ಸಂಡೇ ಬಂತು (Sunday Special)ಅಂದ್ರೆ ಸಾಕು ನಾನ್ವೆಜ್ (Non Veg)ಬೇಕೆಬೇಕು. ಬಿಸಿ ಬಿಸಿಯಾಗಿ ಸ್ಪೈಸಿ ಸ್ಪೈಸಿಯಾಗಿ ನಾನ್ ವೆಜ್ ಇದ್ರೆ ಊಟದ ರುಚಿನೇ ಬೇರೆ. ಹಾಗಾದ್ರೆ ಇವತ್ತು ಸ್ಪೆಷಲ್ ಚಿಕನ್ ಗೊಜ್ಜು ಮಾಡಿದ್ರೆ ಹೇಗಿರತ್ತೆ. ಅಯ್ಯೋ ಅದೇ ಚಿಕನ್ ಗೊಜ್ಜು ಬೋರ್ ಅಂತ ಹೇಳ್ತೀರಾ, ಹಾಗಾದ್ರೆ ಚಿಕನ್ ಮಿರ್ಚಿ(Chicken Mirchi) ಮಾಡಿ. ಒಮ್ಮೆ ಮಾಡಿದರೆ ಸಾಕು ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ ಅಷ್ಟು ಚೆನ್ನಾಗಿರುತ್ತದೆ ಈ ಚಿಕನ್ ಮಿರ್ಚಿ. ಇದನ್ನು ಮಾಡಲು ಹೆಚ್ಚು ಸಾಮಾಗ್ರಿಯ ಅವಶ್ಯಕತೆ ಕೂಡ ಇಲ್ಲ ಹಾಗೂ ಬೇಗ ಸಹ ಮಾಡಬಹುದು. ಜೊತೆಗೆ ಮನೆಯಲ್ಲಿ ಇರುವವರು ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ತಿನ್ನೋದು ಗ್ಯಾರೆಂಟಿ.
ಮನೆಯಲ್ಲಿರುವ ಚಿಕ್ಕನ್ ಅಚ್ಚು ಕಾರದಪುಡಿ ಮತ್ತು ಗರಂ ಮಸಾಲ, ದನಿಯಪುಡಿ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಬಳಸಿ ಇದನ್ನ ತಯಾರು ಮಾಡಬಹುದು. ಇಷ್ಟೆಲ್ಲ ಪದಾರ್ಥಗಳನ್ನು ಬಳಕೆ ಮಾಡಿದರೂ ಸಹ ಇದು ಹೆಚ್ಚು ಮಸಾಲೆಯುಕ್ತ ಎಂದು ಅನಿಸುವುದಿಲ್ಲ.
ಹಾಗಾದ್ರೆ ಚಿಕನ್ ಮಿರ್ಚಿ ಮಾಡುವುದು ಹೇಗೆ ಇಲ್ಲಿದೆ
ಬೇಕಾಗುವ ಪದಾರ್ಥಗಳು
2 ಟೀಸ್ಪೂನ್- ವರ್ಜಿನ್ ಆಲಿವ್ ಎಣ್ಣೆ
1 ಈರುಳ್ಳಿ (ಸಣ್ಣದಾಗಿ ಕತ್ತರಿಸಿಕೊಳ್ಳಿ)
2 ಕೆಜಿ ಚಿಕನ್ ಅಥವಾ ನಿಮ್ಮ ಅವಶ್ಯಕತೆಗೆ ತಕ್ಕಂತೆ
3 ಲವಂಗ ಬೆಳ್ಳುಳ್ಳಿ
ಇದನ್ನೂ ಓದಿ: ಸಖತ್ ಸಂಡೇಗೆ ಚಿಕನ್ ಪುಳಿಮುಂಚಿ, ರೆಸಿಪಿ ಇಲ್ಲಿದೆ..ಟ್ರೈ ಮಾಡಿ!
1 ಟೇಬಲ್ ಸ್ಪೂನ್ ಹೆಚ್ಚಿರುವ ಶುಂಠಿ
1 ಟೀಸ್ಪೂನ್ ಕೆಂಪುಮೆಣಸು ಪುಡಿ
1 ಟೀಸ್ಪೂನ್ ಅರಿಶಿನ ಪುಡಿ
1 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಜೀರಿಗೆ
ಒಂದು ಕಪ್ ಟೊಮೆಟೊ
ರುಚಿಗೆ ತಕ್ಕಷ್ಟು ಉಪ್ಪು
ಕರಿಮೆಣಸಿನ ಕಾಳು
ಕಸ್ತೂರಿ ಮೆಂತೆ
ಶುಂಠಿ- ಬೆಳ್ಳುಳ್ಳಿ ಪೇಸ್ಟ್
ಒಣ ಮೆಣಸಿನ ಕಾಯಿಟೊ
ಮೊಟೋ ರಸ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯನ್ನು ತೆಗೆದು ಒಲೆಯ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕಯ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿದ ನಂತರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಒಣಮೆಣಸಿನಕಾಯಿ ಎಲ್ಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
ಅದು ಫ್ರೈ ಆದ ಮೇಲೆ ಈರುಳ್ಳಿ, ಟೊಮೋಟೋ ಹಾಗೂ ಎಲ್ಲ ಪದಾರ್ಥಗಳನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಸರಿಯಾಗಿ ಮಾಡಬೇಕು, ಟೊಮೋಟೋ ಚನ್ನಾಗಿ ಬೇಯುವಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ನೀರನ್ನು ಬಳಕೆ ಮಾಡಬೇಡಿ. ಅನಿವಾರ್ಯವಿದ್ದಲ್ಲಿ ಮಾತ್ರ ಮಾಡಿ.
ಇದೆಲ್ಲದಕ್ಕಿಂತ ಮೊದಲ ಚಿಕನ್ ಚನ್ನಾಗಿ ತೊಳೆದು ನೀರು ಇಲ್ಲದಂತೆ ನೋಡಿಕೊಳ್ಳಿ. ಇನ್ನು ಮಿಶ್ರಣ ಮಾಡಿದ ನಂತರ ಅದಕ್ಕೆ ಎಲ್ಲ ಮಸಾಲ ಪದಾರ್ಥಗಳನ್ನು ಹಾಕಬೇಕು ಅಚ್ಚು ಕಾರದ ಪುಡಿ ಮೆಣಸಿನ ಪುಡಿ ಗರಂ ಮಸಾಲ ಧನಿಯಾ ಪುಡಿ ಎಲ್ಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
ಇನ್ನು ನಂತರ ಸ್ವಲ್ಪ ಟೊಮೊಟೊ ರಸವನ್ನು ಹಾಕಬೇಕು ಅದಾದ ಮೇಲೆ ಚಿಕನ್ ಹಾಕಿ ಚೆನ್ನಾಗಿ ಫ್ರೈ ಮಾಡಬೇ. ಚಿಕನ್ನಲ್ಲಿ ನೀರು ಇದ್ದರೆ ರುಚಿ ಹಾಳಾಗುತ್ತದೆ. ಹಾಗೂ ಚಿಕನ್ ಚನ್ನಾಗಿ ಬೇಯಬೇಕು. ಚಿಕನ್ ಬೇಯುವಾಗ ಸ್ವಲ್ಪ ಉಪ್ಪನ್ನು ಹಾಕಿ ಚನ್ನಾಗಿ ಮಿಶ್ರಣ ಮಾಡಿ.
ಇದನ್ನೂ ಓದಿ: ಸೂಪರ್ ಸಂಡೇಗೆ ಬೀಗರ ಊಟದ ಸ್ಪೆಷಲ್ ಬೋಟಿ ಗೊಜ್ಜು..
ನಂತರ ಅದನ್ನು 45 ನಿಮಿಷಗಳ ಬೇಯಲು ಬಿಡಿ, ಅದು ಬೆಂದ ನಂತರ ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ಚಿಕನ್ ಮಿರ್ಚಿ ರೆಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ