Sunday Special Recipe: ನಾಟಿ ಸ್ಟೈಲ್​ನಲ್ಲಿ ಸ್ವಾದಿಷ್ಟ ಮಟನ್​ ಕರಿ, ವಾರಾಂತ್ಯದ ರಜಾ-ಮನೆಯಲ್ಲೇ ಮಜಾ!

Sunday Special Recipe: ಚಿಕನ್​ ತಿಂದು ತಿಂದು ಬೋರ್​ ಆಗಿದ್ಯಾ? ಮಟನ್​ ತಿನ್ನಬೇಕು ಆದರೆ ಏನ್​ ಮಾಡೋದು ಎಲ್ಲ ಟೇಸ್ಟ್​​ ಮಾಡಿ ಆಗಿದೆ ಅನ್ನಿಸುತ್ತಿದ್ಯಾ? ಹಾಗಿದ್ರೆ ಮೊದಲು ಮಟನ್​ ತನ್ನಿ. ಇಲ್ಲಿ ಒಂದು ಸೂಪರ್​ ಡೂಪರ್(Super-Duper)​ ಮಟನ್​ ರೆಸಿಪಿ(Mutton Recipe) ಇದೆ.

ನಾಟಿ ಸ್ಟೈಲ್​ ಮಟನ್ ಕರಿ

ನಾಟಿ ಸ್ಟೈಲ್​ ಮಟನ್ ಕರಿ

  • Share this:
ಸಂಡೇ ಬಂತು.. ಸಂಡೇ ಬಂತು... ನಾನ್​ವೆಜ್(Nonveg)​ ತಿಂದೆ ಇದ್ದರೆ ಇಂದು ಭಾನುವಾರ(Sunday) ಎನಿಸಿಕೊಳ್ಳುವುದಿಲ್ಲ. ಕಳೆದ ಎರಡು ವಾರಗಳಿಂದ ನಾವು ಕೆಲ ಚಿಕನ್(Chicken)​ ರೆಸಪಿಗಳನ್ನ ಹೇಳಿದ್ದೆವು. ಆದರೆ, ಇಂದು ಮಟನ್(Mutton)​ನಲ್ಲಿ ತುಂಬ ಸುಲಭವಾಗಿ ಮಾಡುವ ಒಂದು ರೆಸಿಪಿಯನ್ನು ಹೇಳುತ್ತವೆ. ವಾತಾಂತ್ಯದ ರಜಾದಿನವನ್ನು, ಮನೆಯಲ್ಲಿಯೇ ಮಟನ್​ ಡಿಶ್(Mutton Dish)​ ಮಾಡಿಕೊಂಡು ಮಜಾ ಮಾಡಿ. ಮಟನ್​ ಅಂದರೆ ಯಾರಿಗಿಷ್ಟ ಇಲ್ಲ.. ಆಹಾ.. ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತಿರುತ್ತೆ ಅಲ್ವಾ..? ಅದರಲ್ಲೂ ಎಳೆಸು ಮಾಂಸ ಅಂದರೆ ಸ್ವರ್ಗಕ್ಕೆ ಮೂರೇ ಗೇಣು. ಆದರೆ ಒಂದು ಸಲಹೆ, ಮಟನ್​ ಅನ್ನು ನಿಯಮಿತವಾಗಿ ತಿನ್ನಬೇಕು, ಯಾಕೆಂದರೆ ಮಟನ್​ ಮಾಂಸದಲ್ಲಿ ಕೊಬ್ಬಿನ ಅಂಶ ಹೆಚ್ಚಿರುತ್ತೆ. ಲಿಮಿಟ್ ಆಗಿ ತಿನ್ನಿ, ಟೇಸ್ಟಿಯಾಗಿ ತಿನ್ನಿ. ಚಿಕನ್​ ತಿಂದು ತಿಂದು ಬೋರ್​ ಆಗಿದ್ಯಾ? ಮಟನ್​ ತಿನ್ನಬೇಕು ಆದರೆ ಏನ್​ ಮಾಡೋದು ಎಲ್ಲ ಟೇಸ್ಟ್​​ ಮಾಡಿ ಆಗಿದೆ ಅನ್ನಿಸುತ್ತಿದ್ಯಾ? ಹಾಗಿದ್ರೆ ಮೊದಲು ಮಟನ್​ ತನ್ನಿ. ಇಲ್ಲಿ ಒಂದು ಸೂಪರ್​ ಡೂಪರ್(Super-Duper)​ ಮಟನ್​ ರೆಸಿಪಿ(Mutton Recipe) ಇದೆ.  ಇಂದು ಈ ರೆಸಿಪಿ ಮಾಡಿ, ತಿಂದು ಮಜಾ ಮಾಡಿ. ನಾಟಿ ಸ್ಟೈಲ್​ನಲ್ಲಿ ಸ್ವಾದಿಷ್ಟ ಮಟನ್​ ಕರಿ ಮಾಡೋದು ಹೇಗೆ ಅಂತ ಇಲ್ಲಿದೆ ನೋಡಿ. 

ಈ ಸ್ಪೆಷಲ್​ ರೆಸಿಪಿ ಮಾಡಲು ಹೆಚ್ಚಿನ ಸಮಯ ಬೇಡ. ಆಹಾರ ಪ್ರಿಯರಿಗೆ ತಿನ್ನುವುದಕ್ಕೆ ಕಾಯುವುದು ಎಂದರೆ ಇಷ್ಟವಿರಲ್ಲ..ಹೀಗಾಗಿ ಫಟಾಫಟ್​ ಅಂತ ಮಾಡುವ ಅಡುಗೆಗಳು ಇಷ್ಟವಾಗುತ್ತೆ. ಸೋ, ನಿಮಗಾಗಿ ಇಲ್ಲಿದೆ ನೋಡಿ ನಾಟಿ ಸ್ಟೈಲ್​ ಮಟನ್​ ಕರಿ ಮಾಡುವು ವಿಧಾನ.

 ನಾಟಿ ಸ್ಟೈಲ್​ ಮಟನ್​ ಕರಿ ಮಾಡಲು ಬೇಕಾಗುವ ಸಾಮಾಗ್ರಿಗಳು

- ಮಟನ್​ ( ಒಂದು ಕೆಜಿ)
- ಅರಿಶಿಣ ಪುಡಿ ( ಅರ್ಧ ಚಮಚ)
- ಒಣಮೆಣಸು ( ಖಾರಕ್ಕೆ ತಕ್ಕಷ್ಟು)
- ಕೊತ್ತಂಬರಿ ಬೀಜ (1 ಚಮಚ)
- ಜೀರಿಗೆ (1 ಚಮಚ)
- ಲವಂಗ ( 5ರಿಂದ 6)
- ಚಕ್ಕೆ (ಒಂದು ಇಂಚಿನಷ್ಟು ದೊಡ್ಡದು)
- ಈರುಳ್ಳಿ ( 3ರಿಂದ 4 )
- ಬೆಳ್ಳುಳ್ಳಿ ( 2 ರಿಂದ 3 ಎಸಳು)
-  ಶುಂಠಿ-ಬೆಳ್ಳುಳ್ಳಿ ಪೇಸ್ಟ್ ( 2ರಿಂದ 3 ಚಮಚ)
- ಟೊಮ್ಯಾಟೋ (1 ಮಿಡಿಯಮ್​ ದಪ್ಪ)
- ಗರಂ ಮಸಲಾ ಪುಡಿ (1 ಚಮಚ)
- ಎಣ್ಣೆ ( 3 ಚಮಚ)
- ಉಪ್ಪು ( ರುಚಿಗೆ ತಕ್ಕಷ್ಟು)


ಇದನ್ನು ಓದಿ : ಸೂಪರ್ ಸಂಡೇಗೆ ಚಿಕನ್ ಮಿರ್ಚಿ ಟ್ರೈ ಮಾಡಿ

ಫಟಾಫಟ್ ಅಂತ ಮಾಡಿ ನಾಟಿ ಸ್ಟೈಲ್​ ಮಟನ್​ ಕರಿ!

- ಮೊದಲು ಮಟನ್​ ಅನ್ನು ಚೆನ್ನಾಗಿ ತೊಳೆದು ಬಳಿಕ ಅದಕ್ಕೆ ಉಪ್ಪು, ಅರಿಶಿಣ ಹಾಕಿ, ನೀರು ಸೇರಿಸಿ ಪ್ರೆಶರ್​ ಕುಕ್ಕರ್​ನಲ್ಲಿ 4 ವಿಶಲ್​ ಬರುವವರೆಗೆ ಬೇಯಿಸಿ
- ನಂತರ ಒಣ ಮೆಣಸು, ಜೀರಿಗೆ, ಕರಿ ಮೆಣಸಿನ ಕಾಳು, ಲವಂಗ, ಚಕ್ಕೆ ಇವುಗಳನ್ನು ಬಾಣಲೆಗೆ 1 ಚಮಚ ಎಣ್ಣೆ ಹಾಕಿ 2-3 ನಿಮಿಷ ಹುರಿದುಕೊಳ್ಳಿ
- ಅವು ತಣ್ಣಗಾದ ಮೇಲೆ ಕಟ್​ ಮಾಡಿಟ್ಟಿದ್ದ ಈರುಳ್ಳಿಯನ್ನು ಹಾಕಿ 2 ಬೆಳ್ಳುಳ್ಳಿ ಎಸಳು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
- ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಉಳಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ
- ನಂತರ ಟೊಮ್ಯಾಟೋ ಹಾಕಿ ಸ್ವಲ್ಪ ಉಪ್ಪು ಸೇರಿಸಿ ಮೆತ್ತಗಾಗುವವರೆಗೂ ಹುರಿಯಿರಿ
- ನಂತರ ರುಬ್ಬಿದ ಪೇಸ್ಟ್ ಹಾಕಿ , ಗರಂ ಮಸಾಲ ಹಾಕಿ , ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಅನ್ನು 2-3 ಚಮಚ ಹಾಕಿ ಗ್ರೇವಿ ರೀತಿಯಲ್ಲಿ ಮಾಡಿ.
- ನಂತರ ಬೇಯಿಸಿದ ಮಟನ್ ತುಂಡುಗಳನ್ನು ಹಾಕಿ 10 ನಿಮಿಷ ಬೇಯಿಸಿದರೆ ರುಚಿಕರವಾದ ಮಟನ್ ಕರಿ ರೆಡಿ.

ಇದನ್ನು ಓದಿ : ಸಿಂಪಲ್​​ ಈರುಳ್ಳಿ ಚಿಕನ್​ ಗ್ರೇವಿ: 20 ನಿಮಿಷದಲ್ಲೇ ರೆಡಿ, ಕೊಂಚ ಖಾರ-ಸಖತ್​ ರುಚಿ​!

ಕಡಿಮೆ ಸಮಯದಲ್ಲಿ ಅದು ನಾಟಿ ಸ್ಟೈಲ್​ನಲ್ಲಿ ಮಟನ್​ ಕರಿ ರೆಡಿ ಮಾಡಿ ತಿನ್ನುತ್ತಿದ್ದರೇ, ಆಹಾ.. ಆಗ ತಲೆಯಲ್ಲಿ ಒಂದೇ ಹಾಡು ಗುನುಗುತ್ತೆ. ಈ ಜನುಮವೇ ದೊರಕಿತೆ.. ರುಚಿ ಸವಿಯಲು.. ಈ ಜಗವಿದೆ ನವರಸಗಳ ಉಣ ಬಡಿಸಲು.. ಬಿಸಿ ಬಿಸಿ ಇದೆ.. ನಳಪಾಕ ದಿನ ದಿನ ನೂತನ...
Published by:Vasudeva M
First published: