Anjal ಎಂದರೆ ನೀರೂರುತ್ತೆ! ಮನೆಯಲ್ಲಿಯೇ ಅಂಜಲ್ ಮಸಾಲ ಫ್ರೈ ಮಾಡಿ ಹೇಗಿರುತ್ತೆ? ಇಲ್ಲಿದೆ ಪಾಕ ವಿಧಾನ

Anjal Masala Fry: ಅಂಜಲ್​ ಮೀನು ಮಸಾಲೆ ಪ್ರೈ ಮಾತ್ರವಲ್ಲ ತವಾ ಪ್ರೈ ಮಾಡುತ್ತಾರೆ. ಆದರೆ ಇಂದು ಅಂಜಲ್​ ಪ್ರೈ ಮಾಡುವುದು ಹೇಗೆ? ಇದರ ಪಾಕ ವಿಧಾನ ಹೇಗೆ? ಎಲ್ಲವನ್ನು ತಿಳಿಯೋಣ. ಜೊತೆಗೆ ವಿಡಿಯೋದ ಮೂಲಕ ಸರಳವಾಗಿ ತಿಳಿದುಕೊಳ್ಳಬಹುದಾಗಿದೆ.

ಅಂಜಲ್​ ಮೀನು ಮಸಾಲೆ ಪ್ರೈ

ಅಂಜಲ್​ ಮೀನು ಮಸಾಲೆ ಪ್ರೈ

  • Share this:
    ಇಂದು ರಜಾದಿನ. ದಿನನಿತ್ಯ ಆಫೀಜು ಜಂಜಾಟದಲ್ಲಿರುವವರಿಗೆ ಆರಾಮಾಗಿ ಮನೆಯಲ್ಲಿ ಸಮಯ ಕಳೆಯುವುದರೊಂದಿಗೆ ಚೆನ್ನಾಗಿ ಊಟ (Meals) ಮಾಡಿ ನಿದ್ರಿಸಿದರೆ ಸಾಕು ಎಂಬ ಮನಸ್ಥಿತಿ ಕೆಲವರದ್ದು, ಆದರೆ ಇದರ ನಡುವಲ್ಲಿ ಮಧ್ಯಾಹ್ನ (Aftrnoon) ಭರ್ಜರಿ ಭೋಜನದೊಂದಿಗೆ ಊಟ ಮಾಡುವ ಬಯಕೆ ಕೆಲವರಿಗಿರುತ್ತದೆ. ಅಂತವರು ಒಂದು ಬಾರಿ ಅಂಜಲ್​ ಮಸಾಲ ಫ್ರೈ (Anjal Masala Fry) ಮಾಡಿ ಸವಿದು ನೋಡಿ.

    ಮಂಗಳೂರು ಶೈಲಿಯಲ್ಲಿ ಅಂಜಲ್ ಮಸಾಲಾ ಪ್ರೈ ಸವಿಯಲು ಚೆನ್ನಾಗಿರುತ್ತದೆ. ಆದರೆ ಫ್ರೆಶ್​​ ಅಂಜಲ್​ ಮೀನು ಸಿಕ್ಕಿದರೆ, ಅದರೊಂದಿಗೆ ಮನೆಯಲ್ಲಿಯೇ ತಯಾರಿಸಿದ ಮಸಾಲ ಬೆರೆತರೆ ಇನ್ನೂ ಟೇಸ್ಟಿಯಾಗಿರುತ್ತದೆ. ಆದರೆ ಅಂಜಲ್​ ಪ್ರೈ ಮಾಡೋದೋನೋ ನಿಜ. ಅಂಜಲ್​ ಮೀನಿನ ಬೆಲೆ ಕೇಳಿದರೆ ಮಾತ್ರ ಮಾರುದ್ದ ಓಡುವವರೇ ಜಾಸ್ತಿ.

    ಹೌದು. ಬೆಲೆ ನೋಡಿದರೆ ಅಂಜಲ್​ ಮೀನನ್ನು ಖರೀದಿಸಲು ಸಾಧ್ಯವಾಗದು. ಆದರೆ ಬೆಲೆಯನ್ನು ಪಕ್ಕಕ್ಕಿಟ್ಟು ಅಂಜಲ್​ ಮೀನಿನ ಮಸಾಲ ಪ್ರೈ ಸವಿಯಬೇಕು ಎಂದುಕೊಂಡಿದ್ದರೆ. ಮಾರುಕಟ್ಟೆಗೆ ಹೋಗಿ ಫ್ರೆಶ್​ ಆಗಿರುವ ಅಂಜಲ್​ ಮೀನನ್ನು ತೆಗೆದುಕೊಂಡು ಬನ್ನಿ.

    ಉಳಿದೆಲ್ಲಾ ಮೀನುಗಳಿಗಿಂತ ಅಂಜಲ್​ ಮೀನು ತನ್ನದೇ ಆದ ರುಚಿಯನ್ನು ಹೊಂದಿದೆ. ಇದು ಸಮುದ್ರದ ಮೀನು ಆಗಿರುವುದರಿಂದ ಮತ್ತು ಬೇಡಿಕೆ ಜಾಸ್ತಿ ಇರುವುದರಿಂದ ಇದರ ಬೆಲೆಯಲ್ಲಿ ಏರು ಪೇರಾಗುತ್ತಿರುತ್ತದೆ. ಮತ್ತೊಂದು ವಿಚಾರವೆಂದರೆ ಅಂಜಲ್​ ಮೀನನ್ನು ಸ್ವಚ್ಛಗೊಳಿಸಲು ಬಹಳ ಸುಲಭ. ಉಳಿದ ಮೀನಿಗಿಂತ ವೇಗವಾಗಿ ಸ್ವಚ್ಛಗೊಳಿಸಬಹುದಾಗಿದೆ. ಅತಿ ಕಡಿಮೆ ವೇಸ್ಟ್​ ಹೊಂದಿರುವ ಮೀನು ಇದಾಗಿದೆ.

    ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗೆ ಇಷ್ಟವಾಗೋ ವೆಜಿಟೇಬಲ್ ಸ್ಯಾಂಡ್​ವಿಜ್

    ಅಂಜಲ್​ ಮೀನು ಮಸಾಲೆ ಪ್ರೈ ಮಾತ್ರವಲ್ಲ ತವಾ ಪ್ರೈ ಮಾಡುತ್ತಾರೆ. ಆದರೆ ಇಂದು ಅಂಜಲ್​ ಪ್ರೈ ಮಾಡುವುದು ಹೇಗೆ? ಇದರ ಪಾಕ ವಿಧಾನ ಹೇಗೆ? ಎಲ್ಲವನ್ನು ತಿಳಿಯೋಣ. ಜೊತೆಗೆ ವಿಡಿಯೋದ ಮೂಲಕ ಸರಳವಾಗಿ ತಿಳಿದುಕೊಳ್ಳಬಹುದಾಗಿದೆ.

    ಅಂಜಲ್​ ಮೀನಿನ ತುಂಡರಿಸದ ಮಾಂಸದ ಮೇಲೆ ಮೊದಲಿಗೆ ಕೊಂಚ ಉಪ್ಪುನ್ನು ಹಾಕಿ, ನಂತರ ಅರಿಶಿನ ಹಾಕಿ ಬಳಿಕ ಲಿಂಬೆ ರಸವನ್ನು ಅದರ ಮೇಲೆ ಹಾಕುವ ಮೂಲಕ ಸವರಬೇಕು. 10 ನಿಮಿಷಗಳ ಕಾಲ ತೆಗೆದಿಡಿ.

    ನಂತರ ಮಸಾಲೆಯನ್ನು ತಯಾರಿಸಿ. ಅದಕ್ಕಾಗಿ 25 ಬ್ಯಾಡಗಿ ಮೆಣಸು ತೆಗೆದುಕೊಂಡು ಬಿಸಿ ನೀರಿನಲ್ಲಿ ಹಾಕಿಟ್ಟುಕೊಳ್ಳಿ. ಬಳಿಕ 2 ಚಮಚ ಕೊತ್ತಂಬರಿ ಬೀಜ, ½ ಚಮಚ ಜೀರಿಗೆ,  6ರಿಂದ 8 ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ, ರುಚಿಗೆ ತಕ್ಕ ಹುಳಿ, ಖಾರಕ್ಕೆ ಬೇಕಾಗುವಷ್ಟು ಕಾಳು ಮೆಣಸು, ರುಚಿಗೆ ತಕ್ಕ ಕಲ್ಲು ಉಪ್ಪು ಮತ್ತು ¼ ಚಮಚ ಅರಶಿನ ಹುಡಿ, ಜೊತೆಗೆ ಬೇವಿನ ಸೊಪ್ಪು ಹಾಕುವ ಮೂಲಕ ಚೆನ್ನಾಗಿ ಮಿಕ್ಸಿಯಲ್ಲಿ ರುಬ್ಬಬೇಕು.



    ಇದನ್ನೂ ಓದಿ: Health Care: ಈ ಲಕ್ಷಣಗಳು ಕಾಣಿಸಿದ್ರೆ ನಿರ್ಲಕ್ಷ್ಯ ಬೇಡ, ವೈರಸ್ ವಕ್ಕರಿಸೋದು ಸುಲಭ

    ರುಬ್ಬಿದ ಬಳಿಕ ಒಂದು ಚಮಚದಷ್ಟು ಮಸಾಲೆಯನ್ನು ತೆಗೆದುಕೊಂಡು ಒಂದೊಂದು ತುಂಡು ಮೀನಿನ ಮೇಲೆ ಹಾಕಿ ಸವರಬೇಕು. ಬಳಿಕ ತವವನ್ನಿ ಗ್ಯಾಸ್​ನಲ್ಲಿಟ್ಟು ಬಿಸಿ ಮಾಡಬೇಕು. ಬಳಿಕ ತವಕ್ಕೆ ತೆಂಗಿನ ಎಣ್ಣೆಯನ್ನು ಹಾಕುವ ಮೂಲಕ ಮೀನು ಫ್ರೈ ಮಾಡಬೇಕು. ಮೀನು ಬೆಂದ ಬಳಿಕ ಅದನ್ನು ತೆಗೆದು ಬಡಿಗಿಡಿ.

    ನಂತರ ಉಳಿದ ಮಸಾಲೆಯನ್ನು ತವದ ಮೇಲೆ ಹಾಕಿಕೊಂಡು ಬೇಯಿಸಿ. ಚೆನ್ನಾಗಿ ಕೆಂಪು ಬಣ್ಣ ಬರುವವರೆಗೂ ಬೇಯಿಸಿ. ಇಷ್ಟಾದ ಬಳಿಕ ಆಗ ಬೇಯಿಸಿ ಬದಿಗಿಟ್ಟ ಅಂಜಲ್​ ಮೀನನ್ನು ಈ ಮಸಾಲೆಯ ಜೊತೆಗೆ ಬೆರೆಸಿ. ಎರಡು ಅಥವಾ ಮೂರು ನಿಮಿಷ  ಚೆನ್ನಾಗಿ ಮಸಾಲೆಯೊಂದಿಗೆ ಬೆರೆಸಿದರೆ ಅಂಜಲ್​ ಮಸಾಲ ಫ್ರೈ ಸವಿಯಲು ಸಿದ್ಧ.
    Published by:Harshith AS
    First published: