• Home
  • »
  • News
  • »
  • lifestyle
  • »
  • Omicron XBB: ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಈ ಸೂಪರ್‌ಫುಡ್‌ಗಳು

Omicron XBB: ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಈ ಸೂಪರ್‌ಫುಡ್‌ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Superfoods To Boost Immunity: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಏನೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಬೇಕು ಅಂತ ಇಲ್ಲಿ ವಿವರಿಸಲಾಗಿದೆ ನೋಡಿ.

  • Share this:

ಸುಮಾರು 3 ವರ್ಷಗಳೇ ಆಗ್ತಾ ಬಂತು, ಆದರೂ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಮಾತ್ರ ಸಂಪೂರ್ಣವಾಗಿ ಕಡಿಮೆ ಆಗಿಯೇ ಇಲ್ಲ ಅಂತ ಹೇಳಬಹುದು. ಕೋವಿಡ್-19 ವೈರಸ್ ಇನ್ನೂ ಹಾಗೆಯೇ ರೂಪಾಂತರಗೊಳ್ಳುತ್ತಿರುವುದರಿಂದ ಕೋವಿಡ್ ಇನ್ನೂ ನಮಗೆ ದೊಡ್ಡ ಭಯವಾಗಿ ಉಳಿದಿದೆ ಅಂತ ಹೇಳಿದರೆ ಸುಳ್ಳಲ್ಲ. ಓಮಿಕ್ರಾನ್ ನ ಇತ್ತೀಚಿನ ರೂಪಾಂತರವು ಅನೇಕ ದೇಶಗಳಲ್ಲಿ ಅನೇಕ ಜನರಲ್ಲಿ ಕಳವಳಕ್ಕೆ ಕಾರಣವಾಗಿದೆ, ಏಕೆಂದರೆ ಇದು ಅದರ ಹಿಂದಿನ ರೂಪಾಂತರಕ್ಕಿಂತಲೂ ವೇಗವಾಗಿ ಹರಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ನೀವು ಕೋವಿಡ್ ನ ಎರಡು ಲಸಿಕೆ ಪಡೆದಿದ್ದರೂ ಸಹ, ನೀವು ಇನ್ನೂ ಜಾಗರೂಕರಾಗಿರಬೇಕು ಅಂತ ಹೇಳ್ತಾರೆ ತಜ್ಞರು.


ಮೊದಲೇ ಹೇಳಿದಂತೆ ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದೊಂದೇ ಇದಕ್ಕೆ ರಾಮಬಾಣ. ಹಾಗಾದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಏನೆಲ್ಲಾ ಆಹಾರ ಪದಾರ್ಥಗಳನ್ನು ಸೇವಿಸಬೇಕು ಅಂತ ಇಲ್ಲಿ ವಿವರಿಸಲಾಗಿದೆ ನೋಡಿ.


ಒಮಿಕ್ರಾನ್ ರೂಪಾಂತರ ಎಕ್ಸ್ಬಿಬಿ (XBB) ಎಷ್ಟು ವೇಗವಾಗಿ ಹರಡುತ್ತಿದೆ?


ಎಕ್ಸ್‌ಬಿಬಿ ಒಂದು ಮರುಸಂಯೋಜಿತ ರೂಪಾಂತರವಾಗಿದೆ ಮತ್ತು ಇದು 2 ಓಮಿಕ್ರಾನ್ ಉಪ-ರೇಖೆಗಳಾದ ಬಿಎ.2.10.1 ಮತ್ತು ಬಿಎ.2.75 ಸಂಯೋಜಿಸಿದ ನಂತರ ರೂಪುಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತನ್ನ ಸಾಂಕ್ರಾಮಿಕ ರೋಗಶಾಸ್ತ್ರೀಯ ವರದಿಯಲ್ಲಿ, ಜಿಐಎಸ್ಎಐಡಿಗೆ ಸಲ್ಲಿಸಿದ ಅನುಕ್ರಮಗಳಿಂದ, ಎಕ್ಸ್‌ಬಿಬಿ ಜಾಗತಿಕವಾಗಿ 1.3 ಪ್ರತಿಶತದಷ್ಟು ಹರಡುವಿಕೆಯನ್ನು ಹೊಂದಿದೆ ಮತ್ತು ಇದು 35 ದೇಶಗಳಲ್ಲಿ ಪತ್ತೆಯಾಗಿದೆ, ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 36 ಎಕ್ಸ್‌ಬಿಬಿ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದೆ. ಈ ಪೈಕಿ 32 ರೋಗಿಗಳು ಹೋಮ್ ಐಸೋಲೇಷನ್ ನಲ್ಲಿ ಚೇತರಿಸಿಕೊಂಡಿದ್ದು, ಉಳಿದ 4 ರೋಗಿಗಳನ್ನು ಮುನ್ನೆಚ್ಚರಿಕೆಗಾಗಿ ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.


superfoods to boost immunity amid Omicron XBB spread
ಸಾಂದರ್ಭಿಕ ಚಿತ್ರ


ಲಸಿಕೆ ಹಾಕಿಸಿಕೊಂಡವರಿಗೂ ಸೋಂಕು ತಗುಲಿದೆ


36 ರೋಗಿಗಳಲ್ಲಿ ಇಬ್ಬರನ್ನು ಹೊರತುಪಡಿಸಿ, ಎಲ್ಲರಿಗೂ ಲಸಿಕೆ ಹಾಕಲಾಗಿತ್ತು, ಮತ್ತು ಐವರು ಬೂಸ್ಟರ್ ಡೋಸ್ ಅನ್ನು ಸಹ ತೆಗೆದುಕೊಂಡಿದ್ದರು. ಈ ಹಿಂದೆ ಆರು ಎಕ್ಸ್‌ಬಿಬಿ ರೋಗಿಗಳಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಎಕ್ಸ್‌ಬಿಬಿ ಪತ್ತೆಯ ಹಿನ್ನೆಲೆಯಲ್ಲಿ, ರಾಜ್ಯ ಕೋವಿಡ್ -19 ಕಾರ್ಯಪಡೆಯ ಸಭೆಯನ್ನು ಅಕ್ಟೋಬರ್ 24 ರಂದು ನಡೆಸಲಾಯಿತು.


ತಜ್ಞರು ಈ ರೂಪಾಂತರವು ಯಾವುದೇ ಗಂಭೀರ ರೋಗಲಕ್ಷಣಗಳನ್ನು ಉಂಟು ಮಾಡುವುದಿಲ್ಲ, ಆದರೆ, ಇದು ರೋಗನಿರೋಧಕ ಶಕ್ತಿ ಕಡಿಮೆ ಮಾಡುವ ಸಾಮರ್ಥ್ಯಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಚಳಿಗಾಲದ ನಿಮ್ಮ ಡಯಟ್​ನಲ್ಲಿ ಇದೇ ಕಾರಣಕ್ಕೆ ಪ್ಲಮ್​ ಹಣ್ಣು ಇರಲೇಬೇಕಂತೆ


"ಮಹಾರಾಷ್ಟ್ರ, ಸಿಂಗಾಪುರ ಮತ್ತು ಇತರೆಡೆಗಳಲ್ಲಿ ಕಂಡು ಬಂದಿರುವ ಎಕ್ಸ್‌ಬಿಬಿ ರೂಪಾಂತರವನ್ನು ಅಧ್ಯಯನ ಮಾಡಿದ ನಂತರ, ಸೋಂಕುಗಳು ಹೆಚ್ಚಾಗಿದ್ದರೂ ಸಹ, ಹೊಸ ರೂಪಾಂತರವು ಅಷ್ಟೊಂದು ಗಂಭೀರವಾದ ಪರಿಣಾಮ ಬೀರುವುದಿಲ್ಲ ಮತ್ತು ಹೆಚ್ಚಿನ ರೋಗಿಗಳಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಬಹುದು ಎಂದು ಗಮನಿಸಲಾಗಿದೆ. ತುಂಬಾ ಕಡಿಮೆ ರೋಗಿಗಳು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು" ಎಂದು ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.
ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು


ಇಂತಹ ಸೋಂಕುಗಳಿಂದ ದೂರವಿರಲು ಅನುಸರಿಸಬೇಕಾದ ಉತ್ತಮ ಮಾರ್ಗವೆಂದರೆ ವರ್ಷವಿಡೀ ಉತ್ತಮ ಪೌಷ್ಟಿಕ ಆಹಾರ ಮತ್ತು ವ್ಯಾಯಾಮದಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದು ಎಂದು ವೈದ್ಯರು ಹೇಳುತ್ತಾರೆ.


superfoods to boost immunity amid Omicron XBB spread
ಸಾಂದರ್ಭಿಕ ಚಿತ್ರ


ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ:


1. ಗ್ರೀನ್ ಟೀ: ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


2. ಮೊಸರು: ಹುದುಗಿಸಿದ ಆಹಾರಗಳು ನಿಮ್ಮ ಕರುಳನ್ನು ಆರೋಗ್ಯಕರವಾಗಿಡುವ ಉತ್ತಮ ಬ್ಯಾಕ್ಟೀರಿಯಾದ ಅತ್ಯುತ್ತಮ ಮೂಲಗಳಾಗಿವೆ.


ಇದನ್ನೂ ಓದಿ: ಮಗುವಿಗೆ ಜೋಗುಳ ಹಾಡಿ ಮಲಗಿಸಿದ್ರೆ ಬೆಳವಣಿಗೆಗೆ ಬಹಳ ಒಳ್ಳೆಯದಂತೆ


3. ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳ ಸೇವನೆ: ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳ ಮೂರರ ಸರಿಯಾದ ಸಂಯೋಜನೆಯು ನಿಮ್ಮನ್ನು ಆರೋಗ್ಯವಾಗಿಡಲು ಅಗತ್ಯವಿರುವ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ.

Published by:Sandhya M
First published: