Health Tips: ಹೆಚ್ಚು ಒತ್ತಡ ಅನುಭವಿಸುತ್ತಿದ್ದೀರಾ? ಹಾಗಾದ್ರೆ ಈ ಆಹಾರಗಳನ್ನು ಟ್ರೈ ಮಾಡಿ

Anxiety Management : ಕೆಲವು ಆಹಾರಗಳನ್ನು ಸೇವಿಸುವುದರಿಂದ ಒತ್ತಡವನ್ನು ನಿಭಾಯಿಸಲು ಸಹಾಯವಾಗುತ್ತದೆ. ನಮ್ಮ ದಿನ ನಿತ್ಯದ ಆಹಾರದಲ್ಲಿ ನಾವು ಹೆಚ್ಚು ಪೋಷಕಾಂಶಗಳನ್ನು ಸೇವಿಸುವುದರಿಂದ ಕೋಪವನ್ನು ಮತ್ತು ಒತ್ತಡವನ್ನು ನಿವಾರಣೆ ಸಹ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆರೋಗ್ಯಕರ ಆಹಾರ, ವ್ಯಾಯಾಮ, ಯೋಗ, ಧ್ಯಾನ, ಸಂಗೀತವನ್ನು ಕೇಳುವುದು ಅಥವಾ ಒಳ್ಳೆಯ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಒತ್ತಡವನ್ನು ಕಡಿಮೆ ಮಾಡುವ ತಂತ್ರಗಳು. ಇನ್ನು ಚರ್ಮದ ಅಂದವನ್ನು ಹೆಚ್ಚಿಸುವಲ್ಲಿ ವಿಟಮಿನ್ಗಳು ಸಹಾಯ ಮಾಡುವುದರ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಈ ಎಲ್ಲ ಪೋಷಕಾಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಒತ್ತಡದ ಸಂದರ್ಭಗಳನ್ನು ತಡೆದುಕೊಳ್ಳುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಕಿತ್ತಳೆ ಹಣ್ಣು
ವಿಟಮಿನ್ ಸಿ ಅಧಿಕವಾಗಿರುವ ಕಿತ್ತಳೆ, ಒತ್ತಡ ಉಂಟು ಮಾಡುವ ಹಾರ್ಮೋನುಗಳನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಅಧಿಕ ರಕ್ತದೊತ್ತಡ ಇರುವ ರೋಗಿಗಳ ವಿಟಮಿನ್ ಸಿ ಸೇವನೆಯನ್ನು ಹೆಚ್ಚಿಸುವುದರಿಂದ ನಿಮ್ಮ ರಕ್ತದೊತ್ತಡ ಮತ್ತು ಕಾರ್ಟಿಸೋಲ್ ಅಥವಾ ಒತ್ತಡದ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಬಹುದು.

ಪಾಲಕ್
ಪಾಲಕ್ ಸೊಪ್ಪು ಪೌಷ್ಠಿಕಾಂಶವುಳ್ಳ ತರಕಾರಿ, ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ , ಕಬ್ಬಿಣ, ಮತ್ತು ರೋಗ ನಿರೋಧಕಗಳು ಅಧಿಕವಾಗಿವೆ. ನಿಮಗೆ ಉಂಟಾಗುವ ಆತಂಕವನ್ನು ನಿಭಾಯಿಸಲು ಸಹಾಯ ಮಾಡುವ ಆಹಾರವೆಂದರೆ ಪಾಲಕ್. ಪ್ರತಿ ಕಪ್ ಪಾಲಕ್ ನಲ್ಲಿ ಸುಮಾರು 157 ಮಿಗ್ರಾಂನಷ್ಟು ಮೆಗ್ನೀಸಿಯಮ್ ಇರುತ್ತದೆ. ಇದು ನಿಮ್ಮ ದೈನಂದಿನ ಮೆಗ್ನೀಸಿಯಮ್ ಅಗತ್ಯವನ್ನು ಪೂರೈಸುತ್ತದೆ. ವಾಸ್ತವವಾಗಿ, ಮೆಗ್ನೀಸಿಯಮ್ ಕೊರತೆಯು ತಲೆನೋವು, ಆಯಾಸ ಮತ್ತು ಒತ್ತಡ-ಸಂಬಂಧಿತ ರೋಗಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚು. ಇನ್ನು ಪಾಲಕ್ ಸೊಪ್ಪಿನಲ್ಲಿ ಕಡಿಮೆ ಕಾರ್ಬೋಹೈಡ್ರೇಟ್‌ಗಳಿರುವುದರಿಂದ ಇದನ್ನು ತೂಕ ಇಳಿಸುವ ಆಹಾರದಲ್ಲಿ ಸಹ ಬಳಸಬಹುದು ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಅನುಭವಿಸುತ್ತಿರುವ ಜನರಿಗೆ ಇದು ಹೆಚ್ಚು ಪ್ರಯೋಜನಕಾರಿ.

ಇದನ್ನೂ ಓದಿ: ಮಕ್ಕಳ ಮೆದುಳಿನ ಆರೋಗ್ಯಕ್ಕೆ ಈ ಆಹಾರಗಳನ್ನು ಪ್ರಯತ್ನಿಸಿ

ಮೊಟ್ಟೆ
ಮೊಟ್ಟೆಯಲ್ಲಿರುವ ಹೆಚ್ಚಿನ ಪೌಷ್ಟಿಕಾಂಶ ಒತ್ತಡ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಮೊಟ್ಟೆಗಳನ್ನು ಸಾಮಾನ್ಯವಾಗಿ ಪ್ರಕೃತಿಯ ಮಲ್ಟಿವಿಟಮಿನ್ ಎಂದು ಕರೆಯಲಾಗುತ್ತದೆ. ವಿಟಮಿನ್ ಡಿ ಯ ಕೆಲವು ಅಂಶಗಳು ಒಂದು ಸಂಪೂರ್ಣ ಮೊಟ್ಟೆಯಲ್ಲಿ ಲಭಿಸುತ್ತದೆ. ಸಂಪೂರ್ಣ ಮೊಟ್ಟೆಗಳಲ್ಲಿ ವಿಶೇಷವಾಗಿ ಕೋಲೀನ್ ಅಧಿಕವಾಗಿದೆ, ಕೆಲವು ಆಹಾರಗಳಲ್ಲಿ ಮಾತ್ರ ಹೆಚ್ಚಿನ ಮಟ್ಟದಲ್ಲಿ ಕಂಡುಬರುತ್ತದೆ. ಕೋಲಿನ್ ಮೆದುಳಿನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಹಾಗಾಗಿ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

ಡ್ರೈ ಫ್ರೂಟ್ಸ್
ಡ್ರೈ ಫ್ರೂಟ್ಸ್ಗಳಲ್ಲಿ ಬಿ ಜೀವಸತ್ವಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸೇರಿದಂತೆ ಹೆಚ್ಚಿನ ಪೋಷಕಾಂಶಗಳಿವೆ. ಬಿ ಜೀವಸತ್ವಗಳು ಆರೋಗ್ಯಕರ ಆಹಾರದ ಅವಿಭಾಜ್ಯ ಅಂಗವಾಗಿದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾದಾಮಿ, ಪಿಸ್ತಾ ಮತ್ತು ವಾಲ್ನಟ್ಸ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ. ಇವುಗಳಲ್ಲಿ ಮೆಗ್ನೀಶಿಯಂ ಕೂಡ ಅಧಿಕವಾಗಿರುವುದರಿಂದ ಒತ್ತಡ ನಿರ್ವಹಣೆ ಮಾಡುವುದು ಸುಲಭವಾಗುತ್ತದೆ.

ಆವಕಾಡೊಗಳು

ನಮ್ಮ ನರಗಳು ಮತ್ತು ಮೆದುಳಿನ ಕೋಶಗಳ ಆರೋಗ್ಯಕ್ಕೆ ಬಿ ಜೀವಸತ್ವಗಳು ಅವಶ್ಯಕವಾಗಿದ್ದು, ವಿಟಮಿನ್ ಬಿ ಕೊರತೆಯಾದಲ್ಲಿ ಅದು ಒತ್ತಡವನ್ನು ಉಂಟುಮಾಡುತ್ತದೆ. ಆವಕಾಡೊಗಳಲ್ಲಿ ಬಿ ಜೀವಸತ್ವಗಳು ಅಧಿಕವಾಗಿದ್ದು, ಇದು ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ. ಅವುಗಳು ಹೆಚ್ಚಿನ ಪ್ರಮಾಣದ ಮೊನೊಸಾಚುರೇಟೆಡ್ ಕೊಬ್ಬು ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ, ಇವೆರಡೂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆರಿಹಣ್ಣುಗಳು

ಬೆರಿ ಹಣ್ಣುಗಳು ನೋಡಲು ಚಿಕ್ಕದಾಗಿರುತ್ತದೆ, ಆದರೆ ಅವುಗಳು ಹೆಚ್ಚಿನ ರೋಗ ನಿರೋಧಕಗಳು ಮತ್ತು ವಿಟಮಿನ್ ಸಿ ಯನ್ನು ಹೊಂದಿರುವುದರಿಂದ ಅವುಗಳನ್ನು ಪರಿಣಾಮಕಾರಿ ಒತ್ತಡ ನಿವಾರಕಗಳಾಗಿ ಮಾಡುತ್ತದೆ. ನಾವು ಒತ್ತಡದಲ್ಲಿರುವಾಗ ಜೀವಕೋಶಗಳನ್ನು ಸರಿಪಡಿಸಲು ಮತ್ತು ರಕ್ಷಿಸಲು ನಮ್ಮ ದೇಹಕ್ಕೆ ವಿಟಮಿನ್ ಸಿ ಮತ್ತು ನಿರೋಧಕಗಳು ಬೇಕಾಗುತ್ತವೆ. ಅದು ಬೆರಿ ಹಣ್ಣಿನಲ್ಲಿ ಲಭಿಸುತ್ತದೆ.

ಅಶ್ವಗಂಧ

ಅಶ್ವಗಂಧವು ಆಯುರ್ವೇದ ಮೂಲಿಕೆಯಾಗಿದ್ದು ಅದು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಅಶ್ವಗಂಧವನ್ನು ಸೇರಿಸಿಕೊಳ್ಳುವುದು ಒಳ್ಳೆಯ ವಿಧಾನ.

1 ಟೀ ಚಮಚ ಅಶ್ವಗಂಧದ ಪುಡಿಯನ್ನು ತುಪ್ಪದಲ್ಲಿ ಬೆರೆಸಿ ಅದಕ್ಕೆ ಖರ್ಜೂರ, ಸಕ್ಕರೆ, ಜೇನುತುಪ್ಪ, ಬೆಲ್ಲ ಅತವಾ ತೆಂಗಿನ ಕಾಯಿಯನ್ನು ಮಿಶ್ರಣ ಮಾಡಿ ಬೆಳಗಿನ ತಿಂಡಿಗೆ 20 ನಿಮಿಷ ಮೊದಲು ಅಥವಾ ನಂತರ ಹಾಲಿನೊಂದಿಗೆ ಸೇವಿಸಿದರೆ ಒತ್ತಡ ನಿವಾರಣೆಗೆ ಸಹಾಯ ಮಾಡುತ್ತದೆ.
Published by:Sandhya M
First published: