• Home
  • »
  • News
  • »
  • lifestyle
  • »
  • Sushi Near Me: ರುಚಿಕರವಾದ ಸುಶಿ ಹುಡುಕುತ್ತಿದ್ರೆ ಬೆಂಗಳೂರಿನ ಈ ರೆಸ್ಟೊರೆಂಟ್​ಗಳಿಗೆ ಹೋಗಿ

Sushi Near Me: ರುಚಿಕರವಾದ ಸುಶಿ ಹುಡುಕುತ್ತಿದ್ರೆ ಬೆಂಗಳೂರಿನ ಈ ರೆಸ್ಟೊರೆಂಟ್​ಗಳಿಗೆ ಹೋಗಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sushi Restaurants Near Me: ನಾವು ಹೇಳುವ ಕೆಲವೊಂದು ರೆಸ್ಟೊರೆಂಟ್​ಗೆ ನೀವು ಒಮ್ಮೆ ವಿಸಿಟ್ ಮಾಡಿದರೆ ಸಾಕು ಸಮಯ ಸಿಕ್ಕಾಗೆಲ್ಲಾ ವಿಸಿಟ್​​ ಮಾಡುವುದು ಪಕ್ಕ. ಬೆಂಗಳೂರಿನಲ್ಲಿ ಅತ್ಯುತ್ತಮ ಸುಶಿಯನ್ನು ಒದಗಿಸುವ ರೆಸ್ಟೋರೆಂಟ್‌ಗಳ ಪಟ್ಟಿ ಇಲ್ಲಿದೆ. 

  • Share this:

ಅತ್ಯಂತ ರುಚಿಕರವಾಗಿರುವ ಆಹಾರದ ಲಿಸ್ಟ್​ನಲ್ಲಿ (Food List), ಸುಶಿ (Sushi) ಅಗ್ರಸ್ಥಾನದಲ್ಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಇತ್ತೀಚಿನ ವರ್ಷಗಳಲ್ಲಿ, ನಗರದಲ್ಲಿ ಬಹಳಷ್ಟು ಜಪಾನೀ ರೆಸ್ಟೋರೆಂಟ್‌ಗಳು (Restaurants) ಬಾಗಿಲು ತೆರೆದಿವೆ. ಇದು ಸುಶಿ ಪ್ರಿಯರಿಗೆ ಮಾತ್ರವಲ್ಲದೇ ಆಹಾರ ಪ್ರಿಯರಿಗೆ (Food Lovers) ಸಹ ಒಳ್ಳೆಯ ಸುದ್ದಿ ಎನ್ನಬಹುದು. ಇದರ ವಿಭಿನ್ನ ರುಚಿ ನಿಮ್ಮನ್ನ ಪದೇ ಪದೇ ಸೆಳೆಯುತ್ತದೆ. ನೀವು ಸಹ ಸುಶಿ ಪ್ರೇಮಿಯಾಗಿದ್ದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ. ನಾವು ಹೇಳುವ ಕೆಲವೊಂದು ರೆಸ್ಟೊರೆಂಟ್​ಗೆ ನೀವು ಒಮ್ಮೆ ವಿಸಿಟ್ ಮಾಡಿದರೆ ಸಾಕು ಸಮಯ ಸಿಕ್ಕಾಗೆಲ್ಲಾ ವಿಸಿಟ್​​ ಮಾಡುವುದು ಪಕ್ಕ. ಬೆಂಗಳೂರಿನಲ್ಲಿ (Bengaluru) ಅತ್ಯುತ್ತಮ ಸುಶಿಯನ್ನು ಒದಗಿಸುವ ರೆಸ್ಟೋರೆಂಟ್‌ಗಳ ಪಟ್ಟಿ ಇಲ್ಲಿದೆ. 


ಹರಿಮ್, ಅಶೋಕ್ ನಗರ್, ಬೆಂಗಳೂರು


ಪಟ್ಟಣದಲ್ಲಿರುವ ಅತ್ಯಂತ ಹಳೆಯ ಜಪಾನೀಸ್ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಹರಿಮಾ ತನ್ನ ಬಜೆಟ್ ಸ್ನೇಹಿ ದರಕ್ಕಾಗಿ ಹೆಚ್ಚಿನ ಜನರ ಪ್ರೀತಿಯನ್ನು ಗಳಿಸಿದೆ. ನೀವು ಮ್ಯಾಗುರೊ ಅಥವಾ ತೈ ಟ್ರೈ ಮಾಡಬಹುದು. ಸಾಲ್ಮನ್ ಕ್ಯಾವಿಯರ್ ಆವೃತ್ತಿ ಅಥವಾ ಏಡಿ ಸ್ಟಿಕ್, ಆವಕಾಡೊ ಮತ್ತು ಎರಡು ರೀತಿಯ ಕ್ಯಾವಿಯರ್ ಅನ್ನು ಒಳಗೊಂಡಿರುವ ರೇನ್ಬೋ ರೋಲ್‌ ಮಿಸ್​ ಮಾಡದೇ ಟ್ರೈ ಮಾಡಬೇಕು.


ವಿಳಾಸ: ದೇವತಾ ಪ್ಲಾಜಾ, 4ನೇ ಫ್ಲೋರ್, 131, ರೆಸಿಡೆನ್ಸಿ ರೋಡ್, ಅಶೋಕ್ ನಗರ್, ಬೆಂಗಳೂರು


ಮೊಬೈಲ್ ನಂಬರ್: +918041325757


ಸಮಯ: ಬೆಳಗ್ಗೆ 11 ರಿಂದ ರಾತ್ರಿ 12ರ ವರೆಗೆ


ತೆಪ್ಪನ್ ಜಪಾನೀಸ್ ಗ್ರಿಲ್ & ಸುಶಿ, ಉಲಸೂರ್, ಬೆಂಗಳೂರು


ನಿಮ್ಮ ಊಟದ ಜೊತೆಗೆ ಸ್ವಲ್ಪ ಫನ್ ಬೇಕು ಎಂದರೆ ಈ ರೆಸ್ಟೋರೆಂಟ್‌ನಲ್ಲಿ ಟೇಬಲ್ ಅನ್ನು ಬುಕ್ ಮಾಡಿ. ಸುಶಿ ಮೆನುವಿನಲ್ಲಿ ಉನಾಗಿ, ಹಮಾಚಿ, ಮತ್ತು ಶಿಮ್ ಸಾಬಾ ಟೇಸ್ಟ್​ ಮಾಡಲೇಬೇಕು. ಸಸ್ಯಾಹಾರಿಗಳು ಮಸಾಲೆಯುಕ್ತ ತೋಫು, ಆವಕಾಡೊ, ಕ್ಯಾರೆಟ್ ಮತ್ತು ಸೌತೆಕಾಯಿಯಿಂದ ತಯಾರಿಸಿದ ಮಾಕಿಯ ಮಿಸ್​ ಮಾಡಬಾರದು.


ವಿಳಾಸ: 1/3, 3 ನೇ ಮಹಡಿ, ಹಲಸೂರು ರಸ್ತೆ, ಹಲಸೂರು, ಬೆಂಗಳೂರು


ಮೊಬೈಲ್ ನಂಬರ್: +917846870710


ಸಮಯ: ಮಧ್ಯಾಹ್ನ 12 ರಿಂದ ರಾತ್ರಿ 12ರ ವರೆಗೆ


ಹೈ ಕಮ್ ಗ್ಯಾಂಗ್, ಅಶೋಕ್ ನಗರ, ಬೆಂಗಳೂರು


ಇಲ್ಲಿರುವ ಸುಶಿ ರೋಲ್‌ಗಳನ್ನು ಪ್ರಯತ್ನಿಸಲೇಬೇಕು. ಸಾಕಷ್ಟು ವೈವಿಧ್ಯತೆ ಹೊಂದಿರುವ ಸ್ಥಳ ಇದು. ಕಿಮ್ಚಿ ಸೀಫುಡ್ ರೋಲ್ ಸಾಲ್ಮನ್, ಸ್ಕ್ವಿಡ್, ಏಡಿ, ಟ್ಯೂನ ಮತ್ತು ಫ್ಲೈಯಿಂಗ್ ಫಿಶ್ ರೋ ಸೇರಿದಂತೆ ಎಲ್ಲಾ ಆಹಾರಗಳು ಇಲ್ಲಿ ಬಹಳ ರುಚಿಕರವಾಗಿರುತ್ತದೆ. ಜೊತೆಗೆ, ಆವಕಾಡೊ, ವಾಸಾಬಿ ಹೀಗೆ ಹಲವಾರು ಆಯ್ಕೆಗಳಿದೆ.


ಇದನ್ನೂ ಓದಿ: ಬೆಳಗ್ಗೆ ಎದ್ದು ಈ ತರಕಾರಿಯ ಜ್ಯೂಸ್ ಕುಡಿದು ನೋಡಿ, ಇಡೀ ದಿನ ಫುಲ್ ಎನರ್ಜಿ ಇರುತ್ತೆ


ವಿಳಾಸ: ಪಾಲ್ ಕ್ಯಾಸಲ್, 2 ನೇ ಮಹಡಿ, 20, ಬ್ರಿಗೇಡ್ ಟವರ್ ಹತ್ತಿರ, ಕ್ಯಾಸಲ್ ಸ್ಟ್ರೀಟ್, ಅಶೋಕ್ ನಗರ, ಬೆಂಗಳೂರು


ಮೊಬೈಲ್ ನಂಬರ್: +919880216262


ಸಮಯ: ಬೆಳಗ್ಗೆ 10 ರಿಂದ ರಾತ್ರಿ 10.30ರ ವರೆಗೆ


ಎಡೋ ರೆಸ್ಟೋರೆಂಟ್ ಮತ್ತು ಬಾರ್ - ಐಟಿಸಿ ಗಾರ್ಡೇನಿಯಾ, ಅಶೋಕ್ ನಗರ, ಬೆಂಗಳೂರು


ನಿಮ್ಮ ಮನಸ್ಸಿನಲ್ಲಿ ಬೆಸ್ಟ್ ಸುಶಿ ತಿನ್ನುವ ಆಲೋಚನೆ ಇದ್ದರೆ, ಎಡೋಕ್ಕಿಂತ ಉತ್ತಮವಾದ ಸ್ಥಳವಿಲ್ಲ. ITC ಗಾರ್ಡೇನಿಯಾದಲ್ಲಿರುವ ಈ ಸ್ಪಿಫಿ ರೆಸ್ಟೊರೆಂಟ್ ಅತ್ಯುತ್ತಮ ಪದಾರ್ಥಗಳನ್ನು ನೀಡುತ್ತದೆ. ನಿಗಿರಿ ಮತ್ತು ಮಕಿ ಸುಶಿ ಇಲ್ಲಿ ಅತ್ಯುತ್ತಮವಾಗಿದೆ. ಇಕಾ ಸುಶಿ ಇಲ್ಲಿನ ಫೇವರೇಟ್​ ಪದಾರ್ಥವಂತೆ.


ವಿಳಾಸ: ITC ಗಾರ್ಡೇನಿಯಾ, 1, ರೆಸಿಡೆನ್ಸಿ ರಸ್ತೆ, ಅಶೋಕ್ ನಗರ, ಬೆಂಗಳೂರು


ಮೊಬೈಲ್ ನಂಬರ್: +918022119898


ಸಮಯ: ಬೆಳಗ್ಗೆ 11.30 ರಿಂದ ರಾತ್ರಿ 12ರ ವರೆಗೆ


ಯುಟಾಯಿ - ಶಾಂಗ್ರಿ-ಲಾ ಹೋಟೆಲ್, ವಸಂತ ನಗರ, ಬೆಂಗಳೂರು


ಐಷಾರಾಮಿ ಶಾಂಗ್ರಿ-ಲಾ ಹೋಟೆಲ್​ನಲ್ಲಿ ನೆಲೆಗೊಂಡಿರುವ ಯುಟಾಯಿ ಸುಶಿಯ ವಿವಿಧ ಪದಾರ್ಥಗಳನ್ನು ನೀಡುತ್ತಾರೆ, ಅಲ್ಲದೇ ಇಲ್ಲಿನ ರುಚಿ ಬಹಳ ವಿಭಿನ್ನ. ಡ್ರ್ಯಾಗನ್ ಮಾಕಿ, ಉದಾಹರಣೆಗೆ, ಫ್ಲೈಯಿಂಗ್ ಫಿಶ್ ರೋಯೊಂದಿಗೆ ಪಾಂಕೋ ಸೀಗಡಿಗಳು ಆಹಾ, ಬೆಸ್ಟ್​ ಲಂಚ್​ ಇಲ್ಲಿ ಮಾಡಬಹುದು. ಸಾಲ್ಮನ್ ಕ್ರೀಮ್ ಚೀಸ್ ಮಾಕಿಯು, ಕ್ರೀಮ್ ಚೀಸ್, ಸಾಲ್ಮನ್ ಫಿಲೆಟ್ ಮತ್ತು ರೋಯೊಂ ಹೀಗೆ ಇಲ್ಲಿ ಹಲವಾರು ವಿಧಗಳಿದೆ.


ಇದನ್ನೂ ಓದಿ: ಗುಂಗುರು ಕೂದಲಿದ್ರೆ ತಲೆಸ್ನಾನ ಮಾಡುವಾಗ ಈ ತಪ್ಪು ಮಾಡ್ಬೇಡಿ


ವಿಳಾಸ: ಶಾಂಗ್ರಿ-ಲಾ ಹೋಟೆಲ್, 18 ನೇ ಮಹಡಿ, 56/6-ಬಿ ಅರಮನೆ ರಸ್ತೆ, ವಸಂತ ನಗರ, ಬೆಂಗಳೂರು


ಮೊಬೈಲ್ ನಂಬರ್: +918045126450


ಸಮಯ: ಮಧ್ಯಾಹ್ನ 1 ರಿಂದ ರಾತ್ರಿ 11ರ ವರೆಗೆ

Published by:Sandhya M
First published: