Hair Care With Ginger: ಶುಂಠಿಯನ್ನು ನಿಮ್ಮ ಕೂದಲಿಗೆ ಹೀಗೆ ಬಳಸಿದ್ರೆ ಸಾಕು ತಲೆಹೊಟ್ಟು ಮಾಯವಾಗುತ್ತೆ

ಕೂದಲ ಆರೋಗ್ಯ ಕಾಪಾಡಿಕೊಳ್ಳಲು ಹಲವು ವಿಷಯಗಳತ್ತ ಗಮನ ಹರಿಸಬೇಕು. ಅದು ಕೂದಲನ್ನು ಪೋಷಿಸುವುದು ಮಾತ್ರವಲ್ಲದೇ ರಾಸಾಯನಿಕ ಮುಕ್ತವೂ ಆಗಿವೆ. ನೆಗಡಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್‌ ಫುಡ್ ಶುಂಠಿ ಕೂದಲ ಆರೋಗ್ಯ ಮತ್ತು ದಟ್ಟ ಕೂದಲು ಬಲಪಡಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸುಂದರ (Beautiful) ಮತ್ತು ದಟ್ಟವಾದ ಕೂದಲು (Thick Hair) ಹೊಂದುವ ಬಯಕೆ (Wants) ಎಲ್ಲರದ್ದೂ ಆಗಿರುತ್ತದೆ. ಬೇರೆಯವರು ಸುಂದರ ಮತ್ತು ಕಪ್ಪು, ಉದ್ದ (Long) ಕೂದಲು ಹೊಂದಿದವರನ್ನು ಕಂಡಾಗ, ವಾವ್ ಎಂದು ಆಶ್ಚರ್ಯವಾಗುತ್ತದೆ. ಯಾವ ರೀತಿ ಅವರು ಕೂದಲ ಆರೋಗ್ಯ ಕಾಪಾಡಿಕೊಂಡಿದ್ದಾರೆ ಎಂಬ ಪ್ರಶ್ನೆ ಮನಸ್ಸಲ್ಲಿ ಹುಟ್ಟುತ್ತದೆ. ಕೆಲವೊಮ್ಮೆ ಉದ್ದ, ದಟ್ಟ ಕೂದಲು ಹೊಂದಿದವರನ್ನು ನೋಡಿದಾಗ ಅವರು ಯಾವ ರೀತಿ ಕೂದಲ ಆರೈಕೆ ಮಾಡುತ್ತಾರೆ ಎಂದು ಕೇಳಿ ಬಿಡಬೇಕು ಅನ್ನಿಸುತ್ತದೆ. ಅಷ್ಟೇ ಅಲ್ಲ ಕೂದಲು ಹಾಳಾಗಲು ಹಲವು ಅಂಶಗಳು ಕಾರಣವಾಗಿವೆ. ಹಾಗೆಯೇ ಕೂದಲಿನ ಬಗ್ಗೆ ಸರಿಯಾದ ಕಾಳಜಿ ವಹಿಸದೇ ಹೋದರೆ ಅಥವಾ ಸಾಕಷ್ಟು ಪೋಷಕಾಂಶ ಹೊಂದದೇ ಹೋದರೆ ಅದು ಕೂದಲನ್ನು ಹಾಳು ಮಾಡುತ್ತದೆ.

    ಕೂದಲ ಪೋಷಣೆಗೆ ಸೂಪರ್‌ ಫುಡ್ ಶುಂಠಿ ಬಳಸುವುದು ಹೇಗೆ?

    ನೀವೂ ಕೂಡ ನಿಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಲು ಇಷ್ಟ ಪಟ್ಟರೆ ಕೂದಲ ರಕ್ಷಣೆಗೆ ನಾವು ಹಲವು ವಿಷಯಗಳತ್ತ ಗಮನ ಹರಿಸಬೇಕು. ಅದು ಕೂದಲನ್ನು ಪೋಷಿಸುವುದು ಮಾತ್ರವಲ್ಲದೇ, ಅವು ರಾಸಾಯನಿಕ ಮುಕ್ತವೂ ಆಗಿವೆ.

    ನೆಗಡಿ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಒಂದು ಸೂಪರ್‌ ಫುಡ್ ಶುಂಠಿ. ಶುಂಠಿಯು ನಿಮ್ಮ ಕೂದಲ ಆರೋಗ್ಯ ಮತ್ತು ದಟ್ಟ ಕೂದಲು ಮತ್ತು ಬಲಪಡಿಸಲು ಸಹ ಸಹಾಯ ಮಾಡುತ್ತದೆ. ಕೂದಲಿಗೆ ಶುಂಠಿ ಹೇಗೆ ಬಳಸುವುದು ಎಂದು ನಾವು ಇಲ್ಲಿ ನೋಡೋಣ.

    ಇದನ್ನೂ ಓದಿ: ಚರ್ಮಕ್ಕೆ ಆರೈಕೆ ನೀಡಲು ವಿಟಮಿನ್ ಸಿ ಹೇಗೆ ಲಾಭಕಾರಿ?

    ಶುಂಠಿ ಕೂದಲಿಗೆ ನಿಜವಾಗಿ ಹೇಗೆ ಪ್ರಯೋಜನ ನೀಡುತ್ತದೆಯೇ?

    ಶುಂಠಿಯ ಮೇಲೆ ರಿಸರ್ಚ್‌ಗೇಟ್ ನಡೆಸಿದ ಸಂಶೋಧನೆ ಹೇಳುವ ಪ್ರಕಾರ ಸಿಲಿಕಾನ್ ಎಂಬ ಸಾವಯವ ಸಂಯುಕ್ತ ಶುಂಠಿಯಲ್ಲಿ ಕಂಡು ಬರುತ್ತದೆ. ವೈಜ್ಞಾನಿಕ ಅಧ್ಯಯನದ ಪ್ರಕಾರ ಸಿಲಿಕೋನ್ ಕೂದಲು ಆರೋಗ್ಯದಿಂದ ಕೂಡಿರಲು ಸಹಾಯ ಮಾಡುತ್ತದೆ.

    ಕೂದಲು ಉದುರುವಿಕೆ ನಿಲ್ಲಿಸಲು ಶುಂಠಿ ಬಳಕೆ

    ಸತು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳ ಕೊರತೆ ಕೂದಲು ಉದುರುವಿಕೆಗೆ ಕಾರಣ ಆಗುತ್ತದೆ. ಶುಂಠಿಯಲ್ಲಿ ಸತು ಮತ್ತು ಮೆಗ್ನೀಸಿಯಮ್ ಹೇರಳವಾಗಿ ಕಂಡು ಬರುತ್ತದೆ. ಮತ್ತು ಶುಂಠಿಯ ಸೇವನೆಯಿಂದ ದೇಹದಲ್ಲಿ ಈ ಎರಡೂ ಪೋಷಕಾಂಶಗಳನ್ನು ಮರು ಪೂರಣ ಮಾಡುತ್ತದೆ.

    ತಲೆಹೊಟ್ಟು ಕಡಿಮೆ ಮಾಡುತ್ತದೆ ಶುಂಠಿ

    ಶುಂಠಿಯ ಪ್ರಯೋಜನಕಾರಿ ಪರಿಣಾಮ ಡ್ಯಾಂಡ್ರಫ್ ತೊಡೆದು ಹಾಕಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿ ಸತುವು ಕಂಡು ಬರುತ್ತದೆ. ಮತ್ತು ಸತು ಹೊಂದಿರುವ ಶಾಂಪೂ ಬಳಕೆ ಮಾಡುವುದು ತಲೆಹೊಟ್ಟು ಸಮಸ್ಯೆ ನಿವಾರಣೆ ಮಾಡುತ್ತದೆ.

    ಆರೋಗ್ಯಕರ ಕೂದಲಿಗೆ ಶುಂಠಿ ಬಳಸುವುದು ಹೇಗೆ?

    ಕೂದಲು ಬೆಳವಣಿಗೆಗೆ ಶುಂಠಿ ಮತ್ತು ಈರುಳ್ಳಿ ಬಳಕೆ

    ಕೂದಲು ಬೆಳವಣಿಗೆಗೆ ಶುಂಠಿ ಮತ್ತು ಈರುಳ್ಳಿ ಬಳಕೆ ಮಾಡಲು ಮೊದಲು ಶುಂಠಿ ರಸ ಎರಡು ಚಮಚ, ಈರುಳ್ಳಿ ರಸ ಒಂದು ಚಮಚ ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ ಶುಂಠಿ ಮತ್ತು ಈರುಳ್ಳಿ ರಸವನ್ನು ಹಾಕಿ. ನಂತರ ಅದನ್ನು ಕೂದಲಿನ ಬೇರುಗಳಿಗೆ ಹಚ್ಚಿ. ನಂತರ ಹಗುರವಾಗಿ ಕೈಗಳಿಂದ ಲಘುವಾಗಿ ಮಸಾಜ್ ಮಾಡಿ. ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಕೂದಲನ್ನು ನೀರಿನಿಂದ ತೊಳೆಯಿರಿ.

    ಶುಂಠಿ ಮತ್ತು ತೆಂಗಿನ ಎಣ್ಣೆಯ ಮಾಸ್ಕ್ ತಯಾರಿಸುವುದು

    ಶುಂಠಿ ಮತ್ತು ತೆಂಗಿನ ಎಣ್ಣೆಯ ಮಾಸ್ಕ್ ತಯಾರಿಸಲು ಕೂದಲಿನ ಬೆಳವಣಿಗೆಗೆ ಅನುಗುಣವಾಗಿ ಶುಂಠಿಯ ಸಣ್ಣ ತುಂಡು, ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಶುಂಠಿ ಪೇಸ್ಟ್ ತಯಾರಿಸಿ. ನಂತರ ಈ ಪೇಸ್ಟ್‌ಗೆ ತೆಂಗಿನ ಎಣ್ಣೆ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ನ್ನು ಕೂದಲಿಗೆ ಹಚ್ಚಿ. ಐದರಿಂದ ಹತ್ತು ನಿಮಿಷ ಬಿಟ್ಟು, ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

    ಇದನ್ನೂ ಓದಿ: ಆರೋಗ್ಯಕರ ಪ್ರಯೋಜನ ನೀಡುವ ಸಾಸಿವೆ ಎಣ್ಣೆಯನ್ನು ತ್ವಚೆಯ ಆರೈಕೆಗೆ ಹೀಗೆ ಬಳಸಿ

    ಶುಂಠಿ ಮತ್ತು ನಿಂಬೆ ಎಣ್ಣೆ ಹೇರ್ ಮಾಸ್ಕ್

    ಶುಂಠಿ ಮತ್ತು ನಿಂಬೆ ಎಣ್ಣೆ ಹೇರ್ ಮಾಸ್ಕ್ ತಯಾರಿಸಲು ಒಂದು ಚಮಚ ಶುಂಠಿ ರಸ, ಒಂದು ಚಮಚ ನಿಂಬೆ ರಸ ಮತ್ತು ಎಣ್ಣೆ ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ ಶುಂಠಿ ರಸ ಮತ್ತು ನಿಂಬೆ ರಸ ಮತ್ತು ಎಣ್ಣೆ ಹಾಕಿ. ಈಗ ಈ ಮಿಶ್ರಣವನ್ನು ಕೂದಲಿನ ಬೇರುಗಳಿಗೆ ಹಚ್ಚಿ ಮತ್ತು ಲಘುವಾಗಿ ಮಸಾಜ್ ಮಾಡಿ. ಈ ಮಿಶ್ರಣವನ್ನು ಐದರಿಂದ ಹತ್ತು ನಿಮಿಷ ಬಿಟ್ಟು, ಶಾಂಪೂ ಬಳಸಿ ತೊಳೆಯಿರಿ.
    Published by:renukadariyannavar
    First published: