ಸಂಡೇ (Sunday) ಬಂತಂದ್ರೆ ನಾನ್ವೆಜ್ನಲ್ಲಿ (Non veg) ಹೊಸ, ಹೊಸ ಪದಾರ್ಥಗಳನ್ನು ಸವಿಯಲು ಜನ ಇಷ್ಟ ಪಡುತ್ತಾರೆ. ಪ್ರತಿ ವಾರ ನಾವು ಯಾವ ಫುಡ್ ತಿನ್ನಬೇಕು ಎಂದು ಯೋಚಿಸ್ತಿರುತ್ತಾರೆ. ಅಲ್ಲದೇ ವೆರೈಟಿ ಫುಡ್ ಸವಿಯುವ ಸಲುವಾಗಿ ದೂರ, ದೂರದ ರೆಸ್ಟೋರೆಂಟ್ಗೆ (Restaurant) ಜನ ಭೇಟಿ ನೀಡುತ್ತಾರೆ. ಅದರಲ್ಲಿಯೂ ಕೆಲ ದೊಡ್ಡ ರೆಸ್ಟೋರೆಂಟ್ಗಳಲ್ಲಿ ಸಿಗದೇ ಇರುವುದು ಸಣ್ಣ ಪುಟ್ಟ ಹೋಟೆಲ್ಗಳಲ್ಲಿ (Hotel) ಸಿಗುತ್ತದೆ. ಆದರೆ ಎಷ್ಟೋ ಜನಕ್ಕೆ ಸಣ್ಣ ಹೋಟೆಲ್ನಲ್ಲಿ ಮಾಡುವ ನಾನ್ವೆಜ್ ಪದಾರ್ಥಗಳನ್ನು ಮನೆಯಲ್ಲಿಯೇ ಮಾಡಬಹುದು ಎಂದು ತಿಳಿದಿರುವುದಿಲ್ಲ. ಸದ್ಯ ಇಂದು ನಾವು ನಿಮಗೆ ಮಟನ್ (Mutton) ಬ್ರೈನ್ ಫ್ರೈ (Brain Fry) ಮಾಡುವುದೇಗೆ ಎಂದು ನಾವು ನಿಮಗೆ ಹೇಳಿಕೊಡುತ್ತಿದ್ದೇವೆ. ಎಷ್ಟೋ ಜನಕ್ಕೆ ಮಟನ್ ಬ್ರೈನ್ ಫ್ರೈ ಎಂಬ ಪದಾರ್ಥವಿದೆ ಎಂಬುವುದೇ ಗೊತ್ತಿರುವುದಿಲ್ಲ. ಅಂತಹವರು ಈ ಹೊಸ ತರಹದ ಬ್ರೈನ್ ಫ್ರೈ ಅನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಿ ಸವಿಯಿರಿ. ಅದರಲ್ಲಿಯೂ ಬ್ರೈನ್ ಫ್ರೈ ಅನ್ನು ಕೇವಲ 15 ರಿಂದ 20 ನಿಮಿಷದಲ್ಲಿಯೇ ಮಾಡಬಹುದು. ಅಷ್ಟಕ್ಕೂ ಬ್ರೈನ್ ಫ್ರೈ ಮಾಡುವುದೇಗೆ ಅಂತೀರಾ. ಹಾಗಾದರೆ ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
![sunday special Mutton Brain Fry Recipe in kannada]()
ಬ್ರೈನ್ ಫ್ರೈ
ಮಟನ್ ಫ್ರೈ ಮಾಡಲು ಬೇಕಾಗಿರುವ ಸಾಮಾಗ್ರಿಗಳು
- 1 ಮಟನ್ ಬ್ರೈನ್
- ಒಂದು ಕಪ್ ಕಟ್ ಮಾಡಿದ ಈರುಳ್ಳಿ
- 1 ಹಸಿರು ಮೆಣಸಿನಕಾಯಿ
- ½ ಟೀ ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್
- ½ ಕಪ್ ಕರಿಬೇವಿನ ಎಲೆಗಳು
- ¼ ಟೀಸ್ಪೂನ್ ಜೀರಿಗೆ
- 3 ಲವಂಗ
- 1 ಏಲಕ್ಕಿ
- ½ ದಾಲ್ಚಿನ್ನಿ
- ½ ಟೀ ಸ್ಪೂನ್ ಮೆಣಸು
- ¼ ಟೀಸ್ಪೂನ್ ಕೆಂಪು ಮೆಣಸಿನ ಪುಡಿ
- ¼ ಟೀ ಸ್ಪೂನ್ ಕೊತ್ತಂಬರಿ ಪುಡಿ
- 1 ಟೀ ಸ್ಪೂನ್ ಗರಂ ಮಸಾಲಾ ಪೌಡರ್
- 1 ಟೀ ಸ್ಪೂನ್ ಗರಂ ಮಸಾಲಾ
- ¼ ಟೀ ಸ್ಪೂನ್ ಅರಿಶಿನ ಪುಡಿ
- ಅಗತ್ಯಕ್ಕೆ ತಕ್ಕಷ್ಟು ಅಡಿಗೆ ಎಣ್ಣೆ
- ಅಗತ್ಯವಿರುವಷ್ಟು ಉಪ್ಪು
![sunday special Mutton Brain Fry Recipe in kannada]()
ಬ್ರೈನ್ ಫ್ರೈ
ಮಟನ್ ಬ್ರೈನ್ ಫ್ರೈ ಮಾಡುವ ವಿಧಾನ
- ಮೊದಲಿಗೆ ಕುರಿ ಮೆದುಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಪಾತ್ರೆಯೊಂದರಲ್ಲಿ ನೀರು, ಸ್ವಲ್ಪ ಉಪ್ಪು, ಸ್ವಲ್ಪ ಅರಿಶಿನ ಮತ್ತು ಮೆದುಳು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ. ಪಕ್ಕದಲ್ಲಿ ಇಡಿ.
- ಸ್ಟಾವ್ ಮೇಲೆ ಬಾಣಲಿ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಜೀರಿಗೆ, ದಾಲ್ಚಿನ್ನಿ, ಲವಂಗ ಮತ್ತು ಏಲಕ್ಕಿ ಮತ್ತು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಅದಕ್ಕೆ ಹಸಿರು ಮೆಣಸಿನಕಾಯಿ ಮತ್ತು ಕರಿಬೇವು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ, ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಫ್ರೈ ಮಾಡಬೇಕು.
![sunday special Mutton Brain Fry Recipe in kannada]()
ಬ್ರೈನ್ ಫ್ರೈ
- ಬಳಿಕ ಅದಕ್ಕೆ ಅರಿಶಿನ, ಉಪ್ಪು, ಮೆಣಸು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಗರಂ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಮೆದುಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
- ಕತ್ತರಿಸಿದ ಮೆದುಳನ್ನು ಉರಿದಿದ್ದ ಮಸಾಲಾ ಜೊತೆಗೆ ಬೆರೆಸಿ. ಮಸಾಲೆ ಜೊತೆ ಮೆದುಳನ್ನು ಚೆನ್ನಾಗಿ ಮಿಕ್ಸ್ ಮಾಡಿ, 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಅಗತ್ಯವಿದ್ದರೆ ಕೊನೆಯಲ್ಲಿ ಅದರ ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ, ಇದೀಗ ಮಟನ್ ಬ್ರೈನ್ ಪೆಪ್ಪರ್ ಫ್ರೈ ಸವಿಯಲು ಸಿದ್ಧ.