ಸಾಮಾನ್ಯವಾಗಿ ಮಾಂಸಾಹಾರಿ (Non-Veg) ಆಹಾರಗಳಲ್ಲಿ ಅತ್ಯಂತ ಆರೋಗ್ಯಕರ ಮತ್ತು ಬೆಸ್ಟ್ ಫುಡ್ (Best Food) ಎಂದು ಸಾಗರೋತ್ಪನ್ನಗಳನ್ನು ಹೇಳುತ್ತಾರೆ. ಅದರಲ್ಲಿಯೂ ಮೃದು ಜೀವಿಗಳು ಅತಿ ಹೆಚ್ಚು ಆರೋಗ್ಯಕರ. ಸಿಗಡಿ (Prawns) ಮೀನನ್ನು ಅತ್ಯಂತ ಆರೋಗ್ಯಕರ ಮೀನೆಂದು ಪರಿಗಣಿಸಲಾಗುತ್ತದೆ. ಸಿಗಡಿಯನ್ನು ಉಪಯೋಗಿಸಿ ಹಲವಾರು ಅಡುಗೆಗಳನ್ನು ಸಖತ್ ಟೇಸ್ಟ್ (Taste) ಆಗಿ ಮಾಡಬಹುದು. ಆದರೆ ಸಿಗಡಿ ಮೀನನ್ನು ಸ್ವಚ್ಛ ಮಾಡುವುದು ಒಂದು ಸಾಹಸದ ಕೆಲಸವೇ ಸರಿ. ಒಮ್ಮೆ ಶುಭ್ರವಾಗಿ ಸ್ವಚ್ಛವಾದ ಬಳಿಕ ಅದು ಬೇಯಲು ಅತ್ಯಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಸಿಗಡಿ ಮೀನನ್ನು ಇಷ್ಟ ಇಲ್ಲ ಎಂದು ಹೇಳುವವರು ಯಾರು ಇಲ್ಲ, ಮಾಂಸಾಹಾರಿಗಳಲ್ಲಿ ಸಿಗಡಿ ಮೀನಿಗೆ ಒಂದು ಸಪರೇಟ್ ಫ್ಯಾನ್ ಬೇಸ್ ಇದೆ ಎಂದರೆ ತಪ್ಪಾಗಲಾರದು.
ಸಿಗಡಿ ಸಾರಿನಿಂದ ಹಿಡಿದು ಸಿಗಡಿ ಫ್ರೈ ವರೆಗೆ ಎಲ್ಲರಿಗೂ ಅಚ್ಚುಮೆಚ್ಚು ಈ ಆಹಾರ. ಇಷ್ಟೆಲ್ಲಾ ಹೇಳಿದ ಮೇಲೆ ಒಂದು ಸೂಪರ್ ಆಗಿರುವ ಪಟಾ ಪಟ್ ಆಗಿ ಕ್ವಿಕ್ ಆಗಿ ಆಗುವ ಒಂದು ಮಸಾಲ ಸಿಗಡಿ ಪ್ರೈ ರೆಸಿಪಿ ತಿಳಿಲೇ ಬೇಕು ಅಲ್ವಾ!? ಸಡನ್ನಾಗಿ ನಿಮ್ಮ ಮನೆಗೆ ಅತಿಥಿಗಳು ಎಂಟ್ರಿ ಕೊಟ್ಟರೆ ಈ ಸಿಗಡಿ ಫ್ರೈ ಮಾಡಿದ್ರೆ ಅವರಿಗೆ ಇಷ್ಟ ಆಗೋದ್ರಲ್ಲಿ ಡೌಟೇ ಇಲ್ಲ. ಕಾಫಿಯ ಸಮಯದಲ್ಲಿ ಗರಿಗರಿಯಾಗಿ ಸೇವಿಸಲೂ ಸೂಕ್ತವಾಗಿದೆ ಈ ಸುಪರ್ ಸಿಗಡಿ ಫ್ರೈ. ನೋಡೋಣ ಬನ್ನಿ ಇದನ್ನು ತಯಾರಿಸುವ ವಿಧಾನವನ್ನು,
ಇದನ್ನೂ ಓದಿ: Breakfast Recipe: ಭಾನುವಾರ ಸಿಂಪಲ್ ಆಗಿ ಬ್ಯಾಚೂಲರ್ ಗಳು ತಯಾರಿಸುವ ಬೆಳ್ಳುಳ್ಳಿ ಉಪ್ಪಿಟ್ಟು ಮಾಡಿ ಸವಿಯಿರಿ
ಬೇಕಾಗುವ ಸಾಮಗ್ರಿಗಳು
1) ಸ್ವಚ್ಛಗೊಳಿಸಿದ ಸಿಗಡಿ ಮೀನು ಸುಮಾರು 600 ಗ್ರಾಂ
2)ಅಚ್ಚಕಾರದ ಪುಡಿ 2 ಚಿಕ್ಕ ಚಮಚ ( ನೀವು ಕಾಶ್ಮೀರಿ ಚಿಲ್ಲಿ ಬಳಸುವುದಾದರೆ 4 ಚಿಕ್ಕ ಚಮಚ)
3) ಅರಶಿನ ಹುಡಿ ಅರ್ಧ ಚಮಚ
4) ಕೊತ್ತಂಬರಿ ಹುಡಿ ಅರ್ಧ ಚಮಚ
5) 5 ದೊಡ್ಡ ಚಮಚದಲ್ಲಿ ಎಣ್ಣೆ
6) ಶುಂಠಿ-ಬೆಳ್ಳುಳ್ಳಿ ಪೇಸ್ಟ್
7) ಒಂದು ಕಪ್ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ.
8) ಕರಿಬೇವಿನ ಎಲೆಗಳು ಸುಮಾರು 7-8
9) ಲಿಂಬೆರಸ
ಇದನ್ನೂ ಓದಿ: Non-Veg Recipe: ಸಂಡೇ ಸ್ಪೆಷಲ್ ಬೆಳ್ಳುಳ್ಳಿ ಬಿರಿಯಾನಿ ಒಮ್ಮೆ ಟ್ರೈ ಮಾಡಿ
ಸಿಗಡಿ ಫ್ರೈ ಮಾಡುವ ವಿಧಾನ
ಒಂದು ಚಿಕ್ಕ ಪಾತ್ರೆಯಲ್ಲಿ ಸಿಗಡಿ, ಉಪ್ಪು, ಮೆಣಸಿನ ಪುಡಿ, ಧನಿಯ ಪುಡಿ,ಅರಿಶಿನ ಪುಡಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೊದಲ ಪಾತ್ರೆಯಿಂದ ಸಿಗಡಿಯನ್ನು ಹಾಕಿ ಇದರ ಜೊತೆಗೆ ಕರಿಬೇವಿನ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ. ಹಾಗೆ ಸ್ವಲ್ಪ ಸಮಯದ ತನಕ ಸತತವಾಗಿ ತಿರುವುತ್ತಾ ಸಿಗಡಿ ಕೊಂಚ ಹುರಿಯಿರಿ. ಬಳಿಕ ನೀರು ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಸುಮಾರು ಐದರಿಂದ ಎಂಟು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಬಳಿಕ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಸುಮಾರು ಐದರಿಂದ ಎಂಟು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಬಳಿಕ ಮುಚ್ಚಳವನ್ನು ತೆರೆದು ಚೆನ್ನಾಗಿ ತಿರುವುತ್ತಾ ಸಿಗಡಿಯ ಎಲ್ಲಾ ಭಾಗಗಳು ಸರಿಯಾಗಿ ಬೇಯುವಂತೆ ಇನ್ನಷ್ಟು ಹುರಿಯಿರಿ. ತುಂಬಾ ಡ್ರೈ ಎಂದು ಕಂಡುಬಂದರೆ ಕೊಂಚ ಎಣ್ಣೆಯನ್ನು ಸೇರಿಸಬಹುದು. ಇದಕ್ಕೆ ಕೊಂಚ ಲಿಂಬೆ ರಸ ಸಿಂಪಡಿಸಿ ಸೂಪರ್ ಸುಪ್ರೀಂ ಸಿಗಡಿ ಫ್ರೈ ಸವಿಯಲು ಸಿದ್ಧವಾಗಿದೆ.
ಸುಮಾರು ಆರು ಜನರಿಗೆ ಒಂದು ಹೊತ್ತಿಗೆ ಸಾಕಾಗುವಷ್ಟು ಇಪ್ಪತ್ತು ನಿಮಿಷಗಳಲ್ಲಿ ರೆಸಿಪಿಯನ್ನು ತಯಾರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ