Non Veg: ಮಟನ್ ಪಲಾವ್ ಗೊತ್ತು, ಚಿಕನ್ ಕೈಮಾ ಪಲಾವ್ ಕೇಳಿದ್ದೀರಾ​? ಇಲ್ಲಿದೆ ನೋಡಿ ಮಸ್ತ್ ರೆಸಿಪಿ

ಚಿಕನ್ ಕೈಮಾ ಪಲಾವ್

ಚಿಕನ್ ಕೈಮಾ ಪಲಾವ್

ಚಿಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಯಾವುದೇ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನ ಅಂಶವನ್ನು ಹೊಂದಿರದೇ ಇರುವಂತಹ ಒಂದು ಒಳ್ಳೆಯ ಪ್ರೊಟೀನ್ ಅಂಶಯುಕ್ತ ಮಾಂಸಾಹಾರ. ಜನರಿಗೆ ಇವುಗಳಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಜನರಿಗೆ ಇವುಗಳಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.

ಮುಂದೆ ಓದಿ ...
  • Share this:

ಸಂಡೇ  (Sunday) ಬಂತಂದ್ರೆ ಸಾಕು ಮಾಂಸಹಾರಿಗಳಿಗೆ ನಾನ್​ ವೆಜ್​ (Nonveg) ತಿನ್ನದೇ ಇದ್ದರೆ ಆ ದಿನ ಇನ್​ ಕಂಪ್ಲೀಟ್. ಬೆಳಗ್ಗೆನೆ ಎದ್ದು ಮಾಂಸದ ಅಂಗಡಿಗೆ ತೆರಳಿ, ಕ್ಯೂನಲ್ಲಿ ನಿಂತು ಮಾಂಸ ಖರೀದಿಸಿ ಮನೆಗೆ ಬಂದು ಅಮ್ಮನ ಕೈಗೆ ಕೊಟ್ಟು, ಅಡುಗೆ ಆಗುವವರೆಗೂ  ಘಮ್​ ಎಂದು ಕಿಚನ್ ನಿಂದ ​ಬರುವ ಸುವಾಸನೆಯನ್ನು ಸವಿಯುತ್ತಾ ಕಾಯುತ್ತಿರುತ್ತಾರೆ. ಅದರಲ್ಲಿಯೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆವರೆಗೂ ಚಿಕನ್ (Chicken) ಎಲ್ಲರಿಗೂ ಅಚ್ಚುಮೆಚ್ಚು. ಯಾವುದೇ ಫಂಕ್ಷನ್​ಗೆ ಹೋದರೂ, ಚಿಕನ್​ ಇಲ್ಲದೇ ಇರುವುದೇ ಇಲ್ಲ. ಅದರಲ್ಲಿಯೂ ಮಟನ್ (Mutton), ಚಿಕನ್ ಬಿರಿಯಾನಿಯಂತೂ (Biriyani) ಮಿಸ್​​ ಇಲ್ಲ. ಆದ್ರೆ ಒಂದೇ ರೀತಿ ಬಿರಿಯಾನಿ ಮಾಡಿ ತಿಂದು ಬೋರ್​ ಆಗಿದ್ರೆ, ಈ ಬಾರಿ ಡಿಫ್ರೆಂಟ್ ಆಗಿ ಚಿಕನ್ ಕೈಮಾದಲ್ಲಿ (Chicken Keema Pulao) ಪಲಾವ್ ಮಾಡಿ ಟೇಸ್ಟ್ ನೋಡಿ.


ಚಿಕನ್ ಕೈಮಾ ಪಲಾವ್


ಚಿಕನ್ ಕೈಮಾ ಪಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು


  • ಬಾಸ್ಮತಿ ಅಕ್ಕಿ - 1 ಕಪ್

  • ಎಣ್ಣೆ/ತುಪ್ಪ- 2 ಚಮಚ

  • ಚಿಕನ್ ಕೈಮಾ - 250 ಗ್ರಾಂ

  • ಹಸಿರು ಬಟಾಣಿ - 1/4 ಕಪ್

  • ಆಲೂಗಡ್ಡೆ - 1/2 ಕಪ್

  • ಮೆಣಸು - 1 ಚಮಚ

  • ನೀರು, ಉಪ್ಪು – ಅಗತ್ಯಕ್ಕೆ ತಕ್ಕಷ್ಟು

  • ಈರುಳ್ಳಿ - 1

  • ಟೊಮೆಟೊ - 1

  • ಹಸಿ ಮೆಣಸಿನಕಾಯಿ – 2 ರಿಂದ 3

  • ಅರಿಶಿನ ಪುಡಿ - 1/2 ಚಮಚ

  • ಧನ್ಯಪುಡಿ - 1 ಟೀಸ್ಪೂನ್

  • ಗರಂ ಮಸಾಲಾ ಪುಡಿ - 1/2 ಚಮಚ


ಚಿಕನ್ ಕೈಮಾ ಪಲಾವ್


ಚಿಕನ್​ ಕೈಮಾ ಪಲಾವ್ ಮಾಡುವ ವಿಧಾನ


  • ಮೊದಲು ಪಲಾವ್​ಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ತಯಾರಿಸಿ ಮತ್ತು ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ನೆನೆಸಿ.

  • ನಂತರ ಈರುಳ್ಳಿ, ಟೊಮೆಟೊ ಮತ್ತು ಆಲೂಗಡ್ಡೆಯನ್ನು ಕತ್ತರಿಸಿ. ಒಂದು ದೊಡ್ಡ ಪ್ಯಾನ್​ಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ.

  • ಎಣ್ಣೆ ಬಿಸಿಯಾದ ನಂತರ ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಹುರಿಯಿರಿ ಮತ್ತು ಅಗತ್ಯಕ್ಕೆ ತಕ್ಕಷ್ಟು ಸ್ವಲ್ಪ ನೀರು ಸೇರಿಸಿ.ನಂತರ ಕೀಮಾ ಮತ್ತು ಬಟಾಣಿ, ಆಲೂಗಡ್ಡೆ ಹಾಕಿ ಚೆನ್ನಾಗಿ ಹುರಿಯಿರಿ, ಉಪ್ಪು ಮತ್ತು ಟೊಮ್ಯಾಟೊ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಹುರಿಯಿರಿ.

  • ಮತ್ತೆ ಅಗತ್ಯ ಪ್ರಮಾಣದ ನೀರು ಮತ್ತು ಉಪ್ಪನ್ನು ಹಾಕಿ ಅದು ಕುದಿ ಬಂದಾಗ ನೆನೆಸಿದ ಅಕ್ಕಿಯನ್ನು ಹಾಕಿ ಸಣ್ಣ ಉರಿಯಲ್ಲಿ ಮುಚ್ಚಿ 15-18 ನಿಮಿಷ ಬೇಯಿಸಿ.

  • ಇದಾದ ನಂತರ ಮುಚ್ಚಳವನ್ನು ತೆರೆಯಿರಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು, ತುಪ್ಪವನ್ನು ಹಾಕಿ ಮಿಶ್ರಣ ಮಾಡಿದರೆ, ರುಚಿಕರವಾದ ಕೈಮಾ ಪಲಾವ್ ಸವಿಯಲು ಸಿದ್ಧ.


ಚಿಕನ್ ಕೈಮಾ ಪಲಾವ್


ಚಿಕನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಯಾವುದೇ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನ ಅಂಶವನ್ನು ಹೊಂದಿರದೇ ಇರುವಂತಹ ಒಂದು ಒಳ್ಳೆಯ ಪ್ರೊಟೀನ್ ಅಂಶಯುಕ್ತ ಮಾಂಸಾಹಾರ. ಜನರಿಗೆ ಇವುಗಳಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಜನರಿಗೆ ಇವುಗಳಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಒಂದು ಆಶ್ಚರ್ಯಕರ ವಿಷಯ ಎಂದರೆ ಲಿವರ್ ಭಾಗದ ಕ್ಯಾನ್ಸರ್ ಸಮಸ್ಯೆಗೆ ಇದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿ ಕೆಲಸ ಮಾಡಲಿದೆ.




ಇತ್ತೀಚಿಗೆ ನಡೆದ ಒಂದು ಸಂಶೋಧನೆಯೊಂದರ ಪ್ರಕಾರ ಯಾರು ಬಿಳಿ ಬಣ್ಣದ ಇಂತಹ ಮಾಂಸಹಾರವನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ, ಅವರಿಗೆ ಶೇಕಡ 22% ದಿಂದ 32% ವರೆಗೆ ಲಿವರ್ ಭಾಗದ ಕ್ಯಾನ್ಸರ್ ಸಮಸ್ಯೆಯಿಂದ ಪಾರಾಗುವ ಅದೃಷ್ಟ ಇರುತ್ತದೆ ಎನ್ನಲಾಗಿದೆ.

Published by:Monika N
First published: