• Home
  • »
  • News
  • »
  • lifestyle
  • »
  • Weight Loss Tips: ಈ 5 ಸೂಪರ್ ಫುಡ್​ಗಳಿದ್ರೆ ಸಾಕು ತೂಕ ಇಳಿಸೋದು ಬಹಳ ಸುಲಭ

Weight Loss Tips: ಈ 5 ಸೂಪರ್ ಫುಡ್​ಗಳಿದ್ರೆ ಸಾಕು ತೂಕ ಇಳಿಸೋದು ಬಹಳ ಸುಲಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Superfoods For Weight Loss: ನೀವು ನಿಜವಾಗಿಯೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದರೆ, ನಿಮ್ಮ ಆಹಾರ ಪದ್ದತಿ ನೀವು ಮಾಡುವ ವ್ಯಾಯಾಮಕ್ಕೆ ಅನುಗುಣವಾಗಿರಬೇಕು. ಸರಿಯಾದ ಪ್ರಮಾಣದಲ್ಲಿ ತಿನ್ನುವುದು ಎಂಬ ಅಂಶವು ಆರೋಗ್ಯಕರ ತೂಕ ಇಳಿಸಲು ಸಹಾಯ ಮಾಡುತ್ತದೆ.

  • Share this:

ಈ ದೇಹದ ತೂಕವನ್ನು (Weight Loss) ಇಳಿಸಿಕೊಳ್ಳುವ ವಿಷಯಕ್ಕೆ ಬಂದರೆ ನಾವು ಏನೆಲ್ಲಾ ಡಯಟ್ ಗಳನ್ನು ಮತ್ತು ಕಠಿಣವಾದ ತಾಲೀಮನ್ನು ಸಹ ಫಾಲೋ ಮಾಡುತ್ತಿರುತ್ತೇವೆ. ಅನೇಕ ಸಂದರ್ಭಗಳಲ್ಲಿ ಈ ಡಯಟ್ (Diet) ಮತ್ತು ತಾಲೀಮಿಗೆ ತಕ್ಕಂತೆ ದೇಹದಲ್ಲಿನ ತೂಕ ಕಡಿಮೆ ಆಗಿರುತ್ತದೆ. ಇನ್ನೂ ಕೆಲವೊಮ್ಮೆ ಈ ಡಯಟ್ ಮತ್ತು ತಾಲೀಮು ಅಷ್ಟಾಗಿ ಏನೂ ಕೆಲಸ ಮಾಡಿರುವುದಿಲ್ಲ ಅಂತ ಹೇಳುವುದನ್ನು ಸಹ ನಾವು ಕೇಳಿರುತ್ತೇವೆ. ಮುಖ್ಯವಾಗಿ ಇಂತಹ ಸಂದರ್ಭದಲ್ಲಿ ಎಂತಹ ಆಹಾರ (Food)  ಸೇವಿಸಬೇಕು ಅನ್ನೋ ಗೊಂದಲ ಮಾತ್ರ ಅನೇಕರಿಗೆ ಇದ್ದದ್ದನ್ನು ನಾವು ನೋಡುತ್ತೇವೆ. ಅನೇಕ ಪೌಷ್ಟಿಕತಜ್ಞರು ಅನೇಕ ಬೇರೆ ಬೇರೆ ಸಲಹೆಗಳನ್ನು (Tips)  ನೀಡುವುದನ್ನು ನಾವು ನೋಡುತ್ತೇವೆ. ಯಾವುದು ಫಾಲೋ ಮಾಡುವುದು ಮತ್ತು ಯಾವುದನ್ನು ಬಿಡುವುದು ಅನ್ನೋ ಗೊಂದಲಕ್ಕೆ ಇಲ್ಲಿ ಉತ್ತರವಿದೆ ನೋಡಿ.


ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸುವುದು ಮುಖ್ಯವಾಗುತ್ತದೆ..


ನೀವು ನಿಜವಾಗಿಯೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದರೆ, ನಿಮ್ಮ ಆಹಾರ ಪದ್ದತಿ ನೀವು ಮಾಡುವ ವ್ಯಾಯಾಮಕ್ಕೆ ಅನುಗುಣವಾಗಿರಬೇಕು. ಸರಿಯಾದ ಪ್ರಮಾಣದಲ್ಲಿ ತಿನ್ನುವುದು ಎಂಬ ಅಂಶವು ಆರೋಗ್ಯಕರ ತೂಕ ಇಳಿಸಲು ಸಹಾಯ ಮಾಡುತ್ತದೆ.


ದೇಹದ ತೂಕ ಇಳಿಸಿಕೊಳ್ಳಲು ಸೇಬು ಅಥವಾ ದ್ರಾಕ್ಷಿ ಹಣ್ಣಿನ ಬಗ್ಗೆ ನೀವು ಕೇಳಿರಬಹುದು, ಆದರೆ ಪೌಷ್ಟಿಕ ತಜ್ಞೆ ಡಾ. ರೋಹಿಣಿ ಪಾಟೀಲ್ ಅವರು ದೇಹದ ತೂಕವನ್ನು ಇಳಿಸುವ ಆಹಾರಕ್ಕೆ ಪರಿಪೂರ್ಣವಾಗಿ ಸೇರಿಸಿಕೊಳ್ಳುವ ಕೆಲವು ಕಡಿಮೆ ತಿಳಿದಿರುವ ಸೂಪರ್ ಫುಡ್ ಗಳ ಬಗ್ಗೆ ಹೇಳಿದ್ದಾರೆ ನೋಡಿ.


1. ಮಖಾನ (ಫಾಕ್ಸ್ ನಟ್ಸ್/ಕಮಲದ ಬೀಜ)


ಮಖಾನಾ ಜನಪ್ರಿಯ ಚಹಾ ಸಮಯದ ತಿಂಡಿಯಾಗಲು ಒಂದು ಕಾರಣವೆಂದರೆ ಅವು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಮಖಾನಾ ನಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಏಕೆಂದರೆ ಇದು ಯಕೃತ್ತಿನ ಮೇಲೆ ನಿರ್ವಿಷಗೊಳಿಸುವ ಪರಿಣಾಮವನ್ನು ಬೀರುತ್ತದೆ, ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹ ತುಂಬಾ ಸಹಾಯ ಮಾಡುತ್ತದೆ.


2. ಅರಿಶಿನ


ಅರಿಶಿನ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅರಿಶಿನವು ಜೀರ್ಣಕಾರಿ ರಸವನ್ನು ಸೃಷ್ಟಿಸುತ್ತದೆ, ಅದು ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಮಾತ್ರವಲ್ಲದೆ ಅದರ ಚಯಾಪಚಯ ಕ್ರಿಯೆಗೂ ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಅರಿಶಿನವನ್ನು ಸೇರಿಸುವುದರಿಂದ ನೀವು ಬೇಗನೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: ಆಹಾರ ಪ್ರಿಯರ ಫೇವರೇಟ್ ಈ ಮಿಲಿಟರಿ ಹೋಟೆಲ್​ಗಳು, ಇದರ ಇತಿಹಾಸ ರೋಚಕ


3. ಪೇರಳೆ ಹಣ್ಣು


ಪೇರಳೆ ಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಸಿ ಅಂಶವಿರುತ್ತದೆ. ಅಗತ್ಯವಿರುವಷ್ಟು ವಿಟಮಿನ್ ಸಿ ಹೊಂದಿರುವ ವ್ಯಕ್ತಿಗಳು ಕಡಿಮೆ ವಿಟಮಿನ್ ಸಿ ಹೊಂದಿರುವ ವ್ಯಕ್ತಿಗಳೊಂದಿಗೆ ಹೋಲಿಸಿದಾಗ ಅವರು ಮಧ್ಯಮ ಪ್ರಮಾಣದ ವ್ಯಾಯಾಮ ಮಾಡಿದಾಗ ತಮ್ಮ ಕೊಬ್ಬನ್ನು 30 ಪ್ರತಿಶತದಷ್ಟು ಹೆಚ್ಚು ಆಕ್ಸಿಡೀಕರಣಗಳಿಸಿಕೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ. ಹೀಗಾಗಿ, ವಿಟಮಿನ್ ಸಿ ಕೊರತೆಯಿರುವ ಜನರು ಕೊಬ್ಬಿನ ದ್ರವ್ಯರಾಶಿ ನಷ್ಟಕ್ಕೆ ಹೆಚ್ಚು ಪ್ರತಿರೋಧಕವಾಗಿರಬಹುದು. ಪೇರಳೆ ಹಣ್ಣುಗಳನ್ನು ತಿನ್ನುವುದರಿಂದ ಹಸಿವು ಆಗುವುದಿಲ್ಲ, ಎಂದರೆ ಹೊಟ್ಟೆ ತುಂಬಿದ ಸಂತೃಪ್ತಿಯ ಭಾವನೆ ಇರುತ್ತದೆ.
4. ಸಿಹಿ ಆಲೂಗಡ್ಡೆ (ಗೆಣಸು)


ಸಿಹಿ ಆಲೂಗಡ್ಡೆಗಳು ರುಚಿಕರವಾಗಿರುವುದಲ್ಲದೆ, ಪೌಷ್ಟಿಕಾಂಶದಿಂದ ಸಹ ತುಂಬಿರುತ್ತವೆ. ಇದು ಉತ್ಕರ್ಷಣ ನಿರೋಧಕಗಳು, ಎ, ಸಿ, ಬಿ ಮತ್ತು ಮ್ಯಾಂಗನೀಸ್ ನಂತಹ ಜೀವಸತ್ವಗಳಿಂದ ತುಂಬಿರುತ್ತದೆ. ಅವುಗಳಲ್ಲಿ ನಾರಿನಂಶವು ಅಧಿಕವಾಗಿರುವುದರಿಂದ ಅವು ಹಸಿವನ್ನು ತಣಿಸುತ್ತದೆ, ಇದು ತೂಕ ಇಳಿಕೆ ಮತ್ತು ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ನೀವು ಅವುಗಳನ್ನು ಸೈಡ್ ಡಿಶ್ ಆಗಿ ಸಹ ಅವುಗಳನ್ನು ಸೇವಿಸಬಹುದು.


ಇದನ್ನೂ ಓದಿ: ಕೊರೋನಾದಿಂದ ಹೆಚ್ಚಾಗಿದೆ ಈ ಗಂಭೀರ ಸಮಸ್ಯೆ, ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಯಲು


5. ವಾಲ್ನಟ್


ತೂಕ ಇಳಿಸಲು ಉತ್ತಮವಾಗಿರುವ ಸೂಪರ್ ‌ಫುಡ್ ಗಳಲ್ಲಿ ವಾಲ್ನಟ್ ಸಹ ಒಂದಾಗಿದೆ. ಅವು ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ, ಇದು ಅದ್ಭುತವಾದ ಹಸಿವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. ವಾಲ್ನಟ್ ಗಳು ಹೃದಯವನ್ನು ಆರೋಗ್ಯಕರವಾಗಿಡುವ ಮೂಲಕ ಹೃದಯಾಘಾತದ ಅಪಾಯವನ್ನು ಸಹ ಕಡಿಮೆ ಮಾಡುತ್ತವೆ. ಅವು ಕೊಬ್ಬು ಸುಡುವಿಕೆಯನ್ನು ಉತ್ತೇಜಿಸಲು ಮತ್ತು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತವೆ.

Published by:Sandhya M
First published: