VIDEO: ಇದು ಸುರೇಶ್​ ರೈನಾ ಅವರ ದೇಸಿ ಸ್ಟೈಲ್ ಫಿಟ್ನೆಸ್​ ಮಂತ್ರ

ಯೋ ಯೋ ಟೆಸ್ಟ್​ ತಂತ್ರಾಂಶ ಆಧಾರಿತ ಪ್ರಕ್ರಿಯೆ ಆಗಿದೆ. ಇಲ್ಲಿ 5 ಮೀಟರ್, 20 ಮೀಟರ್ ಗಳ ಎರಡು ಗುರಿಗಳನ್ನು ನೀಡಲಾಗುತ್ತದೆ.

ಸುರೇಶ್ ರೈನಾ

ಸುರೇಶ್ ರೈನಾ

  • News18
  • Last Updated :
  • Share this:

ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಪ್ರಥಮ ದರ್ಜೆ ಕ್ರಿಕೆಟ್​ ಅಂಕಿ ಅಂಶಗಳು ಮಾತ್ರ ಸಾಕುವುದಿಲ್ಲ. ಬದಲಾಗಿ ಆಟಗಾರರು ತಮ್ಮ ಫಿಟ್ನೆಸ್​ ಅನ್ನು ಸಾಬೀತು ಪಡಿಸಬೇಕಾಗುತ್ತದೆ. ಅದರಲ್ಲೂ ಇತ್ತೀಚೆಗೆ ಜಾರಿಯಲ್ಲಿರುವ ಹೊಸ ಫಿಟ್ನೆಸ್​ ಮಂತ್ರ ಯೋ ಯೋ ಟೆಸ್ಟ್​​ನಲ್ಲಿ ಪಾಸಾಗಬೇಕಿದ್ದರೆ ತುಸು ಹೆಚ್ಚೇ ಬೆವರಿಳಿಸಬೇಕಾಗುತ್ತದೆ.

ರಗ್ಬಿ ಆಟಗಾರರ ದೈಹಿಕ ಸಾಮರ್ಥ್ಯ ಅಳೆಯಲು ಬಳಸುತ್ತಿದ್ದ ಫಿಟ್ನೆಸ್​ ಟೆಸ್ಟ್​ ಈಗ ಎಲ್ಲ ಕ್ರೀಡಾ ಆಟಗಾರರ ಆಯ್ಕೆಗೆ ಪರಿಗಣಿಸಲಾಗುತ್ತಿದೆ. ಇದರಲ್ಲಿ ಉಸಿರಾಟದ ಮೇಲಿನ ನಿಯಂತ್ರಣದ ಹಾಗೂ ದೈಹಿಕ ಸಾಮರ್ಥ್ಯದ ಖಚಿತ ಮಾಹಿತಿ ಲಭಿಸುತ್ತದೆ. ಈ ಹಿಂದೆ ಯೋ ಯೋ ಟೆಸ್ಟ್​​ನಲ್ಲಿ ಫೇಲಾಗುವ ಮೂಲಕ ಸುದ್ದಿಯಾದವರಲ್ಲಿ ಯುವರಾಜ್ ಸಿಂಗ್ ಮತ್ತು ಸುರೇಶ್​ ರೈನಾ ಪ್ರಮುಖರಾಗಿದ್ದರು.

ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿರುವ ರೈನಾ ಮತ್ತೆ ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. 2019 ರ ವಿಶ್ವಕಪ್​ ಆಯ್ಕೆಗೂ ಮುನ್ನ ಟೀಂ ಇಂಡಿಯಾವನ್ನು ಮತ್ತೆ ಕೂಡಿಕೊಳ್ಳಬೇಕೆಂಬ ತಯಾರಿಯಲ್ಲಿರುವ ರೈನಾ ತನ್ನ ವರ್ಕೌಟ್​ನ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಫಿಟ್ನೆಸ್​ಗೆ ಅಡ್ಡ ಮಾರ್ಗವಿಲ್ಲ ಎಂಬ ತತ್ವದೊಂದಿಗೆ ಸುರೇಶ್​ ರೈನಾ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಜಿಮ್​ನಲ್ಲಿ ತನ್ನ ಸ್ನೇಹಿತನನ್ನು ಎತ್ತುಕೊಂಡು ತಾಲೀಮು ನಡೆಸುತ್ತಿರುವ ವಿಡಿಯೋ ಹಂಚಿಕೊಂಡಿರುವ ರೈನಾ ಐಪಿಎಲ್​​ಗೆ ಸಕಲ ತಯಾರಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

 
 
 
 
View this post on Instagram
 
 
 

✌️👌👍

A post shared by Suresh Raina (@sureshraina3) on

ದೀರ್ಘಕಾಲದವರೆಗೆ ತಂಡದಿಂದ ಹೊರಗುಳಿದಿರುವ ಸುರೇಶ್​ ರೈನಾ ಜಿಮ್​ನಲ್ಲಿ ಸಖತ್ತಾಗೆ ದೇಹ ದಂಡಿಸುತ್ತಿದ್ದಾರೆ. ಜುಲೈ 2018 ರಲ್ಲಿ ಕೊನೆಯ ಬಾರಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ ಮತ್ತೆ ತಂಡಕ್ಕೆ ಸೇಪರ್ಡೆಯಾಗಿರಲಿಲ್ಲ.  ಈಗ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿ, ವಿಶ್ವಕಪ್​ಗೂ ಮುನ್ನ ಆಯ್ಕೆಗಾರರ ಗಮನ ಸೆಳೆಯಲು ತಯಾರಾಗಿದ್ದಾರೆ. ಅದಕ್ಕಾಗಿ ಯೋ ಯೋ ಟೆಸ್ಟ್​ನ ಸಕಲ ವಿದ್ಯೆಗಳನ್ನು ಕಲಿಯುತ್ತಿದ್ದಾರೆ. ಈ ಮೂಲಕ ಮತ್ತೆ ಭಾರತದ ತಂಡ ಫೀಲ್ಡಿಂಗ್​ ಅನ್ನು ಮುನ್ನೆಡೆಸಲು ರೈನಾ ಕಠಿಣ ಪರಿಶ್ರಮದಲ್ಲಿ ತೊಡಗಿದ್ದಾರೆ.

 
 
 
 
View this post on Instagram
 
 
 

✌️ #fitnessgoals #training

A post shared by Suresh Raina (@sureshraina3) on

ಯೋ ಯೋ ಟೆಸ್ಟ್​ ತಂತ್ರಾಂಶ ಆಧಾರಿತ ಪ್ರಕ್ರಿಯೆ ಆಗಿದೆ. ಇಲ್ಲಿ 5 ಮೀಟರ್, 20 ಮೀಟರ್ ಗಳ ಎರಡು ಗುರಿಗಳನ್ನು ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಆರಂಭ ಹಾಗೂ ಕೊನೆಯ ಗುರಿಯನ್ನು ಓಡಿ ಪೂರೈಸಬೇಕಿದೆ. ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ಅಂಕಗಳು ನೀಡಲಾಗುತ್ತಿದ್ದು, ಇದನ್ನು ಪಾಸಾಗಬೇಕಾದರೆ 21 ಅಂಕ ಗಳಿಸಬೇಕು. ಈ ಹಿಂದೆ ಯುವಿ, ರೈನಾ 16 ಅಂಕ ಗಳಿಸಲು ಶಕ್ತರಾಗಿದ್ದರು.

First published: