Sunday Special Recipe: ಸಖತ್​ ಸಂಡೇಗೆ ಹಳ್ಳಿ ಸ್ಟೈಲ್​ ಚಿಕನ್​ ಚಾಪ್ಸ್​​ ರೆಸಿಪಿ: ಆಹಾ.. ಸ್ವರ್ಗಕ್ಕೆ ಮೂರೇ ಗೇಣು!

Sunday Special Recipe: ಹೋಟೆಲ್​​ನಲ್ಲಿ ನಾನ್​ವೆಜ್​ ತಿಂದು, ನಮ್ಮ ಮನೆಯಲ್ಲಿ ಯಾಕೆ ಈ ಟೇಸ್ಟ್​ ಬರಲ್ಲ ಅಂದುಕೊಂಡಿರುತ್ತೀರಾ ಅಲ್ವಾ? ನಿಮ್ಮ ಮನೆಯಲ್ಲಿಯೇ ಸೇಮ್​ ಹಳ್ಳಿ ಸೊಗಡಿನ ಚಿಕನ್​ ಚಾಪ್ಸ್(Chicken Chops)​ ಹೇಗೆ ಮಾಡವುದು ಅಂತ ನಿಮಗೆ ನಾವು ತೋರಿಸ್ತೀವಿ.

ಹಳ್ಳಿ ಸ್ಟೈಲ್ ಚಿಕನ್​ ಚಾಪ್ಸ್​

ಹಳ್ಳಿ ಸ್ಟೈಲ್ ಚಿಕನ್​ ಚಾಪ್ಸ್​

  • Share this:
ಪ್ರತಿ ಭಾನುವಾರ(Sunday) ನಾನ್​ವೆಜ್​ ಪ್ರಿಯರಿಗೆ(Nonveg Lovers) ಹೊಸದೊಂದು ರೆಸಿಪಿ(New Recipe) ಟ್ರೈ ಮಾಡಬೇಕು ಅಂದುಕೊಳ್ಳತ್ತಾರೆ. ಸಂಡೇ ನಾನ್​ ವೆಜ್​ ತಿನ್ನದೇ ಕೆಲವರಿಗೆ ನಿದ್ದೆನೆ ಬರಲ್ಲ. ಬೆಳಗ್ಗೆನೇ ಎದ್ದು , ಚಿಕನ್(Chicken)​ ಅಂಗಡಿಗೆ ಹೋಗಿ ಮಾಂಸ(Meat) ತಂದು, ಆನ್​ಲೈನ್​ನಲ್ಲಿ ಇವತ್ತು ಯಾವ ರೆಸಿಪಿ ಮಾಡೋದು ಅಂತ ಹುಡುಕುತ್ತಾರೆ. ಈಗೆಲ್ಲಾ ಆನ್​ಲೈನ್(Online)​ನಲ್ಲೇ ಚಿಕನ್​ ಬುಕ್​ ಮಾಡಿದ್ರೆ, ಮನೆ ಬಾಗಿಲಿಗೆ ಫ್ರೆಶ್​ ಮಾಂಸ ಬರುತ್ತೆ. ಹೋಟೆಲ್​​ನಲ್ಲಿ ನಾನ್​ವೆಜ್​ ತಿಂದು, ನಮ್ಮ ಮನೆಯಲ್ಲಿ ಯಾಕೆ ಈ ಟೇಸ್ಟ್​ ಬರಲ್ಲ ಅಂದುಕೊಂಡಿರುತ್ತೀರಾ ಅಲ್ವಾ? ನಿಮ್ಮ ಮನೆಯಲ್ಲಿಯೇ ಸೇಮ್​ ಹಳ್ಳಿ ಸೊಗಡಿನ ಚಿಕನ್​ ಚಾಪ್ಸ್(Chicken Chops)​ ಹೇಗೆ ಮಾಡವುದು ಅಂತ ನಿಮಗೆ ನಾವು ತೋರಿಸ್ತೀವಿ.. ಮುಂದೆ ನೋಡಿ.. ಕೇವಲ ಹೋಟೆಲ್​ನಲ್ಲಿ ಮಾತ್ರ ಹಳ್ಳಿ ಸ್ಟೈಲ್​ ಚಿಕನ್ ಚಾಪ್ಸ್(Village Style Chicken Chops)​ ತಿಂದಿದ್ದರೆ, ನಿಮ್ಮ ಮನೆಯಲ್ಲೇ ಈ ಹಳ್ಳಿ ಸ್ಟೈಲ್​ ಅಥವಾ ನಾಟಿ ಸ್ಟೈಲ್​ ಚಿಕನ್​ ಚಾಪ್ಸ್​​ ಮಾಡಿಕೊಳ್ಳಬಹುದು. ಒಮ್ಮೆ ಇದನ್ನು ನೋಡಿ ಮಾಡಿ ತಿನ್ನಿ. ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವುದರಲ್ಲಿ ಎರಡು ಮಾತಿಲ್ಲ.

ಹಳ್ಳಿ ಸ್ಟೈಲ್ ಚಿಕಿನ್​ ಚಾಪ್ಸ್​​ ಮಾಡಲು ಬೇಕಾಗುವ ಸಾಮಾಗ್ರಿಗಳು

- ಚಿಕನ್​ : ಅರ್ಧ ಕೆಜಿ
- ಈರುಳ್ಳಿ : 1 ಸ್ವಲ ದಪ್ಪನದ್ದು
- ಪುದಿನ ಸೊಪ್ಪು : ಸ್ವಲ್ಪ
- ಕೊತ್ತಂಬರಿ ಸೊಪ್ಪು : ಸ್ವಲ್ಪ
- ತೆಂಗಿನ ತುರಿ : 2 ಚಮಚ ಅಥವಾ ಅದಕ್ಕಿಂತ ಹೆಚ್ಚು
-  ಹಸಿರು ಮೆಣಸಿನಕಾಯಿ : 3  (ಖಾರ ಬೇಕಿದ್ದರೆ ಹೆಚ್ಚು ಬಳಸಿಕೊಳ್ಳಬಹುದು)
- ಬೆಳ್ಳುಳ್ಳಿ : ಒಂದು ಗೆಡ್ಡೆ
- ಶುಂಠಿ : ಸ್ವಲ್ಪ
- ಚಕ್ಕೆ, ಲವಂಗ : 2-3
- ಎಣ್ಣೆ : 3-4 ಚಮಚ
- ದನಿಯಾ ಪುಡಿ : 1 ಚಮಚ
- ಮೆಣಸಿನ ಪುಡಿ : 1 ಚಮಚ
-ಉಪ್ಪು : ರುಚಿಗೆ ತಕ್ಕಷ್ಟು

ಈ  ಮಸಲಾ ಚೆನ್ನಾಗಿ ರುಬ್ಬಿಕೊಳ್ಳಿ!

- ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ್, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದಿನ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ತುಂಬಾ ನುಣ್ಣಗೆ ರುಬ್ಬಿದರೆ ರುಚಿ ಕಡಿಮೆಯಾಗುತ್ತದೆ. ಹೀಗಾಗಿ ತರಿ ತರಿಯಾಗಿ ಮಸಾಲೆಯನ್ನು ರುಬ್ಬಿಕೊಳ್ಳಿ.

ಇದನ್ನು ಓದಿ : ಸೂಪರ್ ಸಂಡೇಗೆ ಮಟನ್ ಕೂರ್ಮಾ ರೆಸಿಪಿ ಇಲ್ಲಿದೆ..

ಹಳ್ಳಿ ಸ್ಟೈಲ್ ಚಿಕನ್​ ಚಾಪ್ಸ್​ ಮಾಡುವ ವಿಧಾನ

- ಚಿಕನ್​ ತಂದ ಕೂಡಲೇ ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಚಿಟಿಕೆ ಉಪ್ಪು ಮತ್ತು ಚಿಟಿಕೆ ಅರಿಶಿಣ ಹಾಕಿ ಕೆಲ ಸಮಯ ನೆನೆಸಿಡಿ
- ಈಗ ಒಂದು ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ 2 ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ( ಮದ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ)
- ಸ್ವಲ್ಪ ಈರುಳ್ಳಿ ಕಂದು ಬಣ್ಣಕ್ಕೆ ಬಂದ ಬಳಿಕ ತೊಳೆದಿಟ್ಟಿದ್ದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಿಕನ್ ಚೆನ್ನಾಗಿ ಫ್ರೈ ಮಾಡಿ.
- ಚಿಕನ್ ಹಾಕಿದ ನಂತರ ನೀರಿನಾಂಶ ಬಿಟ್ಟುಕೊಳ್ಳುತ್ತದೆ. ಆದ್ದರಿಂದ ನೀರು ಸಂಪೂರ್ಣವಾಗಿ ನೀರಿನಾಂಶ ಕಡಿಮೆಯಾಗುವವರೆಗೂ ಚಿಕನ್ ಫ್ರೈ ಮಾಡಿಕೊಳ್ಳಿ.
- ಈ ನೀರು ಇಂಗಿದ ನಂತರ 1 ಚಮಚ ದನಿಯಾ ಪುಡಿ ಮತ್ತು 1 ಚಮಚ ಮೆಣಸಿನ ಪುಡಿ ಹಾಕಿ ಮತ್ತೆ ಫ್ರೈ ಮಾಡಿರಿ.
-  ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ಬಾಣಲಿಯನ್ನು ಮುಚ್ಚಿಡಿ 10 ನಿಮಿಷ ಬೇಯಲು ಬಿಡಿ
- ಇದರ ಮಧ್ಯೆ ಆಗಾಗ್ಗೆ ಮುಚ್ಚಳ ತೆಗೆದು ಚಿಕನ್​ ಚಾಪ್ಸ್​ ಅನ್ನು ತಿರುಗಿಸುತ್ತರಿ.  ಬಳಿಕ ಅದಕ್ಕ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಚೂರು ಬೇರೆಸಿದರೆ ಟೇಸ್ಟಿ ಹಳ್ಳಿ ಸ್ಟೈಲ್ ಚಿಕಿನ್​ ಚಾಪ್ಸ್​ ಸವಿಯಲು ರೆಡಿ.

ಇದನ್ನು ಓದಿ : ಸೂಪರ್ ಸಂಡೇಗೆ ಚಿಕನ್ ಮಿರ್ಚಿ ಟ್ರೈ ಮಾಡಿ

ಇದನ್ನು ದೋಸೆ, ಚಪಾತಿ, ರೊಟ್ಟಿ, ನೀರ್​ದೋಸೆ, ಬಿರಿಯಾನಿ, ವೈಟ್​ ರೈಸ್​​ ಜೊತೆ ತಿಂದರೆ ಅದರ ಮಜಾನೇ ಬೇರೆ. ಇನ್ಯಾಕೆ ತಡ ಇಂದೇ ಈ ಹಳ್ಳಿ ಸ್ಟೈಲ್​ ಚಿಕನ್ ಚಾಪ್ಸ್​ ಮಾಡಿ ತಿನ್ನಿರಿ.​
Published by:Vasudeva M
First published: