Chicken Liver Fry Recipe: ಸಂಡೇ ಸ್ಪೆಷಲ್ ಸುಲಭವಾಗಿ ಮಾಡಿ ಬಾಯಲ್ಲಿ ನೀರೂರಿಸುವ ಚಿಕನ್ ಲಿವರ್ ಫ್ರೈ

ಚಿಕನ್ ಲಿವರ್ ಫ್ರೈ

ಚಿಕನ್ ಲಿವರ್ ಫ್ರೈ

ಚಿಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಯಾವುದೇ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನ ಅಂಶವನ್ನು ಹೊಂದಿರದೇ ಇರುವಂತಹ ಒಂದು ಒಳ್ಳೆಯ ಪ್ರೊಟೀನ್ ಅಂಶಯುಕ್ತ ಮಾಂಸಾಹಾರ. ಜನರಿಗೆ ಇವುಗಳಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಒಂದು ಆಶ್ಚರ್ಯಕರ ವಿಷಯ ಎಂದರೆ ಲಿವರ್ ಭಾಗದ ಕ್ಯಾನ್ಸರ್ ಸಮಸ್ಯೆಗೆ ಇದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿ ಕೆಲಸ ಮಾಡಲಿದೆ.

ಮುಂದೆ ಓದಿ ...
  • Share this:

ವಾರಪೂರ್ತಿ ಕೆಲಸ ಮಾಡಿ ವೀಕೆಂಡ್​ನಲ್ಲಿ ಮನೆಮಂದಿಗೆಲ್ಲಾ ಬಿಡುವು ಸಿಗುತ್ತದೆ. ಈ ವೇಳೆ ಆತ್ಮೀಯರ ಮನೆಗೆ ಹೋಗುವುದು. ನೀವು ಆತ್ಮೀಯರ ಮನೆಗೆ ಹೋಗುವುದು ಎಲ್ಲವೂ ಸರ್ವೇ ಸಾಮಾನ್ಯ ವಾಗಿರುತ್ತದೆ. ಸಂಡೇಯಂತೂ (Sunday) ಎಲ್ಲರೂ ಒಟ್ಟಾಗಿ ಸೇರುವುದರಿಂದ ಮನೆಯಲ್ಲಿ ಏನಾದರೂ ಸ್ಪೆಷಲ್​ ಆಗಿ ಅಡುಗೆ ಮಾಡಬೇಕು ಅಂದುಕೊಂಡಿದ್ದರೆ, ನಾನ್​ವೆಜ್ ಮಾಡಿ. ಅದೆಷ್ಟೋ ಮಂದಿಗೆ ಸಂಡೇ ನಾನ್​ವೆಜ್​ ತಿನ್ನದೇ ಆ ದಿನ ಇನ್​ ಕಂಪ್ಲೀಟ್​ ಆಗಿರುತ್ತದೆ. ನಾನ್​ವೆಜ್ (NonVeg)​ ಸವಿಯಲೆಂದೇ ಸಂಡೇ ಬರುವುದನ್ನು ಕಾಯುತ್ತಿರುತ್ತಾರೆ. ಸ್ವಲ್ಪ ಜನಕ್ಕೆ ಮಟನ್ (Mutton) ಬಹಳ ಇಷ್ಟವಾದರೆ, ಇನ್ನು ಕೆಲವು ಮಂದಿಗೆ ಚಿಕನ್ (Chicken) ಅಂದರೆ ತುಂಬಾ ಇಷ್ಟವಾಗುತ್ತದೆ. ಆದರೆ ಅದೇ ಚಿಕನ್ ಸಾಂಬಾರ್, ಮಟನ್​ ಸಾಂಬಾರ್ ತಿಂದು ತಿಂದು ಬೇಸರವಾಗಿದ್ದರೆ, ಈ ಬಾರಿ ಮನೆಯಲ್ಲಿ ಚಿಕನ್ ಲಿವರ್​ ಫ್ರೈ ಟ್ರೈ (Liver Fry) ಮಾಡಿ. ಹೌದು, ಸಾಮಾನ್ಯವಾಗಿ ಚಿಕನ್​ನಲ್ಲಿ ನಾನಾ ವೆರೈಟಿ ಫುಡ್​ಗಳು ಬರುತ್ತದೆ. ಅದರಲ್ಲಿ ಚಿಕನ್​ ಲಿವರ್​ ಫ್ರೈ ಕೂಡ ಒಂದು. ಅದೆಷ್ಟೋ ಮಂದಿಗೆ ಚಿಕನ್​​ ಲಿವರ್​ನಿಂದ ಅಡುಗೆ ಮಾಡಬೇಕು ಎಂಬ ವಿಚಾರವೇ ತಿಳಿದಿರುವುದಿಲ್ಲ. ಅಂತವರು ಸಂಡೇ ಈ ತಿಂಡಿಯನ್ನು ಟ್ರೈ ಮಾಡಬಹುದು.


ಲಿವರ್ ಫ್ರೈ


ಲಿವರ್ ಫ್ರೈ ಮಾಡಲು ಬೇಕಾಗುವ  ಸಾಮಾಗ್ರಿಗಳು


  • ಚಿಕನ್ ಲಿವರ್ – 1/4 ಕೆಜಿ

  • ಈರುಳ್ಳಿ – 1 ದಪ್ಪದು

  • ಎಣ್ಣೆ – ಕೊತ್ತಂಬರಿ

  • ಬ್ಲಾಕ್ ಪೆಪ್ಪರ್ ಪುಡಿ – ಒಂದೂವರೆ ಚಮಚ

  • ಅರಿಶಿಣ ಪುಡಿ – ಚಿಟಿಕೆ

  • ಖಾರದ ಪುಡಿ – 1 ಚಮಚ

  • ನಿಂಬೆ ರಸ – 1 ಹಣ್ಣಿನ ರಸ

  • ಶುಂಠಿ – ಬೆಳ್ಳುಳ್ಳಿ ಪೇಸ್ಟ್

  • ಉಪ್ಪು – ರುಚಿಗೆ ತಕ್ಕಷ್ಟು


ಲಿವರ್ ಫ್ರೈ


ಲಿವರ್​ ಫ್ರೈ ಮಾಡುವ ವಿಧಾನ


  • ಮೊದಲು ನಾನ್ ಸ್ಟಿಕ್ ಪ್ಯಾನ್‍ಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಅದಕ್ಕೆ ಉದ್ದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರುವ ತನಕ ಫ್ರೈ ಮಾಡಿ.

  • ಬಳಿಕ ಅದಕ್ಕೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವ ತನಕ ಕೈಯಾಡಿಸಿ.

  • ನಂತರ ತೊಳೆದ ಚಿಕನ್ ಲಿವರ್ ಸೇರಿಸಿ. ಬಣ್ಣ ಬದಲಾಗುವರೆಗೆ ಫ್ರೈ ಮಾಡಿ. ಲಿವರ್ ಬಣ್ಣ ಚೇಂಜ್ ಆದ ಮೇಲೆ ಅದಕ್ಕೆ ಅರಿಶಿಣ ಪುಡಿ, ಉಪ್ಪು, ಖಾರದ ಪುಡಿ, ಬ್ಲಾಕ್ ಪೆಪ್ಪರ್ ಪುಡಿ ಸೇರಿಸಿ ಮಿಕ್ಸ್ ಮಾಡಿ.

  • 3-4 ನಿಮಿಷ ಕಡಿಮೆ ಉರಿಯಲ್ಲಿ ಲಿಡ್ ಮುಚ್ಚಿ ಬೇಯಲು ಬಿಡಿ. ಮಿಶ್ರಣದೊಂದಿಗೆ ಲಿವರ್ ಬೆಂದ ಬಳಿಕ. ಅದಕ್ಕೆ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸ ಬೆರೆಸಿ ಕೆಳಗಿಳಿಸಿದರೆ ರುಚಿರುಚಿಯಾದ ಚಿಕನ್ ಲಿವರ್ ಫ್ರೈ ಸವಿಯಲು ಸಿದ್ಧ.


ಚಿಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಯಾವುದೇ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನ ಅಂಶವನ್ನು ಹೊಂದಿರದೇ ಇರುವಂತಹ ಒಂದು ಒಳ್ಳೆಯ ಪ್ರೊಟೀನ್ ಅಂಶಯುಕ್ತ ಮಾಂಸಾಹಾರ. ಜನರಿಗೆ ಇವುಗಳಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಒಂದು ಆಶ್ಚರ್ಯಕರ ವಿಷಯ ಎಂದರೆ ಲಿವರ್ ಭಾಗದ ಕ್ಯಾನ್ಸರ್ ಸಮಸ್ಯೆಗೆ ಇದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿ ಕೆಲಸ ಮಾಡಲಿದೆ.


ಇತ್ತೀಚಿಗೆ ನಡೆದ ಒಂದು ಸಂಶೋಧನೆಯೊಂದರ ಪ್ರಕಾರ ಯಾರು ಬಿಳಿ ಬಣ್ಣದ ಇಂತಹ ಮಾಂಸಹಾರವನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ, ಅವರಿಗೆ ಶೇಕಡ 22% ದಿಂದ 32% ವರೆಗೆ ಲಿವರ್ ಭಾಗದ ಕ್ಯಾನ್ಸರ್ ಸಮಸ್ಯೆಯಿಂದ ಪಾರಾಗುವ ಅದೃಷ್ಟ ಇರುತ್ತದೆ ಎನ್ನಲಾಗಿದೆ.

Published by:Monika N
First published: