Breakfast Recipe: ಬೆಳಗಿನ ಉಪಹಾರಕ್ಕೆ ತಯಾರಿಸಿ ಬ್ಯಾಚುಲರ್ಸ್ ಮಾಡಿಕೊಳ್ಳುವ ರವೆ ದೋಸೆ: ಇದು ತುಂಬಾನೇ ಸರಳ & ರುಚಿ

Sunday Breakfast: ಈ ದೋಸೆ ಎಷ್ಟು ಗರಿ ಗರಿಯಾಗಿರುತ್ತೆ ಅಂದ್ರೆ ಮಕ್ಕಳು ಸೈಡ್ ಗೆ ಚಟ್ನಿ ಅಥವಾ ಆಲೂ ಪಲ್ಯ ಬೇಕು ಅಂತ ಹಠ ಮಾಡಲ್ಲ.  ಈ ರವೆ ದೋಸೆ ಹೇಗೆ ಮಾಡೋದು ಅಂತ ನೋಡೋಣ ಬನ್ನಿ.

ರವೆ ದೋಸೆ

ರವೆ ದೋಸೆ

  • Share this:
Sunday Breakfast: ಮನೆಯಲ್ಲಿ ದೋಸೆ (Dosa recipe) ಮಾಡಬೇಕೆಂದ್ರೆ ಒಂದು ದಿನ ಮುಂಚಿತವಾಗಿಯೇ ಸಿದ್ಧತೆಗಳು ನಡೆದಿರುತ್ತವೆ. ಬೆಳಗ್ಗೆಯೇ ಅಕ್ಕಿ ಮತ್ತು ಉದ್ದಿನ ಬೇಳೆ  (Rice And Vigna mungo )ನೆನಸಿಕೊಳ್ಳಬೇಕು. ರಾತ್ರಿ ನೀರು ಬದಲಿಸಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಚೆನ್ನಾಗಿ ರುಬಿಕ್ಕೊಳ್ಳಬೇಕು. ಮತ್ತೆ ಬೆಳಗ್ಗೆ ಅದಕ್ಕಾಗಿ ಚಟ್ನಿ (Chutney) ಏನು ಮಾಡಬೇಕು ಅನ್ನೋದರ ಬಗ್ಗೆ ಗೊಂದಲ ಇರುತ್ತೆ. ಮನೆಯಲ್ಲಿ ಎಲ್ಲರದ್ದೂ ಬೇರೆ ಬೇರೆ ಟೇಸ್ಟ್ (Taste). ಒಬ್ಬರಿಗೆ ಕಾಯಿ ಚಟ್ನಿ ಬೇಕೆಂದ್ರೆ, ಮತ್ತೊಬ್ಬರು ಆಲೂ ಪಲ್ಯ ಕೇಳ್ತಾರೆ. ಹೀಗೆ ದೋಸೆ ಅಂದ್ರೆ ಸಾಕು ಹಲವು ಕೆಲಸಗಳು ಕಣ್ಮುಂದೆ ಬರುತ್ತವೆ. ಇಂದು ಭಾನುವಾರ (Sunday) ಚೆನ್ನಾಗಿ ನಿದ್ದೆ ಮಾಡಿ ಸ್ವಲ್ಪ ತಡವಾಗಿ ಎಚ್ಚರವಾದ್ರೆ, ತಿಂಡಿಗೆ ಏನ್ ಮಾಡೋದು ಅಂತ ಟೆನ್ಷನ್ ಶುರುವಾಗುತ್ತದೆ.

ಇಂದು ಮಾರುಕಟ್ಟೆಗಳಲ್ಲಿ ವಿವಿಧ ಕಂಪನಿಗಳ ಸಂಸ್ಕರಿಸಿದ ದೋಸೆ, ಇಡ್ಲಿ ಹಿಟ್ಟು ಸಿಗುತ್ತೆ. ಇದು ಎಷ್ಟು ಒಳ್ಳೆಯದು ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತವೆ. ಬಹುತೇಕ ಬ್ಯಾಚೂಲರ್ ಗಳು ಈ ರವೆ ದೋಸೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಹೆಚ್ಚು ಅಂದ್ರೆ 20 ರಿಂದ 30 ನಿಮಿಷ ಸಾಕು. ಕೇವಲ ಅರ್ಧ ಗಂಟೆಯಲ್ಲಿಯೇ ರವೆ ದೋಸೆ ಮಾಡಿಕೊಂಡು ಸವಿಯಬಹುದು.

ಸಂಡೇ ತಡವಾಗಿ ಎಚ್ಚರವಾದ್ರೂ ಪರವಾಗಿಲ್ಲ, ಕೆಲವೇ ನಿಮಿಷಗಳಲ್ಲಿ ರವೆ ದೋಸೆಯನ್ನು ಸಿದ್ಧಪಡಿಸಬಹುದು. ಇದು ಎಷ್ಟು ಗರಿ ಗರಿಯಾಗಿರುತ್ತೆ ಅಂದ್ರೆ ಮಕ್ಕಳು ಸೈಡ್ ಗೆ ಚಟ್ನಿ ಅಥವಾ ಆಲೂ ಪಲ್ಯ ಬೇಕು ಅಂತ ಹಠ ಮಾಡಲ್ಲ.  ಈ ರವೆ ದೋಸೆ ಹೇಗೆ ಮಾಡೋದು ಅಂತ ನೋಡೋಣ ಬನ್ನಿ.

ರವೆ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

ಸಣ್ಣ ರವೆ (ಚಿರೋಟಿ ರವೆ): 1/4 ಕೆಜಿ

ಮೊಸರು: 100 ಗ್ರಾಂ

ಅಡುಗೆ ಸೋಡಾ: ಚಿಟಿಕೆ

ಎಣ್ಣೆ

ಉಪ್ಪು: ರುಚಿಗೆ ತಕ್ಕಷ್ಟು

ರವೆ ದೋಸೆ ಮಾಡುವ ವಿಧಾನ

*ಮೊದಲಿಗೆ ರವೆಯನ್ನು ಚೆನ್ನಾಗಿ ಹುರಿದುಕೊಂಡು ಎತ್ತಿಡಿ. (ರವೆಯನ್ನ ಹುರಿದುಕೊಳ್ಳದೇಯೂ ಬಳಸಿಕೊಳ್ಳಬಹುದು- ಆಯ್ಕೆ ನಿಮ್ಮದು)

*ರವೆ ತಣ್ಣಗೆ ಆಗುತ್ತಿದ್ದಂತೆ ಇದಕ್ಕೆ ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ತಟ್ಟೆ ಮುಚ್ಚಿ 5 ನಿಮಿಷ ಎತ್ತಿಡಿ.

ಇದನ್ನೂ ಓದಿ:  Breakfast Recipe: 10 ನಿಮಿಷದಲ್ಲಿ ರೆಡಿ ಮಾಡ್ಬಹುದು ಈ ಮಂಗಳೂರು ಸ್ಟೈಲ್ ತಿಂಡಿ, ಮಕ್ಕಳಿಗೆ ಸಖತ್ ಇಷ್ಟ!

*ರವೆ ಮತ್ತು ಮೊಸರು ಮಿಕ್ಸ್ ಆಗಿರುವ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.

*ಮಿಶ್ರಣವನ್ನು ಪ್ಲೇಟ್ ಮುಚ್ಚಿ 5 ನಿಮಿಷ ಎತ್ತಿಟ್ಟುಕೊಳ್ಳಿ.

*ರವೆ ಮತ್ತು ಮೊಸರಿನ ಮಿಶ್ರಣಕ್ಕೆ ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಳ್ಳಿ. ನೀರು ಸೇರಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

*ಸ್ಟೌವ್ ಆನ್ ಮಾಡಿಕೊಂಡು ತವೆಯನ್ನು ಇರಿಸಿಕೊಳ್ಳಿ. ತವೆ ಬಿಸಿಯಾಗುತ್ತಿದ್ದಂತೆ ದೋಸೆ ಮಿಶ್ರಣ ಹಾಕಿ, ಮುಚ್ಚಳ ಮುಚ್ಚಿ. ದೋಸೆ ಬೇಯುತ್ತಿದ್ದಂತೆ ಅದನ್ನು ತಿರುವಿ ಹಾಕಿ ಬೇಯಿಸಿ. ಈ ಸಮಯದಲ್ಲಿ ಸ್ಟೌವ್ ಮಧ್ಯಮ ಗಾತ್ರದಲ್ಲಿ ಉರಿಯುತ್ತಿರಬೇಕು.

*ದೋಸೆ ಗೋಲ್ಡನ್ ಬಣ್ಣಕ್ಕೆ ಬಂದ್ರೆ ನಿಮ್ಮ ತಿಂಡಿ ಸಿದ್ಧವಾದಂತೆ. ಈಗ ಮಕ್ಕಳಿಗೆ ಹೀಗೆ ಕೊಟ್ಟರೆ, ಅವರು ಯಾವುದೇ ಕಾಯಿ ಅಥವಾ ಕಡಲೆಕಾಯಿ ಚಟ್ನಿ ಬೇಕೆಂದು ಕೇಳಲ್ಲ.

ಇದನ್ನೂ ಓದಿ:  Viral Video: ಇನ್ಮುಂದೆ ದೋಸೆ ಮಾಡೋದು ಬಹಳ ಸುಲಭ..! ಹೇಗೆ ಅಂತೀರಾ..? ಈ ವಿಡಿಯೋ ನೋಡಿ..

ನೀವು ಈ ರೆಸಿಪಿಯನ್ನು ವಾರದಲ್ಲಿ ಒಮ್ಮೆ ಟ್ರೈ ಮಾಡಿದ್ರೆ ನಿಮ್ಮ ಸಮಯ ಉಳಿಯುತ್ತದೆ. ಬ್ಯಾಚುಲರ್ ಗಳಿಗೆ ಈ ದೋಸೆ ರೆಸಿಪಿ ಮಾಡೋದು ತುಂಬಾನೇ ಸರಳ. ಈ ದೋಸೆ ಮಾಡಲು ಒಂದು ದಿನ ಮುಂಚೆ ಸಿದ್ಧತೆ ನಡೆಸುವ ಅಗತ್ಯವೂ ಇರಲ್ಲ.
Published by:Mahmadrafik K
First published: