ಸೌಂದರ್ಯ ವರ್ಧಕಗಳನ್ನು ಬಳಸದೆ ನಿಮ್ಮ ತ್ವಚೆಯ ಹೊಳಪನ್ನು ಹೀಗೆ ಹೆಚ್ಚಿಸಿ

ಈ ಫೇಸ್ ಪ್ಯಾಕ್​ ತಯಾರಿಸಲು ಶುಂಠಿಯನ್ನು ಒಣಗಿಸಿ ಪುಡಿ ಮಾಡಿ. ನಂತರ, 1 ಅಥವಾ 2 ಟೀ ಸ್ಪೂನ್ ಶುಂಠಿ ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಒಂದು ಚಮಚ ಜೇನುತುಪ್ಪ, ಒಂದು ಟೀಸ್ಪೂನ್ ಶ್ರೀಗಂಧದ ಪುಡಿ ಮತ್ತು ಎರಡು ಚಮಚ ನಿಂಬೆ ರಸ ಸೇರಿಸಿ.

news18-kannada
Updated:June 19, 2020, 3:02 PM IST
ಸೌಂದರ್ಯ ವರ್ಧಕಗಳನ್ನು ಬಳಸದೆ ನಿಮ್ಮ ತ್ವಚೆಯ ಹೊಳಪನ್ನು ಹೀಗೆ ಹೆಚ್ಚಿಸಿ
ginger
  • Share this:
ಶುಂಠಿ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮಕ್ಕೂ ತುಂಬಾ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕಗಳ ಜೊತೆಗೆ, ಇದು ವಿಟಮಿನ್ ಮತ್ತು ಸತುವುಗಳಂತಹ ಅನೇಕ ಪೋಷಕಾಂಶಗಳು ಇದರಲ್ಲಿವೆ. ಇದು ನಿಮ್ಮ ಚರ್ಮಕ್ಕೆ ಸಾಕಷ್ಟು ಪೌಷ್ಠಿಕಾಂಶವನ್ನು ನೀಡುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ಮಾರುಕಟ್ಟೆಯಲ್ಲಿ ಕಂಡುಬರುವ ಸೌಂದರ್ಯ ಉತ್ಪನ್ನಗಳಲ್ಲಿ ರಾಸಾಯನಿಕಗಳನ್ನು ಬಳಕೆ ಮಾಡುವುದರಿಂದ ಚರ್ಮ ಹಾನಿಗೊಳಗಾಗುತ್ತದೆ. ಆದರೆ ಯಾವುದೇ ಹಾನಿಯಾಗದಂತೆ ಚರ್ಮದ ಆರೋಗ್ಯವನ್ನು ಹೆಚ್ಚಿಸಲು ಶುಂಠಿ ಸಹಾಯಕ. ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದಲ್ಲದೆ, ಗುಳ್ಳೆಗಳನ್ನು ಮತ್ತು ಮೊಡವೆಗಳಂತಹ ಸಮಸ್ಯೆಗಳನ್ನು ದೂರ ಮಾಡುತ್ತವೆ.

ತುರಿಕೆ ಸಮಸ್ಯೆಗಳಿಗೆ ಪರಿಹಾರ:

ಶುಂಠಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಜಿಂಕ್ ಅಂಶಗಳು ಕಂಡು ಬರುತ್ತವೆ. ಇದು ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಶುಂಠಿಯ ತುಂಡನ್ನು ಚರ್ಮದ ಮೇಲೆ ಉಜ್ಜುವುರಿಂದ ಕಲೆ ಮತ್ತು ತುರಿಕೆ ಸಮಸ್ಯೆಯನ್ನು ದೂರ ಮಾಡಬಹುದು.

ಪಿಂಪಲ್ಸ್ ಮತ್ತು ನಂಜು ಗುಳ್ಳೆಗಳ ನಿವಾರಣೆ:
ಶುಂಠಿಯಲ್ಲಿ ನಂಜುನಿರೋಧಕ ಅಂಶಗಳಿದ್ದು, ಇದು ಮೊಡವೆ ಮತ್ತು ಚರ್ಮದ ಮೇಲೆ ಉಂಟಾಗುವ ಗುಳ್ಳೆಗಳನ್ನು ನಿವಾರಿಸುತ್ತದೆ. ಇದಲ್ಲದೆ ಚರ್ಮದ ನಂಜಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಾಶಮಾಡಲು ಶುಂಠಿ ಸಹಾಕ.

ಆ್ಯಂಟಿ ಏಜಿಂಗ್ ಅಂಶ:ಶುಂಠಿಯಲ್ಲಿರುವ ಆ್ಯಂಟಿ ಏಜಿಂಗ್ ಅಂಶಗಳು ನಿಮ್ಮ ಚರ್ಮದ ಮೇಲೆ ಸುಕ್ಕುಗಳು, ಸೂಕ್ಷ್ಮರೇಖೆಗಳು ಮೂಡದಂತೆ ತಡೆಯುತ್ತದೆ. ಇದರಿಂದ ನೀವು ಯೌವ್ವನವನ್ನು ಕಾಪಾಡಿಕೊಳ್ಳಬಹುದು.

ಸ್ಕಿನ್ ಗ್ಲೋಯಿಂಗ್
ಶುಂಠಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶಗಳಿವೆ. ಇದು ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ವಿಟಮಿನ್ ಮತ್ತು ಖನಿಜಾಂಶಗಳು ಇದರಲ್ಲಿದೆ. ಇದು ಚರ್ಮದ ಟ್ಯಾನಿಂಗ್ ಅನ್ನು ತಡೆಯುವುದಲ್ಲದೆ, ಮೈಬಣ್ಣವನ್ನು ಹೆಚ್ಚಿಸುತ್ತದೆ.

ಸುಕ್ಕು ತಡೆಯಲು ಫೇಸ್ ಪ್ಯಾಕ್:
ಈ ಫೇಸ್ ಪ್ಯಾಕ್​ ತಯಾರಿಸಲು ಶುಂಠಿಯನ್ನು ಒಣಗಿಸಿ ಪುಡಿ ಮಾಡಿ. ಇದರ ನಂತರ, 1 ಅಥವಾ 2 ಟೀ ಸ್ಪೂನ್ ಶುಂಠಿ ಪುಡಿಯನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಒಂದು ಚಮಚ ಜೇನುತುಪ್ಪ, ಒಂದು ಟೀಸ್ಪೂನ್ ಶ್ರೀಗಂಧದ ಪುಡಿ ಮತ್ತು ಎರಡು ಚಮಚ ನಿಂಬೆ ರಸ ಸೇರಿಸಿ. ಬಳಿಕ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಇರಿಸಿ. ಇದು ನಿಮ್ಮ ಚರ್ಮವನ್ನು ಬಿಗಿಯಾಗಿ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಮೊಡವೆ ಸಮಸ್ಯೆಯನ್ನು ದೂರ ಮಾಡುವುದಲ್ಲದೆ, ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಆಕರ್ಷಕ ಚರ್ಮ:
ನೀವು ಶುಂಠಿಯನ್ನು ಚರ್ಮದ ಟೋನರ್‌ ಆಗಿ ಬಳಸಬಹುದು. ಇದನ್ನು ಬಳಸುವುದರಿಂದ ನಿಮ್ಮ ಚರ್ಮ ಹೊಳೆಯುವ ಚರ್ಮ ಹೊಳೆಯುವುದಲ್ಲದೆ, ಆರೋಗ್ಯದಿಂದ ಕೂಡಿರುತ್ತದೆ. ಶುಂಠಿ ಚರ್ಮದ ಟೋನರ್‌ ಮಾಡಲು, ನೀವು ಶುಂಠಿ ರಸವನ್ನು ತೆಗೆಯಬೇಕು. ಅದಕ್ಕೆ ಟೀ ಸ್ಪೂನ್ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ. ಈಗ ಈ ಟೋನರನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಇದನ್ನು ನೀವು ಬಯಸಿದಾಗ ಹತ್ತಿ ಪ್ಯಾಡ್‌ನಲ್ಲಿ ಮುಖದ ಮೇಲೆ ಹಚ್ಚಿ. ನಂತರ ಅದನ್ನು 20 ನಿಮಿಷಗಳ ಕಾಲ ಬಿಡಿ. ಆ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಈ ಟೋನರನ್ನು ರಾತ್ರಿಯಿಡೀ ಮುಖದ ಮೇಲೆ ಹಚ್ಚಿ ಮರುದಿನ ಬೆಳಿಗ್ಗೆ ತೊಳೆಯಬಹುದು.
First published:June 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading