• Home
  • »
  • News
  • »
  • lifestyle
  • »
  • Sunflower Seeds: ಪೋಷಕಾಂಶಗಳಿಂದ ಸಮೃದ್ಧವಾಗಿವೆ ಸೂರ್ಯಕಾಂತಿ ಬೀಜ! ಇವು ತಿನ್ನಲೂ ರುಚಿ, ಆರೋಗ್ಯಕ್ಕೂ ಉತ್ತಮ

Sunflower Seeds: ಪೋಷಕಾಂಶಗಳಿಂದ ಸಮೃದ್ಧವಾಗಿವೆ ಸೂರ್ಯಕಾಂತಿ ಬೀಜ! ಇವು ತಿನ್ನಲೂ ರುಚಿ, ಆರೋಗ್ಯಕ್ಕೂ ಉತ್ತಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೂರ್ಯನ ಚಲನೆಯನ್ನು ಅನುಸರಿಸುವ ಹೂವು ಸೂರ್ಯಕಾಂತಿ. ಇದನ್ನು ಹೆಲಿಯೋಟ್ರೋಪಿಸಂ ಎಂದೂ ಕರೆಯುತ್ತಾರೆ. ಸೂರ್ಯಕಾಂತಿ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರೆ. ಹಾಗೆಯೇ ಸೂರ್ಯಕಾಂತಿ ಬೀಜಗಳೂ ಆರೋಗ್ಯ ಪ್ರಯೋಜನ ನೀಡುತ್ತವೆ.

  • Share this:

    ಎಣ್ಣೆಯನ್ನು (Oil) ಶತಮಾನಗಳಿಂದ ಆಹಾರ ಸೇವನೆಯಲ್ಲಿ (Food Eating) ಬಳಸಲಾಗ್ತಿದೆ. ಸೂರ್ಯಕಾಂತಿ ಬೀಜಗಳನ್ನು (Sunflower Seeds) ಪುಡಿ ಮಾಡಿ ನಂತರ ಎಣ್ಣೆ ತೆಗೆಯಲಾಗುತ್ತದೆ. ಆದರೆ ಸೂರ್ಯಕಾಂತಿ ಎಣ್ಣೆಗಿಂತ ಸೂರ್ಯಕಾಂತಿ ಬೀಜಗಳು ಹೆಚ್ಚು ಪ್ರಯೋಜನಕಾರಿಯಾಗಿವೆ (Beneficial). ಸೂರ್ಯಕಾಂತಿ ಬೀಜಗಳನ್ನು ಲಘುವಾಗಿ ತಿನ್ನಬಹುದು. ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ ಎಂದು ಸಂಶೋಧನೆಯೊಂದು ಹೇಳಿದೆ. ಉತ್ತಮ ಸಂಗತಿಯೆಂದರೆ ಸೂರ್ಯಕಾಂತಿ ಬೀಜಗಳು ಶೂನ್ಯ ಕೊಲೆಸ್ಟ್ರಾಲ್ ಅನ್ನು ಹೊಂದಿವೆ. ಹೀಗಾಗಿ ಸೂರ್ಯಕಾಂತಿ ಬೀಜಗಳ ಸೇವನೆ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಿವೆ. ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇಲ್ಲಿ ನಾವು ಸೂರ್ಯಕಾಂತಿ ಬೀಜಗಳ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.


    ಆರೋಗ್ಯ ಗುಣಗಳಿಂದ ಸಮೃದ್ಧವಾಗಿರುವ ಸೂರ್ಯಕಾಂತಿ ಬೀಜಗಳ ಪ್ರಯೋಜನಗಳು


    ಸೂರ್ಯನ ಚಲನೆಯನ್ನು ಅನುಸರಿಸುವ ಹೂವು ಸೂರ್ಯಕಾಂತಿ. ಇದನ್ನು ಹೆಲಿಯೋಟ್ರೋಪಿಸಂ ಎಂದೂ ಕರೆಯುತ್ತಾರೆ. ಸೂರ್ಯಕಾಂತಿ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರೆ. ಹಾಗೆಯೇ ಸೂರ್ಯಕಾಂತಿ ಬೀಜಗಳೂ ಪ್ರಯೋಜನ ನೀಡುತ್ತವೆ.


    2017 ರಲ್ಲಿ ಎನ್ ಸಿಬಿಐ ನಡೆಸಿದ ಸಂಶೋಧನೆಯಲ್ಲಿ ಸೂರ್ಯಕಾಂತಿ ಬೀಜಗಳು ವಿವಿಧ ಆರೋಗ್ಯ ಪ್ರಯೋಜನ ನೀಡುತ್ತವೆ ಎಂದು ತಿಳಿದು ಬಂದಿದೆ. ಅವುಗಳು ತೂಕ ನಷ್ಟಕ್ಕೆ ಸಹಕಾರಿ. ಮಹಿಳೆಯರು ಮತ್ತು ಪುರುಷರಲ್ಲಿ ಹಾರ್ಮೋನುಗಳ ಸಮತೋಲನ ಕಾಪಾಡುತ್ತವೆ. ಈ ಬೀಜಗಳು ಹೃದಯ ಕಾಯಿಲೆ ಮತ್ತು ಚಯಾಪಚಯ ಅಸ್ವಸ್ಥತೆಯಿಂದ ಕಾಪಾಡುತ್ತದೆ.


    ಇದನ್ನೂ ಓದಿ: ತೂಕ ಇಳಿಕೆಯ ಜರ್ನಿಯಲ್ಲಿ ಈ ಪಾನೀಯ ಸೇರಿಸಿ ಹೊಟ್ಟೆ ಕೊಬ್ಬನ್ನು ವೇಗವಾಗಿ ಕರಗಿಸಿ!


    ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ


    ಸೂರ್ಯಕಾಂತಿ ಬೀಜಗಳ ಪೌಷ್ಟಿಕಾಂಶ ಮತ್ತು ಚಿಕಿತ್ಸಕ ಸಾಮರ್ಥ್ಯದ ಕುರಿತು ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಇಲಾಖೆಯ 2012 ರ ಸಂಶೋಧನೆ ಪ್ರಕಾರ, ಸೂರ್ಯಕಾಂತಿ ಬೀಜಗಳು ಚಯಾಪಚಯ ಮತ್ತು ಶೇಖರಣಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಅವು ಮೊನೊ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲ ಹೊಂದಿವೆ.


    ಸೂರ್ಯಕಾಂತಿ ಬೀಜಗಳು ಸೀರಮ್‌ನಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೊಟ್ಟೆ ತುಂಬಿಸುತ್ತವೆ. ಅಧಿಕ ಕೊಲೆಸ್ಟ್ರಾಲ್ ಆಹಾರ ತಪ್ಪಿಸಿ. ಇದು ನಿಮ್ಮ ಹೃದಯಕ್ಕೆ ಒಳ್ಳೆಯದು.


    ಹೃದಯದ ಆರೋಗ್ಯ ಕಾಪಾಡುತ್ತದೆ


    ಸೂರ್ಯಕಾಂತಿ ಬೀಜಗಳು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಡಿಮೆ ಕೊಲೆಸ್ಟ್ರಾಲ್ ಮಟ್ಟವು ಅಪಧಮನಿಕಾಠಿಣ್ಯ ಮತ್ತು ಇತರ ಹೃದಯ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಸೂರ್ಯಕಾಂತಿ ಬೀಜಗಳು ಆಂಟಿಹೈಪರ್ಟೆನ್ಸಿವ್ ಪರಿಣಾಮ ಬೀರುತ್ತವೆ. ಈ ಬೀಜಗಳು ಪ್ರೊಟೀನ್‌, ವಿಟಮಿನ್ ಇ ಮತ್ತು ರಕ್ತದಲ್ಲಿರುವ ಸ್ವತಂತ್ರ ರಾಡಿಕಲ್‌ಗಳನ್ನು ನಿವಾರಿಸುತ್ತದೆ.


    ಉರಿಯೂತದ ಗುಣಲಕ್ಷಣ


    ಸೂರ್ಯಕಾಂತಿ ಬೀಜಗಳು ಉರಿಯೂತ ಪರಿಣಾಮ ಹೊಂದಿವೆ. ಅವುಗಳು ಸಕ್ರಿಯ ಟೋಕೋಫೆರಾಲ್,  ಲಿನೋಲಿಕ್ ಆಮ್ಲ, ಲಿನೋಲೆನಿಕ್ ಆಮ್ಲ, ಟ್ರೈಟರ್ಪೀನ್ ಮತ್ತು ವಿವಿಧ ಪಾಲಿಫಿನೋಲಿಕ್ ಸಂಯುಕ್ತ ಹೊಂದಿವೆ. ಹೂವು, ಬೀಜ ಮತ್ತು ಬೀಜದ ಎಣ್ಣೆಯು ಉರಿಯೂತದ ಅಸ್ವಸ್ಥತೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.


    ಸೂರ್ಯಕಾಂತಿ ಬೀಜಗಳು ಆಹಾರದ ಫೈಬರ್‌ನಲ್ಲಿ ಸಮೃದ್ಧವಾಗಿವೆ. ಇದು ಆಹಾರದಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಕಾರಿ. ಊಟದ ನಂತರದ ಸಕ್ಕರೆಯ ಸಂಗ್ರಹವನ್ನು ತಡೆಯುತ್ತದೆ.


    ಮಧುಮೇಹ ಇರುವವರಿಗೆ ಉತ್ತಮ


    ಸರಿಯಾದ ಆಹಾರ ಸೇವನೆ ಮೂಲಕ ಮಧುಮೇಹ ನಿಯಂತ್ರಿಸಬಹುದು. ಹೆಚ್ಚಿನ ಸಕ್ಕರೆ ಮತ್ತು ಹೆಚ್ಚಿನ ಕಾರ್ಬ್ ಆಹಾರ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಿಸಬಹುದು. ಸೂರ್ಯಕಾಂತಿ ಬೀಜಗಳಂತಹ ಕಡಿಮೆ-ಕೊಲೆಸ್ಟ್ರಾಲ್ ಮತ್ತು ಕಡಿಮೆ-ಜಿಐ ಆಹಾರ ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ.


    ಸೂರ್ಯಕಾಂತಿ ಬೀಜಗಳು ಸುಮಾರು 20 ಗ್ಲೈಸೆಮಿಕ್ ಸೂಚಿ ಹೊಂದಿವೆ. ಇವುಗಳನ್ನು ಮತ್ತು ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ನಿಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಡೆಯಬಹುದು.


    ಮಲಬದ್ಧತೆ ಮತ್ತು ಅತಿಸಾರ ಕಡಿಮೆ ಮಾಡುತ್ತದೆ


    ಸೂರ್ಯಕಾಂತಿ ಬೀಜಗಳು, ಪೆಕನ್‌ಗಳು, ವಾಲ್‌ನಟ್ಸ್, ಕುಂಬಳಕಾಯಿ ಬೀಜಗಳು, ಸೋಯಾ ಬೀಜಗಳು ಮತ್ತು ಇತರ ಬೀಜಗಳು ಮಲಬದ್ಧತೆ ಕಡಿಮೆ ಮಾಡಲು ವಿರೇಚಕವಾಗಿ ಕಾರ್ಯ ನಿರ್ವಹಿಸುತ್ತವೆ. ಸ್ಮೂಥಿಗಳು, ಉಪಹಾರ ಧಾನ್ಯಗಳು ಅಥವಾ ಮೊಸರುಗಳಿಗೆ ಸೇರಿಸಬಹುದು. ದಿನಕ್ಕೆ 20 ರಿಂದ 35 ಗ್ರಾಂ ಬೀಜಗಳನ್ನು ಮಾತ್ರ ಸೇವಿಸಿ.


    ಇದನ್ನೂ ಓದಿ: ನವರಾತ್ರಿ ಹಬ್ಬದಲ್ಲಿ ಈ ಪಾಕವಿಧಾನ ಮಾಡಿ ಸೇವಿಸಿ ಹೆಲ್ದೀ ಆಗಿರಿ!


    ಈಸ್ಟ್ರೊಜೆನ್ ಅಸಮತೋಲನ ನಿಯಂತ್ರಿಸುತ್ತದೆ


    ಸೂರ್ಯಕಾಂತಿ ಬೀಜಗಳು ಫೈಟೊಈಸ್ಟ್ರೊಜೆನ್‌ ಹೊಂದಿವೆ. ಫೈಟೊಈಸ್ಟ್ರೊಜೆನ್ಗಳು ಸಸ್ಯ-ಆಧಾರಿತ ಚಯಾಪಚಯ ಕ್ರಿಯೆಗಳಾಗಿವೆ. ಈ ಫೈಟೊಕೆಮಿಕಲ್‌ಗಳು ರಚನಾತ್ಮಕವಾಗಿ ಮತ್ತು ಕ್ರಿಯಾತ್ಮಕವಾಗಿ ಹಾರ್ಮೋನುಗಳು ನಿರ್ದಿಷ್ಟವಾಗಿ ಈಸ್ಟ್ರೊಜೆನ್ ಮತ್ತು ಟೆಸ್ಟೋಸ್ಟೆರಾನ್‌ ಹೋಲುತ್ತವೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು