Vegetables: ತಲೆಹೊಟ್ಟು ನಿವಾರಣೆಗೆ ಬೆಂಡೆಕಾಯಿ ಮದ್ದು, ತೂಕ ಇಳಿಕೆಗೂ ಸೈ ಈ ತರಕಾರಿ

Ladies finger: ಬೆಂಡೆಕಾಯಿಯಲ್ಲಿರುವ ವಿಟಮಿನ್ ಸಿ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಅಲ್ಲದೇ ಚರ್ಮದಲ್ಲಿ ಉಂಟಾಗಿದ್ದ ಕಲೆಗಳನ್ನು ನಿವಾರಿಸಲೂ ಜೋತುಬಿದ್ದಿದ್ದ ಚರ್ಮವನ್ನು ಬಿಗಿಗೊಳಿಸಲೂ ಸಹಕರಿಸುತ್ತದೆ.ಇನ್ನು ತಲೆಹೊಟ್ಟನ್ನು ನಿವಾರಿಸಲು ಬೆಂಡೆಕಾಯಿಯನ್ನು ನೀರಿನಲ್ಲಿ ಕುದಿಸಿ ಸೋಸಿ ತಣಿಸಿದ ಬಳಿಕ ತಲೆಗೆ ಹಚ್ಚಿಕೊಂಡು ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಉತ್ತಮ ಪರಿಣಾಮ ಕಂಡುಬರುತ್ತದೆ

ಬೆಂಡೆ

ಬೆಂಡೆ

  • Share this:
    ನಮ್ಮ ಪ್ರಕೃತಿಯಲ್ಲಿ ಸಿಗುವ ಎಲ್ಲಾ ರೀತಿಯ ತರಕಾರಿ (Vegetables), ಸೊಪ್ಪು ಮತ್ತು ಹಣ್ಣುಗಳಿಂದ (Fruits) ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಲಭಿಸುತ್ತವೆ. ನಮ್ಮ ದೇಹ ಟ್ರಿಲಿಯನ್ ಸಂಖ್ಯೆಯ ಜೀವಕೋಶಗಳಿಂದ ನಿರ್ಮಾಣವಾಗಿದೆ. ಆ ಎಲ್ಲಾ ಜೀವಕೋಶಗಳಿಗೆ ಪ್ರತಿದಿನ ಪೌಷ್ಠಿಕಾಂಶ, ಖನಿಜಾಂಶ, ವಿಟಮಿನ್ (Vitamin), ಮಿನರಲ್ಸ್ (Minerals), ಪೋಷಕಾಂಶಗಳ ಅಗತ್ಯವಿರುತ್ತದೆ. ಹೀಗಾಗಿ ಪ್ರಕೃತಿಯಲ್ಲಿ(Nature) ದೊರೆಯುವ ಬಹುತೇಕ ತರಕಾರಿಗಳು (Vegetables) ನಮ್ಮ ದೇಹಕ್ಕೆ ಸಹಕಾರಿ. ಇಂಥಹ ತರಕಾರಿಯಲ್ಲಿ ಬೆಂಡೆಕಾಯಿ ಸಹ ಒಂದು. ಇನ್ನು ಬೆಂಡೆಕಾಯಿ ಎಂದರೆ ಕೆಲವರಿಗೆ ಅಷ್ಟಕಷ್ಟೆ. ಆದರೆ ಈ ತರಕಾರಿಯಿಂದಾಗುವ ಪ್ರಯೋಜನಗಳು ಅಷ್ಟಿಷ್ಟಲ್ಲ. ಇದು ಮನುಷ್ಯನ ಹಲವು ಆನಾರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಜೀವಸತ್ವವನ್ನು ಹೊಂದಿದೆ.

    ಇನ್ನು ಬೆಂಡೆ ಕಾಯಿ ಇಡೀ ವರ್ಷ ಸಿಗುವ ತರಕಾರಿಯಾಗಿದ್ದು ವಿವಿಧ ವಿಟಮಿನ್ ಗಳು ಖನಿಜ ಮತ್ತು ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿರುವ ಕರಗದ ನಾರು ಮಲಬದ್ದತೆಯನ್ನು ನಿವಾರಿಸುತ್ತದೆ. ಬೆಂಡೆಯನ್ನು ಆದಷ್ಟು ಎಳೆಯಾಗಿರುವಾಗಲೆ ಸೇವಿಸುವುದು ಉತ್ತಮ.

    1) ಕ್ಯಾನ್ಸರ್ ವಿರುದ್ಧ ಹೋರಾಟ: ಕೆಲವು ಸಂಶೋಧನೆಗಳ ಪ್ರಕಾರ ಬೆಂಡೆಕಾಯಿಯಲ್ಲಿ ಇತರೆ ತರಕಾರಿಗಳಿಂತ ಹೆಚ್ಚಿನ ಪ್ರಮಾಣದ ಆ್ಯಂಟಿ ಆಕ್ಸಿಡೆಂಟ್‍ಗಳಿದ್ದು, ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಕರುಳಿನಲ್ಲಿ ಉಂಟಾಗುವ ಹಾನಿಕಾರಕ ಕ್ಯಾನ್ಸರ್ ಅಂಶಗಳನ್ನು ಇದು ನಾಶ ಮಾಡುತ್ತಾ ದೇಹವನ್ನು ರಕ್ಷಿಸುತ್ತದೆ.

    2) ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣ: ಬೆಂಡೆಕಾಯಿಯಲ್ಲಿ ಇರುವಂತಹ ನಾರಿನಾಂಶವು ಇದಕ್ಕೆ ಪ್ರಮುಖ ಕಾರಣವಾಗಿದೆ. ಯುಜೆನಾಲ್ ಎನ್ನುವಂತಹ ಒಂದು ರೀತಿಯ ನಾರಿನಾಂಶವು ಜೀರ್ಣಕ್ರಿಯೆ ನಿಧಾನಗೊಳಿಸುವುದು ಮತ್ತು ರಕ್ತನಾಳದಲ್ಲಿ ಇರುವಂತಹ ಸಕ್ಕರೆ ಹೀರಿಕೊಳ್ಳುವುದು. ಊಟದ ಬಳಿಕ ಸಕ್ಕರೆ ಮಟ್ಟವು ಏರಿಕೆ ಆಗುವುದನ್ನು ಇದು ತಡೆಯುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು. ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು..

    ಇದನ್ನೂ ಓದಿ: ಚಳಿಗಾಲದಲ್ಲಿ ಸದಾ ಬೆಚ್ಚಗೆ ಇರಲು ಕಾಫಿಯ ಜೊತೆಗೆ ಈ ವಸ್ತುಗಳನ್ನ ಸೇರಿಸಿ ಕುಡಿಯಿರಿ

    3) ಮಲಬದ್ದತೆ ಸಮಸ್ಯೆ ನಿವಾರಣೆ: ಮಲಬದ್ಧತೆಯ ಸಮಸ್ಯೆ ಇರುವವರು ಬೆಂಡೆಕಾಯಿಯನ್ನು ಹೆಚ್ಚಾಗಿ ಬಳಸುವುದು ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಬೆಂಡೆಕಾಯಿಯಿಂದ ಮಾಡಿದ ಪದಾರ್ಥಗಳ ಸೇವನೆಯಿಂದ ಮಲಬದ್ಧತೆಯ ಸಮಸ್ಯೆ ಪರಿಹಾರವಾಗುತ್ತದೆ.

    4) ತೂಕ ಇಳಿಕೆಗೆ ಸಹಕಾರಿ: ಬೆಂಡೆಕಾಯಿಯಲ್ಲಿ ಉತ್ತಮ ಕಾರ್ಬೋಹೈಡ್ರೇಟ್‌ಗಳಿವೆ, ಇದು ತೂಕ ನಿಯಂತ್ರಣದಲ್ಲಿಡಲು  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದಲ್ಲದೆ, ಬೆಂಡೆಕಾಯಿಯಲ್ಲಿ ಸ್ಥೂಲಕಾಯ ವಿರೋಧಿ ಗುಣಲಕ್ಷಣಗಳು ಸಹ ಕಂಡುಬರುತ್ತವೆ, ಇದು ದೇಹ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಆದ್ದರಿಂದ ನೀವು ತೂಕವನ್ನು ಹೆಚ್ಚಿಸುವ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಖಂಡಿತವಾಗಿಯೂ ಬೆಂಡೆಕಾಯಿಯನ್ನ ಆಹಾರದಲ್ಲಿ ಸೇವಿಸಿ.

    5) ಉತ್ತಮ ದೃಷ್ಟಿಗಾಗಿ: ಬೆಂಡೆಕಾಯಿ ತಿನ್ನುವುದು ಕಣ್ಣುಗಳ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವ ಜನರು ತಮ್ಮ ಆಹಾರದಲ್ಲಿ ಲೇಡಿ ಫಿಂಗರ್ ಅನ್ನು ಸೇವಿಸುವುದು ಒಳ್ಳೆಯದು. ಏಕೆಂದರೆ ಬೆಂಡೆಕಾಯಿ‌ಯಲ್ಲಿ ಬೀಟಾ ಕ್ಯಾರೋಟಿನ್ ಇದ್ದು, ಇದು ಐಸೈಟ್‌ಗೆ ಒಳ್ಳೆಯದು.

    6) ಸೂರ್ಯನ ಪ್ರಕರ ಕಿರಣದಿಂದ ರಕ್ಷಣೆ: ಬಿಸಿಲಿನ ಝಳ ಹೆಚ್ಚಿರುವ ಪ್ರದೇಶಗಳಲ್ಲಿ ಕೊಂಚಕಾಲ ಬಿಸಿಲಿನಲ್ಲಿದ್ದರೆ ತಲೆ ತಿರುಗುತ್ತದೆ. ಬಿಸಿಲಿನ ಝಳದಿಂದ ಬಿಸಿಯಾಗಿರುವ ದೇಹವನ್ನು ತಂಪಾಗಿಸಲು ಹೆಚ್ಚಿನ ರಕ್ತ ವ್ಯಯವಾಗುವುದರಿಂದ ಮೆದುಳಿಗೆ ಅಗತ್ಯವಿದ್ದಷ್ಟು ರಕ್ತ ಪೂರೈಕೆಯಾಗದೇ ತಲೆ ಸುತ್ತುತ್ತದೆ. ಬೆಂಡೆಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಈ ಕೊರತೆಯ ವಿರುದ್ಧ ದೇಹ ಹೆಚ್ಚು ಬಲಶಾಲಿಯಾಗುತ್ತದೆ.

    ಇದನ್ನೂ ಓದಿ: ಎದೆ ಹಾಲು ಹೆಚ್ಚಿಸಲು ತಾಯಂದಿರು ಈ ಆಹಾರ ಪದಾರ್ಥಗಳನ್ನ ತಪ್ಪದೇ ಸೇವಿಸಿ

    7) ಕೂದಲ ಹಾಗೂ ಚರ್ಮ ರಕ್ಷಣೆ: ಬೆಂಡೆಕಾಯಿಯಲ್ಲಿರುವ ವಿಟಮಿನ್ ಸಿ (Vitamin C) ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಅಲ್ಲದೇ ಚರ್ಮದಲ್ಲಿ ಉಂಟಾಗಿದ್ದ ಕಲೆಗಳನ್ನು ನಿವಾರಿಸಲೂ ಜೋತುಬಿದ್ದಿದ್ದ ಚರ್ಮವನ್ನು ಬಿಗಿಗೊಳಿಸಲೂ ಸಹಕರಿಸುತ್ತದೆ. ಇನ್ನು ತಲೆಹೊಟ್ಟನ್ನು ನಿವಾರಿಸಲು ಬೆಂಡೆಕಾಯಿಯನ್ನು ನೀರಿನಲ್ಲಿ ಕುದಿಸಿ ಸೋಸಿ ತಣಿಸಿದ ಬಳಿಕ ತಲೆಗೆ ಹಚ್ಚಿಕೊಂಡು ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಉತ್ತಮ ಪರಿಣಾಮ ಕಂಡುಬರುತ್ತದೆ.
    Published by:ranjumbkgowda1 ranjumbkgowda1
    First published: