Sunday Special: ಬಾಯಲ್ಲಿ ನೀರೂರಿಸುವ ಮಂಗಳೂರು ಶೈಲಿಯ ಏಡಿ ಸುಕ್ಕ ಹೀಗೆ ಮಾಡಿ ನೋಡಿ

Crab Sukka: ಮಂಗಳೂರು ಪ್ರದೇಶದಲ್ಲಿ ಊರಿನ ಏಡಿಗೆ ಹೆಚ್ಚಿನ ಡಿಮ್ಯಾಂಡ್​. ಆದರೆ ಹೊಳೆ ಬದಿಯಲ್ಲಿ ಸುವ ಏಡಿಗಳು ಸಿಗುವುದೇ ಅಪರೂಪ. ಆದರೆ ಸಮುದ್ರ ಏಡಿಗಂತೂ ಬರವಿಲ್ಲ. ಮಾರುಕಟ್ಟೆಯಲ್ಲಿ ಸಮುದ್ರದ ಏಡಿ ಸಿಗುತ್ತದೆ. ಅದನ್ನು ಖರೀದಿಸಿ ಶುಚಿಗೊಳಿಸಿ ನಂತರ ಮಸಾಲೆ ಹಾಕಿ ಅಡುಗೆ ಮಾಡಬಹುದು.

ಏಡಿ ಸುಕ್ಕ

ಏಡಿ ಸುಕ್ಕ

  • Share this:
    ಸಾಮಾನ್ಯವಾಗಿ ಬೆಂಗಳೂರಿನಂತರ (Bengaluru) ನಗರ ಪ್ರದೇಶದಲ್ಲಿ ವಾಸಿಸುವ ಜನರು ಭಾನುವಾರ (Sunday) ಬರಲಿ ಎಂದು ಕಾಯುತ್ತಿರುತ್ತಾರೆ. ವಾರದ ಕೊನೆಯಲ್ಲಿ ಏನಾದರೊಂದು ಪ್ಲಾನ್ (Plan)​ ಹಾಕಿಕೊಂಡಿರುತ್ತಾರೆ. ಕೆಲವರು ಸುತ್ತಾಟ ನಡೆಸಲು ಯೋಚಿಸಿದ್ದರೆ. ಇನ್ನು ಕೆಲವರು ಫ್ಯಾಮಿಲಿ ಜತೆಗೆ ಮನೆಯಲ್ಲಿ ಕುಳಿತು ಸಮಯ ಕಳೆಯುವ ಯೋಚನೆ ಮಾಡುತ್ತಾರೆ. ಮನೆಯಲ್ಲಿ ಕುಳಿತು ಟೈಂ ಪಾಸ್ (Time Pass)​ ಮಾಡುವ ಸಮಯದಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ(Cooking) ತಯಾರಿಸುವ ಯೋಚನೆ ಅವರದ್ದಾಗಿರುತ್ತದೆ. ಹೆಚ್ಚಿನವರು ಆದಿತ್ಯವಾರದಂದು ಮಾಂಸದ ಊಟಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಅದರಂತೆ ಇಂದು ಭಾನುವಾರವಾಗಿರುದರಿಂದ ಮನೆಯಲ್ಲಿ ಇರುವವರು ಒಂದು ಬಾರಿ ಮಂಗಳೂರು (Mangalore) ಶೈಲಿಯಲ್ಲಿ ಏಡಿ ಸುಕ್ಕ ಟ್ರೈ (Crab Sukka) ಮಾಡಿ ನೋಡಬಹುದು. ಬಹಳ ಸುಲಭ ಮತ್ತು ಟೇಸ್ಟಿಯಾಗಿರುವ ಈ ಪದಾರ್ಥವನ್ನು ತಯಾರಿಸಿ ಸವಿಯಬಹುದಾಗಿದೆ. ಅಂದಹಾಗೆಯೇ ಇದಕ್ಕೆ ಬೇಕಾಗುವ ಸಾಮಾಗ್ರಿಗಳ ಬಗ್ಗೆ ಮಾಹಿತಿ ಇಲ್ಲಿದೆ.

    ಮಂಗಳೂರು ಪ್ರದೇಶದಲ್ಲಿ ಊರಿನ ಏಡಿಗೆ ಹೆಚ್ಚಿನ ಡಿಮ್ಯಾಂಡ್​. ಆದರೆ ಹೊಳೆ ಬದಿಯಲ್ಲಿ ಇರುವ ಏಡಿಗಳು ಸಿಗುವುದೇ ಅಪರೂಪ. ಆದರೆ ಸಮುದ್ರ ಏಡಿಗಂತೂ ಬರವಿಲ್ಲ. ಮಾರುಕಟ್ಟೆಯಲ್ಲಿ ಸಮುದ್ರದ ಏಡಿ ಸಿಗುತ್ತದೆ. ಅದನ್ನು ಖರೀದಿಸಿ ಶುಚಿಗೊಳಿಸಿ ನಂತರ ಮಸಾಲೆ ಹಾಕಿ ಅಡುಗೆ ಮಾಡಬಹುದು. ಆದರೆ ಸಮುದ್ರ ಏಡಿಗಿಂತ ಹೊಳೆಯ ಅಥವಾ ನದಿಯ ಏಡಿಗಳು ಟೇಸ್ಟ್​ ಜಾಸ್ತಿ.ಏಡಿ ಸುಕ್ಕ ಕರಾವಳಿ ಭಾಗದಲ್ಲಿ ಭಾರೀ ಫೇಮಸ್ಸ್​. ತುಳು ಭಾಷೆಯಲ್ಲಿ ಇದನ್ನು ಜೆಂಬಿ ಸುಕ್ಕ ಎಂದು ಕರೆಯುತ್ತಾರೆ.

    1 ಕೆಜಿ ಏಡಿಗೆ ಬೇಕಾಗುವ ಅಡುಗೆ ಸಾಮಾಗ್ರಿಗಳು

    2 ಚಮಚ ಎಣ್ಣೆ

    15/ 20 ಬ್ಯಾಡಗಿ ಮೆಣಸು

    5 ಚಮಚ ಕೊತ್ತಬಂರಿ

    1 ಚಮಚ ಜೀರಿಗೆ

    ½ ಕಾಲು ಮೆಣಸು

    ¼ ಚಮಚ ಮೆಂತೆ

    1 ನೀರುಳ್ಳಿ

    8 ಎಸಳು ಬೆಳ್ಳುಳ್ಳಿ

    ½ ಗೆರಟೆ ತೆಂಗಿನ ಕಾಯಿತುರಿ

    ½ ಚಮಚ ಅರಿಶಿಣ ಹುಡಿ

    ಇದನ್ನೂ ಓದಿ: Mushrooms: ಅಣಬೆಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತವೆಯಂತೆ! ಸಂಶೋಧನೆಯಿಂದ ಬಹಿರಂಗ

    ಮೇಲಿನ ಎಲ್ಲಾ ಸಾಮಾಗ್ರಿಗಳನ್ನು ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ 2 ಚಮಚ ತೆಂಗಿನ ಎಣ್ಣೆ ಬಳಸಿಕೊಂಡು ಚೆನ್ನಾಗಿ ಹುರಿಯಿರಿ. ತೆಂಗಿನ ಎಣ್ಣೆಯಲ್ಲೇ ಹುರಿಯಬೇಕೆಂದಿಲ್ಲ. ತಮಗೆ ರುಚಿ ಸಿಗುವ ಯಾವ ಎಣ್ಣೆಯಲ್ಲೂ ಬೇಕಾದರೂ ಹುರಿಯಬಹುದು. ಬಳಿಕ ಚೆನ್ನಾಗಿ ಮಿಕ್ಸಿಗೆ ಹಾಕಿ ಮಸಾಲೆ ಅರೆಯುವಾಗ ರುಚಿಗೆ ಬೇಕಾದಷ್ಟು ಹುಳಿ ಹಾಕಿ ಮಸಾಲೆ ಮಾಡಿಟ್ಟುಕೊಳ್ಳಬೇಕು.

    ಅದರೊಂದಿಗೆ ½ ಗೆರಟೆ ತೆಂಗಿನ ಕಾಯಿತುರಿ, ½ ಚಮಚ ಅರಿಶಿಣ ಹುಡಿ ಹಾಕಿ ಬೇರೆಯೇ ಬೆಂಕಿಯಲ್ಲಿ ಹುರಿಯಿರಿ. ನಂತರ ಇದನ್ನು ತೆಗೆದಿಟ್ಟುಕೊಳ್ಳಿ.

    ಇದನ್ನೂ ಓದಿ: Emergency Numberಗೆ ಕರೆ ಮಾಡಿ ಪಿಜ್ಜಾ ಕೇಳಿದ ಮಹಿಳೆ: Smart Operatorಗೆ ಅರ್ಥ ಆಯ್ತು ಆಕೆಯ ಮಾತು!

    ನಂತರ ಏಡಿಯನ್ನು ಮತ್ತೊಂದು ಪಾತ್ರೆಯಲ್ಲಿ ಹುರಿಯಿರಿ. ಅದಕ್ಕಾಗಿ ಒಂದು ಚಮಚ ತೆಂಗಿನ ಎಣ್ಣೆ, ನಂತರ ಸ್ವಲ್ಪ ಬೇವಿನಸೊಪ್ಪು ಹಾಕಬೇಕು. ಬಳಿಕ ನೀರುಳ್ಳಿ ಮತ್ತು ಟೊಮ್ಯಾಟೊ ಹಾಕಿ ಹುರಿಯಬೇಕು.ಸ್ವಲ್ಲ ಹಸಿ ಮೆಣಸಿನಕಾರಿ ಮತ್ತು ಒಂದು ಚಮಚದಷ್ಟು ಶುಂಠಿ ಬೆಳ್ಳುಳ್ಳಿ ಪೇಸ್ಟ್​​ ಹಾಕಬೇಕು. ಚೆನ್ನಾಗಿ ಪ್ರೈ ಆದ ಮೇಲೆ ಶುಚಿಯಾಗಿ ತೆಗೆದಿಟ್ಟ ಏಡಿಯನ್ನು ಹಾಕಿರಿ. ನೀರು ಹಾಕುವ ಅವಶ್ಯಕತೆ ಇಲ್ಲ. ಬೇಕಿದ್ದರೆ ½ ಲೋಟ ನೀರು ಸೇರಿಸಬಹುದು. ರುಚೆಗೆ ತಕ್ಕಂತೆ ಉಪ್ಪು ಹಾಕಬೇಕು. ನಂತರ 10 ನಿಮಿಷದಷ್ಟು ಮುಚ್ಚಳ ಹಾಕಿ ಮುಚ್ಚಿಡಿ. ಹದಾ ಬೆಂಕಿಯಲ್ಲಿ ಬೇಯಿಸಿರಿ.



    10 ನಿಮಿಷದ ಬಳಿಕ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆಯನ್ನು ತೆಗೆದು ಏಡಿ ಬೇಯುತ್ತಿರುವ ಪಾತ್ರಕ್ಕೆ ಹಾಕಿ ಮತ್ತೆ ಬೇಯಿಸಿ. 5 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ಬೇಕಾದರೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಬೇಯುತ್ತಾ ಹೋಂದತೆ ಏಡಿ ಸುಕ್ಕದ ಪರಿಮಳ ಬರಲು ಪ್ರಾರಂಭವಾಗುತ್ತದೆ. ಬಳಿಕ ಆಗ ಹುರಿದು ತೆರೆದಿಟ್ಟ ½ ಗೆರಟೆ ತೆಂಗಿನ ಕಾಯಿತುರಿ, ½ ಚಮಚ ಅರಿಶಿಣ ಹುಡಿಯನ್ನು ಇದಕ್ಕೆ ಮಿಕ್ಸ್​ ಮಾಡಿ. ಕೊಂಚ ಬೇಯಲು ಇಡಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿರಿ. ಈಗ ಮಂಗಳೂರು ಶೈಲಿಯ ಏಡಿ ಸುಕ್ಕ ರೆಡಿಯಾಗಿದೆ.
    Published by:Harshith AS
    First published: