Sunday Special Recipe: ಮೊಟ್ಟೆ ಪಲ್ಯವನ್ನು ಹೀಗೂ ಮಾಡ್ಬಹುದು, ಸ್ಪೆಷಲ್ ರೆಸಿಪಿ ಟ್ರೈ ಮಾಡಿ

Egg Palya: ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಪಲ್ಯ ರೆಡಿ. ಇದನ್ನು ದೋಸೆ, ಚಪಾತಿ, ರೊಟ್ಟಿ, ನೀರ್​ದೋಸೆ, ಬಿರಿಯಾನಿ, ವೈಟ್​ ರೈಸ್​​ ಜೊತೆ ತಿಂದರೆ ಅದರ ಮಜಾನೇ ಬೇರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿ ಭಾನುವಾರ(Sunday) ನಾನ್ವೆಜ್ಪ್ರಿಯರಿಗೆ(Nonveg Lovers) ಹೊಸದೊಂದು ರೆಸಿಪಿ(New Recipe) ಟ್ರೈ ಮಾಡಬೇಕು ಅಂದುಕೊಳ್ಳತ್ತಾರೆ. ಸಂಡೇ ನಾನ್ವೆಜ್ತಿನ್ನದೇ ಕೆಲವರಿಗೆ ನಿದ್ದೆನೆ ಬರಲ್ಲ. ಬೆಳಗ್ಗೆನೇ ಎದ್ದು , ಚಿಕನ್(Chicken)​ ಅಂಗಡಿಗೆ ಹೋಗಿ ಮಾಂಸ(Meat) ತಂದು, ಆನ್ಲೈನ್ನಲ್ಲಿ ಇವತ್ತು ಯಾವ ರೆಸಿಪಿ ಮಾಡೋದು ಅಂತ ಹುಡುಕುತ್ತಾರೆ. ಈಗೆಲ್ಲಾ ಆನ್ಲೈನ್(Online)​ನಲ್ಲೇ ಚಿಕನ್ಬುಕ್ಮಾಡಿದ್ರೆ, ಮನೆ ಬಾಗಿಲಿಗೆ ಫ್ರೆಶ್ಮಾಂಸ ಬರುತ್ತೆ. ಹೋಟೆಲ್​​ನಲ್ಲಿ ನಾನ್ವೆಜ್ತಿಂದು, ನಮ್ಮ ಮನೆಯಲ್ಲಿ ಯಾಕೆ ಟೇಸ್ಟ್ಬರಲ್ಲ ಅಂದುಕೊಂಡಿರುತ್ತೀರಾ ಅಲ್ವಾ? ಇನ್ನು ಮೊಟ್ಟೆ(Egg) , ಈ ಮೊಟ್ಟೆಯನ್ನು ನೀವು ಅನೇಕ ರುಚಿಯಲ್ಲಿ ತಯಾರಿಸಬಹುದು, ನೀವು ಮೊಟ್ಟೆಯಿಂದ ಸಾರು ಅಥವಾ ಬುರ್ಜಿ ಮಾಡುವಾಗ ಗಮನಿಸಿರಬಹುದು ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ರುಚಿಯಲ್ಲಿ ಬದಲಾವಣೆಯಾಗುತ್ತೆ, ಹಾಗೆಯೇ ಎಗ್ ಪಲ್ಯ ಸಹ. ಇದು ಅತಿ ಸುಲಭವಾದ ರೆಸಿಪಿಯಾಗಿದ್ದು, ಮನೆಯಲ್ಲಿ ಆರಾಮವಾಗಿ ತಯಾರಿಸಬಹುದು. ಹೇಗೆ ಎಂಬುದು ಇಲ್ಲಿದೆ.

ಮೊಟ್ಟೆ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು

ಮೊಟ್ಟೆ 4

ಕ್ಯಾಪ್ಸಿಕಂ 1 (ಇದರ ಬೀಜ ಹಾಕಬೇಡಿ)

ಟೊಮೆಟೊ 1 (ಅದರ ಸಿಪ್ಪೆ ತೆಗೆಯಿರಿ, ಬೀಜ ಕೂಡ)

ಎಣ್ಣೆ 4 ಚಮಚ

ಅರಿಶಿಣ ಪುಡಿ 1/2 ಚಮಚ

ಜೀರಿಗೆ ಪುಡಿ 1 ಚಮಚ

ರುಚಿಗೆ ತಕ್ಕ ಉಪ್ಪು

ಇದನ್ನೂ ಓದಿ: ಸೂಪರ್ ಸಂಡೇಗೆ ಚಿಕನ್ ಮಿರ್ಚಿ ಟ್ರೈ ಮಾಡಿ

ಖಾರದ ಪುಡಿ 1 ಚಮಚ

ಕಸೂರಿ ಮೇಥಿ 1 ಚಮಚ

ಎಗ್ ಮಸಾಲ 1 ಚಮಚ

ಸ್ವಲ್ಪ ಕೊತ್ತಂಬರಿ ಸೊಪ್ಪು

ಮೊಟ್ಟೆ ಪಲ್ಯ ಮಾಡುವ ವಿಧಾನ

ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ನೀರನ್ನು ಹಾಕಿ ಜೊತೆಗೆ 4 ಮೊಟ್ಟೆಯನ್ನು  ಹಾಕಿ ಚನ್ನಾಗಿ ಬೇಯಿಸಿ.  ಅದು ಬೆಂದ ನಂತರ ಒಂದು ಪ್ಯಾನ್‌ ತೆಗೆದುಕೊಂಡು ಬಿಸಿ ಮಾಡಿ 4 ಚಮಚ ಎಣ್ಣೆ ಹಾಕಿ.

ಎಣ್ಣೆ ಬಿಸಿಯಾದಾಗ ಕತ್ತರಿಸಿದ ಕ್ಯಾಪ್ಸಿಕಂ ಹಾಗೂ ಟೊಮೆಟೊ ಹಾಕಿ. ಮೊದಲೇ ಹೇಳಿದಂತೆ ಇವುಗಳ ಬೀಜ ಹಾಕಬೇಡಿ. ನಂತರ ಅದಕ್ಕೆ  ಅರಿಶಿಣ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಫ್ರೈ ಮಾಡಿ.

ನಂತರ ಕಸೂರಿ ಮೇಥಿಯನ್ನು ಕೈಯಲ್ಲೇ ಪುಡಿ ಮಾಡಿ ಹಾಕಿ. ಈಗ ಮೊಟ್ಟೆಯನ್ನು ಸಣ್ಣದಾಗಿ ಕತ್ತರಿಸಿ ಮಸಾಲೆಗೆ ಹಾಕಿ. ನಂತರ ಒಂದು ಚಮಚ ಎಗ್‌ ಮಸಾಲ ಹಾಕಿ ಮಿಕ್ಸ್ ಮಾಡಿ, ಎಲ್ಲ ಮಸಾಲೆಗಳು ಮೊಟ್ಟೆಯ ಜೊತೆ ಚನ್ನಾಗಿ ಮಿಶ್ರಣವಾಗುವಂತೆ ನೋಡಿಕೊಳ್ಳಿ. ನಂತರ ಗ್ಯಾಸ್​ ಆಫ್​ ಮಾಡಿ.

ಇದನ್ನೂ ಓದಿ: ಸಖತ್ ಸಂಡೇಗೆ ಮಟನ್ ಕೀಮಾ ರೆಸಿಪಿ ..

ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಪಲ್ಯ ರೆಡಿ. ಇದನ್ನು ದೋಸೆ, ಚಪಾತಿ, ರೊಟ್ಟಿ, ನೀರ್​ದೋಸೆ, ಬಿರಿಯಾನಿ, ವೈಟ್​ ರೈಸ್​​ ಜೊತೆ ತಿಂದರೆ ಅದರ ಮಜಾನೇ ಬೇರೆ. ಒಮ್ಮೆ ಇದನ್ನು ನೋಡಿ ಮಾಡಿ ತಿನ್ನಿ. ಮತ್ತೆ ಮತ್ತೆ ತಿನ್ನಬೇಕು ಅನ್ನಿಸುವುದರಲ್ಲಿ ಎರಡು ಮಾತಿಲ್ಲ.
Published by:Sandhya M
First published: