Students Stress: ವಿದ್ಯಾರ್ಥಿಗಳಿಗೆ ಅವರ ದೇಹವೇ ಮುಜುಗರ ಮೂಡಿಸ್ತಿದ್ಯಾ? ಶಾಕಿಂಗ್ ರಿಪೋರ್ಟ್ ಇಲ್ಲಿದೆ ಓದಿ

45 ಪ್ರತಿಶತಕ್ಕಿಂತ ಹೆಚ್ಚು ಮಕ್ಕಳು ತಮ್ಮ ದೇಹದ ಆಕಾರದಿಂದ ಆತಂಕಿತರಾಗಿದ್ದಾರೆ ಎಂದು NCERT ಸಮೀಕ್ಷೆ ಹೇಳಿದೆ. ಇತ್ತೀಚೆಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಸಮೀಕ್ಷೆ ನಡೆಸಿದೆ. ಇದು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 3 ಲಕ್ಷ ವಿದ್ಯಾರ್ಥಿಗಳ ಸಮೀಕ್ಷೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಯಸ್ಕರರು (Youngsters) ಬಾಲ್ಯ (Childhood) ಮತ್ತು ಹದಿಹರೆಯವನ್ನು (Adolescent) ಅದ್ಭುತ ವಯಸ್ಸು ಎಂದು ಅಂದುಕೊಳ್ಳುತ್ತೇವೆ. ಆ ವಯಸ್ಸಿನಲ್ಲಿ (Age) ಯಾವುದೇ ಒತ್ತಡ (Stress), ಸಮಸ್ಯೆ ಇರಲ್ಲ. ನೀವೂ ಹಾಗೇ ಯೋಚಿಸಿದರೆ ಈ NCERT ಸಮೀಕ್ಷೆಯು ನಿಮ್ಮ ಗ್ರಹಿಕೆಯನ್ನು ಬದಲಾಯಿಸುತ್ತದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3.79 ಲಕ್ಷಕ್ಕೂ ಹೆಚ್ಚು ಮಕ್ಕಳ ಮೇಲೆ ಸಮೀಕ್ಷೆ ನಡೆಸಲಾಗಿದೆ. ಮಕ್ಕಳು ತೀವ್ರ ಒತ್ತಡ ಮತ್ತು ಆತಂಕ ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಇದು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕಾರಣ ಹೊಂದಿದೆ. ಜೊತೆಗೆ 45 ಪ್ರತಿಶತಕ್ಕಿಂತ ಹೆಚ್ಚು ಮಕ್ಕಳು ತಮ್ಮ ದೇಹದ ಆಕಾರದಿಂದ ಆತಂಕಿತರಾಗಿದ್ದಾರೆ ಎಂದು ಹೇಳಿದೆ. ಅದರ ಬಗ್ಗೆ ಹೆಚ್ಚು ವಿವರವಾಗಿ ತಿಳಿಯೋಣ.

    NCERT ಸಮೀಕ್ಷೆ ಏನು ಹೇಳುತ್ತದೆ?

    ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ , ಇತ್ತೀಚೆಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಸಮೀಕ್ಷೆ ನಡೆಸಿದೆ. ಇದು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 3.79 ಲಕ್ಷ ವಿದ್ಯಾರ್ಥಿಗಳ ಸಮೀಕ್ಷೆ ಮಾಡಿದೆ. ಈ ಸಮೀಕ್ಷೆಯ ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳ ಆತಂಕಕ್ಕೆ ಮುಖ್ಯ ಕಾರಣಗಳನ್ನು ತಿಳಿಸಲಾಗಿದೆ.

    ಅವುಗಳೆಂದರೆ ಅಧ್ಯಯನ, ಪರೀಕ್ಷೆ ಮತ್ತು ಫಲಿತಾಂಶ ಎಂದು ಹೇಳಲಾಗಿದೆ. ಮತ್ತೊಂದೆಡೆ 33 ಪ್ರತಿಶತಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಮ್ಮ ದೇಹದ ಆಕಾರದಿಂದಾಗಿ ಒತ್ತಡ ಮತ್ತು ಆತಂಕ ಎದುರಿಸುತ್ತಿದ್ದಾರೆ ಎಂದು ಹೇಳಿದೆ.

    ಇದನ್ನೂ ಓದಿ: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

    ತಮ್ಮ ದೇಹದ ಆಕಾರದ ವಿಷಯದಲ್ಲಿ ಒತ್ತಡ ಅನುಭವಿಸುತ್ತಿದ್ದರೆ ವಿದ್ಯಾರ್ಥಿಗಳು

    ಕನಿಷ್ಠ 73 ಪ್ರತಿಶತ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಿಂದ ತೃಪ್ತರಾಗಿದ್ದಾರೆ. ಶೇಕಡ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ದೇಹದ ಆಕಾರ ಮತ್ತು ಸೌಂದರ್ಯದ ವಿಚಾರದಿಂದ ತೃಪ್ತರಾಗಿಲ್ಲ. ಈ ಸಮೀಕ್ಷೆ ಪ್ರಕಾರ, ಒಟ್ಟು 51 ಪ್ರತಿಶತ ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯಲ್ಲಿ ತೊಂದರೆ ಎದುರಿಸುತ್ತಿದ್ದಾರೆ. 28 ಪ್ರತಿಶತ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳ ಸಮಯದಲ್ಲಿ ಪ್ರಶ್ನೆ ಕೇಳಲು ಹಿಂಜರಿಯುತ್ತಾರೆ.

    ಸಮೀಕ್ಷೆಯ ನಂತರ ಯೋಗ, ಧ್ಯಾನ, ಪ್ರಾಣಾಯಾಮ ವಿದ್ಯಾರ್ಥಿಗಳ ಆಲೋಚನಾ ವಿಧಾನ ಬದಲಾಯಿಸಲು ಮತ್ತು ಒತ್ತಡವನ್ನು ನಿಭಾಯಿಸಲು ಸಹಕಾರಿ ಎಂದು ಹೇಳಲಾಗಿದೆ.

    ಸಮೀಕ್ಷೆ ಹೇಗೆ ನಡೆಯಿತು?

    NCERT ಯ ಮನೋದರ್ಪಣ್ ಸೆಲ್ ಸಮೀಕ್ಷೆ ನಡೆಸಿದೆ. ಶಾಲಾ ವಿದ್ಯಾರ್ಥಿಗಳ ಗ್ರಹಿಕೆಗಳನ್ನು ಅರ್ಥಮಾಡಿಕೊಳ್ಳಲು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಸಮೀಕ್ಷೆ ನಡೆಸಿದೆ. ಇದರಲ್ಲಿ 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು.

    ಜನವರಿ ಮತ್ತು ಮಾರ್ಚ್ 2022 ರ ನಡುವೆ ಮಾಹಿತಿ ಸಂಗ್ರಹಿಸಲಾಗಿದೆ. ಮುಕ್ತವಾಗಿ ಉತ್ತರಿಸಲು ವಿದ್ಯಾರ್ಥಿಗಳ ಹೆಸರನ್ನು ಇದರಲ್ಲಿ ಬಹಿರಂಗ ಮಾಡಿಲ್ಲ.

    ಮಲೇಷ್ಯಾದಲ್ಲಿ 2017ರಿಂದ ಇತ್ತೀಚೆಗೆ ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರ ಸಂಖ್ಯೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಮಲೇಷ್ಯಾದ ಹೆಲ್ಪ್ ಯೂನಿವರ್ಸಿಟಿ ಕೂಡ ಚಂದ್ರ ನಂತಕುಮಾರ್ ನೇತೃತ್ವದಲ್ಲಿ ಮಕ್ಕಳು ಮತ್ತು ಹದಿಹರೆಯದವರ ಮೇಲೆ ಅಧ್ಯಯನ ನಡೆಸಿತು.

    ಒತ್ತಡ ಮತ್ತು ಆತಂಕದ ಮಾನಸಿಕ ಪರಿಣಾಮ ನಿರ್ವಹಿಸಲು ಯೋಗ ಸಹಕಾರಿ

    ಅಧ್ಯಯನದ ವೇಳೆ ಒತ್ತಡ ಮತ್ತು ಆತಂಕದ ಮಾನಸಿಕ ಪರಿಣಾಮ ನಿರ್ವಹಿಸಲು ಮಕ್ಕಳನ್ನು ಯೋಗ ಮತ್ತು ಧ್ಯಾನ ಮಾಡಲು ಹೇಳಲಾಯಿತು. ಆಸನ, ಪ್ರಾಣಾಯಾಮ, ಧಾರಣ ಮತ್ತು ಧ್ಯಾನ ಯೋಗದ ವಿವಿಧ ಪ್ರಕಾರಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

    ಮಕ್ಕಳು ಒತ್ತಡ ಮತ್ತು ಆತಂಕವನ್ನು ನಿಭಾಯಿಸಲು ಯೋಗವು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಹೇಳಿವೆ.  2015 ರಲ್ಲಿ, ಓಹಿಯೋ ಸ್ಟೇಡ್ ವಿಶ್ವವಿದ್ಯಾಲಯದಲ್ಲಿ ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುವ ಮಕ್ಕಳಿಗೆ ಯೋಗ ಸಹಕಾರಿ ಎಂಬ ಬಗ್ಗೆ ಸಂಶೋಧನೆ ನಡೆಸಲಾಯಿತು.

    ಯೋಗ ಮತ್ತು ಧ್ಯಾನವು ಮಕ್ಕಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

    ಎನ್‌ಸಿಇಆರ್‌ಟಿ ಸಮೀಕ್ಷೆಯಲ್ಲಿ ಶೇ. 45 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಮ್ಮ ದೇಹದ ಆಕಾರದಿಂದ ತೃಪ್ತರಾಗಿಲ್ಲ ಎಂದು ಹೇಳಿದೆ. ಪಬ್‌ಮೆಡ್ ಸೆಂಟ್ರಲ್‌ನ ಸಂಶೋಧನೆ 2010 ರ ಜರ್ನಲ್ ಲಿಸ್ಟ್ ಸೈಕಿಯಾಟ್ರಿಯಲ್ಲಿ ಪ್ರಕಟವಾಯಿತು.

    ಇದನ್ನೂ ಓದಿ: ಯೂರಿಕ್ ಆಮ್ಲದಿಂದ ಬರಬಹುದು ಈ ಸಮಸ್ಯೆಗಳು, ಅದಕ್ಕೆ ಪರಿಹಾರ ಇಲ್ಲಿದೆ

    ಇದರಲ್ಲಿ ಯೋಗವನ್ನು ಮಕ್ಕಳು ಮತ್ತು ವಯಸ್ಕರಿಗೆ ಪೂರಕ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಸ್ಥೂಲಕಾಯ ಸೇರಿದಂತೆ ಅವರ ದೇಹದ ಆಕಾರದ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ ಎಂದು ಸಂಶೋಧನೆ ಹೇಳಿದೆ.
    Published by:renukadariyannavar
    First published: