• Home
  • »
  • News
  • »
  • lifestyle
  • »
  • Winter Melon: ಕುಂಬಳಕಾಯಿ ಸೇವಿಸುತ್ತೀರಾ? ಇದರಲ್ಲಿ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ?

Winter Melon: ಕುಂಬಳಕಾಯಿ ಸೇವಿಸುತ್ತೀರಾ? ಇದರಲ್ಲಿ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕುಂಬಳಕಾಯಿಯು ಪೂಜೆಯಿಂದ ಹಿಡಿದು ಆರೋಗ್ಯದವರೆಗೆ ಹಲವು ಲಾಭ ತಂದು ಕೊಡುತ್ತದೆ. ಕುಂಬಳಕಾಯಿಯನ್ನು 'ಚಳಿಗಾಲದ ಕಲ್ಲಂಗಡಿ' ಎಂದು ಕರೆಯುವ ಮೊದಲ ಕಾರಣ ಅಂದ್ರೆ ಇದು ದೇಹವನ್ನು ತಂಪಾಗಿ ಇಡುವ ಗುಣ ಹೊಂದಿದೆ. ಹಾಗೂ ದೇಹವು ತಂಪಾಗಿಸಲು ಬಹಳ ಪರಿಣಾಮಕಾರಿಯಾಗಿದೆ.

  • Share this:

    ಚಳಿಗಾಲದಲ್ಲಿ (Winter) ಹಲವು ತರಕಾರಿಗಳು (Vegetables) ಸಿಗುತ್ತವೆ. ಅವುಗಳಲ್ಲಿ ಬಿಳಿ ಕುಂಬಳಕಾಯಿ (Winter Melon) ಸಹ ಒಂದು. ಬಿಳಿ ಕುಂಬಳಕಾಯಿ ತರಕಾರಿಯು ತನ್ನದೇ ಆದ ವಿಶೇಷ ಗುಣಗಳಿಂದ ಜನಪ್ರಿಯತೆ (Famous) ಪಡೆದಿದೆ. ಕುಂಬಳಕಾಯಿಯನ್ನು ಹಲವು ರೀತಿಯ ಖಾದ್ಯಗಳ (Recipes) ತಯಾರಿಕೆಯಲ್ಲಿ ಬಳಕೆ ಮಾಡ್ತಾರೆ. ಕುಂಬಳಕಾಯಿ ವಿಶಿಷ್ಟ ರುಚಿ ಹೊಂದಿದೆ. ಕುಂಬಳಕಾಯಿ ಹಲ್ವಾ, ಕುಂಬಳಕಾಯಿ ಸಿಹಿ ತಿಂಡಿಗಳು, ಕುಂಬಳಕಾಯಿಯ ಪಲ್ಯ ಹೀಗೆ ಒಂದಾ ಎರಡಾ ಬಹುತೇಕ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡಲಾಗುತ್ತದೆ. ನೀವು ಮನೆಯಲ್ಲಿ ದೀಪಾವಳಿ, ನವರಾತ್ರಿ ಹಾಗೂ ಕೆಲವು ಹಬ್ಬಗಳ ಸಂದರ್ಭದಲ್ಲಿ ಕುಂಬಳಕಾಯಿಯನ್ನು ಪೂಜೆಗೆ ಬಳಸುವುದನ್ನು ನೋಡಿರಬಹುದು. ದೃಷ್ಟಿ ತೆಗೆಯಲು ಸಹ ಕುಂಬಳಕಾಯಿ ಬಳಕೆ ಮಾಡ್ತಾರೆ.


    ಕುಂಬಳಕಾಯಿ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ?


    ಹೀಗೆ ಕುಂಬಳಕಾಯಿಯು ಪೂಜೆಯಿಂದ ಹಿಡಿದು ಆರೋಗ್ಯದವರೆಗೆ ಹಲವು ಲಾಭ ತಂದು ಕೊಡುತ್ತದೆ. ಕುಂಬಳಕಾಯಿಯು ಬಳ್ಳಿಯಲ್ಲಿ ಬಿಡುವ ತರಕಾರಿ ಆಗಿದೆ. ಕುಂಬಳಕಾಯಿಯಲ್ಲಿ ಕೆಲವು ವಿಧದಗಳಿವೆ. ಬಿಳಿ ಕುಂಬಳಕಾಯಿ, ಬೂದು ಕುಂಬಳಕಾಯಿ ಹೀಗೆ ವಿವಿಧ ರೀತಿಯ ಕುಂಬಳಕಾಯಿಗಳಿವೆ.


    ಕುಂಬಳಕಾಯಿಯಲ್ಲಿ ಸಾಕಷ್ಟು ಪೌಷ್ಟಿಕ ಅಂಶಗಳಿವೆ. ದೇಶದಾದ್ಯಂತ ಕುಂಬಳಕಾಯಿಯನ್ನು ವಿವಿಧ ಪ್ರದೇಶದ ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಕುಮ್ಹಡ, ಕುಷ್ಮಾಂಡ್, ಕಡಿಮಾ, ಬಿಳಿ ಕುಂಬಳಕಾಯಿ ಎಂದು ಕರೆಯುತ್ತಾರೆ.




    ಕುಂಬಳಕಾಯಿಯನ್ನು ಇಂಗ್ಲಿಷ್‌ ನಲ್ಲಿ ಆಶ್ ಗಾರ್ಡ್, ವ್ಯಾಕ್ಸ್ ಗಾರ್ಡ್, ವಿಂಟರ್ ಮೆಲನ್ ಎಂದು ಕರೆಯುತ್ತಾರೆ. ಇನ್ನು ಕುಂಬಳಕಾಯಿಯನ್ನು ಚಳಿಗಾಲದ ಕಲ್ಲಂಗಡಿ ಎಂದು ಕರೆಯುತ್ತಾರೆ. ಇದನ್ನು ಚಳಿಗಾಲದ ಕಲ್ಲಂಗಡಿ ಎಂದು ಕರೆಯುವುದರ ಹಿಂದೆ ಕೆಲವು ಕಾರಣಗಳಿವೆ.


    ಕುಂಬಳಕಾಯಿಯನ್ನು ಚಳಿಗಾಲದ ಕಲ್ಲಂಗಡಿ ಎಂದು ಯಾಕೆ ಕರೆಯುತ್ತಾರೆ?


    ಕುಂಬಳಕಾಯಿಯನ್ನು ಚಳಿಗಾಲದ ಕಲ್ಲಂಗಡಿ ಎಂದು ಕರೆಯುವ ಮೊದಲ ಕಾರಣ ಅಂದ್ರೆ ಇದು ದೇಹವನ್ನು ತಂಪಾಗಿ ಇಡುವ ಗುಣ ಹೊಂದಿದೆ. ಹಾಗೂ ದೇಹವು ತಂಪಾಗಿಸಲು ಬಹಳ ಪರಿಣಾಮಕಾರಿಯಾಗಿದೆ.


    ಎರಡನೆದ್ದು, ಕುಂಬಳಕಾಯಿಯನ್ನು ಶರತ್ಕಾಲದವರೆಗೆ ಬೆಳೆಸಬಹುದು. ಜೊತೆಗೆ ನೀವು ನಾಲ್ಕು ತಿಂಗಳವರೆಗೆ ಸಂಗ್ರಹಿಸಿ ಇಡಬಹುದು. ಹಾಗೂ ಚಳಿಗಾಲದಲ್ಲೂ ತಿನ್ನಬಹುದು. ಹೀಗಾಗಿ ಇದನ್ನು ವಿಂಟರ್ ಮೆಲನ್ ಎಂದು ಕರೆಯುತ್ತಾರೆ.


    ಕುಂಬಳಕಾಯಿ ಯಾವೆಲ್ಲಾ ಪೋಷಕಾಂಶ ಹೊಂದಿದೆ?


    ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸತು, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ನಿಯಾಸಿನ್ (ವಿಟಮಿನ್ B3), ಥಯಾಮಿನ್, ವಿಟಮಿನ್ ಸಿ, ರೈಬೋಫ್ಲಾವಿನ್, ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ.


    ಸಾಂದರ್ಭಿಕ ಚಿತ್ರ


    ಕುಂಬಳಕಾಯಿ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?


    ಶಕ್ತಿ ಹೆಚ್ಚಿಸಲು ಸಹಕಾರಿ, ಕರುಳಿನ ಆರೋಗ್ಯ ಕಾಪಾಡುತ್ತದೆ. ತೂಕ ನಷ್ಟಕ್ಕೆ ಸಹಕಾರಿ. ದೇಹವನ್ನು ತಂಪಾಗಿಸುತ್ತದೆ. ಮೂತ್ರದ ಸೋಂಕಿನ ಸಮಸ್ಯೆ ನಿವಾರಣೆಗೆ ಪ್ರಯೋಜನಕಾರಿ. ಮೂತ್ರಪಿಂಡದ ಕಲ್ಲಿನ ಸಮಸ್ಯೆ ನಿವಾರಣೆಗೆ ಸಹಕಾರಿ, ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.


    ಚಳಿಗಾಲದಲ್ಲಿ ಕುಂಬಳಕಾಯಿ ಸೇವನೆ ವೇಳೆ ಜಾಗ್ರತೆ ವಹಿಸಿ


    ಚಳಿಗಾಲದಲ್ಲಿ ಕುಂಬಳಕಾಯಿ ಸೇವನೆ ವೇಳೆ ಎಚ್ಚರಿಕೆ ವಹಿಸಿ. ಯಾಕಂದ್ರೆ ಇದು ಕೆಲವು ಕಾಯಿಲೆಗೆ ಕಾರಣವಾಗಬಹುದು. ಹಾಗಾಗಿ ಕೆಲವರಿಗೆ ಕುಂಬಳಕಾಯಿ ತಿನ್ನುವುದು ನಿಷೇಧವಿದೆ. ಆಯುರ್ವೇದ ತಜ್ಞೆ ಡಾ.ಅಪರ್ಣಾ ಹೀಗೆ ಹೇಳ್ತಾರೆ.


    ಬಿಳಿ ಕುಂಬಳಕಾಯಿ ಸೂಪರ್ ಕೂಲಿಂಗ್ ಗುಣ ಹೊಂದಿದೆ. ಇದು ಕೀಲು ನೋವು, ಬ್ಲಾಕ್ ಸೈನಸ್, ಕೆಮ್ಮು, ಶೀತ, ವಾಯು, ಹೊಟ್ಟೆ ಭಾರ ಮತ್ತು ಹಸಿವಿನ ಕೊರತೆ ಉಂಟು ಮಾಡಬಹುದು ಅಂತಾರೆ ಆಯುರ್ವೇದ ವೈದ್ಯರು.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ


    ಯಾರು ಬಿಳಿ ಕುಂಬಳಕಾಯಿ ಸೇವನೆ ತಪ್ಪಿಸಬೇಕು?


    ಯಾರೆಲ್ಲಾ ಕೀಲು ನೋವಿನಿಂದ ಬಳಲುತ್ತಿದ್ದಾರೋ ಅವರು ಕುಂಬಳಕಾಯಿ ಸೇವನೆ ತಪ್ಪಿಸಿ. ಹಾಗೂ ಕಳಪೆ ಜೀರ್ಣಕ್ರಿಯೆ, ಕೆಮ್ಮು ಮತ್ತು ಶೀತ ಸಮಸ್ಯೆ ಇರುವವರು ತಪ್ಪಿಸಿ. ಇಲ್ಲವೇ ಕಡಿಮೆ ಸೇವಿಸಿ. ಅಥವಾ ವೈದ್ಯರ ಸಲಹೆ ಪಡೆದು ಸೇವಿಸಿ.

    Published by:renukadariyannavar
    First published: