಿಕ-ಕಿಣ್ವ ಕ್ಲೀನರ್‌ಗಳನ್ನು ತಯಾರಿಸಲು ಸಿಟ್ರಸ್ ಅನ್ನು ಬಳಸಲಾಗುತ್ತದೆ, ಹಾಗೂ ಹಣ್ಣುಗಳ ತ್ಯಾಜ್ಯವನ್ನು ಪರಿಸರ ಸ್ನೇಹಿ ಮಿಶ್ರಗೊಬ್ಬರ ಮತ್ತು ರಸಗೊಬ್ಬರಗಳಾಗಿ ಪರಿವರ್ತಿಸುತ್ತಾರೆ.

ವಿಳಾಸ: ನಂಬರ್.560/2, 14ನೇ ಕ್ರಾಸ್, ಸಂಪಿಗೆ ರೋಡ್, ಕೋದಂಡರಾಮಪುರ, ಮಲ್ಲೇಶ್ವರಂ, ಬೆಂಗಳೂರು, ಕರ್ನಾಟಕ 56003

ಮೊಬೈಲ್ ನಂಬರ್: 073530 78600

ಆರೋಗ್ಯ ಆಹಾರ

ಜೆಪಿ ನಗರದಲ್ಲಿರುವ  ಈ ಸುಂದರ ರೆಸ್ಟೊರೆಂಟ್ ದಕ್ಷಿಣ ಭಾರತ ಮತ್ತು ಉತ್ತರ ಭಾರತೀಯ ಆಹಾರಗಳನ್ನು ಒದಗಿಸುತ್ತದೆ. ಅಲ್ಲದೇ, ಇಲ್ಲಿ ನಿಮಗೆ ಹಲವಾರು ರೀತಿಯ ರಾಗಿ-ಆಧಾರಿತ ಆಹಾರ ಪದಾರ್ಥಗಳು ಲಭ್ಯವಿದ್ದು,

ಬೆಂಗಳೂರಿನಲ್ಲಿ ಹಲವಾರು ಗ್ರಾಹಕರ ನೆಚ್ಚಿನ ಸ್ಥಳ ಇದು ಎನ್ನಬಹುದು. ಈ ಫುಡ್ ಹಬ್ ಟೇಕ್ ಎವೇ ಆಯ್ಕೆಗಳನ್ನು ಒದಗಿಸುತ್ತದೆ, ಆದರೆ ಪ್ರತಿಯೊಂದು ರೀತಿಯ ಆಹಾರದ ಟೇಕ್‌ಅವೇ ಆರ್ಡರ್‌ಗಳಿಗೆ ಗ್ರಾಹಕರು ತಮ್ಮದೇ ಆದ ಬಟ್ಟಲುಗಳು ಮತ್ತು ಬಾಟಲಿಗಳನ್ನು ತರಬೇಕು.

ವಿಳಾಸ: ಐಟಿಐ ಲೇಔಟ್​, ಜೆಪಿ ನಗರ, ಬೆಂಗಳೂರು . ಕರ್ನಾಟಕ 560041

ಮೊಬೈಲ್ ನಂಬರ್: 094480 90152

ಗೋ ನೇಟಿವ್

ನಗರದ ವಿವಿಧ ಭಾಗಗಳಲ್ಲಿ ಸುಮಾರು ಐದು ಶಾಖೆಗಳನ್ನು ಹೊಂದಿರುವ ಕೆಫೆ, ಗೋ ನೇಟಿವ್ ಸಸ್ಯಾಹಾರಿ ಊಟಕ್ಕೆ ಉತ್ತಮವಾದ ಆಯ್ಕೆ ಎನ್ನಬಹುದು. ಇದು ನಿಮಗೆ ಸಮೃದ್ಧವಾದ ಗ್ಯಾಸ್ಟ್ರೊನೊಮಿಕಲ್ ಅನುಭವವನ್ನು ಒದಗಿಸುತ್ತದೆ. ಈ ಕೆಫೆಯಲ್ಲಿ ಆಹಾರ ಪದಾರ್ಥಗಳನ್ನು ಅವರ ಜಮೀನಿನ ಸಾವಯಾವ ಕೃಷಿಯ ಮೂಲಕ ಸಿಗುವ ವಸ್ತುಗಳಿಮದ ತಯಾರಿಸಲಾಗುತ್ತದೆ. ಸಸ್ಯಾಹಾರಿ, ಜೈನ್-ಸ್ನೇಹಿ, ಕೀಟೋ-ಸ್ನೇಹಿ, ಕಡಿಮೆ ಪ್ರೋಟೀನ್ ಮತ್ತು ಹೆಚ್ಚಿನ ಪ್ರೋಟೀನ್‌ ಹೀಗೆ ಹಲವಾರು ಆಯ್ಕೆಗಳು ಇಲ್ಲಿ ಲಭ್ಯವಿದ್ದು, ಒಮ್ಮೆ ಹೋಗಲೇ ಬೇಕು.

2017 ರಲ್ಲಿ ಅನ್ವಿತಾ ಪ್ರಶಾಂತ್, ರಾದೇಶ್ ಶೆಟ್ಟಿ ಮತ್ತು ಜೆನ್ನಿ ಪಿಂಟೋ ಅವರು ಪ್ರಾರಂಭಿಸಿದ ಈ ಕೆಫೆಯು ಸಸ್ಟೈನೆಬಿಲಿಟಿಗೆ ಹೆಚ್ಚು ಮಹತ್ವ ನೀಡುತ್ತದೆ. ಅಲ್ಲದೇ ಇಲ್ಲಿ ಸಾವಯವ, ಕರಕುಶಲ ಉತ್ಪನ್ನಗಳನ್ನು ಶಾಪಿಂಗ್ ಮಾಡಬಹುದು.

ವಿಳಾಸ: #64, 10ನೇ ಮುಖ್ಯ ರಸ್ತೆ, 4ನೇ ಬ್ಲಾಕ್, 5ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560041

ಮೊಬೈಲ್ ನಂಬರ್: 080 2664 2552

ಗ್ರೀನ್‌ಪಾತ್ ಆರ್ಗ್ಯಾನಿಕ್ ಸ್ಟೇಟ್​

ಮಲ್ಲೇಶ್ವರಂನಲ್ಲಿರುವ ಗ್ರೀನ್‌ಪಾತ್ ಆರ್ಗ್ಯಾನಿಕ್ ಸ್ಟೇಟ್, ಸಾವಯವ ಕೃಷಿಕರಾಗಿರುವ ವಕೀಲರಾದ ಎಚ್ ಆರ್ ಜಯರಾಂ ಅವರ ಹೊಸ ಯೋಜನೆಯಾಗಿದೆ. ಇದು ಸಾವಯವ ರೆಸ್ಟೋರೆಂಟ್, ಡಿಟಾಕ್ಸ್ ಕೆಫೆ ಮತ್ತು ಸಾವಯವ ಅಂಗಡಿಯನ್ನು ಹೊಂದಿದೆ. ಅವರ ರೆಸ್ಟೋರೆಂಟ್ ಫಾರ್ಗಾಟನ್ ಫುಡ್ಸ್ ಉತ್ತಮ ವಾತಾವರಣವನ್ನು ಹೊಂದಿದ್ದು, ಹೆಚ್ಚು ಪ್ರಸಿದ್ಧ ಕೂಡ. ಈ ರೆಸ್ಟೋರೆಂಟ್ ಮಿಲೆಟ್ಗಳಿಂದ ವಿವಿಧ ಪಾಕವಿಧಾನವನ್ನು ಟ್ರೈ ಮಾಡುತ್ತಿದೆ.

ಇದನ್ನೂ ಓದಿ: ಈ ಸೀಸನ್ ನಲ್ಲಿ ಸಖತ್ ಮೇಕ್ ಓವರ್ ಮಾಡಿಸಿಕೊಳ್ಳೋಕೆ ಬೆಂಗ್ಳೂರಿನ ಈ ಸಲೂನ್ ಗಳು ಬೆಸ್ಟ್!

ಪಿಜ್ಜಾಗಳು, ಸ್ವೀಟ್ಸ್​ ಮತ್ತು ಐಸ್‌ಕ್ರೀಮ್‌ಗಳನ್ನು ಒಳಗೊಂಡಂತೆ ವಿವಿಧ ಆಹಾರ ಪದಾರ್ಥಗಳು ಇಲ್ಲಿ ಲಭ್ಯವಿದೆ. ರೆಸ್ಟೋರೆಂಟ್‌ಗೆ ಬೇಕಾದ ಎಲ್ಲಾ ವಸ್ತುಗಳನ್ನು ಜಯರಾಮ್ ಅವರ ಸಾವಯವ ಕೃಷಿ ಜಮೀನಿನಲ್ಲಿ ಬೆಳೆಯಲಾಗುತ್ತದೆ, ಸಾಧ್ಯವಾದಷ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸಲು ಜೈವಿಕ ಅನಿಲ ಮತ್ತು ಸೌರ ಫಲಕಗಳನ್ನು ಬಳಸಲಾಗುತ್ತದೆ.

ವಿಳಾಸ: ನಂಬರ್ 185/1 ಮೆಟ್ರೋ ಸ್ಟೇಷನ್ ಎದುರಿಗೆ ರಾಜೀವ್ ಗಾಂಧಿ ಸರ್ಕಲ್ ,ಸಂಪಿಗೆ ರೋಡ್, ಮಲ್ಲೇಶ್ವರಂ. ಬೆಂಗಳೂರು.

ಮೊಬೈಲ್ ನಂಬರ್: 080 2356 9777

 ಕಾರ್ನರ್ ಹೌಸ್

ನಗರದ ಅನೇಕ ನಿವಾಸಿಗಳ ನೆಚ್ಚಿನ ತಾಣವಾಗಿರುವ ಈ ಐಕಾನಿಕ್ ಡೆಸರ್ಟ್ ಪ್ಲೇಸ್​ ತಮ್ಮ ಪ್ಲಾಸ್ಟಿಕ್ ಹೊರೆಯನ್ನು ಕಡಿಮೆ ಮಾಡಲು ಮತ್ತು ಸಸ್ಟೈನೆಬಿಲಿಟಿ ಹಾದಿಯತ್ತ ಒಂದು ಹೆಜ್ಜೆ ಇಡಲು 'ಬ್ರಿಂಗ್ ಯುವರ್ ಓನ್ ಬೌಲ್' (BYOB) ಎಂಬ ಯೋಜನೆಯನ್ನು ಪರಿಚಯಿಸಿದೆ.  ನಗರದಾದ್ಯಂತ ಹಲವಾರು ಔಟ್‌ಲೆಟ್‌ಗಳನ್ನು ಹೊಂದಿರುವ ಬ್ರ್ಯಾಂಡ್, ನೀವು ಉಳಿಸುವ ಪ್ರತಿಯೊಂದು  ಕಂಟೈನರ್‌ಗೆ ರೂ 10 ಕೊಡುಗೆ ನೀಡುವ ಭರವಸೆ ನೀಡುವ ಮೂಲಕ ಈ ಯೋಜನೆ ಆರಂಭಿಸಿದೆ.

ಇದನ್ನೂ ಓದಿ: ಬಾಯಲ್ಲಿ ನೀರೂರಿಸುವ ಸ್ಪೈಸಿ ಬಾರ್ಬಿಕ್ಯೂ ಸವಿಯಲು ಬೆಂಗಳೂರಿನ ಈ ಸ್ಥಳಗಳಿಗೆ ಮಿಸ್​ ಮಾಡ್ದೇ ಹೋಗಿ

ವಿಳಾಸ: 61, 1ನೇ ಮಹಡಿ, 1ನೇ ಮುಖ್ಯ ರಸ್ತೆ, 7ನೇ ಬ್ಲಾಕ್, ಕೋರಮಂಗಲ, ಬೆಂಗಳೂರು, ಕರ್ನಾಟಕ 560095

ಮೊಬೈಲ್ ನಂಬರ್: 098459 23734
Published by:Sandhya M
First published: